ಮಾಸ್ಕೋ, ರಷ್ಯಾ: ತನ್ನ ಪಕ್ಕದ ರಾಷ್ಟ್ರ ಉಕ್ರೇನ್ (Ukraine) ಮೇಲೆ ಮುಗಿ ಬಿದ್ದಿದ್ದ ರಷ್ಯಾದ (Russia) ಯುದ್ಧ ದಾಹ ಕೊಂಚ ಕಡಿಮೆಯಾದಂತೆ ತೋರುತ್ತಿದೆ. ಇದೀಗ ಉಕ್ರೇನ್ ಮೇಲೆ ಯುದ್ಧ (War) ನಿಲ್ಲಿಸುವ ಬಗ್ಗೆ ರಷ್ಯಾ ಪರೋಕ್ಷವಾಗಿ ಮಾತನ್ನಾಡುತ್ತಿದೆ. ಇನ್ನು ಮುಂದೆ ರಷ್ಯಾದ ಮೇಲೆ ಕ್ಷಿಪಣಿ ದಾಳಿ (Missile attack) ಮಾಡುವುದಿಲ್ಲ ಅಂತ ಖುದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಹೇಳಿದ್ದಾರೆ. ಕ್ರಿಮಿಯನ್ ಸೇತುವೆಯ (Crimean bridge) ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ಉಕ್ರೇನ್ ವಿರುದ್ಧ ರಷ್ಯಾ ದಾಳಿಯನ್ನು ಹೆಚ್ಚಿಸಿದ ಕೆಲವೇ ದಿನಗಳ ನಂತರ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ಹೇಳಿಕೆ ನೀಡಿದ್ದಾರೆ. ಉಕ್ರೇನ್ ವಿರುದ್ಧ ಕ್ರೆಮ್ಲಿನ್ 'ಬೃಹತ್' ಕ್ಷಿಪಣಿ ದಾಳಿಯನ್ನು (Kremlin Missile attack) ರಷ್ಯಾ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಉಕ್ರೇನ್ ವಿರುದ್ಧ ಸದ್ಯಕ್ಕೆ ರಷ್ಯಾ ಹೆಚ್ಚು ದೊಡ್ಡ ಹೋರಾಟಗಳನ್ನು ಮಾಡುವುದಿಲ್ಲ, ಕ್ರೆಮ್ಲಿನ್‌ನ ಗುರಿಯು ಪಾಶ್ಚಿಮಾತ್ಯ ಪರ ದೇಶವನ್ನು ನಾಶಗೊಳಿಸುವುದು ಅಲ್ಲ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ.
ರಷ್ಯಾ ತಂಟೆಗೆ ಬರದಂತೆ ಪುಟಿನ್ ಎಚ್ಚರಿಕೆ
ಉಕ್ರೇನ್ ವಿವಾದದಿಂದ ನ್ಯಾಟೋ ಮೈತ್ರಿಕೂಟ ದೂರ ಇದ್ದರೆ ಒಳ್ಳೆಯದು ಅಂತ ವ್ಲಾಡಿಮಿರ್ ಪುಟಿನ್ ಎಚ್ಚರಿಸಿದ್ದಾರೆಯ. ರಷ್ಯಾದ ಜತೆ ಸಂಘರ್ಷಕ್ಕೆ ಮುಂದಾದರೆ ಅದು ವಿಶ್ವದ ಸಂಪೂರ್ಣ ನಾಶಕ್ಕೆ ದಾರಿ ಮಾಡಿಕೊಡಲಿದೆ ಎಂದೂ ಅವರು ಹೇಳಿದ್ದಾರೆ. ರಷ್ಯಾ ಹೂಗೂ ಉಕ್ರೇನ್ ನಡುವಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜತೆ ನೇರ ಮಾತುಕತೆ ನಡೆಸಬೇಕಾದ ಅಗತ್ಯ ಇಲ್ಲ ಎಂಬ ಅಭಿಪ್ರಾಯವನ್ನು ಪುಟಿನ್ ವ್ಯಕ್ತಪಡಿಸಿದ್ದಾರೆ. ಇನ್ನು ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಜಿ- 20 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಪುಟಿನ್ ತಿಳಿಸಿದ್ದಾರೆ.
ಉಕ್ರೇನ್ ಬೆಂಬಲಕ್ಕೆ ನಿಂತ ನ್ಯಾಟೋ ಪಡೆಗಳು
ಉಕ್ರೇನ್ ಬೆಂಬಲಕ್ಕೆ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಒದಗಿಸುವುದಾಗಿ ನ್ಯಾಟೋ ರಾಷ್ಟ್ರಗಳು ಘೋಷಿಸಿವೆ. ಈ ಘೋಷಣೆ ಬೆನ್ನಲ್ಲೇ ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ತೀವ್ರಗೊಳಿಸಿತ್ತು. 24 ಗಂಟೆಗಳಲ್ಲಿ ಉಕ್ರೇನ್‌ನ 40ಕ್ಕೂ ಹೆಚ್ಚು ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ದಾಳಿಯಿಂದಾಗಿ ಹಲವೆಡೆ ಕಟ್ಟಡಗಳು ವಿದ್ವಂಸಗೊಂಡಿದೆ. ಇದೇ ವೇಳೆ ಉಕ್ರೇನ್ ವಾಯುಪಡೆ ಕೂಡಾ ಪ್ರತಿದಾಳಿ ನಡೆಸಿವೆ ಎಂದು ಸೇನಾಕಾರಿ ಹೇಳಿದ್ದಾರೆ. ಕೈವ್ ವಸತಿ ಪ್ರದೇಶದ ಮೇಲೆ ರಷ್ಯಾ ಇರಾನ್ ನಿರ್ಮಿತ ಡ್ರೋಣ್ ಬಳಸಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಲವರು ಮೃತಪಟ್ಟಿದ್ದಾರೆ ಅಂತ ವರದಿಯಾಗಿದೆ.
ಇದನ್ನೂ ಓದಿ: 30 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಅಮೆರಿಕ-ಯುರೋಪ್ ನಾಶ ಮಾಡಲಿದೆ ರಷ್ಯಾ: ಎಲೋನ್ ಮಸ್ಕ್
ಫೆಬ್ರವರಿಯಲ್ಲೇ ಪ್ರಾರಂಭವಾದ ರಷ್ಯಾ ಉಕ್ರೇನ್ ಯುದ್ಧ
ಫೆಬ್ರವರಿ 24ರಿಂದ ಉಕ್ರೇನ್- ರಷ್ಯಾದ ನಡುವೆ ಯುದ್ಧ ಪ್ರಾರಂಭವಾಯಿತು. ಆರಂಭದ ದಿನಗಳಿಂದಲೂ ಕೈವ್ ಮತ್ತು ಇತರ ಉಕ್ರೇನಿಯನ್ ನಗರಗಳ ಮೇಲೆ ರಷ್ಯಾ ತನ್ನ ಭಾರೀ ಕ್ಷಿಪಣಿ ದಾಳಿಯನ್ನು ನಡೆಸುತ್ತಿದೆ. ಕೆಲ ದಿನಗಳ ಹಿಂದೆ ಉಕ್ರೇನ್ ಕ್ರೈಮಿಯಾ ಸೇತುವೆ ಮೇಲೆ ದಾಳಿ ನಡೆಸಿತ್ತು. ಇದರಿಂದ ಕೋಪಗೊಂಡಿದ್ದ ಪುಟಿನ್ ಮರುದಿನ ಉಕ್ರೇನ್ ಮೇಲೆ ಬಹು ಕ್ಷಿಪಣಿ ದಾಳಿ ನಡೆಸಿದ್ದರು. ಇದು ಕ್ರೈಮಿಯಾ ಸೇತುವೆ ಹಾನಿಗೊಳಗಾಗಿದ್ದಕ್ಕೆ ಪ್ರತಿಕಾರ ಅಂತ ಎಚ್ಚರಿಸಿದ್ದರು.
ಇದನ್ನೂ ಓದಿ: Joe Biden: ಪಾಕಿಸ್ತಾನ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್!
ಉಕ್ರೇನ್‌ಗೆ ಸೌದಿ ಅರೇಬಿಯಾದಿಂದ 3,200 ಕೋಟಿ ನೆರವು
ಈ ಮಧ್ಯೆ ಉಕ್ರೇನ್ ನೆರವಿಗೆ ಸೌದಿ ಅರೇಬಿಯಾ ನಿಂತಿದೆ. ಉಕ್ರೇನ್‌ಗೆ 400 ಮಿಲಿಯನ್ ಡಾಲರ್ ಅಂದರೆ ಅಂದಾಜು 3,200 ಕೋಟಿ ರೂಪಾಯಿಗಳ ಮಾನವೀಯ ನೆರವು ಘೋಷಿಸಿದೆ. ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರಿಗೆ ಕರೆ ಮಾಡಿ ಈ ಬಗ್ಗೆ ಭರವಸೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ