8 ಹಿರಿಯ ಅಧಿಕಾರಿಗಳು ಸೇರಿ 56 ಎಕ್ಸಿಕ್ಯುಟಿವ್ಸ್​ಗಳನ್ನು ಕೆಲಸದಿಂದ ವಜಾಗೊಳಿಸಿದ ವಾಲ್​ಮಾರ್ಟ್

2018ರಲ್ಲಿ ಫ್ಲಿಪ್​ಕಾರ್ಟ್​ನಲ್ಲಿ ಶೇ.77ರಷ್ಟು ಪಾಲು ಬಂಡವಾಳವನ್ನು 1.07 ಲಕ್ಷ ಕೋಟಿಗೆ ಖರೀದಿಸಿತ್ತು. ವಾಲ್​ಮಾರ್ಟ್ ದೇಶದಲ್ಲಿ ಒಟ್ಟು 5300 ನೌಕರರನ್ನು ಹೊಂದಿದ್ದು ಮುಖ್ಯ ಕಚೇರಿಯಲ್ಲಿ 600 ಸಿಬ್ಬಂದಿ ಹೊಂದಿದೆ.

HR Ramesh | news18-kannada
Updated:January 13, 2020, 5:15 PM IST
8 ಹಿರಿಯ ಅಧಿಕಾರಿಗಳು ಸೇರಿ 56 ಎಕ್ಸಿಕ್ಯುಟಿವ್ಸ್​ಗಳನ್ನು ಕೆಲಸದಿಂದ ವಜಾಗೊಳಿಸಿದ ವಾಲ್​ಮಾರ್ಟ್
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ: ಜಗತ್ತಿನ ಬೃಹತ್ ರಿಟೇಲ್ ಸಂಸ್ಥೆ ವಾಲ್​ಮಾರ್ಟ್ ಭಾರತದ ಘಟಕದಲ್ಲಿ ಆಡಳಿತ ವಿಭಾಗದ 8 ಹಿರಿಯ ಅಧಿಕಾರಿಗಳು ಸೇರಿ 56 ಮಂದಿ ಕಾರ್ಯನಿರ್ವಾಹಕರನ್ನು ತೆಗೆದುಹಾಕಲಾಗಿದೆ ಎಂದು ಭಾರತ ಘಟಕದ ಅಧ್ಯಕ್ಷ ಮತ್ತು ಸಿಇಒ ಕ್ರಿಶ್ ಐಯರ್ ಸೋಮವಾರ ತಿಳಿಸಿದ್ದಾರೆ.

ಭಾರತದಲ್ಲಿ ಸಗಟು ವ್ಯವಹಾರವನ್ನು ವಿಸ್ತರಿಸಿಕೊಳ್ಳಲು ವಾಲ್​ಮಾರ್ಟ್​ ಹೆಣಗಾಡುತ್ತಿದೆ. ಬೆಂಟೊನ್​ವಿಲೇ, ಆರ್ಕ್ ಮೂಲದ ಕಂಪನಿ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ತರಲು ಎಕ್ಸಿಕ್ಯುಟಿವ್​ಗಳನ್ನು ತೆಗೆದುಹಾಕುವ ಕ್ರಮ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಪ್ರಸ್ತುತ 28 ಸಗಟು ಮಾರಾಟ ಮಳಿಗೆಗಳ ಮೂಲಕ ಚಿಕ್ಕ ಅಂಗಡಿಗಳ ವರ್ತಕರಿಗೆ ಸರಕು ಮಾರಾಟ ಮಾಡುತ್ತಿದೆ. ಆದರೆ, ನೇರವಾಗಿ ಗ್ರಾಹಕರನ್ನು ತಲುಪಲು ಸಾಧ್ಯವಾಗಿಲ್ಲ.

ಕಂಪನಿಯ ರಿಯಲ್ ಎಸ್ಟೇಟ್ ವಿಭಾಗದ ಬಹುತೇಕ ಎಕ್ಸಿಕ್ಯುಟಿವ್ಸ್​ಗಳು ನೌಕರಿ ಕಳೆದುಕೊಂಡಿದ್ದಾರೆ. ಮಳಿಗೆಗಳಿಗಿಂತಲೂ ಇ-ಕಾಮರ್ಸ್ ಕುರಿತು ವಾಲ್​ಮಾರ್ಟ್ ಹೆಚ್ಚು ಗಮನ ಹರಿಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

2018ರಲ್ಲಿ ಫ್ಲಿಪ್​ಕಾರ್ಟ್​ನಲ್ಲಿ ಶೇ.77ರಷ್ಟು ಪಾಲು ಬಂಡವಾಳವನ್ನು 1.07 ಲಕ್ಷ ಕೋಟಿಗೆ ಖರೀದಿಸಿತ್ತು. ವಾಲ್​ಮಾರ್ಟ್ ದೇಶದಲ್ಲಿ ಒಟ್ಟು 5300 ನೌಕರರನ್ನು ಹೊಂದಿದ್ದು ಮುಖ್ಯ ಕಚೇರಿಯಲ್ಲಿ 600 ಸಿಬ್ಬಂದಿ ಹೊಂದಿದೆ.

ಇದನ್ನು ಓದಿ: ಹಾನಿಗಾಗಿ 3 ಸಾವಿರ ಕೋಟಿ ಪ್ರಕರಣ ಸೇರಿ ರತನ್ ಟಾಟಾ ವಿರುದ್ಧದ ಎಲ್ಲ ಮಾನನಷ್ಟ ಮೊಕದ್ದಮೆಗಳನ್ನು ಹಿಂಪಡೆದ ನುಸ್ಲಿ ವಾಡಿಯಾ


ದೇಶದಲ್ಲಿ ವಾಲ್​ಮಾರ್ಟ್ ಕಾರ್ಯನಿರ್ವಹಣಾ ರಚನೆಯ ಬದಲಾವಣೆ ಭಾಗವಾಗಿ ಏಪ್ರಿಲ್​ನಲ್ಲಿ ಎರಡನೇ ಸುತ್ತಿನಲ್ಲಿ ಸುಮಾರು 50 ಮಂದಿ ಎಕ್ಸಿಕ್ಯುಟಿವ್ಸ್​ಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ರಾಯಿಟರ್ಸ್ ಈ ಹಿಂದೆ ವರದಿ ಮಾಡಿತ್ತು. ಆದರೆ, ಈ ವರದಿ ಆಧಾರರಹಿತ ಎಂದು ಹೇಳಿ ಐಯ್ಯರ್ ಅವರು ಪತ್ರಿಕಾ ಹೇಳಿಕೆಯನ್ನು ರಾಯಿಟರ್ಸ್​ಗೆ ಮೇಲ್ ಮಾಡಿದ್ದಾರೆ.Published by: HR Ramesh
First published: January 13, 2020, 5:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading