Visa Delay: ವಿದೇಶಕ್ಕೆ ಹೊರಟಿದ್ದೀರಾ? ವೀಸಾಕ್ಕೆ 500ಕ್ಕೂ ಹೆಚ್ಚು ದಿನ ಕಾಯಲೇಬೇಕು!

ಯುರೋಪ್‌ ದೇಶಕ್ಕೆ ಹೋಗಬೇಕೆಂದರೆ ವೀಸಾ ಬೇಕೆ ಬೇಕು. ಇಷ್ಟು ದಿನ ವೀಸಾ ಪಡೆಯಲು ಅಷ್ಟೊಂದು ಕಾಯಬೇಕಾದ ಅವಶ್ಯಕತೆ ಇದ್ದಿಲ್ಲ. ಈಗ 500 ಕ್ಕೂ ಹೆಚ್ಚು ದಿನ ವೀಸಾ ಬರುವಿಕೆಗೆ ಕಾಯಬೇಕಾದ ಪರಿಸ್ಥಿತಿ ಯುರೋಪ್‌ಗೆ ಪ್ರಯಾಣಿಸಬೇಕೆಂಬ ಆಸೆ ಇಟ್ಟುಕೊಂಡ ಭಾರತೀಯರಿಗೆ ಬೇಸರ ಮೂಡಿಸಿದೆ. ಯುರೋಪ್‌ ದೇಶಗಳಿಗೆ ಪ್ರಯಾಣಿಸಲು ವೀಸಾ ಪಡೆಯಲು ದೀರ್ಘಾವಧಿ ಅವಧಿಯವರೆಗೆ ಕಾಯಲೇಬೇಕಾದ ಪರಿಸ್ಥಿತಿ ಬಂದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪ್ರತಿಯೊಬ್ಬರಿಗೂ ಜೀವನದಲ್ಲಿ ಇರುವ ಆಸೆ, ಬಯಕೆ ಇತ್ಯಾದಿ ಎಂದರೆ ಅದು ಬೇರೆ ಬೇರೆ ಊರಿಗೆ ಪ್ರಯಾಣಿಸಬೇಕು (Travel), ಅಲ್ಲಿನ ಫೇಮಸ್‌ ಸ್ಥಳಗಳನ್ನು (Famous Places) ವೀಕ್ಷಿಸಿ ನಮ್ಮ ಕಣ್ಣು ಮತ್ತು ಮನಸ್ಸನ್ನು ಆನಂದಗೊಳಿಸಬೇಕು ಅನ್ನೋದು. ಅದರಲ್ಲೂ ವಿದೇಶ ಪ್ರಯಾಣ (Foreign Trip) , ವಿಮಾನದಲ್ಲಿ (Flight)  ಸಂಚಾರ ಹೀಗೆ ನೂರಾರು ಕನಸುಗಳು (Dream) ಇದ್ದೆ ಇರುತ್ತವೆ. ಅದರಲ್ಲೂ ನಮ್ಮ ಭಾರತ (India) ದೇಶದಲ್ಲಿ, ಜೀವನದಲ್ಲಿ ಒಂದೇ ಒಂದು ಸಲ ವಿದೇಶ ಪ್ರವಾಸ ಮಾಡಬೇಕು, ಅದರಲ್ಲೂ ಯುರೋಪ್‌ (Europe) ದೇಶಗಳನ್ನು ಸುತ್ತಬೇಕು ಅಂತಾ ತುಂಬಾ ಮಂದಿ ಅದಮ್ಯ ಬಯಕೆ ಇಟ್ಟುಕೊಂಡಿರುತ್ತಾರೆ.

ವೀಸಾ ಪಡೆಯಲು 500 ದಿನ ಕಾಯುವ ಪರಿಸ್ಥಿತಿ
ಹೌದು ಪ್ರತಿ ಭಾರತೀಯನಿಗೂ ಈ ಕನಸು ಸಾಮಾನ್ಯ. ಈ ಯುರೋಪ್‌ ದೇಶಗಳಿಗೆ ಕೆಲವು ಅಧ್ಯಯನ ನಡೆಸಲು, ಕೆಲವರು ತಮ್ಮ ವ್ಯವಹಾರಗಳ ಕೆಲಸ ನಡೆಸಲು ಮತ್ತು ಕೆಲವರು ಪ್ರವಾಸಕ್ಕೆ ಹೊರಡುತ್ತಾರೆ. ಆದರೆ ಭಾರತದಲ್ಲಿ ಹೆಚ್ಚು ಜನರು ಇಷ್ಟ ಪಡುವ ದೇಶ ಯುರೋಪ್‌ ಆಗಿದೆ ಎಂದರೆ ಅದು ಸುಳ್ಳಲ್ಲ.

ಆದರೆ ಈ ದೇಶಕ್ಕೆ ಹೋಗಬೇಕೆಂದರೆ ವೀಸಾ ಬೇಕೆ ಬೇಕು. ಇಷ್ಟು ದಿನ ವೀಸಾ ಪಡೆಯಲು ಅಷ್ಟೊಂದು ಕಾಯಬೇಕಾದ ಅವಶ್ಯಕತೆ ಇರಲಿಲ್ಲ. ಈಗ 500 ಕ್ಕೂ ಹೆಚ್ಚು ದಿನ ವೀಸಾ ಬರುವಿಕೆಗೆ ಕಾಯಬೇಕಾದ ಪರಿಸ್ಥಿತಿ, ಯುರೋಪ್‌ಗೆ ಪ್ರಯಾಣಿಸಬೇಕೆಂಬ ಆಸೆ ಇಟ್ಟುಕೊಂಡ ಭಾರತೀಯರಿಗೆ ಬೇಸರ ಮೂಡಿಸಿದೆ. ಯುರೋಪ್‌ ದೇಶಗಳಿಗೆ ಪ್ರಯಾಣಿಸಲು ವೀಸಾ ಪಡೆಯಲು ದೀರ್ಘಾವಧಿ ಅವಧಿಯವರೆಗೆ ಕಾಯಲೇಬೇಕಾದ ಪರಿಸ್ಥಿತಿ ಬಂದಿದೆ.

ಈ ಬಗ್ಗೆ ತನ್ನ ವೆಬ್‌ಸೈಟ್ ನಲ್ಲಿ ಏನು ಹೇಳಿದೆ 
ಇದರ ಬಗ್ಗೆ ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಟ್ರಾವೆಲ್ ಸ್ಟೇಟ್ ಗೌರ್ನಮೆಂಟ್‌ ವೆಬ್‌ಸೈಟ್ “ಹೊಸ ದೆಹಲಿಯಲ್ಲಿರುವ ಯುಎಸ್ ಕಾನ್ಸುಲೇಟ್‌ನಲ್ಲಿ ವೀಸಾ ಅಪಾಯಿಂಟ್‌ಮೆಂಟ್‌ಗಾಗಿ ಪ್ರವಾಸಕ್ಕೆ ಹೊರಡುವವರು ವೀಸಾ ಪಡೆಯಲು ಬರೊಬ್ಬರಿ 522 ದಿನಗಳ ದೀರ್ಘ ಕಾಲ ಕಾಯಬೇಕಾಗಿದೆ ಅಂತಾ ಹೇಳಿದೆ.

ಇನ್ನು ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಮುಂದುವರಿಯಲು ಯುರೋಪ್‌ಗೆ ಪ್ರಯಾಣ ಬೆಳೆಸಬೇಕೆಂದರೆ ವೀಸಾ ಪಡೆಯಲು ಸುಮಾರು 471 ದಿನಗಳನ್ನು ಕಾಯಬೇಕಾಗಿದೆ. ಇದು ದೆಹಲಿ ಎಂಬ ಮಹಾನಗರದ ಪರಿಸ್ಥಿತಿ ಆದರೆ ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿಯೂ, ಯುಸ್‌ ಗೆ ಪ್ರವಾಸಕ್ಕೆ ಹೋಗುವವರು 517 ದಿನಗಳು ಮತ್ತು ವಿದ್ಯಾರ್ಥಿಗಳು 10 ದಿನಗಳ ಕಾಲ ವೀಸಾ ಪಡೆಯುವುದಕ್ಕೆ ಕಾಯಲೇಬೇಕಾದ ಅನಿವಾರ್ಯತೆ ಇದೆ” ಎಂದು ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Somalia: ಸೊಮಾಲಿಯಾದಲ್ಲಿ ಅತೀ ದೊಡ್ಡ ಭಯೋತ್ಪಾದಕ ದಾಳಿ, 10 ನಾಗರಿಕರ ಹತ್ಯೆ, ಉಗ್ರರ ವಶದಲ್ಲಿ ಹೋಟೆಲ್!

ಆರ್ಥಿಕ ಸುದ್ದಿ ಪೋರ್ಟಲ್‌ ಆದ ಮನಿಕಂಟ್ರೋಲ್ “ಯುಎಸ್ ವೀಸಾಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ಅರ್ಜಿದಾರರ ಸಂಖ್ಯೆ ಸದ್ಯಕ್ಕೆ 4 ಲಕ್ಷವನ್ನು ಮೀರಿದೆ. ಇದರ ಜೊತೆ ಕೆನಡಾ ದೇಶದ ವೀಸಾ ಪಡೆಯಲು 20 ಲಕ್ಷಕ್ಕೂ ಹೆಚ್ಚು ಬಾಕಿ ಇರುವ ಅರ್ಜಿಗಳನ್ನು ನಾವು ಕಾಣಬಹುದಾಗಿದೆ. ಫ್ರಾನ್ಸ್ ಮತ್ತು ಐಸ್‌ಲ್ಯಾಂಡ್ ಸೇರಿದಂತೆ ಇತರ ದೇಶಗಳಿಗೆ ವೀಸಾಗೆ ಅರ್ಜಿ ಸಲ್ಲಿಸಿರುವ ಒಂದು ಅರ್ಜಿಯು ಕಾಣುವುದಿಲ್ಲ. ಇದರಿಂದ ಯುರೋಪ್‌ ದೇಶಗಳಿಗೆ ಭಾರಿ ಬೇಡಿಕೆ ಇದೆ ಎಂಬುದು ಕಂಡುಬರುತ್ತದೆ” ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳು ಸಂಕ್ಷತದಲ್ಲಿ!
“ಈ ವೀಸಾ ನೀಡುವ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆ ಕಾನ್ಸುಲರ್ ಸಿಬ್ಬಂದಿಯನ್ನು ಹೆಚ್ಚಿಸುವ ಮೂಲಕ ಮತ್ತು ಕೆಲವು ರೀತಿಯ ವೀಸಾಗಳಿಗೆ ಆದ್ಯತೆ ನೀಡುವ ಮೂಲಕ ಕಾಯುವ ಅವಧಿಯನ್ನು ಕಡಿಮೆ ಮಾಡಲು ಸಾಧ್ಯವಾದಷ್ಟು ಪ್ರಯತ್ನ ಮಾಡಲಾಗುವುದು” ಎಂದು ಟೈಮ್ಸ್‌ ಆಫ್‌ ಇಂಡಿಯಾ ಜೊತೆ ಮಾತನಾಡಿದ ಅಧಿಕಾರಿಯೊಬ್ಬರು ಹೇಳಿದರು.

ಇದನ್ನೂ ಓದಿ:  California Plane Crash: ಆಕಾಶದಲ್ಲೇ ಎರಡು ವಿಮಾನಗಳ ಡಿಕ್ಕಿ! ನಡೆದೇಹೋಯ್ತು ಮಹಾ ಅನಾಹುತ

ಇದೆಲ್ಲವನ್ನು ಗಮನಿಸಿದಾಗ ತಿಳಿದು ಬರುವ ಮುಖ್ಯ ವಿಷಯವೇಂದರೆ ಪ್ರವಾಸಕ್ಕೆ ಹೋಗುವವರು ಈ ರೀತಿಯ ವೀಸಾ ವಿಳಂಬವಾದರೆ ಬೇರೆ ದೇಶಕ್ಕೆ ತಮ್ಮ ಪ್ರಯಾಣವನ್ನು ಬೆಳೆಸುತ್ತಾರೆ. ಆದರೆ ಇಂತಹ ದೇಶದಲ್ಲಿಯೇ ಅಧ್ಯಯನ ನಡೆಸಿ ನಮ್ಮ ಭವಿಷ್ಯ ಉತ್ತಮಗೊಳಿಸಿಕೊಳ್ಳಬೇಕು ಎಂಬ ಕನಸು ಇಟ್ಟುಕೊಂಡ ವಿದ್ಯಾರ್ಥಿಗಳ ಕಥೆಯೇನು?
Published by:Ashwini Prabhu
First published: