news18-kannada Updated:December 11, 2020, 6:13 AM IST
ಸಾಂದರ್ಭಿಕ ಚಿತ್ರ
ಮತದಾರರ ಗುರುತಿನ ಚೀಟಿಯನ್ನು ಕೂಡ ಆಧಾರ್ ಕಾರ್ಡ್ನಂತೆ ಡಿಜಿಟಲ್ಗೆ ಬದಲಾಯಿಸುವ ಬಗ್ಗೆ ಚುನಾವಣಾ ಆಯೋಗ ಚಿಂತನೆ ನಡೆಸಿದೆ. ಈ ಬಗ್ಗೆ ಅಂತಿಮ ಆದೇಶ ಬಾಕಿ ಇದೆ. ಒಂದು ವೇಳೆ ಮತದಾರರ ಗುರುತಿನ ಚೀಟಿ ಡಿಜಿಟಲ್ಗೆ ಬದಲಾದರೆ, ಗುರುತಿನ ಚೀಟಿಯನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಂಡು ಡಿಜಿಟಲ್ ಆವೃತ್ತಿ ಮೂಲಕವೇ ಮತ ಚಲಾಯಿಸಲು ಸಾಧ್ಯವಾಗಲಿದೆ. ಈ ಕುರಿತು ಚುನಾವಣಾ ಸಮಿತಿ ಯೋಜನೆ ಸಿದ್ಧತೆ ನಡೆಸಿದೆ. ಈ ಬಗ್ಗೆ ಆಯೋಗ ಅಂತಿಮ ಪರಿಶೀಲನೆ ನಡೆಸಲಿದ್ದು, ಮತದಾರರಿಗೆ ಶೀಘ್ರದಲ್ಲಿಯೇ ಈ ಸೌಲಭ್ಯ ನೀಡಲಿದ್ದಾರೆ ಎಂಬ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದೆ. ಮೂಲಗಳ ಪ್ರಕಾರ ಹೊಸದಾಗಿ ದಾಖಲಾದ ಮತದಾರರ ಗುರುತಿನ ಚೀಟಿಯನ್ನು ಸ್ವಯಂಚಾಲಿತವಾಗಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಗುರುತಿನ ಚೀಟಿ ಹೊಂದಿರುವ ಮತದಾರರು, ಮತದಾರರ ಸಹಾಯವಾಣಿ ಆ್ಯಪ್ ಮೂಲಕ ಕೆಲವು ಕಾರ್ಯ ಪೂರ್ಣಗೊಳಿಸಬೇಕಿದೆ.
ಈ ಕುರಿತು ಚುನಾವಣಾ ಆಯೋಗವು ತನ್ನ ಅಂತಿಮ ಅನುಮೋದನೆ ನೀಡಲು ಮತ್ತು ಅಂತಿಮ ಯೋಜನೆಯನ್ನು ಬಹಿರಂಗಪಡಿಸಲು ಸಿದ್ದವಾಗಿದೆ. ಈ ಮೂಲಕ ಮತದಾರರು ಡಿಜಿಟಲ್ ಗುರುತಿನ ಕಾರ್ಡನ್ನು ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಯೋಜನೆಯ ಉದ್ದೇಶ ಸುಲಭವಾಗಿ ಮತದಾರರಿಗೆ ಗುರುತಿನ ಚೀಟಿ ಒದಗಿಸುವುದಾಗಿದೆ.
ಮೊಬೈಲ್ ನಂಬರ್ ದಾಖಲಿಸುವ ಮೂಲಕ ಹೊಸ ಮತದಾರರು ಗುರುತಿನ ಚೀಟಿ ಡೌನ್ಲೋಡ್ ಮಾಡಿಕೊಳ್ಳಬಹುದು. ಅಧಿಕಾರಿಗಳಿಂದ ಅನುಮೋದನೆ ಪಡೆದ ನಂತರ ಮತದಾರರು ಡಿಜಿಟಲ್ ರೂಪದಲ್ಲಿ ಗುರುತಿನ ಚೀಟಿ ಪಡೆಯಬಹುದು.
ಇದನ್ನು ಓದಿ: ತ್ರಿಕೋನಾಕೃತಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಂಸತ್ ಭವನದಲ್ಲಿರಲಿದೆ ಈ ವಿಶೇಷ ಸೌಲಭ್ಯಗಳು
ಈ ಗುರುತಿನ ಚೀಟಿಗೆ ಎರಡು ವಿಧವಾದ ಕ್ಯೂಆರ್ ಕೋಡ್ ಇರಲಿದೆ. ಒಂದು ಕ್ಯೂಆರ್ ಕೋಡ್ ಮತದಾರರ ಹೆಸರು, ವಿವರಗಳನ್ನು ಹೊಂದಿರಲಿದೆ. ಮತ್ತೊಂದು ಕೋಡ್ನಲ್ಲಿ ಮತದಾರರ ಇತರೆ ಮಾಹಿತಿ ಇರಲಿದೆ. ಕ್ಯೂಆರ್ ಕೋಡ್ಗಳಲ್ಲಿ ಸಂಗ್ರಹಿಸಲಾದ ಮಾಹಿತಿ ಆಧಾರದ ಮೇಲೆ ಮತದಾನದ ಹಕ್ಕಗಳನ್ನು ಪಡೆಯಬಹುದು.
ಚುನಾವಣಾ ಆಯೋಗದ ಯೋಜನೆ ಜಾರಿಬಂದ ಬಳಿಕ ಈ ಸೇವೆಯನ್ನು ವಿದೇಶಿ ಭಾರತೀಯ ಪ್ರಜೆಗಳು ಕೂಡ ಪಡೆಯಬಹುದಾಗಿದೆ. ವಿದೇಶಿ ಭಾರತೀಯ ಪ್ರಜೆಗಳಿ ಪ್ರಸ್ತುತ ಚಾಲ್ತಿಯಲ್ಲಿರುವ ಮತದಾರರ ಗುರುತಿನ ಚೀಟಿಯನ್ನು ನೀಡಲಾಗಿಲ್ಲ. ಈ ಡಿಜಿಟಲ್ ಸೌಲಭ್ಯ ವಿದೇಶಿ ಭಾರತೀಯ ಪ್ರಜೆಗಳಿಗೂ ದಾಖಲೆ ಒದಗಿಸಲು ಸಹಾಯವಾಗಲಿದೆ. ಅಲ್ಲದೇ ಗುರುತಿನ ಚೀಟಿ ಕಳೆದುಕೊಂಡು ಹೊಸ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿರುವ ಮತದಾರರು ಕೂಡ ಹೊಸ ಸೇವೆಗೆ ಬಳಸಿಕೊಳ್ಳಲು ಅನುಮೋದನೆ ಪಡೆಯಬಹುದಾಗಿದೆ.
ಚುನಾವಣಾ ಸಮಿತಿ ಅಂತಿಮ ನಿರ್ಧಾರದ ಬಳಿಕ ಮತದಾರರು ಈ ಸೇವೆ ಪಡೆಯಬಹುದು. ಇನ್ನು ಮುಂದಿನ ವರ್ಷ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ಈ ಸೇವೆ ದೇಶಾದ್ಯಂತ ಮತದಾರರಿಗೆ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ
(ವರದಿ: ನೀರಜ್ ಕುಮಾರ್)
Published by:
Seema R
First published:
December 11, 2020, 6:13 AM IST