ನವದೆಹಲಿ: ಮುಂಬರುವ ದಿನಗಳಲ್ಲಿ ವಿಶಾಖಪಟ್ಟಣ (Visakhapatnam) ಆಂಧ್ರಪ್ರದೇಶದ (Andhra Pradesh) ರಾಜಧಾನಿ (Capital) ಯಾಗಲಿದೆ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ( Jagan Mohan Reddy) ಮಂಗಳವಾರ ತಿಳಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟ (Global Investors Conference) ಸಭೆಯಲ್ಲಿ ಮಾತನಾಡಿದ ಜಗನ್ ಮೋಹನ್ ರೆಡ್ಡಿ ನಮ್ಮ ರಾಜಧಾನಿಯಾಗಲಿರುವ ವಿಶಾಖಪಟ್ಟಣಕ್ಕೆ ನಿಮ್ಮನ್ನು ಆಹ್ವಾನಿಸಲು ನಾನು ಇಲ್ಲಿಗೆ ಬಂದಿರುವೆ. ನಾನು ಕೂಡ ಮುಂದಿನ ಕೆಲವು ತಿಂಗಳಲ್ಲಿ ವಿಶಾಖಪಟ್ಟಣಕ್ಕೆ ಶಿಫ್ಟ್ ಆಗಲಿದ್ದೇನೆ ಎಂದು ಆಂಧ್ರ ಸಿಎಂ ಹೇಳಿದ್ದಾರೆ.
" ನಾವು ಜಾಗತಿಕ ಶೃಂಗಸಭೆಯನ್ನು ಆಯೋಜಿಸುತ್ತಿದ್ದೇವೆ. ಮಾರ್ಚ್ 3-4 ರಂದು ವಿಶಾಖಪಟ್ಟಣದಲ್ಲಿ ಹೂಡಿಕೆದಾರರ ಶೃಂಗಸಭೆ ನಡೆಯಲಿದ್ದು, ನಾನು ಈ ಅವಕಾಶವನ್ನು ಬಳಸಿಕೊಳ್ಳಲು ನಿಮ್ಮೆಲ್ಲರನ್ನು ಶೃಂಗಸಭೆಗೆ ವೈಯಕ್ತಿಕವಾಗಿ ಆಹ್ವಾನಿಸಲು ಬಯಸಿದ್ದೇನೆ. ಈ ಸಂದರ್ಭದಲ್ಲಿ ನೀವು ಬರುವುದಲ್ಗದೆ, ವಿದೇಶದಲ್ಲಿರುವ ನಿಮ್ಮ ಸಹೋದ್ಯೋಗಿಗಳಿಗೆ ಒಳ್ಳೆಯ ಹಾಗೂ ಬಲವಾದ ಮಾತುಗಳನ್ನು ಹೇಳಬೇಕು ಎಂದು ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟದ ಸಭೆಯಲ್ಲಿಆಂಧ್ರ ಮುಖ್ಯಮಂತ್ರಿ ಹೇಳಿದ್ದಾರೆ.
ಇದನ್ನೂ ಓದಿ: Nitish Kumar: ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ಸಾಯುವುದೇ ಮೇಲು: ಬಿಹಾರ ಸಿಎಂ
ಎಪಿ ಸತತವಾಗಿ ಮೂರು ವರ್ಷಗಳಿಂದ ಈಜ್ ಆಫ್ ಡೂಯಿಂಗ್ ಬಿಸಿನೆಸ್ನಲ್ಲಿ ಅಗ್ರಸ್ಥಾನದಲ್ಲಿದೆ ಎಂದು ವಿದೇಶಿ ಹೂಡಿಕೆದಾರರಿಗೆ ಜಗನ್ ವಿವರಿಸಿದ್ದಾರೆ. ಆಂಧ್ರದಲ್ಲಿಆರು ಬಂದರುಗಳಿವೆ, ಕೆಲವು ದಿನಗಳಲ್ಲಿ ನಾಲ್ಕು ಬಂದರಗಳನ್ನು ಪ್ರಾರಂಭಿಸುತ್ತೇವೆ. ಮೂರು ಕೈಗಾರಿಕಾ ಕಾರಿಡಾರ್‌ಗಳು ಪ್ರಾರಂಭಿಸುತ್ತಿದ್ದೇವೆಂದು ಸಭೆಯಲ್ಲಿ ತಿಳಿಸಿದ್ದಾರೆ.
ಉದ್ಯಮ ಸ್ಥಾಪನೆಗೆ ಅವಕಾಶ
21 ದಿನಗಳಲ್ಲಿ ಉದ್ಯಮಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ಎಲೆಕ್ಟ್ರಾನಿಕ್, ತಯಾರಿಕೆಯ ಕ್ಲಸ್ಟರ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಹೂಡಿಕೆದಾರರಿಗೆ ತಿಳಿಸಿದ್ದಾರೆ. ಟೆಕ್ಸ್ ಟೈಲ್, ಫಾರ್ಮಾ, ಆಟೋಮೊಬೈಲ್ ಕ್ಲಸ್ಟರ್‌ಗಳು ಪ್ರಸ್ತುತ ರಾಜ್ಯದಲ್ಲಿ ಲಭ್ಯವಿದೆ. ಸದ್ಯದಲ್ಲಿಯೇ ರಾಜಧಾನಿಯಾಗುತ್ತಿರುವ ವೈಜಾಕ್ನಲ್ಲಿ ಮಾರ್ಚ್ 3-ರಂದು ಜಾಗತಿಕ ಶೃಂಗಸಭೆ ನಡೆಯಲಿದ್ದು, ಹೂಡಿಕೆದಾರರನ್ನು ಅಲ್ಲಿಗೆ ಆಗಮಿಸಿ, ರಾಜ್ಯದಲ್ಲಿ ವ್ಯಾಪಾರ ಎಷ್ಟು ಸುಲಭವಾಗಿ ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳಬೆಕೇಂದು ಜಗನ್ ತಿಳಿಸಿದ್ದಾರೆ.
2014ರಲ್ಲಿ ಆಂಧ್ರ- ತೆಲಂಗಾಣ ಪ್ರತ್ಯೇಕ ರಾಜ್ಯ
ಒಂದೇ ರಾಜ್ಯವಾಗಿದ್ದ ಆಂಧ್ರಪ್ರದೇಶ 2014ರಲ್ಲಿ ಜೂನ್ 2ರಂದು ಎರಡು ಭಾಗವಾಯಿತು. ಆಂಧ್ರದಿಂದ ಬೇರ್ಪಟ್ಟ ತೆಲಂಗಾಣ ದೇಶದ 29ನೇ ರಾಜ್ಯವಾಗಿ ಉದಯವಾಯಿತು. ನೀರು, ಬಜೆಟ್, ಸರ್ಕಾರಿ ಉದ್ಯೋಗದಲ್ಲಿ ತಾರತಮ್ಯದ ವಿರುದ್ದ ತೆಲಂಗಾಣ ಭಾಗದ ಜನರು ಹೋರಾಟ ಮಾಡಿ ಪ್ರತ್ಯೇಕ ರಾಜ್ಯ ಪಡೆದುಕೊಂಡಿದ್ದರು. ಸುಮಾರು 45 ವರ್ಷಗಳ ಹೋರಾಟದ ಫಲವಾಗಿ 2014ರಲ್ಲಿ ತೆಲಂಗಾಣ ಉದಯವಾಗಿತು.
ಮೂರು ರಾಜಧಾನಿ ವಿವಾದ
ಜಗನ್ ಮೋಹನ್ ರೆಡ್ಡಿ ಆಂಧ್ರದ ಮುಖ್ಯಮಂತ್ರಿಯಾದ ಮೇಲೆ ಆಂಧ್ರ ಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲಾ ಪ್ರದೇಶಗಳ ಅಂತರ್ಗತ ಅಭಿವೃದ್ಧಿ ಕಾಯಿದೆ 2020 ರ ಮೂಲಕ ಆಂಧ್ರ ಪ್ರದೇಶ ರಾಜ್ಯದಲ್ಲಿ ಮೂರು ಆಡಳಿತ ಸ್ಥಾನಗಳನ್ನು ಹೊಂದಿರಬೇಕು ಎಂದು ಮಸೂದೆ ಜಾರಿ ಮಾಡಿದ್ದರು. ಅಮರಾವತಿ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರದೇಶವನ್ನು ಶಾಸಕ ರಾಜಧಾನಿ ಎಂದು, ವಿಶಾಖಪಟ್ಟಣ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರದೇಶವನ್ನು ಕಾರ್ಯನಿರ್ವಾಹಕ ರಾಜಧಾನಿ ಮತ್ತು ಕರ್ನೂಲ್ ನಗರಾಭಿವೃದ್ಧಿ ಪ್ರದೇಶವನ್ನು ನ್ಯಾಯಾಂಗ ರಾಜಧಾನಿ ಎಂದು ಕರೆಯಲಾಗುವುದು ಎಂದು ಘೋಷಿಸಲಾಗಿತ್ತು. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದರು.
ಮಸೂದೆ ವಾಪಸ್
ಆದರೆ ಜಹನ್ ಮೋಹನ್ ರೆಡ್ಡಿ ಸರ್ಕಾರದ ಈ ಮೂರು ರಾಜಧಾನಿ ಯೋಜನೆ ವಿರೋಧ ವ್ಯಕ್ತವಾಗಿತ್ತು. ಕೆಲವೇ ದಿನಗಳಲ್ಲಿ ಸರ್ಕಾರ ಮೂರು ಆಡಳಿತ ಸ್ಥಾನದ ಮಸೂದೆಯನ್ನು ವಾಪಸ್ ತೆಗೆದುಕೊಂಡಿತ್ತು. ಸಿಎಂ ಜಗನ್ ಅಮರಾವತಿಯನ್ನು ರಾಜಧಾನಿಯಾಗಿ ಘೋಷಣೆ ಮಾಡಿದ್ದರು. ಇದೀಗ ವಿಶಾಖಪಟ್ಟಣವನ್ನು ಹೊಸ ರಾಜಧಾನಿಯಾಗಿ ಮಾಡುವುದಾಗಿ ಘೋಷಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ