ಪಾಕ್​ ಚುನಾವಣೆ ಮತದಾನ ಆರಂಭ: ಮಾಜಿ ಪ್ರಧಾನಿ ಷರೀಫ್​, ನಿವೃತ್ತ ಕ್ರಿಕೆಟಿಗ ಇಮ್ರಾನ್​ ನಡುವೆ ಹಣಾಹಣಿ


Updated:July 25, 2018, 11:43 AM IST
ಪಾಕ್​ ಚುನಾವಣೆ ಮತದಾನ ಆರಂಭ: ಮಾಜಿ ಪ್ರಧಾನಿ ಷರೀಫ್​, ನಿವೃತ್ತ ಕ್ರಿಕೆಟಿಗ ಇಮ್ರಾನ್​ ನಡುವೆ ಹಣಾಹಣಿ
  • Share this:


ನ್ಯೂಸ್​-18 ಕನ್ನಡ

ನವದೆಹಲಿ(ಜುಲೈ.25): ಪಾಕ್​ನಲ್ಲಿ ಇಂದು(ಜು.25) ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಚುನಾವಣೆಯಲ್ಲಿ ಹೊಸ ಪ್ರಧಾನಿ ಆಯ್ಕೆಗಾಗಿ ಜನತೆ ಮತದಾನ ಮಾಡುತ್ತಿದ್ದಾರೆ. ಪಾಕ್ ಸಂಸತ್ತಿನ 342 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಒಟ್ಟು 3,459 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪಿಟಿಐ ಪಕ್ಷದ ಪ್ರಧಾನಿ ಅಭ್ಯರ್ಥಿ ಮತ್ತು ನಿವೃತ್ತ ಕ್ರಿಕೆಟಿಗ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ಮುಸ್ಲೀಂ ಲೀಗ್​ ಪಕ್ಷದ ನವಾಜ್​ ಷರೀಫ್ ನಡುವೆ ನೇರಾ ಹಣಾಹಣಿ ಏರ್ಪಟ್ಟಿದೆ. ಅಲ್ಲದೇ ಈ ಇಬ್ಬರ ನಡುವೇ ಪಿಪಿಪಿ ಪಕ್ಷದ ಅಸಿಫ್ ಅಲಿ ಝರ್ದಾರ್ ಕಣದಲ್ಲಿದ್ಧಾರೆ ಎನ್ನಲಾಗಿದೆ.

ಪಾಕಿಸ್ತಾನದಲ್ಲಿ 10.596 ಕೋಟಿ ನೋಂದಾಯಿತ ಮತದಾರರಿದ್ದಾರೆ. ರಾಷ್ಟ್ರಾದ್ಯಂತ 85,000 ಮತಗಟ್ಟೆಗಳಲ್ಲಿ 8 ರಿಂದ 6 ರವರೆಗೆ ಮತದಾನ ನಡೆಯಲಿದೆ. ಚುನಾವಣೆಯ ಫಲಿತಾಂಶಗಳನ್ನು 24 ಗಂಟೆಗಳೊಳಗೆ ಪ್ರಕಟಿಸಲಾಗುವುದು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ನವಾಜ್​ ಷರೀಫ್​ ಭ್ರಷ್ಟಚಾರದ ಆರೋಪ ಮೇಲೆ ಜೈಲು ಸೇರಿದ ಬಳಿಕ ಮತ ಸಮರಕ್ಕೆ ವೇದಿಕೆ ಅಣಿಯಾಗಿರುವುದು ಕುತೂಹಲ ಕೆರಳಿಸಿದೆ. ರಾಜಕಾರಣಿಗಳ ಜತೆಗೆ ಉಗ್ರ ಸಂಘಟನೆಗಳ ನಾಯಕರೂ ಚುನಾವಣೆ ಅಖಾಡಕ್ಕಿಳಿದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎನ್ನುತ್ತಿವೆ ಮೂಲಗಳು.ಚುನಾವಣೆಯಲ್ಲಿ ಭದ್ರತೆಯ ಹಿನ್ನೆಲೆಯಲ್ಲಿ 3,70,000 ಸೈನಿಕರನ್ನು ನಿಯೋಜಿಸಲಾಗಿದೆ. ಪಾಕ್​ ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣೆಯ ದಿನದಂದು ಅತಿ ಹೆಚ್ಚು ಸೇನಾ ನಿಯೋಜನೆಯಾಗಿದೆ ಎಂದು ಹೆಳಲಾಗುತ್ತಿದೆ. ಇಂದು 85,000 ಮತದಾನ ಕೇಂದ್ರಗಳಲ್ಲಿ 3,71,388 ಸೈನಿಕರು ನಿಯೋಜಿಸಲಿದ್ದಾರೆ ಎಂದು ಪಾಕಿಸ್ತಾನಿ ಸೇನೆ ಹೇಳಿದೆ.

ಪಾಕ್​ನಲ್ಲಿ 841 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಪಾಕಿಸ್ತಾನದ ಮುಸ್ಲಿಂ ಲೀಗ್​, ಪಿಕೆ, ಪೆಶಾವರ್, ಪಿಪಿ -87 ಮಿಯಾನ್ವಾಲಿ, ಪಿಎಸ್ -87 ಮಾಲಿರ್, ಪಿಕೆ -99 ಡೆರಾ ಇಸ್ಮಾಯಿಲ್ ಖಾನ್, ಪಿಬಿ -35 ಮೆಂಟುಂಗ್, ಪಿಪಿ -09 ಮತ್ತು ಎನ್ಎ-106 ಫೈಸಲಾಬಾದ್ ಕ್ಷೇತ್ರಗಳಲ್ಲಿ ಚುನಾವಣೆಯನ್ನು ಪಾಕಿಸ್ತಾನ ಚುನಾವಣಾ ಆಯೋಗವು ಮುಂದೂಡಿದೆ.

First published:July 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ