ಉಕ್ರೇನ್ ಮೇಲೆ ರಷ್ಯಾ ಯುದ್ಧ (Russia Ukraine War) ಸಾರಿದಾಗಿನಿಂದ ಜಗತ್ತಿನಾದ್ಯಂತ ಬಹಳಷ್ಟು ರಾಷ್ಟ್ರಗಳು ರಷ್ಯಾವನ್ನು ಖಂಡಿಸುತ್ತಿವೆ. ಅದರಲ್ಲೂ ರಷ್ಯಾ ಅಧ್ಯಕ್ಷರಾಗಿರುವ ವ್ಲಾಡಿಮಿರ್ ಪುಟಿನ್ ( Russia President Vladimir Putin ) ಅವರ ನಡೆಯನ್ನು ಜಗದ ಬಹುತೇಕ ಎಲ್ಲ ನಾಯಕರು ಖಂಡಿಸುತ್ತಲೇ ಇದ್ದಾರೆ. ಈ ನಡುವೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ರಷ್ಯಾದ ಮೇಲೆ ದಿಗ್ಬಂಧನ ವಿಧಿಸಿವೆ. ಅದಾಗ್ಯೂ, ವ್ಲಾಡಿಮಿರ್ ಪುಟಿನ್ ಅವರು ಇದ್ಯಾವುದಕ್ಕೂ ಕ್ಯಾರೆ ಅನ್ನುತಿಲ್ಲ. ಈ ನಡುವೆ ಪುಟಿನ್ ಅವರು ಪಾಶ್ಚಿಮಾತ್ಯ ರಾಷ್ಟ್ರಗಳೊಡನೆ ಹೋರಾಡಲು ತಮ್ಮದೆ ಆದ ರಣತಂತ್ರಗಳನ್ನು ಮಾಡುತ್ತಿದ್ದಾರೆ.
ಈ ಮಧ್ಯೆ ಪುಟಿನ್ ಅವರು ತಮ್ಮ ಸಹವರ್ತಿಯಾದ ಕ್ಯೂಬಾ ದೇಶದ ನಾಯಕ ಮಿಗುವೆಲ್ ಡಯಾಜ್ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ನಾಯಕರು ತಮ್ಮ ಸಾಮಾನ್ಯ ಶತ್ರುವಾದ ವಾಷಿಂಗ್ಟನ್ ವಿರುದ್ಧ ತಮ್ಮದೆ ಆದ ಯುನೈಟೆಡ್ ಫ್ರಂಟ್ ಒಂದನ್ನು ರಚಿಸಿದ್ದು ಪಶ್ಚಿಮ ದೇಶಗಳು ಹೇರಿರುವ ದಿಗಂಧನಗಳನ್ನು ಕಟುವಾಗಿ ಟೀಕಿಸಿದ್ದಾರೆ. ಆದರೆ, ಈ ಸಭೆಯಲ್ಲಿ ಎದ್ದು ಬಂದ ವಿಷಯವೆಂದರೆ ಪುಟಿನ್ ಅವರ ಕೈಗಳ ವಿಚಾರ. ಹೌದು, ಸದ್ಯ ಪುಟಿನ್ ಕೈಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಜೋರಾಗಿ ಏರ್ಪಟ್ಟಿದೆ. ಇದಕ್ಕೆ ಕಾರಣವಿಲ್ಲದೆಯೂ ಇಲ್ಲ.
ಪುಟಿನ್ ಆರೋಗ್ಯದ ಬಗ್ಗೆ ಪುಕಾರು
ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸಭೆಯ ಕೆಲ ಕ್ಲಿಪ್ ಗಳು ಜೋರಾಗಿ ಹರಿದಾಡುತ್ತಿದ್ದು ಅದರಲ್ಲಿ ವ್ಲಾಡಿಮಿರ್ ಪುಟಿನ್ ಅವರ ಕೈಗಳು ರಹಸ್ಯಮಯವಾಗಿ ಪರ್ಪಲ್ ಬಣ್ಣಕ್ಕೆ ತಿರುಗಿರುವುದನ್ನು ಕಾಣಬಹುದಾಗಿದ್ದು ಇದು ಹಲವಾರು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಹಿಂದೆಯೂ ಪುಟಿನ್ ಅವರ ಕೈಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಮತ್ತೆ ಆ ಎಲ್ಲ ಚರ್ಚೆಗಳಿಗೆ ಈಗ ರೆಕ್ಕೆಪುಕ್ಕ ದೊರೆತಂತಾಗಿದೆ.
ಇದನ್ನೂ ಓದಿ: Punishment: ಮಗ್ಗಿ ಹೇಳದ್ದಕ್ಕೆ ಡ್ರಿಲ್ನಿಂದ ಕೈ ಕೊರೆದ ರಾಕ್ಷಸ! ಇವ್ರೆಂಥ ಟೀಚರ್
ಇಷ್ಟೆ ಅಲ್ಲದೆ, ರಷ್ಯಾ ಅಧ್ಯಕ್ಷರು ಸಭೆಯಲ್ಲಿ ತಮ್ಮ ಕೈಗಳನ್ನು ಕುರ್ಚಿಗಳ ಮೇಲೆ ಗಟ್ಟಿಯಾಗಿ ಹಿಡಿದುಕೊಂಡಿರುವುದನ್ನು ಗಮನಿಸಬಹುದಾಗಿರುವುದಲ್ಲದೆ ಕಾಲುಗಳನ್ನು ಅಹಿತಕರವಾಗಿ ಅಲುಗಡಿಸುತ್ತಿರುವುದನ್ನೂ ಗಮನಿಸಬಹುದಾಗಿದೆ.
ಪುಟಿನ್ ಕೈಗಳ ಬಣ್ಣ ಬದಲಾಗಿದೆಯೇ?
ತಿಂಗಳ ಮೊದಲ ಆರಂಭದಲ್ಲಿ ಪುಟಿನ್ ಅವರ ಕೈಗಳು ಕಪ್ಪು ಬಣ್ಣಕ್ಕೆ ತಿರುಗಿದ್ದುದು ಸಾಕಷ್ಟು ಪ್ರಚಾರ ಪಡೆದಿತ್ತು. ಸಾಮಾಜಿಕ ಮಾಧ್ಯಮಗಳ ಹಲವು ಬಳಕೆದಾರರು ಇದು ಇಂಟಾ ವೈನ್ಸ್ ಇಂಜೆಕ್ಷನ್ ಗಳ ಗುರುತು ಎಂದು ಪ್ರತಿಪಾದಿಸಿದ್ದರು. ಈ ಸಂದರ್ಭದಲ್ಲಿ ಬ್ರಿಟಿಷ್ ಸೈನ್ಯ ನಿವೃತ್ತ ಅಧಿಕಾರಿ ಹಾಗೂ ಹೌಸ್ ಆಫ್ ಲಾರ್ಡ್ಸ್ ನ ಸದಸ್ಯರಾಗಿರುವ ರಿಚರ್ಡ್ ಡನಾಟ್ ಅವರು ಮಾಧ್ಯಮವೊಂದಕ್ಕೆ ಮಾತನಾಡುತ್ತ "ಸೂಕ್ಷ್ಮವಾಗಿ ಗಮನಿಸುವವರು ಪುಟಿನ್ ಅವರ ಕೈಗಳು ಕಪ್ಪು ಬಣ್ಣಕ್ಕೆ ತಿರುಗಿರುವುದನ್ನು ನೋಡಿದ್ದಾರೆ, ಇದು ಶರೀರದ ಇತರೆ ಭಾಗಗಳು ಇಂಜೆಕ್ಷನ್ ಅನ್ನು ಸ್ವೀಕರಿಸಲು ಯೋಗ್ಯವಾಗಿಲ್ಲದಾಗಿನ ಸಂಕೇತವಾಗಿದೆ" ಎಂದು ಹೇಳಿದ್ದರು.
ಕ್ಯಾನ್ಸರ್ ಕಾಯಿಲೆ ಸಾಧ್ಯತೆ
ಅಷ್ಟಕ್ಕೂ ಕೆಲ ತಿಂಗಳುಗಳ ಹಿಂದೆ ಅಮೆರಿಕದ ಇಂಟೆಲಿಜೆನ್ಸ್ ಏಜನ್ಸಿಯೊಂದು ಅಚ್ಚರಿಯ ವರದಿ ಮಾಡಿತ್ತು. ಅದು ತನ್ನ ವರದಿಯಲ್ಲಿ ರಷ್ಯಾ ಅಧ್ಯಕ್ಷರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರಬಹುದೆಂದು ಹೇಳಿತ್ತು. ವರದಿಯು ಮಾರ್ಚ್ ತಿಂಗಳಿನಲ್ಲಿ ಪುಟಿನ್ ಅವರು ಸಂಭಾವ್ಯ ಹತ್ಯೆಯ ಸಾಧ್ಯತೆಯೊಂದರಿಂದ ಪಾರಾಗಿದ್ದರು ಎಂದೂ ಸಹ ಉಲ್ಲೇಖಿಸಿದೆ.
ಅಂದಹಾಗೆ ಪುಟಿನ್ ಅವರು ಕಳೆದ ತಿಂಗಳಷ್ಟೇ ತಮ್ಮ ಹಿತಚಿಂತಕರ ಹಾಗೂ ಅನುಯಾಯಿಗಳ ಪ್ರಾರ್ಥನೆಗಳ ಮಧ್ಯೆ 70ರ ವಯೋಮಾನಕ್ಕೆ ಕಾಲಿಟ್ಟಿದ್ದಾರೆ. ರಷ್ಯಾ ಅಧ್ಯಕ್ಷರು ತಮ್ಮ ಅಧಿಕಾರಾವಧಿಯಲ್ಲೇ ಈ ಸಮಯದಲ್ಲಿ ಅತಿ ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ. 1962 ರ ಕ್ಯೂಬನ್ ಮಿಸೈಲ್ ಕ್ರೈಸಿ ನಂತರ ಇದೇ ಮೊದಲ ಬಾರಿಗೆ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ರಷ್ಯಾ ಅತಿ ಗರಿಷ್ಠ ಶತ್ರುತ್ವ ಹಾಗೂ ದಿಗ್ಬಂಧನಗಳನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಎದುರಿಸುತ್ತಿದೆ.
ಸದ್ಯ ಯುದ್ಧ ನಡೆಯುತ್ತಿದ್ದು ಏಳು ತಿಂಗಳಿಗೂ ಹೆಚ್ಚು ಅವಧಿಯಾಗಿದ್ದು ರಷ್ಯಾ ತನ್ನ ಅಪಾರ ಸಂಪತ್ತು, ಯುದ್ಧ ಸಾಧನಗಳು ಹಾಗೂ ಸೈನಿಕರನ್ನು ಕಳೆದುಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ