HOME » NEWS » National-international » WALLS PAINTED ROADS CLEANED AGRA DECKS UP TO WELCOME DONALD TRUMP ON HIS MAIDEN TAJ MAHAL VISIT SESR

ಸ್ವಚ್ಛಗೊಳ್ಳುತ್ತಿದೆ ರಸ್ತೆಗಳು, ಗೋಡೆಗಳಲ್ಲಿ ಮೂಡಿದೆ ಚಿತ್ತಾರ; ಟ್ರಂಪ್ ಸ್ವಾಗತಕ್ಕೆ ಸಜ್ಜಾದ ಆಗ್ರಾ

ಕಳೆದ ಜನವರಿಯಲ್ಲಿ ಅಮೆರಿಕದಿಂದ ಬಂದ 40 ಜನರ ಭದ್ರತಾ ತಂಡ ತಾಜ್​ ಮಹಲ್​ಗೆ ಭೇಟಿ ನೀಡಿದ್ದು, ಇಲ್ಲಿನ ಭದ್ರತೆ ಪರಿಶೀಲನೆ ನಡೆಸಿದ್ದರು. ಈ ತಂಡದ ಅಂತಿಮ ಅನುಮೋದನೆ ಬಳಿಕ ಟ್ರಂಪ್​ ಇಲ್ಲಿಗೆ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ ಎನ್ನಲಾಗಿದೆ

Seema.R | news18-kannada
Updated:February 18, 2020, 3:16 PM IST
ಸ್ವಚ್ಛಗೊಳ್ಳುತ್ತಿದೆ ರಸ್ತೆಗಳು, ಗೋಡೆಗಳಲ್ಲಿ ಮೂಡಿದೆ ಚಿತ್ತಾರ; ಟ್ರಂಪ್ ಸ್ವಾಗತಕ್ಕೆ ಸಜ್ಜಾದ ಆಗ್ರಾ
ಮೋದಿ-ಟ್ರಂಪ್​
  • Share this:
ಲಕ್ನೋ (ಫೆ.18): ವಿಶ್ವ ವಿಖ್ಯಾತ ತಾಜ್​ ಮಹಲ್​ ಇರುವ ಆಗ್ರಾ ನಗರಕ್ಕೆ ಹೊಸ ಕಳೆ ಬಂದಿದೆ. ಸ್ವಚ್ಛಗೊಂಡಿರುವ ರಸ್ತೆಗಳು ಫಳಫಳ ಹೊಳೆಯುತ್ತಿದ್ದರೆ, ರಸ್ತೆಯ ಎರಡೂ ಬದಿಗಳಲ್ಲಿ ರಂಗುರಂಗಿನ ಚಿತ್ತಾರ ಬಿಡಿಸಲಾಗುತ್ತಿದೆ. ಇದಕ್ಕೆ ಕಾರಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭೇಟಿ. 

ತಾಜ್​ಮಹಲ್​ ಮಾರ್ಗದ ಸುತ್ತ-ಮುತ್ತ ರಸ್ತೆಗಳನ್ನು ಸ್ವಚ್ಛ ಗೊಳಿಸಲಾಗಿದ್ದು, ಗೋಡೆಗಳಿಗೆ ಬಣ್ಣ ಬಳಿಯಲಾಗಿದೆ. ಇನ್ನು ಸ್ಥಳೀಯ ಮೂಲಗಳ ಪ್ರಕಾರ, ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಇಲ್ಲಿನ ಆಡಿಟೋರಿಯಂನಲ್ಲಿ ನಡೆಯಲಿರುವ 'ಮೊಹಬ್ಬತ್​-ದಿ ತಾಜ್'​ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಅಮೆರಿಕ ಅಧ್ಯಕ್ಷರ ಭೇಟಿ ಹಿನ್ನೆಲೆ 5000 ಭದ್ರತಾ ಪಡೆಗಳನ್ನು ನೇಮಿಸಲಾಗಿದ್ದು, ಅಮೆರಿಕದಿಂದ ಈಗಾಗಲೇ ಭಾರತಕ್ಕೆ ಬಂದಿರುವ ಭದ್ರತಾ ಪಡೆಗಳು ಆಗ್ರಾ ಸುತ್ತ ಮುತ್ತ ಪ್ರದೇಶಗಳ ವೀಕ್ಷಣೆ ನಡೆಸಿದ್ದಾರೆ.

ಕಳೆದ ಜನವರಿಯಲ್ಲಿ ಅಮೆರಿಕದಿಂದ ಬಂದ 40 ಜನರ ಭದ್ರತಾ ತಂಡ ತಾಜ್​ ಮಹಲ್​ಗೆ ಭೇಟಿ ನೀಡಿದ್ದು, ಇಲ್ಲಿನ ಭದ್ರತೆ ಪರಿಶೀಲನೆ ನಡೆಸಿದ್ದರು. ಈ ತಂಡದ ಅಂತಿಮ ಅನುಮೋದನೆ ಬಳಿಕ ಟ್ರಂಪ್​ ಇಲ್ಲಿಗೆ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ.

ಈ ಮುಂಚೆ 2015ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್​ ಒಬಾಮ ತಾಜ್​ ಮಹಲ್​ ಭೇಟಿ ಕಡೆಯ ಕ್ಷಣದಲ್ಲಿ ರದ್ದುಗೊಂಡಿತ್ತು. ತಾಜ್​ಮಹಲ್​ ಸುತ್ತ 500 ಮೀಟರ್​ ಒಳಗೆ ಬ್ಯಾಟರಿ ಚಾಲಿತ ವಾಹನಗಳ ಪ್ರವೇಶಕ್ಕೆ ಅನುಮತಿ ಕಲ್ಪಿಸಿದ ಹಿನ್ನೆಲೆ ಈ ಭೇಟಿಗೆ ಭದ್ರತಾ ಪಡೆ ಅನುಮತಿ ನೀಡಿರಲಿಲ್ಲ. ಈ ಬಾರಿ ಈಗಾಗಲೇ ಅಮೆರಿಕಾ ಮತ್ತು ಭಾರತ ಭದ್ರತಾ ಪಡೆಗಳು ಎಲ್ಲ ರೀತಿಯ ಸುರಕ್ಷತಾ ಕ್ರಮವನ್ನೂ ಪಾಲಿಸಿರುವ ಹಿನ್ನೆಲೆಯಲ್ಲಿ, ಟ್ರಂಪ್​ ಭೇಟಿ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಇದನ್ನು ಓದಿ: ಟ್ರಂಪ್​ ಸ್ವಾಗತಕ್ಕೆ ಸಜ್ಜಾಗುತ್ತಿದೆ ಅಹಮದಾಬಾದ್​; ಸ್ಲಂ ಕಾಣದಂತೆ ತಲೆ ಎತ್ತುತ್ತಿವೆ ಗೋಡೆಗಳು!

ಸೋಮವಾರ ಅಮೆರಿಕದ ಹಾಗೂ ಸ್ಥಳೀಯ ಭದ್ರತಾ ಪಡೆ ತಾಜ್​ಮಹಲ್​ಗೆ ಭೇಟಿ ನೀಡಿದ್ದು, ಈ ವೇಳೆ ಮಾತನಾಡಿರುವ ಅಧಿಕಾರಿಗಳು 24ಕ್ಕೆ ಗುಜರಾಜ್​ ಭೇಟಿ ನೀಡಲಿರುವ ಟ್ರಂಪ್​ 25ಕ್ಕೆ ತಾಜ್​ ಮಹಲ್​ ಭೇಟಿ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ. ಆದರೆ, ಅವರ ಅಂತಿಮ ಕಾರ್ಯಕ್ರಮದ ಪಟ್ಟಿ ಇನ್ನೂ ಸಿದ್ಧವಾಗಿಲ್ಲದ ಹಿನ್ನೆಲೆ ಅದಕ್ಕಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.(ವರದಿ: ಕ್ವಾಜಿ ಫರಾಜ್​​​ ಅಹಮದ್​)
First published: February 18, 2020, 3:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories