Queen Elizabeth ಬರೆದ ಪತ್ರ ಓದಲು ಇನ್ನೂ 63 ವರ್ಷ ಕಾಯಬೇಕಂತೆ! ಅಷ್ಟಕ್ಕೂ ಅಂಥದ್ದೇನಿದೆ ಅದರಲ್ಲಿ?

ರಾಣಿ ಎಲಿಜಬೆತ್‌ ಬರೆದಿರುವ ಪತ್ರವೊಂದು ಸಿಡ್ನಿಯ ಐತಿಹಾಸಿಕ ಕಟ್ಟಡವೊಂದರಲ್ಲಿ ದೊರಕಿದೆ 1986ರ ನವೆಂಬರ್‌ ನಲ್ಲಿ ರಾಣಿಯೇ ಬರೆದ ಪತ್ರವೊಂದು ಈ ಕಟ್ಟಡದ ಕಮಾನಿನ ಗಾಜಿನ ಕೇಸ್‌ ಒಂದರಲ್ಲಿ ದೊರಕಿದೆ. ಆದರೆ ಓದಲು ಇನ್ನೂ 63 ವರ್ಷ ಕಾಯಬೇಕಂತೆ!

ರಾಣಿ ಎಲಿಜಬೆತ್‌ II

ರಾಣಿ ಎಲಿಜಬೆತ್‌ II

  • Share this:
ಕಳೆದ ಗುರುವಾದ ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ (Queen Elizabeth-II) ನಿಧನರಾಗಿದ್ದಾರೆ. ಜಗತ್ತು ಕಂಡ ಅಪ್ರತಿಮ ಆಡಳಿತಗಾರ್ತಿ ರಾಣಿ ಎಲಿಜಬೆತ್‌ . ಅವರ ಸಾವಿಗೆ ಇಡೀ ವಿಶ್ವವೇ ಸಂತಾಪ ಸೂಚಿಸಿದೆ. 96 ವರ್ಷ ಬಾಳಿ ಬದುಕಿದ್ದ ರಾಣಿ ಎಲಿಜಬೆತ್‌, ವಯೋಸಹಜ ಆರೋಗ್ಯ ಸಮಸ್ಯೆಗಳಿಂದ (Health Problems) ಬಳಲುತ್ತಿದ್ದರು. ಅತ್ಯಂತ ಸುದೀರ್ಘ ಕಾಲ ಆಡಳಿತ ನಡೆಸಿದ ರಾಣಿ ಎಲಿಜಬೆತ್‌ ರ ಜೀವನ ಹಾಗೂ ಸಾಧನೆ ಅಪೂರ್ವ. ಆದ್ರೆ ಅವರ ಜೀವನದ ಸಾಕಷ್ಟು ಕುತೂಹಲಕಾರಿ ಅಂಶಗಳು (Interesting point) ಇದೀಗ ಬೆಳಕಿಗೆ ಬರುತ್ತಿರುವುದು ಸಾಕಷ್ಟು ಆಶ್ಚಯ ಹಾಗೂ ಕುತೂಹಲ ಉಂಟುಮಾಡಿರುವುದು ಸತ್ಯ. ಅದರಲ್ಲೊಂದು ರಾಣಿ ಎಲಿಜಬೆತ್‌ ಅವರ ಸೀಕ್ರೆಟ್‌ ಪತ್ರ (Secret Letter).

1986 ರಲ್ಲಿ ಬರೆದ ರಾಣಿಯ ಪತ್ರ
ಹೌದು..! ರಾಣಿ ಎಲಿಜಬೆತ್‌ ಬರೆದಿರುವ ಪತ್ರವೊಂದು ಸಿಡ್ನಿಯ ಐತಿಹಾಸಿಕ ಕಟ್ಟಡವೊಂದರಲ್ಲಿ ದೊರಕಿದೆ. 1986ರ ನವೆಂಬರ್‌ ನಲ್ಲಿ ರಾಣಿಯೇ ಬರೆದ ಪತ್ರವೊಂದು ಈ ಕಟ್ಟಡದ ಕಮಾನಿನಲ್ಲಿ ಗಾಜಿನ ಕೇಸ್‌ ಒಂದರಲ್ಲಿ ದೊರಕಿದೆ.

ಇದನ್ನೂ ಓದಿ: Kohinoor Diamond: ಕೊಹಿನೂರ್ ವಜ್ರ ಭಾರತದ ಈ ದೇವರಿಗೆ ಸೇರಿದ್ದು, ತಕ್ಷಣ ಮರಳಿಸಲು ಆಗ್ರಹ

ಆಸ್ಟ್ರೇಲಿಯಾದ 7 ನ್ಯೂಸ್‌ ಮಾಧ್ಯಮದ ವರದಿಯ ಪ್ರಕಾರ ಈ ಪತ್ರದ ಬಗ್ಗೆ ಹಾಗೂ ಅದರಲ್ಲಿ ಏನನ್ನು ಬರೆಯಲಾಗಿದೆ ಎಂಬುದರ ಬಗ್ಗೆ ಯಾರೆಂದರೆ ಯಾರಿಗೂ ಕೂಡ ತಿಳಿದಿಲ್ಲ. ಅಲ್ಲದೇ ಅಲ್ಲಿನ ಆಡಳಿತಗಾರರಿಗಾಗಲಿ, ರಾಣಿಯ ಆಪ್ತ ಸಹಾಯಕರಿಗೂ ಸಹ ಈ ಬಗ್ಗೆ ತಿಳಿದಿಲ್ಲ. ಅತ್ಯಂತ ರಹಸ್ಯವಾದ ಜಾಗದಲ್ಲಿ ಹಾಗೂ ಅತ್ಯಂತ ಸುರಕ್ಷಿತವಾದ ಜಾಗದಲ್ಲಿ ಈ ಪತ್ರವನ್ನು ಇರಿಸಲಾಗಿದೆ.

ಸಿಡ್ನಿಯ ಜನತೆಗಾಗಿ ಒಂದು ಮುಖ್ಯವಾದ ಸಂದೇಶವಿರುವ ಪತ್ರವಂತೆ 
ಇನ್ನು ವರದಿಯ ಪ್ರಕಾರ ಈ ಪತ್ರದಲ್ಲಿ ಸಿಡ್ನಿಯ ಜನತೆಗಾಗಿ ಒಂದು ಮುಖ್ಯವಾದ ಸಂದೇಶವಿರುವುದಂತೂ ಸ್ಪಷ್ಟ. ರಾಣಿ ಎಲಿಜಬೆತ್‌ ಯಾವುದೋ ಮುಖ್ಯವಾದ ವಿಚಾರವನ್ನು ಈ ಪತ್ರದಲ್ಲಿ ಹಂಚಿಕೊಂಡಿದ್ದಾರೆ. ರಾಣಿ ಬರೆದ ಸೀಕ್ರೆಟ್ ಪತ್ರ ಸಿಕ್ಕಿರುವುದೇನೋ ನಿಜ. ಆದರೆ ಅದರೊಳಗೇನಿದೆ ಅನ್ನೋದು ಇನ್ನೂ ಕೂಡ ಬಹಿರಂಗವಾಗಿಲ್ಲ. ಯಾಕೆಂದರೆ ಅದನ್ನು 2085ರ ವರೆಗೆ ಯಾರು ತೆರೆದು ನೋಡುವ ಹಾಗೇ ಇಲ್ಲ.

63 ವರ್ಷ ಸೀಕ್ರೆಟ್ ಆಗಿಯೇ ಉಳಿಯಲಿದೆ ಈ ಪತ್ರದಲ್ಲಿರುವ ವಿಷಯ 
ಹೌದು, ಇದು ಆಶ್ಚಯ ಆದರೂ ಸತ್ಯ. ಅದನ್ನು ಎಲಿಜಬೆತ್‌ ರಾಣಿಯೇ ಬರೆದಿದ್ದಾರೆ. ಈ ಪತ್ರದ ಮೇಲೆ ಸಿಡ್ನಿಯ ಮೇಯರ್‌ ಗೆ ಒಂದು ಸಂದೇಶವಿದೆ. ಅದೇನೇಂದರೆ 2085 ರಲ್ಲಿ ಯಾವುದಾದರೂ ಒಂದು ದಿನ ಈ ಪತ್ರ ತೆರೆಯಬೇಕು. ಹಾಗೂ ಸಿಡ್ನಿಯ ಜನರಿಗೆ ಈ ಪತ್ರದಲ್ಲಿ ಏನಿದೆ ಎಂಬುದನ್ನು ತಿಳಿಸಬೇಕು ಎಂಬುದಾಗಿ ಬರೆಯಲಾಗಿದೆ. ಅದರ ಕೆಳಗೆ ಎಲಿಜಬೆತ್‌ ಆರ್‌ ಎಂಬುದಾಗಿ ಸಹಿ ಮಾಡಲಾಗಿದೆ. ಹಾಗಾಗಿ 2085 ರ ವರೆಗೂ ಅಂದರೆ ಇನ್ನೂ 63 ವಷಗಳ ಕಾಲ ಈ ಪತ್ರದಲ್ಲೇನಿದೆ ಎಂಬುದು ಸೀಕ್ರೇಟ್‌ ಆಗಿಯೇ ಉಳಿಯಲಿದೆ.

ಇದನ್ನೂ ಓದಿ:  Queen Elizabeth II: ಆ ಕಾರಣದಿಂದ ಮೂರು ದಶಕದ ಹಿಂದೆಯೇ ತಯಾರಾಗಿತ್ತು ರಾಣಿಯ ಶವಪೆಟ್ಟಿಗೆ!

ಇನ್ನು ರಾಣಿಯ ಸಾವಿಗೆ ಇಡೀ ಜಗತ್ತು ಸಂತಾಪ ಸೂಚಿಸಿದೆ ಬೇರೆ ಬೇರೆ ದೇಶದ ಗಣ್ಯಾತಿಗಣ್ಯರು ಜಗತ್ತು ಕಂಡ ಅಪತ್ರಿಮ ರಾಣಿಗೆ ನಮನ ಸಲ್ಲಿಸಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಥೋನಿ ಅಲ್ಬನೀಸ್‌ ಕೂಡ ರಾಣಿ ಎಲಿಜಬೆತ್‌ ಕುರಿತು ಮಾತನಾಡಿದ್ದಾರೆ. ಅವರು ಆಸ್ಟ್ರೇಲಿಯಾ ಜನತೆಯ ಮನದಲ್ಲಿ ವಿಶೇಷ ಸ್ಥಾನ ಪಡೆದಿರುವುದಾಗಿ ತಿಳಿಸಿದ್ದಾರೆ.

ರಾಣಿ ಎಲಿಜಬೆತ್‌ ಅನೇಕ ಬಾರಿ ಆಸ್ಟ್ರೇಲಿಯಾ ಪ್ರವಾಸ ಮಾಡ್ತಿದ್ರಂತೆ 
ಅಂದಹಾಗೆ ರಾಣಿ ಇದುವರೆಗೂ 16 ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ಅವರ ಪ್ರತಿ ಪ್ರವಾಸವೂ ವಿಶೇಷವಾಗಿತ್ತು. ಅಲ್ಲದೇ ಅವರ ಆಗಮನದಿಂದ ಆಸ್ಟ್ರೇಲಿಯಾದ ಸಮಗ್ರ ಜನತೆ ಉತ್ತೇಜಿತರಾಗಿದ್ದರು. ಅವರ ನಡೆ ನುಡಿ ಹಾಗೂ ಮಾತುಗಳು ಜನರನ್ನು ಹುರಿದುಂಬಿಸಿದ್ದವು. ಇಲ್ಲಿನ ಜನರು ಎಲಿಜಬೆತ್‌ ರಿಂದ ಸ್ಪೂರ್ತಿ ಪಡೆದಿದ್ದರು ಎಂಬುದಾಗಿ ಅಲ್ಲಿನ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್‌ ಹೇಳಿದ್ದಾರೆ. ಅಲ್ಲದೇ ಸಿಡ್ನಿಯ ಐಕಾನಿಕ್ ಒಪೇರಾ ಹೌಸ್ ನಲ್ಲಿ ಎಲಿಜಬೆತ್‌ ರಾಣಿ ಸಾವಿಗೆ ಸಂತಾಪ ಸೂಚಿಸಲಾಯಿತು. ಹಾಗೂ ಗೌರವಾರ್ಪಣೆ ಸಲ್ಲಿಸಲಾಗಿದೆ.
Published by:Ashwini Prabhu
First published: