Crime: ಆನ್​ಲೈನ್​ನಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದ ಅಪ್ಪ-ಮಗ ಸೇರಿ ಐವರ ಬಂಧನ 

ಬಾಡಿಗೆ ಮನೆಯಲ್ಲಿ ಸಂಗ್ರಹಿಸಲಾಗಿದ್ದ 48 ಕೆಜಿ ಒಣ ಗಾಂಜಾವನ್ನು ಜಪ್ತಿ ಮಾಡಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹೈದ್ರಾಬಾದ್​ (ನ. 29): ಆನ್​ಲೈನ್​ ಶಾಪಿಂಗ್​ ತಾಣವಾದ  ಇ – ಕಾಮರ್ಸ್ (E-commerce) ವೇದಿಕೆಯಲ್ಲಿ ಗಾಂಜಾ (Ganja) ಮಾರುತ್ತಿದ್ದ ಆರೋಪದ ಮೇಲೆ ತಂದೆ ಮಗ ಸೇರಿದಂತೆ ಐದು ಮಂದಿಯನ್ನು ವೈಜಾಗ್‍ನಲ್ಲಿ (vizag) ಬಂಧಿಸಲಾಗಿದೆ. ಆರೋಪಿಗಳು ವಿಶಾಖಪಟ್ಟಣದಿಂದ (Visakhapatnam) ಮಧ್ಯಪ್ರದೇಶಕ್ಕೆ (Madya Pradesh) ನಿಷೇಧಿತ ವಸ್ತುಗಳನ್ನು ಕಳುಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳನ್ನು ಸಿ ಹೆಚ್ ಶ್ರೀನಿವಾಸ ರಾವ್, ಜೆ ಕುಮಾರಸ್ವಾಮಿ, ಬಿ ಕೃಷ್ಣಂ ರಾಜು, ಸಿ ಎಚ್ ವೆಂಕಟೇಶ್ವರ ರಾವ್ ಮತ್ತು ಶ್ರೀನಿವಾಸ್ ರಾವ್ ಅವರ ಮಗ ಸಿ.ಎಚ್ ಮೋಹನ ರಾಜು ಅಲಿಯಾಸ್ ರಾಕಿ ಎಂದು ಗುರುತಿಸಲಾಗಿದ್ದು, ಎಲ್ಲರೂ ವಿಶಾಖಪಟ್ಟಣ ನಿವಾಸಿಗಳಾಗಿದ್ದಾರೆ.

  ಮಧ್ಯ ಪ್ರದೇಶದ ಭಿಂಡ್‍ನ ಪೊಲೀಸರು ಆನ್‍ಲೈನ್ ಮಾದಕ ಗಾಂಜಾ ದಂಧೆ ಪತ್ತೆಹಚ್ಚಿ, 3 ಆರೋಪಿಗಳನ್ನು ಬಂಧಿಸಿದ್ದನ್ನು ಮತ್ತು 20 ಕೆಜಿ ಒಣ ಗಾಂಜಾ ಜಪ್ತಿ ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದು.

  48 ಕೆಜಿ ಒಣ ಗಾಂಜಾ ಜಪ್ತಿ

  ನಂಬಲಾರ್ಹ ಮೂಲದಿಂದ ಬಂದ ಮಾಹಿತಿಯನ್ನು ಆಧರಿಸಿ, ನವಂಬರ್ 21ರಂದು ಶ್ರೀನಿವಾಸ ರಾವ್‍ನನ್ನು ಬಂಧಿಸಲಾಗಿದ್ದು, ನಗರದ ಕಂಚಾರಪಲೆಂನಲ್ಲಿರುವ ಬಾಡಿಗೆ ಮನೆಯಲ್ಲಿ ಸಂಗ್ರಹಿಸಲಾಗಿದ್ದ 48 ಕೆಜಿ ಒಣ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಎಂದು ವೈಜಾಗ್‍ನ ವಿಶೇಷ ಜಾರಿ ಬ್ಯೂರೋ ಜಂಟಿ ನಿರ್ದೇಶಕ (ಎಸ್‍ಇಬಿ) ಎಸ್ ಸತೀಶ್ ಕುಮಾರ್ ಹೇಳಿದ್ದಾರೆ.

  ಗಾಂಜಾದ ಹೊರತಾಗಿ, ಕವರ್‌ಗಳು, ಕಾರ್ಡ್‍ಬೋರ್ಡ್ ಬಾಕ್ಸ್‌ಗಳು, ಟೇಪ್‍ಗಳು ಮತ್ತು ಎಲೆಕ್ಟ್ರಾನಿಕ್ ತೂಕದ ಮೆಶಿನ್ ಮುಂತಾದ ಪ್ಯಾಕಿಂಗ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

  ಸೂಪಾರ್​ ನ್ಯಾಚುರಲ್​ ಹೆಸರಿನಲ್ಲಿ ಮಾರಾಟ

  ಶ್ರೀನಿವಾಸ್ ರಾವ್, ಇ –ಕಾಮರ್ಸ್ ಸೈಟ್‍ನಲ್ಲಿ ಮಾರಾಟಗಾರರೆಂದು ನೋಂದಾಯಿಸಿಕೊಂಡಿದ್ದು, ಮಧ್ಯ ಪ್ರದೇಶದ ಸೂರಜ್ ಪಾವೈಯ ಮತ್ತು ಮುಕುಲ್ ಜೈಸ್ವಾಲ್ ಪ್ರಕರಣದಲ್ಲಿ ಶಾಮೀಲಾಗಿದ್ದರೆಂದು ತನಿಖೆಯ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾನೆ. ವೈಜಾಗ್ ನಗರದಿಂದ, ‘ಸೂಪರ್‌ ನ್ಯಾಚುರಲ್’ ಒಣ ಸ್ಟಿವಿಯಾ ಎಲೆಗಳ ಹೆಸರಿನಲ್ಲಿ ಗಾಂಜಾವನ್ನು ಮಧ್ಯ ಪ್ರದೇಶ ಮತ್ತು ರಾಜಸ್ಥಾನಕ್ಕೆ ಕಳ್ಳ ಸಾಗಾಣೆ ಮಾಡುವುದಕ್ಕೆ ಸೂರಜ್ ಪಾವೈಯ ಮತ್ತು ಮುಕುಲ್ ಜೈಸ್ವಾಲ್ ಅವರಿಗೆ ಸಂಪರ್ಕ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

  ಸೂರಜ್ ಪಾವೈಯ ಮತ್ತು ಮುಕುಲ್ ಜೈಸ್ವಾಲ್ ‘ಬಾಬು ಟೆಕ್ಸ್’ ಎಂಬ ಸಂಸ್ಥೆ ಆರಂಭಿಸಿ, ಬೇರೆ ಸಂಸ್ಥೆಗಳ ಜಿಎಸ್‍ಟಿ ಸಂಖ್ಯೆಗಳನ್ನು ಬಳಸಿಕೊಂಡು, ಇ – ಕಾಮರ್ಸ್ ಸೈಟ್‍ನಲ್ಲಿ ತಮ್ಮನ್ನು ಮಾರಾಟಗಾರರೆಂದು ನೋಂದಾವಣೆ ಮಾಡಿಸಿಕೊಂಡಿದ್ದರು ಮತ್ತು ವೈಜಾಗ್ ನಗರದಿಂದ ಮಧ್ಯ ಪ್ರದೇಶಕ್ಕೆ ಗಾಂಜಾ ಸಾಗಾಣೆ ಮಾಡುತ್ತಿದ್ದರು.

  ಇದನ್ನು ಓದಿ: : ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಹಣ ಇನ್ನೂ ಖಾತೆಗೆ ಬಂದಿಲ್ವಾ?; ಹಾಗಾದ್ರೆ ಈ ರೀತಿ ಮಾಡಿ

  ಕಾನೂನು ಬಾಹಿರ ಕೆಲಸದಲ್ಲೂ ಭಾಗಿಯಾಗಿದ್ದ ಅಪ್ಪ-ಮಗ

  “ನಾವು ಕುಮಾರಸ್ವಾಮಿ ಮತ್ತು ಕೃಷ್ಣಂ ರಾಜು ಎಂಬ ಇಬ್ಬರು ಸಹಚರರನ್ನು – ಮತ್ತು ಒಬ್ಬ ವ್ಯಾನ್ ಚಾಲಕ ವೆಂಕಟೇಶ್ವರ ರಾವ್ ಎಂಬವನನ್ನು ಕೂಡ ಬಂಧಿಸಿದ್ದೇವೆ. ಆತ ಕಂಚಾರಪಲೆಂನ ಶ್ರೀನಿವಾಸ ರಾವ್‍ನನ್ನು ತಲುಪಲು ನೆರವಾದ.

  ಇದನ್ನು ಓದಿ: ಆರ್ಯನ್‌ ಖಾನ್‌ ಡ್ರಗ್‌ ಕೇಸ್‌ ನಂತೆ Amazon‌ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲ: CAIT

  ಶ್ರೀನಿವಾಸ ರಾವ್ ಮಗ ಮೋಹನ್ ರಾಜು ಕೂಡ ಕಾನೂನು ಬಾಹಿರ ವ್ಯಾಪಾರದಲ್ಲಿ ಶಾಮೀಲಾಗಿದ್ದಾನೆಂದು ತನಿಖೆಯಿಂದ ತಿಳಿದು ಬಂತು, ಹಾಗಾಗಿ ಅವನನ್ನು ಕೂಡ ಬಂಧಿಸಲಾಗಿದೆ” ಎಂದು ಸತೀಶ್ ಕುಮಾರ್ ಹೇಳಿದರು. “ಕಳೆದ ಎಂಟು ತಿಂಗಳಲ್ಲಿ , ಇ –ಕಾಮರ್ಸ್ ಸೈಟ್‍ನ ಮೂಲಕ ಪಾವೈಯ ಮತ್ತು ಜೈಸ್ವಾಲ್ , ವೈಜಾಗ್‍ನಿಂದ ಮಧ್ಯ ಪ್ರದೇಶಕ್ಕೆ ಸುಮಾರು 600 ರಿಂದ 700 ಕೇಜಿ ಒಣ ಗಾಂಜಾವನ್ನು ಸಾಗಾಣೆ ಮಾಡಿರಬಹುದು ಎಂದು ನಮಗೆ ಸಂಶಯವಿದೆ” ಎಂದು ಅವರು ಹೇಳಿದ್ದಾರೆ.
  Published by:Seema R
  First published: