Viral News: PhD ಮಾಡುತ್ತಿದ್ದ ವಿದ್ಯಾರ್ಥಿನಿಯ ಲ್ಯಾಪ್ ಟಾಪ್ ಕದ್ದ ದುರುಳರು, ಆಕೆಯ ಭವಿಷ್ಯಕ್ಕೇ ತಣ್ಣೀರು!

Viral News: ಆಕೆಯ ಸ್ನೇಹಿತರು ಮತ್ತು ಸಯೂಜ್ಯ ಆ ದಿನ ಬೀಚ್‌ನಲ್ಲಿ ಸಮಯ ಕಳೆಯುತ್ತಿದ್ದಾಗ ತಮ್ಮ ಕಾರಿನಿಂದ ಲ್ಯಾಪ್‌ಟಾಪ್ ಅನ್ನು ಯಾರೋ ಕದ್ದಿರಬಹುದು ಎಂದು ಹೇಳುತ್ತಿದ್ದಾರೆ.

ಲ್ಯಾಪ್​ಟಾಪ್​ ಕಳೆದುಕೊಂಡ ಯುವತಿ

ಲ್ಯಾಪ್​ಟಾಪ್​ ಕಳೆದುಕೊಂಡ ಯುವತಿ

  • Share this:

ಕೆಲವರು ತಮ್ಮ ಜೀವನದಲ್ಲಿ ತುಂಬಾ ಕಷ್ಟ(Problems)ಗಳನ್ನು ಎದುರಿಸುತ್ತಾ ತಮ್ಮ ಓದನ್ನು ಮುಂದುವರೆಸಿಕೊಂಡು ಹೋಗುತ್ತಿರುತ್ತಾರೆ. ಅವರ ಇಡೀ ಬದುಕೇ ಅವರ ಓದಿನ ಮೇಲೆ ಅವಲಂಬಿತವಾಗಿರುತ್ತದೆ ಎಂದರೆ ತಪ್ಪಾಗುವುದಿಲ್ಲ.ಅದರಲ್ಲೂ ವಿಕಲಚೇತನ(Disabled)ರಿಗೆ ತಮ್ಮ ಬದುಕು ತುಂಬಾನೇ ಕಷ್ಟಕರವಾಗಿರುತ್ತದೆ. ಅಂತಹ ಕಷ್ಟದಲ್ಲಿಯೂ ತಮ್ಮ ಓದನ್ನು ಮುಂದುವರೆಸಿಕೊಂಡು ಹೋಗುತ್ತಿರುತ್ತಾರೆ. ಇಲ್ಲೊಂದು ಘಟನೆ ನಡೆದಿದ್ದು, ಅದನ್ನು ಕೇಳಿದರೆ ನೀವು ‘ಅಯ್ಯೋ ಪಾಪ ಹೀಗಾಗಬಾರದಿತ್ತು’ ಎಂದು ಹೇಳುವುದಂತೂ ಖಂಡಿತ. ಕೇರಳ(Kerala)ದ ಕ್ಯಾಲಿಕಟ್(Calicut) ವಿಶ್ವವಿದ್ಯಾಲಯದ ಪಿಎಚ್‌ಡಿ(PhD) ಎರಡನೇ ವರ್ಷದಲ್ಲಿ ಓದುತ್ತಿದ್ದ 25 ವರ್ಷದ ದೃಷ್ಟಿ ವಿಕಲಚೇತನ(Visual Impairment) ಸಯೂಜ್ಯ ಸಿ. ಎಸ್.(Sayoojya CS_ ನವೆಂಬರ್ ಮೊದಲ ವಾರದಲ್ಲಿ ತನ್ನ ಸ್ನೇಹಿತರೊಂದಿಗೆ ಕೋಯಿಕ್ಕೋಡ್ ಸಮುದ್ರ ತೀರಕ್ಕೆ ಹೋದಾಗ ಅವರ ಲ್ಯಾಪ್‌ಟಾಪ್(Laptop) ಅನ್ನು ಯಾರೋ ಕಳುವು ಮಾಡಿಕೊಂಡು ಹೋಗಿದ್ದಾರೆ.


ಲ್ಯಾಪ್​ಟಾಪ್​ ಕಳೆದುಕೊಂಡು ಕಣ್ಣೀರು!


ಆಕೆಯ ಸ್ನೇಹಿತರು ಮತ್ತು ಸಯೂಜ್ಯ ಆ ದಿನ ಬೀಚ್‌ನಲ್ಲಿ ಸಮಯ ಕಳೆಯುತ್ತಿದ್ದಾಗ ತಮ್ಮ ಕಾರಿನಿಂದ ಲ್ಯಾಪ್‌ಟಾಪ್ ಅನ್ನು ಯಾರೋ ಕದ್ದಿರಬಹುದು ಎಂದು ಹೇಳುತ್ತಿದ್ದಾರೆ. "ನನ್ನ ಲ್ಯಾಪ್‌ಟಾಪ್ ಅನ್ನು ಮರಳಿ ಪಡೆಯದಿದ್ದರೆ ನಾನು ದೊಡ್ಡ ತೊಂದರೆಗೆ ಸಿಲುಕುತ್ತೇನೆ. ಕಳೆದ ವರ್ಷ ಸಂಗ್ರಹಿಸಿದ ಸಂಶೋಧನಾ ದತ್ತಾಂಶದ ಹೊರತಾಗಿ, ಇದು ನನ್ನ ಕಾಲೇಜು ದಿನಗಳಿಂದ ಸಂಗ್ರಹಿಸಿದ ಪಿಡಿಎಫ್ ಮತ್ತು ಸ್ಕ್ಯಾನ್ ಮಾಡಿದ ಸ್ವರೂಪದಲ್ಲಿ ಪುಸ್ತಕಗಳನ್ನು ಸಹ ಒಳಗೊಂಡಿದೆ. ಇದು ನನಗೆ ಕೇವಲ ಲ್ಯಾಪ್‌ಟಾಪ್ ಅಲ್ಲ. ನನ್ನ ಭವಿಷ್ಯವು ಇದರ ಮೇಲೆ ಅವಲಂಬಿತವಾಗಿದೆ. ನನ್ನ ಎಲ್ಲಾ ಸಂಶೋಧನಾ ದತ್ತಾಂಶಗಳನ್ನು ಇದರಲ್ಲಿ ಸಂಗ್ರಹಿಸಿ ಇಡಲಾಗಿತ್ತು" ಎಂದು ಹೇಳಿದ್ದಾರೆ.


ಲ್ಯಾಪ್​ಟಾಪ್​ ಹುಡುಕಲು ಅಭಿಯಾನ!

“ಮುಂದಿನ ವಾರ, ನಾನು ನನ್ನ ಸಂಶೋಧನಾ ವಿಷಯವನ್ನು ಪ್ರಸ್ತುತ ಪಡಿಸಬೇಕು. ನನ್ನ ಲ್ಯಾಪ್‌ಟಾಪ್ ಸಹಾಯವಿಲ್ಲದೆ ನಾನು ಅದನ್ನು ಹೇಗೆ ಮಾಡುತ್ತೇನೆ ಎಂದು ನನಗೆ ತಿಳಿಯುತ್ತಿಲ್ಲ. ನನ್ನ ಲ್ಯಾಪ್‌ಟಾಪ್ ಇಲ್ಲದೆ ನನ್ನ ಸಂಶೋಧನೆ ಮುಂದುವರಿಸಲು ನನಗೆ ಸಾಧ್ಯವಾಗುವುದಿಲ್ಲ" ಎಂದು ಅವರು ಹೇಳುತ್ತಾರೆ.ಸಯೂಜ್ಯ ಪರಿಸ್ಥಿತಿಯನ್ನು ನೋಡಿ, ಅವರ ಶಿಕ್ಷಕರು ಮತ್ತು ಆಲ್ ಕೇರಳ ರಿಸರ್ಚ್ ಸ್ಕಾಲರ್ಸ್ ಅಸೋಸಿಯೇಷನ್ ಕಳುವಾದಂತಹ ಲ್ಯಾಪ್‌ಟಾಪ್ ಹುಡುಕಲು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ.

ಇದನ್ನು ಓದಿ:  Homework ಮಾಡಿಲ್ಲ ಅಂತ ಮಗನನ್ನು ತಲೆಕೆಳಗಾಗಿ ನೇತು ಹಾಕಿದ ಪಾಪಿ ತಂದೆ!

ಇವರು ಶುರು ಮಾಡಿದಂತಹ ಅಭಿಯಾನದ ಮೂಲಕ, ಪ್ರಸ್ತುತ ಲ್ಯಾಪ್‌ಟಾಪ್ ಕಳುವು ಮಾಡಿಕೊಂಡು ಹೋಗಿರುವ ವ್ಯಕ್ತಿಗೆ ಆಕೆಗೆ ಅದನ್ನು ಹಿಂದಿರುಗಿಸುವಂತೆ ವಿನಂತಿಸಿದ್ದಾರೆ. "ಯಾರಾದರೂ ಈ ಲ್ಯಾಪ್‌ಟಾಪ್ ಅನ್ನು ಈಗಾಗಲೇ ಕಳುವು ಮಾಡಿದ ವ್ಯಕ್ತಿಯಿಂದ ಪಡೆದಿದ್ದರೆ, ಹೊಸ ಲ್ಯಾಪ್‌ಟಾಪ್ ಖರೀದಿಸಲು ನಿಮಗೆ ಹಣ ನೀಡುತ್ತೇವೆ. ಸಂಗ್ರಹಿಸಲಾದ ಸಂಶೋಧನಾ ದತ್ತಾಂಶವು ಹೆಚ್ಚು ಮೌಲ್ಯಯುತವಾಗಿದೆ" ಎಂದು ಅಸೋಸಿಯೇಷನ್‌ನ ಜಂಟಿ ಸಂಯೋಜಕ ಲಿಜಿನ್ ರಾಜನ್ ಹೇಳಿದ್ದಾರೆ.


ಕೋಯಿಕ್ಕೋಡ್​ ಟೌನ್​ ಠಾಣೆಯಲ್ಲಿ ದೂರು


ಸಯೂಜ್ಯಾ ತನ್ನ ಲ್ಯಾಪ್‌ಟಾಪ್ ಕಳೆದುಕೊಂಡ ನಂತರ ಕೋಯಿಕ್ಕೋಡ್‌ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮ ಅಭಿಯಾನ ಪ್ರಾರಂಭಿಸುವವರೆಗೂ ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಿದರು."ನಾನು ಪ್ರತಿ ಎರಡು ದಿನಗಳಿಗೊಮ್ಮೆ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸುತ್ತೇನೆ. ಕಳುವಾದ ಮೊಬೈಲ್ ಫೋನ್‌ಗಳಂತೆ ಲ್ಯಾಪ್‌ಟಾಪ್ ಹುಡುಕುವುದು ಸುಲಭವಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ನನ್ನ ದೂರನ್ನು ಆಧರಿಸಿ ಗಂಭೀರ ತನಿಖೆ ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.


ಇದನ್ನು ಓದಿ : ಸರ್ಕಾರವೇ ಇನ್ಮೇಲೆ ಸಿನಿಮಾ ಟಿಕೆಟ್ ಮಾರಾಟ ಮಾಡುತ್ತಂತೆ, ದಿನಕ್ಕೆ ನಾಲ್ಕು ಶೋ ಮಾತ್ರ

ಅಭಿಯಾನ ಪ್ರಾರಂಭಿಸಿದ ನಂತರ, ಅನೇಕ ಜನರು ಸಯೂಜ್ಯಾರನ್ನು ಸಂಪರ್ಕಿಸಿ ಹೊಸ ಲ್ಯಾಪ್‌ಟಾಪ್ ಗಳನ್ನು ನೀಡಲು ಮುಂದಾದರು. ಆದರೆ ಆಕೆ ಬಯಸುವುದು ಕಳುವಾದ ಲ್ಯಾಪ್‌ಟಾಪ್‌ನಲ್ಲಿರುವ ಸಂಶೋಧನಾ ದತ್ತಾಂಶ ಎಂದು ಸಯೂಜ್ಯಾಗೆ ಗೊತ್ತು.


Published by:Vasudeva M
First published: