Putin's Girlfriend: ಇದು ರಷ್ಯಾವೇ ಖುಷಿಪಡುವ ಸುದ್ದಿ, 69ನೇ ವಯಸ್ಸಲ್ಲಿ ತಂದೆಯಾಗ್ತಿದ್ದಾರೆ ಪುಟಿನ್!

ವ್ಲಾಡಿಮಿರ್ ಪುಟಿನ್ ಅವರ ಜೊತೆ  ಪ್ರೇಯಸಿ ಅಲಿನಾ ಕಬೇವಾ

ವ್ಲಾಡಿಮಿರ್ ಪುಟಿನ್ ಅವರ ಜೊತೆ ಪ್ರೇಯಸಿ ಅಲಿನಾ ಕಬೇವಾ

ಪುಟಿನ್‌ ಮೊದಲ ಪತ್ನಿಗೇ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದಲ್ಲದೇ ಇವರ ಪ್ರೇಯಸಿ ಅಲಿನಾ ಕಬೇವಾಗೂ ಕೂಡ ನಾಲ್ವರು ಮಕ್ಕಳಿದ್ದಾರೆ. ಇದೀಗ ಮತ್ತೆ ಅಲಿನಾ ಕಬೇವಾ ಗರ್ಭಿಣಿಯಾಗಿದ್ದು, ಪುಟಿನ್‌ ಅವರ ಒಟ್ಟು ಮಕ್ಕಳ ಸಂಖ್ಯೆ 7 ಆಗಲಿದೆ.

  • Share this:

ರಷ್ಯಾ: ಉಕ್ರೇನ್ (Ukraine) ಹಾಗೂ ರಷ್ಯಾ (Russia) ನಡುವಿನ ಯುದ್ಧ (War) ಮುಂದುವರೆದಿದೆ. ಎರಡೂ ದೇಶಗಳಲ್ಲಿ ಅಪಾರ ಸಂಖ್ಯೆಯ ಸಾವು (Death) ನೋವು ಸಂಭವಿಸಿದೆ. ಯುದ್ಧ ಭೂಮಿಯಿಂದ ದಿನಕ್ಕೊಂದು ಸುದ್ದಿ ಹೊರಬರುತ್ತಿದೆ. ಇದರ ಜೊತೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಕುರಿತಂತೆ ರಂಗು ರಂಗಿನ ಸುದ್ದಿಗಳು ಬಹಿರಂಗವಾಗುತ್ತಿದೆ. ಪುಟೀನ್ ಜೀವನದ ಬಗ್ಗೆ, ಲಕ್ಷುರಿ ಲೈಫ್ ಬಗ್ಗೆ, ಆತನ ಪತ್ನಿ, ಮಕ್ಕಳು, ಗೆಳತಿಯರ ಬಗ್ಗೆ, ಅವರ ಆರೋಗ್ಯದ ಕುರಿತಂತೆ ಜನ ಆಸಕ್ತಿ ಹೊಂದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಇದೀಗ ಪುಟಿನ್ ಈ ಇಳಿ ವಯಸ್ಸಲ್ಲಿ ತಂದೆಯಾಗುತ್ತಿರುವ (Father) ಸುದ್ದಿ ಹೊರಬಿದ್ದಿದೆ. ಹೌದು, 69ರ ಇಳಿ ವಯಸ್ಸಲ್ಲಿ ಇರುವ ವ್ಲಾಡಿಮಿರ್ ಪುಟಿನ್, ಈಗ ತಂದೆಯಾಗುತ್ತಿದ್ದಾರೆ. ಅವರ ಪ್ರೇಯಸಿ (Girl Friend) ಈಗ ಗರ್ಭಿಣಿಯಾಗಿದ್ದು (Pregnant), ಇದು ರಷ್ಯಾ ಜನರು ಖುಷಿ ಪಡುವ ಸುದ್ದಿ ಅಂತ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.


 69ರ ಇಳಿವಯಸ್ಸಲ್ಲಿ ತಂದೆಯಾಗ್ತಿದ್ದಾರೆ ಪುಟಿನ್!


ಹೌದು, ಇಂಥದ್ದೊಂದು ವಿಚಾರ ಇದೀಗ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಂದೆಯಾಗುತ್ತಿದ್ದಾರೆ. 69ರ ಹರೆಯದಲ್ಲಿರುವ ಪುಟಿನ್ ಅವರ ಪ್ರೇಯಸಿ 38 ವರ್ಷದ ಅಲಿನಾ ಕವೇಬಾ ಈಗ ಗರ್ಭಿಣಿಯಂತೆ. ಹೀಗಂತ ರಷ್ಯಾದ ಕೆಲವು ಮಾಧ್ಯಮಗಳು ವರದಿ ಮಾಡಿವೆ.


ಮೊದಲ ಪತ್ನಿಯಿಂದ ಇಬ್ಬರು, ಇದೀಗ ಪ್ರೇಯಸಿಗೆ ಐದನೇ ಮಗು!


ಪುಟಿನ್ ಈ ವರ್ಷದ ಅಕ್ಟೋಬರ್‌ನಲ್ಲಿ 70ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.  ಪುಟಿನ್ ಅವರಿಗೆ ಈಗಾಗಲೇ ಮದುವೆಯಾಗಿ ಮಕ್ಕಳೂ ಇದ್ದಾರೆ. ಮೊದಲ ಪತ್ನಿಗೇ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದಲ್ಲದೇ ಇವರ ಪ್ರೇಯಸಿ ಅಲಿನಾ ಕಬೇವಾಗೂ ಕೂಡ ನಾಲ್ವರು ಮಕ್ಕಳಿದ್ದಾರೆ. ಇದೀಗ ಮತ್ತೆ ಅಲಿನಾ ಕಬೇವಾ ಗರ್ಭಿಣಿಯಾಗಿದ್ದು, ಪುಟಿನ್‌ ಅವರ ಒಟ್ಟು ಮಕ್ಕಳ ಸಂಖ್ಯೆ 7 ಆಗಲಿದೆ.


ಇದನ್ನೂ ಓದಿ: Narendra Modi: ಎರಡು ಬಾರಿ ಪ್ರಧಾನಿಯಾದರೆ ಸಾಕಾ? ಹಳೆ ಘಟನೆ ನೆನಪಿಸಿಕೊಂಡ ಮೋದಿ ಹೇಳಿದ್ದೇನು?


ಪುಟಿನ್ ಪ್ರೇಯಸಿ ಅಲಿನಾ ಕಬೇವಾ ಯಾರು?


ವರದಿಗಳ ಪ್ರಕಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ 'ರಹಸ್ಯ' ಜಿಮ್ನಾಸ್ಟ್ ಪ್ರೇಮಿಯೇ ಅಲಿನಾ ಕಬೇವಾ ಮಾಜಿ ಒಲಿಂಪಿಕ್ ರಿದಮಿಕ್ ಜಿಮ್ನಾಸ್ಟ್‌ ಆಗಿರುವ ಕಬೇವಾ, ಪುಟಿನ್ ಅವರ ಜೊತೆ ದೀರ್ಘ ಕಾಲದಿಂದ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಇದೆ.


ರಷ್ಯಾ ಸರ್ಕಾರದಿಂದ ಬಂದಿಲ್ಲ ಅಧಿಕೃತ ಹೇಳಿಕೆ


ರಷ್ಯಾದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ನಡೆಸುತ್ತಿದ್ದಾರೆ ಎನ್ನಲಾಗಿರುವ ಜನರಲ್ ಎಸ್‌ವಿಆರ್ ಎಂಬ ರಷ್ಯಾ ಟೆಲಿಗ್ರಾಂ ಚಾನೆಲ್‌ನಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಆದರೆ, ಅಧಿಕೃತ ಮೂಲಗಳಿಂದ ಯಾವುದೇ ಹೇಳಿಕೆ ಬಂದಿಲ್ಲ.


ಮತ್ತೆ ತಂದೆಯಾಗುವುದು ಪುಟಿನ್‌ಗೆ ಇಷ್ಟವಿರಲಿಲ್ಲ!


ಉಕ್ರೇನ್ ಮೇಲಿನ ಯುದ್ಧ ಆರಂಭವಾಗಿ ಮೂರು ತಿಂಗಳಾಗುತ್ತಾ ಬಂದರೂ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗದೆ ರಷ್ಯಾ ಹೆಣಗಾಡುತ್ತಿದೆ. ಹೀಗಾಗಿ ಈ ಸುದ್ದಿಯಿಂದ ಪುಟಿನ್ ಆಘಾತಕ್ಕೆ ಒಳಗಾಗಿದ್ದಾರೆ, ಈ ಮಗುವನ್ನು ಅವರು ನಿರೀಕ್ಷಿಸಿರಲಿಲ್ಲ ಎಂದೂ ಹೇಳಲಾಗುತ್ತಿದೆ.


ಇದನ್ನೂ ಓದಿ: Ranil Wickremesinghe: ಶ್ರೀಲಂಕಾ ಪ್ರಧಾನಿಯಾಗಿ ರನಿಲ್ ವಿಕ್ರಮ ಸಿಂಘೆ, ಇನ್ನಾದ್ರೂ ಸುಧಾರಿಸುತ್ತಾ ದ್ವೀಪರಾಷ್ಟ್ರದ ಆರ್ಥಿಕತೆ?


ವೈಯಕ್ತಿಕ ಜೀವನದ ಬಗ್ಗೆ ಕೆದಕಬೇಡಿ ಎಂದಿದ್ದ ಪುಟೀನ್

top videos


    ರಷ್ಯಾದ ಮಾಧ್ಯಮಗಳು ಹಾಗೂ ಅಂತರಾಷ್ಟ್ರೀಯ ಮಾಧ್ಯಮಗಳಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬರೆಯದಂತೆ, ಕೆದಕದಂತೆ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ: "ನಾನು ಯಾರದ್ದೇ ಹಸ್ತಕ್ಷೇಪವನ್ನು ಅನುಮತಿಸದ ಖಾಸಗಿ ಜೀವನವನ್ನು ಹೊಂದಿದ್ದೇನೆ. ಅದನ್ನು ಗೌರವಿಸಬೇಕು, ತಮ್ಮ ಮೂಗಿನ ನೇರಕ್ಕೆ ಮತ್ತು ಕಾಮಪ್ರಚೋದಕ ಕಲ್ಪನೆಗಳೊಂದಿಗೆ ಇತರರ ಜೀವನದಲ್ಲಿ ಅಲೆದಾಡುವವರಿಗೆ ನಾನು ಯಾವಾಗಲೂ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತೇನೆ" ಅಂತ ಅವರು ಹೇಳಿದ್ದಾರೆ.

    First published: