HOME » NEWS » National-international » VLADIMIR PUTIN MAY RESIGN AS RUSSIAN PRESIDENT EARLY NEXT YEAR SNVS

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ಗೆ ಪಾರ್ಕಿನ್ಸನ್ ಕಾಯಿಲೆ? ಕೆಲವೇ ತಿಂಗಳಲ್ಲಿ ರಾಜೀನಾಮೆ?

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಇತ್ತೀಚಿನ ವಿಡಿಯೋಗಳನ್ನ ನೋಡಿದರೆ ಅವರಿಗೆ ಪಾರ್ಕಿನ್ಸನ್ ಕಾಯಿಲೆಯ ರೋಗಲಕ್ಷಣಗಳು ಇದ್ದಂತಿವೆ ಎಂದು ಹಲವರು ಶಂಕಿಸಿದ್ಧಾರೆ. ಇದೇ ಕಾರಣಕ್ಕೆ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ.

news18
Updated:November 6, 2020, 8:43 AM IST
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ಗೆ ಪಾರ್ಕಿನ್ಸನ್ ಕಾಯಿಲೆ? ಕೆಲವೇ ತಿಂಗಳಲ್ಲಿ ರಾಜೀನಾಮೆ?
ಅಧ್ಯಕ್ಷ ವ್ಲಾಡಿಮಿರ್ ಪುಟಿನ್
  • News18
  • Last Updated: November 6, 2020, 8:43 AM IST
  • Share this:
ನವದೆಹಲಿ(ನ. 06): ಅನಾರೋಗ್ಯದ ಕಾರಣದಿಂದ ರಷ್ಯಾ ದೇಶದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ದ ಸನ್ ಪತ್ರಿಕೆ ವರದಿ ಮಾಡಿದೆ. 68 ವರ್ಷದ ಪುಟಿನ್ ಅವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಅವರು ಮುಂದಿನ ವರ್ಷದ ಆರಂಭದಲ್ಲಿ ಅಧಿಕಾರದಿಂದ ಕೆಳಗಿಳಿಯಬಹುದು ಎಂದು ಮೂಲಗಳನ್ನ ಉಲ್ಲೇಖಿಸಿ ದ ಸನ್ ಪತ್ರಿಕೆ ಬರೆದಿದೆ. ಪಾರ್ಕಿನ್ಸನ್ ಕಾಯಿಲೆ ಬಂದ ವ್ಯಕ್ತಿಯ ದೈಹಿಕ ಸಮತೋಲನ ತಪ್ಪುತ್ತದೆ. ಇದು ಮಿದುಳಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ದೇಹದ ಮೇಲೆ ಮಿದುಳು ಹೊಂದಿರುವ ನಿಯಂತ್ರಣ ದುರ್ಬಲಗೊಳ್ಳುತ್ತದೆ. ತತ್​ಪರಿಣಾಮವಾಗಿ ಪಾರ್ಕಿನ್ಸ್ ರೋಗಿ ನಡೆದಾಡಲು ಮತ್ತು ಮಾತನಾಡಲು ಅತೀವ ಕಷ್ಟಪಡುತ್ತಾನೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಇತ್ತೀಚಿನ ವಿಡಿಯೋಗಳನ್ನ ನೋಡಿದರೆ ಅವರ ಕಾಲುಗಳು ಸದಾ ಚಲನೆಯಲ್ಲಿರುವುದನ್ನು ಗಮನಿಸಬಹುದು. ಹಾಗೆಯೇ, ಕುರ್ಚಿಯ ಕೈಯನ್ನು ಹಿಡಿದು ಅದುಮುವಾಗ ಅವರ ನೋವನ್ನೂ ಗಮನಿಸಬಹುದು. ಬೆರಳಿನಿಂದ ಪೆನ್ನು ಹಿಡಿಯಲೂ ಅವರು ಕಷ್ಟಪಡುತ್ತಿದ್ದಾರೆ. ಅವರಿಗೆ ಪಾರ್ಕಿನ್ಸನ್ ಕಾಯಿಲೆ ಇರುವುದಕ್ಕೆ ಈ ವಿಡಿಯೋಗಳೂ ಕೂಡ ಸಾಕ್ಷಿಯಾಗಿವೆ.

ಬಹಳ ಮಹತ್ವಾಕಾಂಕ್ಷಿಯಾಗಿರುವ ವ್ಲಾದಿಮಿರ್ ಪುಟಿನ್ ಕಳೆದ 20 ವರ್ಷಗಳಿಂದಲೂ ಅಧಿಕಾರದಲ್ಲಿದ್ದಾರೆ. ವಿವಿಧ ಮಾರ್ಗೋಪಾಯಗಳ ಮೂಲಕ ರಾಜಕೀಯ ಅಡೆತಡೆಗಳನ್ನ ನಿವಾರಿಸಿಕೊಂಡವರು. ಸ್ಟಾಲಿನ್ ಬಿಟ್ಟರೆ ರಷ್ಯಾದಲ್ಲಿ ಇವರೇ ಅತಿ ಹೆಚ್ಚು ವರ್ಷ ಆಡಳಿತ ನಡೆಸಿರುವವರು. ಇವರು ರಾಜೀನಾಮೆ ನೀಡಲಿರುವ ವದಂತಿಗೆ ಇಂಬು ಕೊಡುವಂತೆ ಕೆಲ ದಿನಗಳ ಹಿಂದಷ್ಟೇ ಕಾನೂನು ತಿದ್ದುಪಡಿಯೊಂದನ್ನು ತರಲಾಗಿದೆ. ಅದರಂತೆ, ಪುಟಿನ್ ರಾಜೀನಾಮೆ ನೀಡಿದರೂ ಅವರು ಆಜೀವ ಸೆನೆಟರ್ ಆಗಿ ಇರವಂತೆ ಕಾನೂನು ರೂಪಿಸಲಾಗಿದೆ. ಹಾಗೆಯೇ, ಅವರು ಸಾಯುವವರೆಗೂ ಅವರನ್ನ ತನಿಖೆಗೆ ಒಳಪಡಿಸಲು ಸಾಧ್ಯವಿಲ್ಲದ ಕಾನೂನನ್ನೂ ರೂಪಿಸುವ ಪ್ರಯತ್ನ ನಡೆದಿದೆ. ಇವೆಲ್ಲವೂ ಅವರ ರಾಜೀನಾಮೆಯ ಸಾಧ್ಯತೆಯ ಸುಳಿವನ್ನು ನೀಡುತ್ತದೆ.

ಇದನ್ನೂ ಓದಿ: ವಿದೇಶಿ ಹೂಡಿಕೆದಾರರಿಗೆ ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯದ ಜೊತೆಗೆ ವ್ಯಾಪಾರದ ಲಾಭವೂ ಇದೆ; ಪ್ರಧಾನಿ ಮೋದಿ

ಮಾಸ್ಕೋದ ರಾಜಕೀಯ ವಿಜ್ಞಾನಿ ಪ್ರೊಫೆಸರ್ ವೆಲೇರಿ ಸೋಲೋವೇ ಅವರು ಪುಟಿನ್​ಗೆ ಪಾರ್ಕಿನ್ಸನ್ ಕಾಯಿಲೆ ರೋಗಲಕ್ಷಣಗಳಿರಬಹುದು ಎಂದು ಹೇಳಿದ್ದರು. ಶೀಘ್ರದಲ್ಲೇ ಪುಟಿನ್ ಅವರು ಪ್ರಧಾನಿಯನ್ನ ನೇಮಕ ಮಾಡಿ, ನಂತರ ಅವರನ್ನ ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ. ಜನವರಿ ತಿಂಗಳಲ್ಲೇ ಅವರು ಈ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದು ಪ್ರೊಫೆಸರ್ ಹೇಳಿದ್ದಾರೆ.

ಆದರೆ, ರಷ್ಯಾ ಅಧ್ಯಕ್ಷರ ಕಚೇರಿಯಿಂದ ಈ ಸುದ್ದಿಗಳನ್ನ ಅಲ್ಲಗಳೆಯಲಾಗಿದೆ. ಪುಟಿನ್ ಅವರಿಗೆ ಪಾರ್ಕಿನ್ಸನ್ ಕಾಯಿಲೆ ಇಲ್ಲ. ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ತಿಳಿಸಲಾಗಿದೆ. ಕುದುರೆ ಸವಾರಿ, ಐಸ್ ಹಾಕಿ ಇತ್ಯಾದಿ ಕ್ರೀಡೆಗಳನ್ನ ತಾನು ತೊಡಗಿಸಿಕೊಂಡಿರುವ ಚಿತ್ರಗಳನ್ನ ಪುಟಿನ್ ಅವರು ಸ್ವತಃ ಶೇರ್ ಮಾಡಿ ತಾವು ಫಿಟ್ ಅಂಡ್ ಫೈನ್ ಆಗಿರುವುದಾಗಿ ಹೇಳಿದ್ದಾರೆ.
Published by: Vijayasarthy SN
First published: November 6, 2020, 8:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories