• Home
  • »
  • News
  • »
  • national-international
  • »
  • PM Modi: ಮೋದಿ ಸರ್ಕಾರದ ವಿರುದ್ಧ ಅಮೆರಿಕದಲ್ಲಿ ಜಾಹೀರಾತು, ನಿರ್ಮಲಾ ಸೇರಿ 11 ಮಂದಿಯ ನಿಷೇಧಿಸಲು ಬೇಡಿಕೆ!

PM Modi: ಮೋದಿ ಸರ್ಕಾರದ ವಿರುದ್ಧ ಅಮೆರಿಕದಲ್ಲಿ ಜಾಹೀರಾತು, ನಿರ್ಮಲಾ ಸೇರಿ 11 ಮಂದಿಯ ನಿಷೇಧಿಸಲು ಬೇಡಿಕೆ!

ನರೇಂದ್ರ ಮೋದಿ

ನರೇಂದ್ರ ಮೋದಿ

ಇತ್ತೀಚೆಗಷ್ಟೇ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ ಜಾಹೀರಾತೊಂದು ಪ್ರಕಟವಾಗಿದ್ದು, ಇದರ ಮೇಲೆ ಸಾಕಷ್ಟು ವಿವಾದಗಳು ಶುರುವಾಗಿವೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಜಾರಿ ನಿರ್ದೇಶನಾಲಯ ಮತ್ತು ದೇವಾಸ್-ಆಂಟ್ರಿಕ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಬೇಕಾಗಿದ್ದಾರೆ ಎಂದು ಹೇಳುವ ಮೂಲಕ ನಿಷೇಧಕ್ಕೆ ಕರೆ ನೀಡಲಾಗಿದೆ. ನಿರ್ಮಲಾ ಸೀತಾರಾಮನ್ ಅಮೆರಿಕ ಭೇಟಿ ಸಂದರ್ಭದಲ್ಲಿ ಈ ಜಾಹೀರಾತು ಪ್ರಕಟಿಸಲಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore, India
  • Share this:

ನ್ಯೂಯಾರ್ಕ್(ಅ.18): ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ (Wall Street Journal) ಪತ್ರಿಕೆಯಲ್ಲಿ ಮೋದಿ ಸರ್ಕಾರದ (Modi Govt) ವಿರುದ್ಧ ಜಾಹೀರಾತು ಪ್ರಕಟಿಸಲಾಗಿದೆ. ಈ ಜಾಹೀರಾತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸೇರಿದಂತೆ ಹಲವು ಅಧಿಕಾರಿಗಳು, ನ್ಯಾಯಾಧೀಶರ ವಿರುದ್ಧ ನಿಷೇಧಕ್ಕೆ ಆಗ್ರಹಿಸಲಾಗಿದೆ. ಈ ಜಾಹೀರಾತನ್ನು US ಮೂಲದ ಸರ್ಕಾರೇತರ ಸಂಸ್ಥೆ ಫ್ರಾಂಟಿಯರ್ಸ್ ಆಫ್ ಫ್ರೀಡಮ್ ಬಿಡುಗಡೆ ಮಾಡಿದೆ. ಈ ಜಾಹೀರಾತನ್ನು ಅಕ್ಟೋಬರ್ 13 ರ ಸಂಚಿಕೆಯಲ್ಲಿ ಪ್ರಕಟಿಸಲಾಗಿದ್ದು, ಇದರ ಶೀರ್ಷಿಕೆಗೆ 'ಮೋದಿಯ ಮ್ಯಾಗ್ನಿಟ್ಸ್ಕಿ 11' ಎಂದು ನೀಡಲಾಗಿದೆ. ವಾಸ್ತವವಾಗಿ, 2016 ರಲ್ಲಿ, ಯುಎಸ್ ಗ್ಲೋಬಲ್ ಮ್ಯಾಗ್ನಿಟ್ಸ್ಕಿ ಕಾಯಿದೆಯನ್ನು ಜಾರಿಗೊಳಿಸಿತು, ಅದರ ಅಡಿಯಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ವಿದೇಶಿ ಸರ್ಕಾರಿ ಅಧಿಕಾರಿಗಳನ್ನು ನಿಷೇಧಿಸಲಾಗಿದೆ. ‘ಭಾರತವನ್ನು ಹೂಡಿಕೆಗೆ ಅಸುರಕ್ಷಿತ ಸ್ಥಳವನ್ನಾಗಿ ಮಾಡಿದ ಅಧಿಕಾರಿಗಳನ್ನು ಭೇಟಿ ಮಾಡಿ’ ಎಂದು ಜಾಹೀರಾತಿನಲ್ಲಿ ಬರೆಯಲಾಗಿದೆ.


ಸೀತಾರಾಮನ್ ಅವರ ಅಮೆರಿಕಾ ಭೇಟಿ ಕುರಿತು ಪ್ರಕಟವಾದ ಜಾಹೀರಾತು


ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿದೇಶ ಪ್ರವಾಸದಲ್ಲಿರುವಾಗ ಈ ಜಾಹೀರಾತು ಪ್ರಕಟಿಸಲಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಸೀತಾರಾಮನ್ ಅಕ್ಟೋಬರ್ 11 ರಂದು ವಾಷಿಂಗ್ಟನ್‌ಗೆ ಆಗಮಿಸಿದ್ದರು. ಭಾನುವಾರ ರಾತ್ರಿ ಅಮೆರಿಕದಿಂದ ಭಾರತಕ್ಕೆ ತೆರಳಲಿದ್ದಾರೆ.


ಇದನ್ನೂ ಓದಿ: ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ, ಡಾಲರ್ ಬಲಗೊಳ್ಳುತ್ತಿದೆ: ಸಚಿವೆ ನಿರ್ಮಲಾ ಸೀತಾರಾಮನ್


ಈ ಸಂದರ್ಭದಲ್ಲಿ, ಈ ಜಾಹೀರಾತು ಪ್ರಕಟಣೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಈ ಜಾಹೀರಾತಿನಲ್ಲಿ ಭಾರತದ 11 ಜನರ ಹೆಸರನ್ನು ನೀಡಲಾಗಿದೆ. ಅವರ ಹೆಸರಿನ ನಂತರ, "ಮೋದಿ ಸರ್ಕಾರದ ಈ ಅಧಿಕಾರಿಗಳು ರಾಜಕೀಯ ಮತ್ತು ವ್ಯಾಪಾರ ಪ್ರತಿಸ್ಪರ್ಧಿಗಳಿಂದ ಖಾತೆಗಳನ್ನು ಇತ್ಯರ್ಥಗೊಳಿಸಲು ಸರ್ಕಾರಿ ಸಂಸ್ಥೆಗಳನ್ನು ಅಸ್ತ್ರಗಳಾಗಿ ಬಳಸಿಕೊಂಡು ಕಾನೂನು ಸುವ್ಯವಸ್ಥೆಯನ್ನು ರದ್ದುಗೊಳಿಸಿದ್ದಾರೆ. ಅವರು ಹೂಡಿಕೆದಾರರಿಗೆ ಭಾರತವನ್ನು ಅಸುರಕ್ಷಿತವಾಗಿಸಿದ್ದಾರೆ ಎಂದು ದೂರಲಾಗಿದೆ.


ಈ 11 ಮಂದಿಯನ್ನು ನಿಷೇಧಿಸಲು ಆಗ್ರಹ


ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆಂಟ್ರಿಕ್ಸ್ ಅಧ್ಯಕ್ಷ ರಾಕೇಶ್ ಶಶಿಭೂಷಣ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್ ವೆಂಕಟರಾಮನ್, ನ್ಯಾಯಮೂರ್ತಿ ಹೇಮಂತ್ ಗುಪ್ತಾ, ನ್ಯಾಯಮೂರ್ತಿ ವಿ ರಾಮಸುಬ್ರಮಣ್ಯಂ, ಸಿಬಿಐ ಡಿಎಸ್‌ಪಿ ಆಶಿಶ್ ಪಾರಿಕ್, ಇಡಿ ನಿರ್ದೇಶಕ ಸಂಜಯ್ ಜಾಹೀರಾತಿನಲ್ಲಿ ನಿಷೇಧಕ್ಕೆ ಕೋರಿರುವ ಭಾರತೀಯರು.
ಕುಮಾರ್ ಮಿಶ್ರಾ, ಉಪನಿರ್ದೇಶಕ ಎ ಸಾದಿಕ್ ಮೊಹಮ್ಮದ್ ನೈಜ್ನಾರ್, ಸಹಾಯಕ ನಿರ್ದೇಶಕ ಆರ್ ರಾಜೇಶ್ ಮತ್ತು ವಿಶೇಷ ನ್ಯಾಯಾಧೀಶ ಚಂದ್ರಶೇಖರ್. ಜಾಹೀರಾತಿನಲ್ಲಿ ಈ ಜನರ ಹೆಸರುಗಳ ನಂತರ, ಜಾಗತಿಕ ಮ್ಯಾಗ್ನಿಟ್ಸ್ಕಿ ಮಾನವ ಹಕ್ಕುಗಳ ಹೊಣೆಗಾರಿಕೆ ಕಾಯಿದೆಯಡಿ ಅವರ ವಿರುದ್ಧ ಆರ್ಥಿಕ ಮತ್ತು ವೀಸಾ ನಿರ್ಬಂಧಗಳನ್ನು ವಿಧಿಸಲು ನಾವು ಯುಎಸ್ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಬರೆಯಲಾಗಿದೆ..


ಭಾರತದಲ್ಲಿ ಜಾಹೀರಾತಿನ ವಿಚಾರವಾಗಿ ವಿವಾದ


ಈ ಜಾಹೀರಾತು ಬಂದ ನಂತರ ಭಾರತದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಜಾಹೀರಾತಿನ ಬಗ್ಗೆ ಹಲವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಟ್ವೀಟ್ ಮಾಡಿ ಅಮೆರಿಕದ ಮಾಧ್ಯಮವನ್ನು ವಂಚಕರು ಅಸ್ತ್ರವಾಗಿ ಬಳಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Shocking News: 60 ಯುವತಿಯರು ಸ್ನಾನ ಮಾಡುವ ವಿಡಿಯೋ ಲೀಕ್


ಈ ರೀತಿಯ ಜಾಹೀರಾತುಗಳ ಹಿಂದೆ ಯಾರಿದ್ದಾರೆ ಗೊತ್ತಾ ಎಂದು ಪ್ರಶ್ನಿಸಿರುವ ಕಾಂಚನ್ ಗುಪ್ತಾ ದೇವಾಸ್‌ನ CEO ಆಗಿದ್ದ ಪರಾರಿಯಾದ ರಾಮಚಂದ್ರ ವಿಶ್ವನಾಥನ್ ಅವರು ಈ ಜಾಹೀರಾತು ಪ್ರಚಾರವನ್ನು ನಡೆಸುತ್ತಿದ್ದರು. ಬ್ರಿಟಿಷ್ ಮಿಡಲ್ ಈಸ್ಟ್ ಸೆಂಟರ್ ಫಾರ್ ಸ್ಟಡೀಸ್ ಅಂಡ್ ರಿಸರ್ಚ್‌ನಲ್ಲಿ ಕಾರ್ಯತಂತ್ರದ ರಾಜಕೀಯ ವ್ಯವಹಾರಗಳ ಪರಿಣಿತ ಅಮ್ಜದ್ ತಾಹಾ ಅವರು ವಾಲ್ ಸ್ಟ್ರೀಟ್ ಜರ್ನಲ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ. ಇದು ಪತ್ರಿಕೋದ್ಯಮವಲ್ಲ ಮಾನಹಾನಿಕರ ಹೇಳಿಕೆ ಎಂದು ಟ್ವೀಟ್ ಮಾಡಿದ್ದಾರೆ. ಇದು ಪತ್ರಿಕೋದ್ಯಮಕ್ಕೆ ಕಳಂಕ ಎಂದು ಹೇಳಿದರು.

Published by:Precilla Olivia Dias
First published: