ನನ್ನ ಬಿಡುಗಡೆ ದಿನಾಂಕ ಸೇರಿದಂತೆ ಯಾರಿಗೂ ಯಾವ ಮಾಹಿತಿ ನೀಡಬೇಡಿ; ಜೈಲಾಧಿಕಾರಿಗಳಿಗೆ ಶಶಿಕಲಾ ಪತ್ರ

ನಾಲ್ಕು ವರ್ಷದ ಸೆರೆ ಶಿಕ್ಷೆಗೆ ಗುರಿಯಾಗಿರುವ ತಮಿಳುನಾಡು ಮುಖ್ಯಮಂತ್ರಿ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾ 2017ರಿಂದ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ವಿ.ಕೆ. ಶಶಿಕಲಾ

ವಿ.ಕೆ. ಶಶಿಕಲಾ

 • Share this:
  ಬೆಂಗಳೂರು (ಸೆ.24): ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಗೃಹ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ತಮ್ಮ ಬಿಡುಗಡೆ ಕುರಿತು ಯಾರೇ ಮಾಹಿತಿ ಕೇಳಿದರೂ ನೀಡಬಾರದು ಎಂದು ತಮ್ಮ ವಕೀಲರ ಮೂಲಕ ಪರಪ್ಪನ ಆಗ್ರಹಾರ ಕೇಂದ್ರದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 2017ರಿಂದ ಸೆರೆವಾಸ ಅನುಭವಿಸುತ್ತಿರುವ ಶಶಿಕಲಾ ಮುಂದಿನ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅವರು ಬಿಡುಗಡೆ ಕುರಿತು ಈಗಾಗಲೇ ಹಲವರು ಮಾಹಿತಿ ಹಕ್ಕಿನ ಅಡಿ ಮಾಹಿತಿ ಪಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಯಾವುದೇ ಕಾರಣಕ್ಕೂ ನನ್ನ ಶಿಕ್ಷೆ ಪೂರ್ಣಗೊಳ್ಳುವ ಅವಧಿ ದಿನ ಹಾಗೂ ಇತರೆ ನನಗೆ ಸಂಬಂಧಿಸಿದ  ಯಾವ ಮಾಹಿತಿಯನ್ನು ನೀಡಬಾರದು ಎಂದು ಕೋರಿದ್ದಾರೆ. ಅಲ್ಲದೇ ಇದು ತಮ್ಮ ಖಾಸಗಿ ಮಾಹಿತಿ ಹಕ್ಕು ಆಗಿದೆ ಎಂದು ಕೂಡ ಉಲ್ಲೇಖಿಸಿದ್ದಾರೆ.

  ರಾಜಕೀಯ ವಿರೋಧಿಗಳು ಷಡ್ಯಂತ್ರಕ್ಕಾಗಿ  ಮಾಹಿತಿ ಪಡೆದು, ಅದರಿಂದ ಪ್ರಚಾರ ಪಡೆಯು ಸಾಧ್ಯತೆ ಇದೆ ಎಂದು ಕೂಡ ಅವರು ಪತ್ರದಲ್ಲಿ ತಿಳಿಸಿದ್ದಾರೆ.

  ತನ್ನ ಖಾಸಗಿ ಮಾಹಿತಿ ಬಹಿರಂಗ ಮಾಡುವುದರ ಕುರಿತು ಆಕ್ಷೇಪಿಸಿರುವ ಶಶಿಕಲಾ ಪತ್ರದಲ್ಲಿ ವೆದ್​ ಪ್ರಜಾಶ್​ ಅರ್ವ್ಯಾಸ್​ ಪ್ರಕರಣ ಉಲ್ಲೇಖಿಸಿದ್ದಾರೆ. ಈ ಪ್ರಕರಣದಲ್ಲಿ ವ್ಯಕ್ತಿಯ ಗೌಪ್ಯ ಮಾಹಿತಿ ನಿರಾಕರಣೆ ಬಗ್ಗೆ ಸುಪ್ರೀಂ ಕೋರ್ಟ್​ ನ್ಯಾಯಾಲಯ ನೀಡಿದ ಆದೇಶ ಉಲ್ಲೇಖಿಸಿದ್ದಾರೆ.

  ಇದನ್ನು ಓದಿ: ದೆಹಲಿ ಗಲಭೆ ಚಾರ್ಜ್​ ಶೀಟ್​ನಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಸಲ್ಮಾನ್​ ಖುರ್ಷಿದ್​ ಹೆಸರು

  ಮುಂದಿನವರ್ಷ ತಮಿಳುನಾಡು ವಿಧಾನಸಭೆ ನಡೆಯಲಿದ್ದು, ಈಗಾಗಲೇ ಡಿಎಂಕೆ, ಎಐಡಿಎಂಕೆ ಹಣಾಹಣಿಗೆ ಸಿದ್ದವಾಗಿದೆ. ಇದರ ಜೊತೆ ಬಿಜೆಪಿ ಕೂಡ ತಮಿಳುನಾಡಿನಲ್ಲಿ ಪಕ್ಷವನ್ನು ಪ್ರಾಬಲ್ಯಗೊಳಿಸುತ್ತಿದ್ದು, ಚುನಾವಣೆ ಎದುರಿಸಲು ಸಿದ್ದವಾಗಿದೆ.

  ನಾಲ್ಕು ವರ್ಷದ ಸೆರೆ ಶಿಕ್ಷೆಗೆ ಗುರಿಯಾಗಿರುವ ತಮಿಳುನಾಡು ಮುಖ್ಯಮಂತ್ರಿ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾ 2017ರಿಂದ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
  Published by:Seema R
  First published: