ದುಬೈ: ಕೇರಳದ (Kerala) ಕೊಯಿಕ್ಕೋಡ್ ನಗರದ ಬಲುಸ್ಸೆರಿ ಮೂಲದ ಪ್ರಖ್ಯಾತ ವ್ಲಾಗರ್ (Vlogger) ಮತ್ತು ಮಲಯಾಳಂ ಆಲ್ಬಂ ಸ್ಟಾರ್ (Malayalam Album Star) ರಿಫಾ ಮೆಹ್ನು ಅವರು ದುಬೈನಲ್ಲಿರುವ (Dubai) ತಮ್ಮ ಫ್ಲ್ಯಾಟ್ನಲ್ಲಿ ಶವವಾಗಿ (Dead Body) ಪತ್ತೆಯಾಗಿದ್ದಾರೆ. ಕಳೆದ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. 21 ವರ್ಷದ ರಿಫಾ, ದುಬೈನ ಜಫ್ಫಿಲಿಯಾದಲ್ಲಿರುವ ಫ್ಲ್ಯಾಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದುಬೈನಲ್ಲಿ ಸಾವಿಗೀಡಾಗಿರುವ ಜನಪ್ರಿಯ ಮಲಯಾಳಿ ವ್ಲಾಗರ್ ರಿಫಾ ಮೆಹ್ನು (Rifa Mehnu) ಅವರ ಸಾವಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬ ಕಂಬನಿ ಮಿಡಿದಿದೆ. ಆಹಾರ ಮತ್ತು ಫ್ಯಾಷನ್ನಲ್ಲಿ ವ್ಲಾಗರ್ ರಿಫಾ ಮೆಹ್ನು ಅವರ ಸಾವಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಕೋಝಿಕ್ಕೋಡ್ ಜಿಲ್ಲೆಯ ಕಕ್ಕೂರ್ ಬಳಿಯ ಈಂಥಾಡ್ ಗ್ರಾಮದ 21 ವರ್ಷದ ಯುವತಿ ಮಂಗಳವಾರ ಅಲ್-ಜಾಫಿಲಿಯಾದಲ್ಲಿರುವ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಘಟನೆಯ ಕುರಿತು ದುಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ರಿಫಾ ದುಬೈನ ಕರಾಮದಲ್ಲಿರುವ ಪರ್ದಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ಪೋಷಕರು ಅಂಬಲಪರಂಬಿಲ್ ರಶೀದ್ ಮತ್ತು ಶೆರೀನಾ ಮತ್ತು ಎರಡು ವರ್ಷದ ಮಗ ಹಸನ್ ಮೆಹ್ನು ಸೋಮವಾರ ರಾತ್ರಿ ರಿಫಾ ಜೊತೆಗೆ ಮಾತನಾಡಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ರಿಫಾ ಸಾವಿಗೆ ಕಂಬನಿ ಮಿಡಿದ ಕುಟುಂಬ
ಕುಟುಂಬಸ್ಥರು ರಿಫಾ ಜೊತೆಗೆ ಮಾತನಾಡಿ ಒಂದು ದಿನ ಕಳೆದಿತ್ತು. ಮಾರನೇ ದಿನ ದುಬೈನಲ್ಲಿರುವ ಸಂಬಂಧಿಕರೊಬ್ಬರ ಮೂಲಕ ರಿಫಾ ಸಾವಿನ ಸುದ್ದಿಯನ್ನು ಕುಟುಂಬಸ್ಥರು ಪಡೆದಿದ್ದು, ದುಃಖ ಮಡುಗಟ್ಟಿದೆ.
ಇದನ್ನೂ ಓದಿ: Congress ಮುಖಂಡನ ಪುತ್ರನ ಮದುವೆಯಲ್ಲಿ ಊಟ ಮಾಡಿದ 1,200 ಮಂದಿ ಪಾಡು ಯಾರಿಗೂ ಬೇಡ!
ಒಂದು ತಿಂಗಳ ಹಿಂದೆ ದುಬೈಗೆ ಹಿಂದಿರುಗುವ ವೇಳೆ ರಿಫಾ ತನ್ನ ಮಗುವನ್ನು ಪೋಷಕರ ಬಳಿ ಬಿಟ್ಟು ಹೋಗಿದ್ದಳು. ತಮ್ಮ ಪತಿ ಮೆಹನಾಜ್ ಮತ್ತು ಮಗಳ ಜತೆ ದುಬೈನಲ್ಲಿ ರಿಫಾ ನೆಲೆಸಿದ್ದರು. ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಆಕೆಯ ಸಂಬಂಧಿಕರು ಮತ್ತು ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ್ದಾರೆ. ರಿಫಾ ಅವರು ಆಹಾರ ಮತ್ತು ಫ್ಯಾಶನ್ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದರು.
ಕೇರಳದಲ್ಲಿ ತುಂಬಾ ಪ್ರಸಿದ್ಧಿ ಪಡೆದಿದ್ದ ರಿಫಾ
ರಿಫಾ ವಿಡಿಯೋಗಳ ಮೂಲಕ ಕೇರಳದಲ್ಲಿ ತುಂಬಾ ಪ್ರಸಿದ್ಧಿ ಪಡೆದಿದ್ದರು. ಸದಾ ಸಾಮಾಜಿಕ ಜಾಲತಾಣದಲ್ಲಿ ರಿಫಾ ಬಿಜಿಯಾಗಿರುತ್ತಿದ್ದರು. ಸಾವಿಗೂ ಕೆಲವು ಕ್ಷಣಗಳ ಮೊದಲು ರಿಫಾ ಜಾಲತಾಣದಲ್ಲಿ ಸಕ್ರೀಯರಾಗಿದ್ದರು.
ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಮೂಲದ ಮೆಹನಾಜ್ (25) ರನ್ನು ಪ್ರೀತಿಸಿ ಮದುವೆಯಾಗಿದ್ದರು. ಇನ್ಸ್ಟಾಗ್ರಾಮ್ ಮೂಲಕ ಮೆಹನಾಜ್ ಜೊತೆ ಸಂಪರ್ಕ ಬೆಳೆದಿತ್ತು. ಅಲ್ಲಿ ಸಂವಹನ ನಡೆಸಿದ ನಂತರ ಅವರನ್ನು ತುಂಬಾ ಪ್ರೀತಿಸುತ್ತಿದ್ದಳು. ಮದುವೆಯ ನಂತರ ವ್ಲೋಗಿಂಗ್ ಕಡೆಗೆ ತಿರುಗಿದಳು.
ಇನ್ಸ್ಟಾಗ್ರಾಮ್ನಲ್ಲಿ 3 ಲಕ್ಷಕ್ಕೂ ಹೆಚ್ಚು ಹಿಂಬಾಲಕರು
ಇನ್ಸ್ಟಾಗ್ರಾಮ್ನಲ್ಲಿ 3 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು, ಮತ್ತು ಅವರ ಯೂಟ್ಯೂಬ್ ಚಾನೆಲ್ಗೆ ಒಂದು ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ರಿಫಾ ಹೊಂದಿದ್ದಾರೆ. ರಿಫಾ ಸಾಮಾಜಿಕ ಮಾಧ್ಯಮದಲ್ಲಿ ಸೆಲೆಬ್ರಿಟಿಯಾಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅವರ ಪತಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ಅವರು ಕೆಲವು ಸಂಗೀತ ವೀಡಿಯೊಗಳನ್ನು ಸಹ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ದುಬೈನ ಸೌತ್ ಇಂಡಿಯನ್ ರೆಸ್ಟೊರೆಂಟ್ನಲ್ಲಿ ಇಬ್ಬರೂ ವಿಡಿಯೋ ಹಂಚಿಕೊಂಡಿದ್ದರು. ಆಕೆಯ ಸಾವಿನಿಂದ ಕುಟುಂಬ ಸದಸ್ಯರು ಕಣ್ಣೀರಿಡುತ್ತಿದ್ದಾರೆ.
ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ರಿಫಾ ಪ್ರಯತ್ನ
ರಿಫಾ ತನ್ನ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಈಗ ಸಂಬಂಧಿಕರೊಂದಿಗೆ ವಾಸಿಸುತ್ತಿರುವ ಪೋಷಕರನ್ನು ಬೇರೆ ಮನೆ ಮಾಡಿ ಸ್ವತಂತ್ರವಾಗಿರಿಸಲು ಪ್ರಯತ್ನಿಸುತ್ತಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ರಾ ರಷ್ಯಾ ಸೈನಿಕರು?
ಮೆಹನಾಜ್ ತಮ್ಮ ಪತ್ನಿಯ ಸಾವಿನ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ. ಸ್ನೇಹಿತರೊಂದಿಗೆ ರಾತ್ರಿ ಊಟ ಮುಗಿಸಿ ಮರಳಿದ ಬಳಿಕ ಆಕೆ ಮೃತಪಟ್ಟಿರುವುದು ಕಂಡು ಬಂದಿದೆ. ಗುರುವಾರ ಅಂತಿಮ ವಿಧಿವಿಧಾನಕ್ಕಾಗಿ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಲಾಗಿದೆ. ಆಕೆಯ ಸಾವಿಗೆ ಆತ್ಮಹತ್ಯೆ ಕಾರಣ ಎಂದು ತಿಳಿಸಲಾಗಿದೆ ಎಂದು ಆಕೆಯ ಸಂಬಂಧಿಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ