UPSC: ಐಎಎಸ್ ಅಧಿಕಾರಿಯೇ ಆಗಬೇಕೆಂದು ಯುಪಿಎಸ್‌ಸಿ ಪರೀಕ್ಷೆ ಪಾಸಾದ್ರೂ ಮತ್ತೆ ಪರೀಕ್ಷೆ ಬರೆದ ದಿವ್ಯಾಂಗ ಯುವಕ..!

Visually Impaired Takes UPSC Exam Again: ಗೋಕುಲ್ ಇನ್‍ಸ್ಟಿಟ್ಯೂಟ್ ಆಫ್ ಇಂಗ್ಲಿಷ್, ಕಾರ್ಯವತ್ತಂನಲ್ಲಿ ಇಂಗ್ಲಿಷ್ ಸಾಹಿತ್ಯ ವಿದ್ವಾಂಸರಾಗಿದ್ದು, 2019ರಲ್ಲಿ ಪ್ರಥಮ ಬಾರಿಗೆ ಯುಪಿಎಸ್‍ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗಿದ್ದರು.

ಗೋಕುಲ್

ಗೋಕುಲ್

  • Share this:

ಹೆಸರು ಗೋಕುಲ್. ವಯಸ್ಸು 23. ತಿರುವನಂತಪುರದ ತಿರುಮಲದವರಾದ ಇವರಿಗೆ ದೃಷ್ಟಿ ದೋಷವಿದೆ. ಆದರೆ ಇದೆಲ್ಲವನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತಿದ್ದಾರೆ. ಅದರಂತೆ ಯುಪಿಎಸ್‍ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಗೋಕುಲ್ ಅಖಿಲ ಭಾರತೀಯ ಶ್ರೇಣಿ (ಎಐಆರ್) 804 ಮತ್ತು ವರ್ಗದಲ್ಲಿ 3ನೇ ರ‍್ಯಾಂಕ್ ಪಡೆದಿದ್ದಾರೆ. ಆದರೂ ಇದರಲ್ಲಿ ತೃಪ್ತಿ ಹೊಂದದ ಗೋಕುಲ್ ಮತ್ತೆ ಐಎಎಸ್ ಪರೀಕ್ಷೆ ಬರೆದಿದ್ದಾರೆ.


ಗೋಕುಲ್ ಇನ್‍ಸ್ಟಿಟ್ಯೂಟ್ ಆಫ್ ಇಂಗ್ಲಿಷ್, ಕಾರ್ಯವತ್ತಂನಲ್ಲಿ ಇಂಗ್ಲಿಷ್ ಸಾಹಿತ್ಯ ವಿದ್ವಾಂಸರಾಗಿದ್ದು, 2019ರಲ್ಲಿ ಪ್ರಥಮ ಬಾರಿಗೆ ಯುಪಿಎಸ್‍ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗಿದ್ದರು. ಈಗ, ಅವರು ಉತ್ತಮ ಅಖಿಲ ಭಾರತ ಶ್ರೇಣಿಯನ್ನು ಗುರಿಯಾಗಿಸಿಕೊಂಡಿದ್ದಾರೆ.


ಗೋಕುಲ್ ಇನ್ನು ಕಚೇರಿಗೆ ಸೇರಬೇಕಿದೆ. ಮತ್ತಷ್ಟು ಉತ್ತಮ ರ‍್ಯಾಂಕ್ ಪಡೆದು ಐಎಎಸ್ ಆಗುವ ಗುರಿ ಹೊಂದಿದ್ದಾರೆ. ಇವರ ಈ ಕನಸು ಚಿಗುರೊಡೆದಿದ್ದು ಕಾಲೇಜಿನಲ್ಲಿ. 2018ರಲ್ಲಿ ಕೇರಳದಲ್ಲಿ ಪ್ರವಾಹ ಎದುರಾದಾಗ ಅಲ್ಲಿನ ಐಎಎಸ್ ಅಧಿಕಾರಿಗಳು ಕ್ಲಿಷ್ಟಕರ ಪರಿಸ್ಥಿತಿ ಹೇಗೆ ನಿಭಾಯಿಸಿದ್ದರು ಎಂಬುದರ ಅರಿವು ನನಗಿದೆ. ಆಗ ನಾನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದೆ. ವಯನಾಡಿನಲ್ಲಿ ಯುವ ಐಎಎಸ್ ಅಧಿಕಾರಿಗಳು ಹೇಗೆ ಮಾನವ ಸಂಪನ್ಮೂಲದ ಕೊರತೆ ಎದುರಿಸಿದರು ಮತ್ತು ಮಹಿಳಾ ಐಎಎಸ್ ಅಧಿಕಾರಿ ಹೇಗೆ 24*7 ಯುವ ಇಂಟರ್ನಿಗಳ ತಂಡದೊಂದಿಗೆ ಮತ್ತು ಪ್ರವಾಹ ಪರಿಹಾರವನ್ನು ನೀಡಲು ಹೇಗೆ ಸ್ವಯಂಸೇವಕರಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ನಾನು ನೋಡಿದ್ದೆ. ಅರ್ಹತೆ, ಅಧಿಕಾರಗಳನ್ನು ಬದಿಗಿಟ್ಟು ದೇಶಕ್ಕೆ ಸೇವೆ ಮಾಡಬೇಕೆಂಬುದು ನನ್ನನ್ನು ಐಎಎಸ್ ಅಧಿಕಾರಿಯಾಗುವ ಕನಸು ಕಾಣುವಂತೆ ಮಾಡಿತು ಎನ್ನುತ್ತಾರೆ ಗೋಕುಲ್.


ನಾನು 2019ರಲ್ಲಿ ಮೊದಲ ಯುಪಿಎಸ್‍ಸಿ ಪರೀಕ್ಷೆ ಬರೆದೆ. ಆಗ ನಾನು ಅಖಿಲ ಭಾರತೀಯ ಶ್ರೇಣಿ 804 ಗಳಿಸಿದೆ. ನಾನು 2020ರಲ್ಲಿ ನನ್ನ ಶ್ರೇಣಿ ಹೆಚ್ಚಿಸಿಕೊಳ್ಳುವ ಸಲುವಾಗಿ ಮತ್ತು ಉತ್ತಮ ಸ್ಥಾನ ಪಡೆಯಲು ಪುನಃ ಪರೀಕ್ಷೆ ಎದುರಿಸಿದ್ದೇನೆ. ಎರಡನೇ ಪ್ರಯತ್ನದಲ್ಲಿ ಉತ್ತಮವಾಗಿಯೇ ಪ್ರಯತ್ನಿಸಿದ್ದೇನೆ. ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದೇನೆ ಎಂದು ಗೋಕುಲ್ ಹೇಳಿದರು.


ತನ್ನ ಎರಡನೇ ಪ್ರಯತ್ನದಲ್ಲಿ, ಅಧ್ಯಯನಕ್ಕೆ ಸೂಕ್ತವಾದ ವಿಷಯ ಆಯ್ಕೆ ಮಾಡುವ ಬಗ್ಗೆ ಅರಿತುಕೊಂಡಿದ್ದೇನೆ. ನಾನು ಪುಸ್ತಕಗಳು, ಪತ್ರಿಕೆಗಳು ಮತ್ತು ಆನ್‍ಲೈನ್ ಕಲಿಕೆಯತ್ತ ಹೆಚ್ಚು ಗಮನಹರಿಸಿದೆ. ನನ್ನ ಸಿದ್ಧತೆಗಾಗಿ ನಾನು ಬೈಜೂಸ್ ಐಎಎಸ್ ಆ್ಯಪ್‌ ಅನ್ನು ವ್ಯಾಪಕವಾಗಿ ಬಳಸಿದ್ದೇನೆ ಎಂದು ಗೋಕುಲ್ ನ್ಯೂಸ್ 18ಗೆ ತಿಳಿಸಿದರು.


ಗೋಕುಲ್ ಇನ್ನೂ ಯಾವುದೇ ಹುದ್ದೆಗೆ ಸೇರಿಕೊಂಡಿಲ್ಲ" 2019ರಲ್ಲಿ ನಾನು ಕಂಡುಕೊಂಡಿದ್ದ ಓದಿನ ಮಾರ್ಗಗಳು 2020ರಲ್ಲಿ ಎಲ್ಲವೂ ದುಪ್ಪಾಟಾದವು ಹಾಗೂ ಹೇಗೆ ಯಾವ ವಿಷಯಗಳನ್ನು ಓದುವುದು ಎಂಬುದನ್ನು ಗ್ರಹಿಸಿಕೊಂಡೆ ಎಂದು ಹೇಳಿದರು.


ಇದನ್ನೂ ಓದಿ: ಸರ್ಕಾರಿ ನೇಮಕಾತಿಗಳಲ್ಲಿ OBCಗಳಿಗೆ ಶೇ 27 ಮೀಸಲಾತಿ ಘೋಷಿಸಿದ ಮಧ್ಯಪ್ರದೇಶ ಸರ್ಕಾರ

ಸಮರ್ಪಕವಾದ ವೇಳಾಪಟ್ಟಿ ಅನುಸರಿಸುವುದು, ಕಲಿಕೆಯ ಗುರಿಗಳನ್ನು ಹೊಂದುವುದು, ಸರಿಯಾದ ಅಧ್ಯಯನ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಅಭ್ಯಸಿಸುವುದು ಈ ಮೂರು ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನಹರಿಸಬೇಕು. ಯುಪಿಎಸ್‍ಸಿಗೆ ಪ್ರಮುಖವಾಗಿ ಬೇಕಾಗಿರುವುದು ಸಮಯ ಪಾಲನೆ ಅಂದರೆ ವೇಳಾಪಟ್ಟಿಯನ್ನು ಕೊಂಚ ಸಮಯವೂ ವ್ಯರ್ಥ ಮಾಡದೆ ಅನುಸರಿಸುವುದು ಎಂಬುದಾಗಿ ವೇಳಾಪಟ್ಟಿ ಮತ್ತು ಸಮಯ ಎಷ್ಟು ಮುಖ್ಯ ಎಂಬುದನ್ನು ಹೇಳುತ್ತಾರೆ.


ಸಂಪೂರ್ಣ ಪಠ್ಯಕ್ರಮವನ್ನು ಮಾಡ್ಯೂಲ್‍ಗಳಾಗಿ ವಿಂಗಡಿಸುವುದರಿಂದ, ಆಕಾಂಕ್ಷಿಗಳು ದಿನದ ಅಧ್ಯಯನ ಗುರಿ ಸಾಧಿಸಬಹುದು ಮತ್ತು ಅವರು ಅದನ್ನು ಪೂರ್ಣಗೊಳಿಸುವುದಕ್ಕೂ ಸುಲಭವಾಗುತ್ತದೆ ಎಂದು ಗೋಕುಲ್ ಹೇಳುತ್ತಾರೆ.


ಪರಿಕಲ್ಪನೆಗಳ ಮೇಲೆ ಬಲವಾದ ತಿಳುವಳಿಕೆ ಹೊಂದಿರುವುದು ಸಹ ಮುಖ್ಯ. ಒಮ್ಮೆ ನಾವು ಪ್ರಿಲಿಮ್ಸ್‌ಗಿಂತ ಮೊದಲು ಪರಿಕಲ್ಪನೆಗಳನ್ನು ಭೇದಿಸಿದರೆ, ಉಳಿದ ತಯಾರಿ ಪ್ರಕ್ರಿಯೆ ಸುಲಭವಾಗುತ್ತದೆ. ಆಕಾಂಕ್ಷಿಗಳಿಗೆ ಕೆಲವೊಮ್ಮೆ ಪ್ರಚಲಿತ ವಿದ್ಯಮಾನಗಳು ಕಠಿಣವಾಗಬಹುದು, ಏಕೆಂದರೆ ಪರಿಕಲ್ಪನೆಗಳನ್ನು ಕರಗತ ಮಾಡಿಕೊಂಡಿಲ್ಲದಿರುವ ಕಾರಣ ಈ ತೊಂದರೆ ಉದ್ಭವಿಸುತ್ತವೆ ಎಂದು ಗೋಕುಲ್ ಹೇಳುತ್ತಾರೆ.


ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆ
ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಗಳು ತೀವ್ರವಾಗಿ ಭಿನ್ನವಾಗಿವೆ. ಅದಕ್ಕೆ ಸೂಕ್ತ ತಯಾರಿ ವಿಧಾನಗಳು ಬೇಕಾಗುತ್ತವೆ. ಪ್ರಿಲಿಮ್ಸ್‌ಗೆ ಸಂಬಂಧಿಸಿದಂತೆ, ಮಾದರಿ ಪ್ರಶ್ನೆಗಳನ್ನು ಪರಿಹರಿಸುವುದು ಮುಖ್ಯವಾಗಿದೆ. ನಾವು ಅನೇಕ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು ಮತ್ತು ತಯಾರಿಕೆಯ ಭಾಗವಾಗಿ ಹಲವಾರು ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು ಎಂದು ಗೋಕುಲ್ ವಿವರಿಸುತ್ತಾರೆ.


ಮುಖ್ಯ ಪರೀಕ್ಷೆಗಳಿಗೆ ತಯಾರಿ ಮಾಡುವುದು ಕಠಿಣವಾದರೂ, ನಾವು ವಿಸ್ತಾರವಾದ ಬರವಣಿಗೆಯ ಮೇಲೆ ಹೆಚ್ಚು ಗಮನ ಹರಿಸಬೇಕಾಗಿದೆ. ಅಣಕು ಪರೀಕ್ಷೆಗಳು ಬಹಳ ಮುಖ್ಯ. ಮುಖ್ಯವಾಗಿ 30 ಸೆಕೆಂಡುಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳಬೇಡಿ ಮತ್ತು ನಂತರ ಬರೆಯಲು ಪ್ರಾರಂಭಿಸಿ ಎಂದು ಹೇಳುತ್ತಾರೆ.


ನಾವು ಮುಂದುವರೆದಂತೆ ನಮ್ಮ ಆಲೋಚನೆಗಳನ್ನು ರೂಪಿಸಿಕೊಳ್ಳಬೇಕು. ಈ ಮಟ್ಟದ ಪ್ರಾವೀಣ್ಯತೆ ಸಾಧಿಸಲು, ನಾವು ಮೊದಲಿನಿಂದಲೂ ಪ್ರಬಂಧಗಳನ್ನು ಬರೆಯುವುದನ್ನು ಅಭ್ಯಾಸ ಮಾಡಬೇಕಾಗಿದೆ. ಐಚ್ಛಿಕ ಪತ್ರಿಕೆಗಳ ಮೇಲೆ ಕೇಂದ್ರೀಕರಿಸುವುದು ಇನ್ನೊಂದು ಪ್ರಮುಖ ಅವಶ್ಯಕತೆಯಾಗಿದೆ. ನಮ್ಮ ಐಚ್ಛಿಕ ಪತ್ರಿಕೆಗಳಲ್ಲಿ ಉತ್ತಮ ಪ್ರದರ್ಶನವು ನಮ್ಮ ಒಟ್ಟಾರೆ ಅಂಕಗಳನ್ನು ಹೆಚ್ಚಿಸುತ್ತದೆ" ಎಂದೂ ಹೇಳಿದರು.


ಇದನ್ನೂ ಓದಿ: ತಾಲಿಬಾನ್ ಸಹಸಂಸ್ಥಾಪಕ ಮುಲ್ಲಾ ಬರದಾರ್​ ನೇತೃತ್ವದಲ್ಲಿ ಅಫ್ಘಾನ್ ಹೊಸ ಸರ್ಕಾರ ರಚನೆ

ಸಂದರ್ಶನ
ಶಿಕ್ಷಣತಜ್ಞರು ಅವರ ಆಸಕ್ತಿಯ ಕ್ಷೇತ್ರಗಳು ಮತ್ತು ಕೆಲವು ಪ್ರಾಯೋಗಿಕ ಅಂಶಗಳನ್ನು ಒಳಗೊಂಡಿರುವ ಪ್ರಶ್ನೆಗಳನ್ನು ಕೇಳುತ್ತಾರೆ. ನಾನು ವಿತ್ತೀಯ ನೀತಿ ಸಮಿತಿಯಲ್ಲಿದ್ದೇನೆ ಮತ್ತು ರೆಪೋ ದರ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಬಗ್ಗೆ ನನ್ನ ದೃಷ್ಟಿಕೋನದಲ್ಲಿ ನಾನು ದೀರ್ಘವಾಗಿ ಮಾತನಾಡಬೇಕಿತ್ತು. ನನ್ನ ಕೆಲವು ಪ್ರಶ್ನೆಗಳು ಇಂಗ್ಲಿಷ್ ಸಾಹಿತ್ಯದಿಂದ ಹಾಗೂ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪ್ರಶ್ನೆಗಳು ಎದುರಾದವು ಎಂದು ಹೇಳುತ್ತಾರೆ.


ಫಲಿತಾಂಶ ಘೋಷಣೆಯಾದ ಬಳಿಕ, ಜನರು ನನ್ನನ್ನು ನೋಡಲು ಪ್ರಾರಂಭಿಸಿದರು ಮತ್ತು ಹಲವಾರು ಆಕಾಂಕ್ಷಿಗಳು ತಮ್ಮ ಅನುಮಾನಗಳನ್ನು ಪರಿಹರಿಸಲು ನನಗೆ ಕರೆ ಮಾಡಿದರು, ಇದು ಸಂತೋಷದಾಯಕ ಅನುಭವವಾಗಿದೆ ಎಂದರು.


Published by:Sandhya M
First published: