Vismaya case: ಗಂಡನ ಕಿರುಕುಳ ತಾಳಲಾರದೆ ಸತ್ತವಳಿಂದ ಬಂತು ಫ್ರೆಂಡ್ ರಿಕ್ವೆಸ್ಟ್! ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂಬಂಧಿಕರು

Vismaya Death case: ಕೇರಳದ ಯುವ ವೈದ್ಯೆ ವಿಸ್ಮಯ ನಾಯರ್​ ಸಾವಿನ ಪ್ರಕರಣದ ಬಗ್ಗೆ ಕೇಳಿರಬಹುದು. ಈಕೆಯ ಆತ್ಮಹತ್ಯೆ ಪ್ರಕರಣ ಇಡೀ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಬಾಳಿ ಬದುಕ ಬೇಕಾಗಿದ್ದ ಇವಳು ಆತ್ಮಹತ್ಯೆ ಮೂಲಕ ಸಾವನ್ನಪ್ಪಿದ್ದಳು.

ವಿಸ್ಮಯ ನಾಯರ್

ವಿಸ್ಮಯ ನಾಯರ್

 • Share this:
  ಸತ್ತವರು ಬದುಕಿ ಬಂದಿರುವ ಪ್ರಮೇಯವೇ ಇಲ್ಲ. ಆದರೆ ಪವಾಡ (Miracle) ಸದೃಶಯವಾಗಿ ಬದುಕಿ ಬಂದಿರುವವರ ಕಥೆ (Story) ಇದೆ. ಆದರೆ ಇಲ್ಲೊಬ್ಬಳು ಹೆಣ್ಣು ಮಗಳು (Girl) ಸಾವನ್ನಪ್ಪಿ ವರ್ಷಗಳು ಉರುಳಿದೆ. ಹಾಗಂತ ಆಕೆ ಬದುಕಿ ಬಂದಿಲ್ಲ. ಆದರೆ ಸಂಬಂಧಿಕರಿಗೆ ಆಕೆಯ ಹೆಸರಿನಲ್ಲಿ ಫೇಸ್​ಬುಕ್ (Facebook)​ ರಿಕ್ವೆಸ್ಟ್ (Request)​ ಬಂದಿದ್ದು, ಇದರಿಂದ ಅವರು ಗಾಬರಿಗೊಂಡಿದ್ದಾರೆ. ನೇರವಾಗಿ ಆಕೆಯ ಸಂಬಂಧಿಕರು ಪೊಲೀಸ್​ ಠಾಣೆಗೆ (Police Station) ತೆರಳಿ ದೂರು ನೀಡಿದ್ದಾರೆ.

  ಕೇರಳದ ಯುವ ವೈದ್ಯೆ ವಿಸ್ಮಯ ನಾಯರ್​ ಸಾವಿನ ಪ್ರಕರಣದ ಬಗ್ಗೆ ಕೇಳಿರಬಹುದು. ಈಕೆಯ ಆತ್ಮಹತ್ಯೆ ಪ್ರಕರಣ ಇಡೀ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಬಾಳಿ ಬದುಕ ಬೇಕಾಗಿದ್ದ ಇವಳು ಆತ್ಮಹತ್ಯೆ ಮೂಲಕ ಸಾವನ್ನಪ್ಪಿದ್ದಳು. ಈ ಪ್ರಕರಣದಲ್ಲಿ ಆಕೆಯ ಪತಿ ಕಿರಣ್​​ ಕೈವಾಡವಿತ್ತು. ಇದೇ ವಿಚಾರವಾಗಿ ಆತನ ಬಂಧನವಾಗಿ ಜಾಮೀನಿನ ಮೇಲೆ ಕಿರಣ್​​ ಹೊರಗಡೆ ಇದ್ದಾನೆ. ಆದರೀಗ ಅಚ್ಚರಿ ಏನೆಂದರೆ ಆತ್ಮಹತ್ಯೆ ಮಾಡಿಕೊಂಡ ವಿಸ್ಮಯ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆಗಳು ತೆರೆಯಲಾಗಿದ್ದು, ರಿಕ್ಷೆಸ್ಟ್​​ಗಳು ಬರಲಾರಂಭಿಸಿವೆ. ವಿಸ್ಮಯ ಸಂಬಂಧಿಸಕರಿಗೆ ವಿಸ್ಮಯ ನಕಲಿ ಖಾತೆಯಿಂದ ರಿಕ್ಷೆಸ್ಟ್​ ಬಂದಿದೆ. ಇದರಿಂದ ಬೇಸರಗೊಂಡ ಅವರು ಪೊಲೀಸ್​​ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

  ಫೇಸ್​ಬುಕ್​ನಲ್ಲಿ ವಿಸ್ಮಯ ವಿಜಿತ್​ ಹೆಸರಿನಲ್ಲಿ ಖಾತೆಯನ್ನು ತೆರೆಯಲಾಗಿದ್ದು, ಸುಮಾರು 800 ಮಂದಿ ಸ್ನೇಹಿತರನ್ನು ಈ ಖಾತೆ ಹೊಂದಿದೆ. ಅಂದಹಾಗೆಯೇ ಪ್ರೊಫೈಲ್​ನಲ್ಲಿ ವಿಸ್ಮಯ ಅವರ ಫೋಟೋ ಹಾಕಲಾಗಿದೆ. ಇನ್ನು ವಿಜಿತ್​ ಅವರು ವಿಸ್ಮಯ ಅವರ ಸಹೋದರನಾಗಿದ್ದು, ಅವರು ಈ ಖಾತೆಯ ಫ್ರೆಂಡ್​​ ಲೀಸ್ಟ್​ನಲ್ಲಿ ಇಲ್ಲ. ಅನೇಕ ಜನರಿಗೆ ಈ ನಕಲಿ ಖಾತೆಯಿಂದ ಫ್ರೆಂಡ್​ ರಿಕ್ವೆಸ್ಟ್​​ ಹೋಗಿದ್ದು, ಸಂಬಂಧಿಕರಿಗೂ ತಲುಪಿದೆ. ಇದನ್ನು ಕಂಡು ಅಚ್ಚರಿಗೊಂಡ ಅವರು ಪೊಲೀಸ್​ ಠಾಣೆಯತ್ತ ಮುಖ ಮಾಡಿದ್ದಾರೆ.

  ಇದನ್ನೂ ಓದಿ: ಪ್ರವಾಹ ಪೀಡಿತ ಪ್ರದೇಶಕ್ಕೆ ಬಂದು ವ್ಯಕ್ತಿಯ ಬೆನ್ನೇರಿ ಕುಳಿತ BJP ಶಾಸಕ! ವಿಡಿಯೋ ವೈರಲ್

  ಪೊಲೀಸರು ಈ ಘಟನೆಯ ಮೇಲೆ ಗಂಭೀರವಾದ ತನಿಖೆ ಪ್ರಾರಂಭಿಸಿದ್ದಾರೆ. ಈ ಮೊದಲು ವಿಸ್ಮಯ ತಂದೆ ನಿರ್ವಹಿಸಿದ ಇನ್​ಸ್ಟಾಗ್ರಾಂ ಖಾತೆಯ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿದೆ. ಇದೇ ಆಧಾರದಲ್ಲಿ ಸಂಬಂಧಿಕರು ದೂರು ನೀಡಿದ್ದಾರೆ. ನಕಲಿ ಖಾತೆಯ ಯಾರು ತೆರೆದಿರುವುದು ಎಂಬದನ್ನು ಪತ್ತೆ ಹಚ್ಚಿ ಬೆಳಕಿಗೆ ತರುವಂತೆ ಪಟ್ಟು ಸಂಬಂಧಿಕರು ಹಿಡಿದಿದ್ದಾರೆ.

  ವಿಸ್ಮಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲಂನ1ನೇ ಹೆಚ್ಚುವರಿ ಸೆಷನ್ಸ್​ ನ್ಯಾಯಾಲದಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಇದೇ ತಿಂಗಳು 23 ರಂದು ತೀರ್ಪು ಹೊರಬೀಳಲಿದೆ.

  ಕೇರಳನ್ನು ಬೆಚ್ಚಿ ಬೀಳಿಸಿದ ಪ್ರಕರಣವಿದು!

  ವಿಸ್ಮಯ ಯುವ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಆಕೆಯನ್ನು ಕಿರಣ್​ ಕುಮಾರ್​ಗೆ ವಿವಾಹ ಮಾಡಿ ಕೊಟ್ಟಿದ್ದರು. ಆದರೆ ಆತನ ಹಣದ ಆಸೆಗಾಗಿ ಆಕೆಯನ್ನು ಪೀಡಿಸುತ್ತಿದ್ದನು. ಇದರಿಂದ ನೊಂದ ವಿಸ್ಮಯ ಸಾವಿನ ಹಾದಿ ಹಿಡಿದಳು. ಅತ್ಮಹತ್ಯೆ ಮಾಡಿಕೊಂಡ ವಿಸ್ಮಯ ಗಂಡನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಳು.

  ಇದನ್ನೂ ಓದಿ:  Partition: ವಿಭಜನೆ ಸಂದರ್ಭ ಬೇರಾಗಿದ್ದ ಕುಟುಂಬ, 75 ವರ್ಷದ ನಂತರ ಒಂದಾದ್ರು ಭಾರತದ ಅಣ್ಣ-ಪಾಕ್ ತಂಗಿ

  ಕಿರಣ್​ ವೃತ್ತಿಯಲ್ಲಿ ಕೇರಳದ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ. ಒಳ್ಳೆಯ ಉದ್ಯೋಗದ ಜೊತೆಗೆ ಸರಿಯಾದ ಸಂಬಳವನ್ನು ಆತ ಪಡೆಯುತ್ತಿದ್ದನು. ಆದರೆ ಹಣದ ಮೇಲಿನ ಅತಿಯಾದ ಆಸೆಯಿಂದ ವೈದ್ಯೆ ವಿಸ್ಮಯನನ್ನು ಪೀಡಿಸುತ್ತಿದ್ದನು. ಕೊನೆಗೆ ಆಕೆ ಇದನ್ನೆಲ್ಲಾ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಳು. ಅತಿಯಾದ ಆಸೆಯಿಂದ ಕಿರನ್​ ತನ್ನ ಕೆಲಸವನ್ನು ಕಳೆದುಕೊಂಡಿದ್ದಲ್ಲದೆ, ಬಂಧನಕ್ಕೆ ಒಳಗಾದನು.

  2020ರಲ್ಲಿ ವಿವಾಹವಾಗಿದ್ದರು

  ವಿಸ್ಮಯ ಮತ್ತು ಕಿರಣ್​ 2020ರಲ್ಲಿ ಮೇ ತಿಂಗಳಿನಲ್ಲಿ ವಿವಾಹವಾದರು. ಇಬ್ಬರೂ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು. ಗಂಡ- ಹೆಂಡತಿ ಇಬ್ಬರೂ ಕೂಡ ಕೆಲ ಮಾಡಿಕೊಂಡಿ ಜೀವನ ನಡೆಸುತ್ತಿದ್ದರು. ಆದರೆ ಗಂಡ ಕಿರಣ್​ಗೆ ವಿಪರೀತ ಹಣದಾಸೆ. ಇದೇ ವಿಚಾರವಾಗಿ ವಿಸ್ಮಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆಕೆಯ ಮೃತಹೇಹ 2021 ಜೂನ್​ 21ರ ಸೋಮವಾರ ಬೆಳಗ್ಗೆ ಗಂಡನ ಮನೆಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿತ್ತು. ಆಕೆಯ ದೇಹದ ಮೇಲೆ ಗಾಯದ ಗುರುತುಗಳಿತ್ತು. ಆಕೆಯ ಸಾವಿಗೆ ಕಿರಣ್​ ಕಾರಣ ಎಂಬುದು ಬಹುತೇಕ ಖಚಿತವಾಗಿತ್ತು.
  Published by:Harshith AS
  First published: