• Home
 • »
 • News
 • »
 • national-international
 • »
 • Vladimir Putin: ಹೊಸ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಾ ಪುಟಿನ್? ಕೈಗಳ ಮೇಲಿರುವ ವಿಚಿತ್ರ ಗುರುತುಗಳ ರಹಸ್ಯವೇನು?

Vladimir Putin: ಹೊಸ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಾ ಪುಟಿನ್? ಕೈಗಳ ಮೇಲಿರುವ ವಿಚಿತ್ರ ಗುರುತುಗಳ ರಹಸ್ಯವೇನು?

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ಕೆಲವೊಂದು ಹೇಳಿಕೆಗಳ ಪ್ರಕಾರ ಪುಟಿನ್ ಅವರ ಕೈಗಳ ಮೇಲೆ ಐವಿ ಟ್ರ್ಯಾಕ್‌ ಮಾರ್ಕ್‌ ನೋಡಬಹುದು ಎಂದು ತಿಳಿಸಿದ್ದಾರೆ. ನಿವೃತ್ತ ಬ್ರಿಟಿಷ್ ಸೇನಾಧಿಕಾರಿ ಮತ್ತು ಹೌಸ್ ಆಫ್ ಲಾರ್ಡ್ಸ್ ಸದಸ್ಯ ರಿಚರ್ಡ್ ಡಾನಾಟ್, ಪುಟಿನ್ ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಮಾತನಾಡಿದ್ದು ಆರೋಗ್ಯ ಚೆನ್ನಾಗಿಲ್ಲದಿರಬಹುದು ಎಂದು ತಿಳಿಸಿದ್ದಾರೆ.

ಮುಂದೆ ಓದಿ ...
 • Share this:

  ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladmir Putin) ಅವರ ಕೈಗಳ ಮೇಲೆ ವಿಚಿತ್ರ ಗುರುತುಗಳು ಮತ್ತು ಕಪ್ಪು ಬಣ್ಣವನ್ನು (Black Hand) ತೋರಿಸುವ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದರಿಂದ ಅವರ ಆರೋಗ್ಯವು ಉತ್ತಮವಾಗಿಲ್ಲ ಎಂದು ವರದಿಯೊಂದು ಹೇಳಿದೆ. ಕೆಲವೊಂದು ಹೇಳಿಕೆಗಳ ಪ್ರಕಾರ ಪುಟಿನ್ ಅವರ ಕೈಗಳ ಮೇಲೆ ಐವಿ ಟ್ರ್ಯಾಕ್‌ ಮಾರ್ಕ್‌ (ಹೆರಾಯಿನ್‌ನಂತಹ ಇಂಟ್ರಾವೆನಸ್ ಡ್ರಗ್ ಬಳಕೆ) ಅನ್ನು ನೋಡಬಹುದು ಎಂದು ತಿಳಿಸಿದ್ದಾರೆ. ನಿವೃತ್ತ ಬ್ರಿಟಿಷ್ ಸೇನಾಧಿಕಾರಿ ಮತ್ತು ಹೌಸ್ ಆಫ್ ಲಾರ್ಡ್ಸ್ ಸದಸ್ಯ ರಿಚರ್ಡ್ ಡಾನಾಟ್, ಪುಟಿನ್ ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಮಾತನಾಡಿದ್ದು ಆರೋಗ್ಯ ಚೆನ್ನಾಗಿಲ್ಲದಿರಬಹುದು ಎಂದು ತಿಳಿಸಿದ್ದಾರೆ.


  ಪುಟಿನ್ ಕೈಗಳ ಬಣ್ಣ ಕಪ್ಪಾಗಿದೆ


  ಪುಟಿನ್ ಕೈಗಳ ಮೇಲ್ಭಾಗವು ಕಪ್ಪು ಬಣ್ಣಕ್ಕೆ ತಿರುಗಿದ್ದು ದೇಹದ ಇತರ ಭಾಗಗಳಲ್ಲಿ ಚುಚ್ಚುಮದ್ದು ತೆಗೆದುಕೊಳ್ಳಲು ಸಾಧ್ಯವಾಗದೇ ಇದ್ದಾಗ ಕೈಗಳ ಮೂಲಕ ಚುಚ್ಚುಮದ್ದನ್ನು ತೆಗೆದುಕೊಂಡಾಗ ಈ ಗುರುತುಗಳು ಕಂಡುಬರುತ್ತವೆ ಎಂದು ಡಾನಾಟ್ ತಿಳಿಸಿದ್ದಾರೆ.


  ಇದನ್ನೂ ಓದಿ: 30 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಅಮೆರಿಕ-ಯುರೋಪ್ ನಾಶ ಮಾಡಲಿದೆ ರಷ್ಯಾ: ಎಲೋನ್ ಮಸ್ಕ್


  ಪುಟಿನ್ ಎಷ್ಟು ಆರೋಗ್ಯಕರವಾಗಿದ್ದಾರೆ ಎಂಬುದನ್ನು ಪರಿಶೀಲಿಸಲು ಹಾಗೂ ಅವರ ಮೇಲೆ ನಿಗಾ ಇರಿಸಲು ಇದು ಪ್ರಮುಖ ಅಂಶವಾಗಿದೆ ಎಂದು ಹೇಳಿದ್ದಾರೆ. ಏಕೆಂದರೆ ಹಲವಾರು ವರದಿಗಳು ಪುಟಿನ್ ಅವರ ಆರೋಗ್ಯ ಸಮಸ್ಯೆಗಳ ಬಗ್ಗೆ ವರದಿ ನೀಡುತ್ತಲೇ ಇದ್ದು, ಪುಟಿನ್ ಆರೋಗ್ಯ ಸ್ಥಿತಿ ಹೇಗಿದೆ ಎಂಬುದು ತಿಳಿದುಬಂದಿಲ್ಲ.


  ಯುಎಸ್ ವರದಿ ಹೇಳಿದ್ದೇನು?


  ಕೆಲವು ತಿಂಗಳ ಹಿಂದೆ ಯುಎಸ್ ಗುಪ್ತಚರ ವರದಿಯ ಪ್ರಕಾರ ಪುಟಿನ್ ಸುಧಾರಿತ ರೀತಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿತ್ತು. ಈ ವರ್ಷದ ಮಾರ್ಚ್‌ನಲ್ಲಿ ಪುಟಿನ್ ಮೇಲೆ ಹತ್ಯೆ ಯತ್ನ ನಡೆಸಲಾಗಿದ್ದು ರಷ್ಯಾದ ಅಧ್ಯಕ್ಷರು ಪವಾಡ ಸದೃಶರಾಗಿ ಬದುಕುಳಿದರು ಎಂದು ಮೌಲ್ಯಮಾಪನ ಹೇಳಿದೆ. ಜನತೆ ಪುಟಿನ್ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥನೆ ನಡೆಸಿದ್ದು ಈ ತಿಂಗಳ ಆರಂಭದಲ್ಲಿ ಪುಟಿನ್ 70ನೇ ವರ್ಷಕ್ಕೆ  ಕಾಲಿಟ್ಟಿದ್ದಾರೆ.


  ಪುಟಿನ್ ಆಡಳಿತದ ದೊಡ್ಡ ಸವಾಲು


  1999 ರ ಕೊನೆಯ ದಿನದಂದು ಕ್ರೆಮ್ಲಿನ್‌ನ ಉನ್ನತ ಹುದ್ದೆಗೆ ಏರಿದ ಪುಟಿನ್, 1962 ರ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನ ನಂತರ ಉಕ್ರೇನ್ ಆಕ್ರಮಣವು ಪಶ್ಚಿಮದೊಂದಿಗಿನ ಗಂಭೀರ ಮುಖಾಮುಖಿಯನ್ನು ಪ್ರಚೋದಿಸಿದ ನಂತರ ತಮ್ಮ ಆಡಳಿತದ ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ. ಆಕ್ರಮಣಕಾರಿ ಪಶ್ಚಿಮದ ದಾಳಿಯಿಂದ ರಷ್ಯಾವನ್ನು ಪುಟಿನ್ ಸಂರಕ್ಷಿಸಿದ್ದಾರೆ ಎಂದು ಬೆಂಬಲಿಗರು ತಿಳಿಸಿದ್ದಾರೆ.


  ರಷ್ಯಾದ ಸೇನೆಯು ಸೇನಾದಳ ಹಾಗೂ ಸಲಕರಣೆಗಳಲ್ಲಿ ಭಾರೀ ನಷ್ಟವನ್ನು ಅನುಭವಿಸಿದೆ ಹಾಗೂ ಹಲವಾರು ಕ್ಷೇತ್ರಗಳಲ್ಲಿ ಸೋಲನ್ನು ಅನುಭವಿಸಿದೆ. ಉಕ್ರೇನ್‌ನಲ್ಲಿ ರಷ್ಯಾ ಭಾರಿ ನಷ್ಟವನ್ನು ಅನುಭವಿಸುತ್ತಿರುವ ನಡುವೆಯೇ ಅವರು ತಮ್ಮ ಆಡಳಿತದ ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ.


  ಇದನ್ನೂ ಓದಿ:  Joe Biden: ಪಾಕಿಸ್ತಾನ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್!


  ಪುಟಿನ್ ಆರೋಗ್ಯದ ಬಗ್ಗೆ ರಷ್ಯಾದ ಅಧಿಕಾರಿಗಳ ಮಾತುಗಳೇನು?


  ರಷ್ಯಾದ ಅಧಿಕಾರಿಗಳು ಪುಟಿನ್ ಆರೋಗ್ಯ ವದಂತಿಗಳ ಕುರಿತು ಹರಡಿರುವ ಸುದ್ದಿಗಳನ್ನು ತಳ್ಳಿಹಾಕಿದ್ದು ಅವರು ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದಾರೆ ಎಂದು ಹೇಳಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಉಕ್ರೇನ್, ಯುಎಸ್ ಹಾಗೂ ಬ್ರಿಟಿಷ್ ತಜ್ಞರು, ಅಧ್ಯಕ್ಷರ ಆರೋಗ್ಯದ ಬಗ್ಗೆ ನಕಲಿ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ. ಯುಎಸ್ ವಿಶ್ಲೇಷಿಸಿರುವಂತೆ ಉಕ್ರೇನ್ ಯುದ್ಧದಲ್ಲಿ ರಷ್ಯಾದ ಸುಮಾರ 15,000 ಮಂದಿ ಸಾವನ್ನಪ್ಪಿದ್ದು 45,000 ಮಂದಿ ಗಾಯಗೊಂಡಿರುವುದಾಗಿ ಅಂದಾಜಿಸಲಾಗಿದೆ ಎಂದು ತಿಳಿಸಿದೆ.


  ಐದು ತಿಂಗಳ ನಂತರ, ರಷ್ಯಾ ದೇಶದ ಪೂರ್ವ ಮತ್ತು ದಕ್ಷಿಣದ ಭಾಗಗಳನ್ನು ಆಕ್ರಮಿಸಿಕೊಂಡಿದೆ, ಆದರೆ ಅದು ಕೈವ್ ಅನ್ನು ವಶಪಡಿಸಿಕೊಳ್ಳುವ ತನ್ನ ಮೂಲ ಗುರಿಯಲ್ಲಿ ವಿಫಲವಾಗಿದೆ ಮತ್ತು ಯುದ್ಧದ ಮುಖ್ಯ ಉದ್ದೇಶವು ಡೊನ್ಬಾಸ್‌ನ ವಿಮೋಚನೆಯಾಗಿದೆ ಎಂದು ಹೇಳಿಕೊಂಡಿದೆ. ಉಕ್ರೇನ್‌ನ ಕೆಲವು ಭಾಗಗಳನ್ನು ವಶಪಡಿಸಿಕೊಳ್ಳಲು ರಷ್ಯಾ ಸಿದ್ಧತೆ ನಡೆಸುತ್ತಿದೆ ಎಂದು ಯುಎಸ್ ಆರೋಪಿಸಿದೆ.

  Published by:Precilla Olivia Dias
  First published: