ಬಿಜೆಪಿಗೆ ಮತ ಹಾಕಿದ್ರೆ ಪಾಕ್ ಮೇಲೆ ಅಣುಬಾಂಬ್ ಬಿದ್ದಂಗೆ; ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಹೇಳಿಕೆ

ಕೇಶವ್ ಪ್ರಸಾದ್ ಮೌರ್ಯ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು ಬಿಜೆಪಿ ನಾಯಕರು ಕಳೆದ ಲೋಕಸಭೆ ಚುನಾವಣೆಯ ವೇಳೆ ದೇಶಭಕ್ತಿ ಹಾಗೂ ಬಾಲಾಕೋಟ್​ ದಾಳಿಯನ್ನು ಬಳಿಕೊಂಡಂತೆ ಮಹಾರಾಷ್ಟ್ರ ಹಾಗೂ ಹರಿಯಾಣ ಉಪ ಚುನಾವಣೆಯಲ್ಲಿ ಮತ್ತೆ ದೇಶಭಕ್ತಿ ಟ್ರಂಪ್​ ಕಾರ್ಡ್​ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

MAshok Kumar | news18-kannada
Updated:October 14, 2019, 11:39 AM IST
ಬಿಜೆಪಿಗೆ ಮತ ಹಾಕಿದ್ರೆ ಪಾಕ್ ಮೇಲೆ ಅಣುಬಾಂಬ್ ಬಿದ್ದಂಗೆ; ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಹೇಳಿಕೆ
ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ.
MAshok Kumar | news18-kannada
Updated: October 14, 2019, 11:39 AM IST
ಮುಂಬೈ (ಅಕ್ಟೋಬರ್ 14); ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ಚಲಾಯಿಸುವುದು ಎಂದರೆ ಪಾಕಿಸ್ತಾನದ ಮೇಲೆ ಪರಮಾಣು ಬಾಂಬ್ ಸ್ವಯಂ ಚಾಲಿತವಾಗಿ ಬಿದ್ದಂತೆ ಎಂದರ್ಥ ಎಂದು ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಇಲ್ಲಿನ ಚುನಾವಣಾ ಪ್ರಚಾರದಲ್ಲಿ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರದ ಮೀರಾ ಭಾಯಂದರ್ ವಿಧಾನಸಭಾ ಕ್ಷೇತ್ರದಲ್ಲಿ  ಬಿಜೆಪಿ ಅಭ್ಯರ್ಥಿ ನರೇಂದ್ರ ಮೇತಾ ಪರ ಭಾನುವಾರ ಪ್ರಚಾರದಲ್ಲಿ ತೊಡಗಿದ್ದ ವೇಳೆ ಮಾತನಾಡಿರುವ ಕೇಶವ್ ಪ್ರಸಾದ್ ಮೌರ್ಯ, “ಚುನಾವಣೆಯಲ್ಲಿ ಮತದಾರರು ಕಮಲ ಗುರುತನ್ನು ಒತ್ತುವುದರಿಂದ ಪಾಕಿಸ್ತಾನದ ಮೇಲೆ ಪರಮಾಣು ಬಾಂಬ್ ಸ್ವಯಂಚಾಲಿತವಾಗಿ ಬಿದ್ದಂತೆ ಎಂದರ್ಥ. ಹೀಗಾಗಿ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವ ಮೂಲಕ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಕಮಲವನ್ನು ಅರಳಿಸಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, “ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದ ಏಕೈಕ ಕಾರಣದಿಂದಾಗಿಯೇ ಕಾಶ್ಮೀರಕ್ಕೆ ನೀಡಲಾಗುತ್ತಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವುದು ಸಾಧ್ಯವಾಯಿತು. ಲಕ್ಷ್ಮೀದೇವಿಯು ಗಡಿಯಾರ ಅಥವಾ ವಾಚ್ ಮೇಲೆ ಕೂರುವುದಿಲ್ಲ. ಆಕೆ ಕಮಲದ ಮೇಲೆಯೇ ಕೂರುತ್ತಾಳೆ. ಕಮಲ ಅಭಿವೃದ್ಧಿಯ ಸಂಕೇತ” ಎಂದು ಅವರು ಹೇಳಿದ್ದಾರೆ.

ಆದರೆ, ಕೇಶವ್ ಪ್ರಸಾದ್ ಮೌರ್ಯ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು, "ಬಿಜೆಪಿ ನಾಯಕರು ಕಳೆದ ಲೋಕಸಭೆ ಚುನಾವಣೆಯ ವೇಳೆ ದೇಶಭಕ್ತಿ ಹಾಗೂ ಬಾಲಾಕೋಟ್​ ದಾಳಿಯನ್ನು ಬಳಿಕೊಂಡಂತೆ ಮಹಾರಾಷ್ಟ್ರ ಹಾಗೂ ಹರಿಯಾಣ ಉಪ ಚುನಾವಣೆಯಲ್ಲಿ ಮತ್ತೆ ದೇಶಭಕ್ತಿ ಟ್ರಂಪ್​ ಕಾರ್ಡ್​ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ" ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 21 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 24ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ : ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ; ರಾಷ್ಟ್ರ ಮಟ್ಟದ 4 ಹಾಕಿ ಆಟಗಾರರು ಮೃತ, ಮೂವರ ಸ್ಥಿತಿ ಗಂಭೀರ

First published:October 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...