• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Mayor Election: ಎರಡೂವರೆ ತಿಂಗಳ ಬಳಿಕ ಆಮ್ ಆದ್ಮಿಗೆ ಒಲಿದ ದೆಹಲಿ ಮೇಯರ್‌ ಪೀಠ; ಬಿಜೆಪಿಗೆ ತೀವ್ರ ಮುಖಭಂಗ

Mayor Election: ಎರಡೂವರೆ ತಿಂಗಳ ಬಳಿಕ ಆಮ್ ಆದ್ಮಿಗೆ ಒಲಿದ ದೆಹಲಿ ಮೇಯರ್‌ ಪೀಠ; ಬಿಜೆಪಿಗೆ ತೀವ್ರ ಮುಖಭಂಗ

ಶೆಲ್ಲಿ ಒಬೆರಾಯ್, ದೆಹಲಿಯ ನೂತನ ಮೇಯರ್

ಶೆಲ್ಲಿ ಒಬೆರಾಯ್, ದೆಹಲಿಯ ನೂತನ ಮೇಯರ್

ಕಳೆದ ವರ್ಷ ಡಿಸೆಂಬರ್‌ ಏಳರಂದು ದೆಹಲಿ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿತ್ತು. ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬಹುಮತ ಗಳಿಸಿದ್ದರೂ ಬಿಜೆಪಿ ಮತ್ತು ಆಮ್ ಆದ್ಮಿ ಮಧ್ಯೆ ಮೇಯರ್ ಹುದ್ದೆಗಾಗಿ ನಡೆದ ಕಿತ್ತಾಟದಿಂದ ಮೂರು ಬಾರಿ ಮೇಯರ್ ಚುನಾವಣೆ ಮುಂದೂಡಲ್ಪಟ್ಟಿತ್ತು.

ಮುಂದೆ ಓದಿ ...
  • Share this:

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ (MCD) ಮೇಯರ್ ಹುದ್ದೆಗೆ (Mayor Post) ಬಿಜೆಪಿ (BJP) ಮತ್ತು ಆಮ್ ಆದ್ಮಿ (Aam Admi) ಪಕ್ಷದ ನಡುವೆ ನಡೆಯುತ್ತಿದ್ದ ತೀವ್ರ ಗುದ್ದಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಎರಡೂ ಪಕ್ಷಗಳ ನಡುವೆ ನಡೆಯುತ್ತಿದ್ದ ರಾಜಕೀಯ ಕಲಹಕ್ಕೆ ಸುಪ್ರೀಂ ಕೋರ್ಟ್ (Supreme Court) ಬ್ರೇಕ್ ಹಾಕಿದ ಬೆನ್ನಲ್ಲೇ ಮೇಯರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಆಮ್ ಆದ್ಮಿ ಪಕ್ಷಕ್ಕೆ ದೆಹಲಿ ನಗರ ಪಾಲಿಕೆಯ ಗದ್ದುಗೆ ಲಭಿಸಿದೆ.


ದೆಹಲಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಮ್ ಅದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ಅವರು ಆಯ್ಕೆಯಾಗಿದ್ದು, ತನ್ನ ಪ್ರತಿಸ್ಪರ್ಧಿ ಬಿಜೆಪಿಯ ರೇಖಾ ಗುಪ್ತಾ ಅವರನ್ನು 34 ಮತಗಳಿಂದ ಸೋಲಿಸುವ ಮೂಲಕ ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಹುದ್ದೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಚಲಾವಣೆಗೊಂಡ ಒಟ್ಟು 266 ಮತಗಳ ಪೈಕಿ ಶೆಲ್ಲಿ ಒಬೆರಾಯ್ ಅವರು 150 ಮತಗಳನ್ನು ಪಡೆದರೆ, ರೇಖಾ ಗುಪ್ತಾ ಅವರು 116 ಮತಗಳು ಪಡೆಯುವಲ್ಲಿ ಸಫಲರಾದರು.


ಇದನ್ನೂ ಓದಿ: MCD Mayor Election: ಬಿಜೆಪಿ-ಆಪ್ ಸದಸ್ಯರ ಕಿತ್ತಾಟದಿಂದ ದೆಹಲಿ ಮೇಯರ್ ಚುನಾವಣೆ ಮತ್ತೆ ಮುಂದೂಡಿಕೆ!


'ಗೂಂಡಾಗಳು ಪರಾಭವಗೊಂಡಿದ್ದಾರೆ'


ದೆಹಲಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾದ ಶೆಲ್ಲಿ ಒಬೆರಾಯ್ ಮತ್ತು ತಮ್ಮ ಪಕ್ಷದ ಸದಸ್ಯರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅಭಿನಂದಿಸಿದ್ದು, ಬಿಜೆಪಿಗೆ ಟಾಂಗ್ ನೀಡಿ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ‘ಗೂಂಡಾಗಳು ಪರಾಭವಗೊಂಡಿದ್ದಾರೆ. ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ದೆಹಲಿಯ ಜನರು ಗೆಲುವು ಕಂಡಿದ್ದಾರೆ. ಗೂಂಡಾಗಿರಿಗೆ ಸೋಲು ಉಂಟಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.


ಕಳೆದ ವರ್ಷ ಡಿಸೆಂಬರ್‌ ಏಳರಂದು ದೆಹಲಿ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿತ್ತು. ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬಹುಮತ ಗಳಿಸಿದ್ದರೂ ಬಿಜೆಪಿ ಮತ್ತು ಆಮ್ ಆದ್ಮಿ ಮಧ್ಯೆ ಮೇಯರ್ ಹುದ್ದೆಗಾಗಿ ನಡೆದ ಕಿತ್ತಾಟದಿಂದ ಮೂರು ಬಾರಿ ಮೇಯರ್ ಚುನಾವಣೆ ಮುಂದೂಡಲ್ಪಟ್ಟಿತ್ತು. ಅತ್ತ 10 ಮಂದಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಅವಕಾಶ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದರೆ, ನಾಮನಿರ್ದೇಶಿತ ಸದಸ್ಯರಿಗೆ ಮೇಯರ್ ಚುನಾವಣೆಯಲ್ಲಿ ಮತ ಹಾಕಲು ಅಧಿಕಾರವಿಲ್ಲ ಎಂದು ಎಎಪಿ ಪಟ್ಟು ಹಿಡಿದಿತ್ತು.


ಇದನ್ನೂ ಓದಿ: IT raid on BBC: ಬಿಬಿಸಿಗೆ ಆದಾಯ ತೆರಿಗೆ ಅಧಿಕಾರಿಗಳ ಶಾಕ್; ದೆಹಲಿ, ಮುಂಬೈ ಕಚೇರಿಯಲ್ಲಿ ಐಟಿ ರೇಡ್


ಸುಪ್ರೀಂ ಮೆಟ್ಟಿಲೇರಿದ್ದ ಆಮ್ ಆದ್ಮಿ


ಈ ಮಧ್ಯೆ ನಾಮನಿರ್ದೇಶಿತ 10 ಸದಸ್ಯರು ಮೇಯರ್ ಆಯ್ಕೆಗೆ ಮತ ಚಲಾಯಿಸಬಹುದು ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ನೀಡಿದ ಆದೇಶದ ವಿರುದ್ಧ ಆಮ್ ಆದ್ಮಿಯ ಶೆಲ್ಲಿ ಒಬೆರಾಯ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ಪರಿಗಣಿಸಿದ ಸುಪ್ರೀಂಕೋರ್ಟ್, ನಾಮನಿರ್ದೇಶಿತ ಸದಸ್ಯರಿಗೆ ಮತ ಚಲಾಯಿಸುವ ಹಕ್ಕು ಇಲ್ಲ. ಸಂವಿಧಾನದ ನಿಯಮಗಳು ಬಹಳ ಸ್ಪಷ್ಟವಾಗಿದೆ ಎಂದು ತೀರ್ಪು ನೀಡಿತ್ತು.


ಸುಪ್ರೀಂ ಕೋರ್ಟ್‌ ತೀರ್ಪು ಬಂದ ಬೆನ್ನಲ್ಲೇ ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಹುದ್ದೆಗೆ ನಿನ್ನೆ (ಬುಧವಾರ) ಚುನಾವಣೆ ನಡೆದಿದ್ದು, ನಿರೀಕ್ಷೆಯಂತೆಯೇ ಆಮ್ ಆದ್ಮಿ ಪಕ್ಷಕ್ಕೆ ಮೇಯರ್ ಹುದ್ದೆ ಲಭಿಸಿದೆ.


ಮತ್ತೆ ಗದ್ದಲ, ಹಲ್ಲೆ ಆರೋಪ!


ಸುಪ್ರೀಂ ಕೋರ್ಟ್ ಆದೇಶದ ಬಳಿಕ ನಿನ್ನೆ ಮೇಯರ್ ಹುದ್ದೆಗೆ ಪುನಃ ಚುನಾವಣೆ ನಡಡದಾಗಲೂ ಬಿಜೆಪಿ ಮತ್ತು ಆಪ್ ಸದಸ್ಯರ ಮಧ್ಯೆ ಗಲಾಟೆ ಉಂಟಾಗಿದ್ದು, ಮತದಾನದ ವೇಳೆ ಕೆಲವು ಸದಸ್ಯರು ಮೊಬೈಲ್‌ ಫೋನ್‌ಗಳನ್ನು ಕೊಂಡೊಯ್ಯುತ್ತಿದ್ದಾರೆ ಎಂಬ ಆರೋಪದ ಮೇಲೆ ಉಂಟಾದ ಗದ್ದಲ ಹಲ್ಲೆಯ ತನಕ ಬಂದು ನಿಂತಿದೆ.


ಬಿಜೆಪಿಯ ಕೌನ್ಸಿಲರ್‌ಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನೂತನ ಮೇಯರ್ ಶೆಲ್ಲಿ ಒಬೆರಾಯ್ ಆರೋಪಿಸಿದ್ದು, ಆದರೆ ನಾವು ಹಲ್ಲೆ ನಡೆಸಿಲ್ಲ ಮೇಯರ್ ಜೊತೆ ಚರ್ಚೆ ನಡೆಸಲು ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದೆ. ಗದ್ದಲ ಉಂಟಾದ ವೇಳೆ ಮೇಯರ್ ಶೆಲ್ಲಿ ಒಬೆರಾಯ್ ಅವರನ್ನು ಬಿಜೆಪಿ ಸದಸ್ಯರು ಬೆಂಚ್ ಮೇಲೆ ಹತ್ತಿ ಸುತ್ತುವರಿದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Published by:Avinash K
First published: