Virgin Space Trip: ನೀವೂ ಬಾಹ್ಯಾಕಾಶ ಪ್ರಯಾಣ ಮಾಡ್ಬಹುದು, ಒಂದು ಟಿಕೆಟ್​ಗೆ 3 ಕೋಟಿ ರೂಪಾಯಿ ಅಷ್ಟೇ!

ಬಾಹ್ಯಕಾಶ ಪ್ರಯಾಣದಲ್ಲಿ ಆಸಕ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇಂಥಹ ಪ್ರಯಾಣಿಕರಿಗೇ ಎಂದೇ space travel agency ಗಳು ವಿವಿಧ ಆಫರ್​ಗಳನ್ನು ಬಿಡುಗಡೆ ಮಾಡುತ್ತಿವೆ. ಇದೀಗ ವರ್ಜಿನ್ ಸಂಸ್ಥೆ ಸಹ ಹೊಸ ಆಫರ್ ಬಿಡುಗಡೆ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೊದಲೆಲ್ಲ ಬಾಹ್ಯಾಕಾಶ ಪ್ರಯಾಣ( Space Travel) ಎಂಬುದು ಜನರ ಕನಸಿನ ಕೂಸಾಗಿತ್ತು. ಬಾಹ್ಯಾಕಾಶ ವಿಚಾರದಲ್ಲಿ ಪರಿಣಿತಿ ಹೊಂದಿದವರು ಮಾತ್ರ ಹೋಗಲು ಸಾಧ್ಯ ಎಂಬುವ ಕಲ್ಪನೆ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ. ಬಾಹ್ಯಾಕಾಶ ಪ್ರಯಾಣ ಎಂಬುದು ಹೊಸತಾಗಿದ್ದರೂ ಸಹ ಸಾಮಾನ್ಯ ಎಂಬುವಂತೆ ಆಗಿದೆ. ಬಾಹ್ಯಾಕಾಶ ಏಜೆನ್ಸಿಗಳು ಈಗಾಗಲೇ  ಪ್ರಯಾಣದ ಸೀಟಿನ ಮೇಲೆ ಬೆಲೆ  ನಿರ್ಧರಿಸಲು ಆರಂಭಿಸಿವೆ. ಒಂದೆಲ್ಲ ಒಂದು ಸಂಸ್ಥೆಗಳು ತಮ್ಮ ಪ್ಯಾಕೇಜ್ ಬಗ್ಗೆ ಹೇಳಿಕೆ ಬಿಡುಗಡೆ ಮಾಡುತ್ತಿವೆ. ಸ್ಪೇಸ್‌ಶಿಪ್ ಕಂಪನಿ ವರ್ಜಿನ್ ಗ್ಯಾಲಕ್ಟಿಕ್ (SPCE.N) ಒಂದು ಸೀಟಿಗೆ  450,000 ಡಾಲರ್ ಅಂದರೆ  3,33,51,772 ಕೋಟಿ ರೂ ನಿಂದ ಆರಂಭವಾಗುವ ಬಾಹ್ಯಾಕಾಶ ವಿಮಾನಗಳ ಟಿಕೆಟ್ ಮಾರಾಟವನ್ನು ಆರಂಭಿಸುವುದಾಗಿ ಘೋಷಿಸಿದೆ.  ಕೆಲ ದಿನಗಳ ಹಿಂದಷ್ಟೇ ಬಿಲಿಯನೇರ್ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್ ಬಾಹ್ಯಾಕಾಶ ಪ್ರಯಾಣವನ್ನು ಮಾಡಿ ಬಂದ ನಂತರ ಕಂಪನಿ ಈ ಘೋಷಣೆ ಮಾಡಿದೆ. 

ವರ್ಜಿನ್ ಗ್ಯಾಲಕ್ಟಿಕ್ ರಾಕೆಟ್,  ನ್ಯೂ ಮೆಕ್ಸಿಕೋ ಮರುಭೂಮಿಯಿಂದ ಜುಲೈ 11 ರಂದು 50 ಮೈಲಿಗಳಿಗಿಂತ ಹೆಚ್ಚು ಎತ್ತರದ ಹಾರಾಟ ನಡೆಸಿದೆ. ಕೇವಲ ಸಾಂಕೇತಿಕವಾಗಿ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ರಾಕೆಟ್ ನಲ್ಲಿ ಕೇವಲ ಕಂಪನಿಯನ್ನು ಸಿಬ್ಬಂದಿಗಳನ್ನು ಕಳುಹಿಸಲಾಗಿತ್ತು. ಅಲ್ಲದೇ ಅವರೆಲ್ಲರೂ ಸುರಕ್ಷಿತವಾಗಿ ಮರಳಿ ಬಂದಿದ್ದಾರೆ. ಇದು   17 ವರ್ಷಗಳ ಹಿಂದೆ ರಿಚರ್ಡ್ ಬ್ರಾನ್ಸನ್  ಆರಂಭಿಸಿದ ಸಾಹಸೋದ್ಯಮಕ್ಕೆ  ಒಂದು ಮೈಲಿಗಲ್ಲು. ಇನ್ನು  ಜೂನ್ ನಲ್ಲಿ, ವರ್ಜಿನ್ ಗ್ಯಾಲಕ್ಟಿಕ್ ಜನರನ್ನು ಬಾಹ್ಯಾಕಾಶಕ್ಕೆ  ಕರೆದುಕೊಂಡು ಹೋಗಲು ಯುಎಸ್ ವಾಯುಯಾನ ಸುರಕ್ಷತಾ ನಿಯಂತ್ರಕರಿಂದ  ಅನುಮತಿ ಪಡೆದಿದೆ. ಅಲ್ಲದೇ ಈ ಘೋಷಣೆಯ ನಂತರ ವಿಸ್ತೃತ ವಹಿವಾಟಿನಲ್ಲಿ ಕಂಪನಿಯ ಷೇರುಗಳು 5% ಹೆಚ್ಚಾಗಿದೆ ಎಂದು  ಸುದ್ದಿ ಸಂಸ್ಥೆ ವರದಿ  ಮಾಡಿದೆ.

ಇದನ್ನೂ ಓದಿ: ಆಗಸ್ಟ್ 13ರವರಗೆ ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ

ಇನ್ನು ಕಂಪನಿಯು  ಗ್ರಾಹಕರಿಗೆ ಮೂರು  ರೀತಿಯ ಆಫರ್ ನೀಡುತ್ತಿದೆ.  ಅದರಲ್ಲಿ ಒಂದೇ ಸೀಟ್(single seat), ಬಹು ಆಸನ ಪ್ಯಾಕೇಜ್ (multi-seat package ) ಮತ್ತು ಪೂರ್ಣ-ವಿಮಾನ(full-flight buy out) ಖರೀದಿ. ಇನ್ನು ಈ ಕೊಡುಗೆಗಳು ಆರಂಭದಲ್ಲಿ  ಬುಕ್ ಮಾಡಿದವರಿಗೆ ಮಾತ್ರ ಎಂದು ಕಂಪನಿ ತಿಳಿಸಿದೆ.

450,000 ಡಾಲರ್ ಅಥವಾ 3 ಕೋಟಿ ರೂ ಇದಕ್ಕೆ ತುಂಬಾ ಹೆಚ್ಚು ಎಂದು ಅನಿಸುತ್ತದೆ. ಅಲ್ಲದೇ  ನಿಮಗೆ  ಆ ವೆಚ್ಚ ಭರಿಸಲು ಸಾಧ್ಯವಿಲ್ಲದಿದ್ದಲ್ಲಿ ರಿಚರ್ಡ್ ಬ್ರಾನ್ಸನ್ ಅವರ ಕಂಪನಿ ಒಂದು ಲಕ್ಕಿ ಡ್ರಾ ಆಯ್ಕೆಯನ್ನು ಕೂಡ ಹೊಂದಿದೆ.  ಈ ಡ್ರಾ ಜನರಿಗೆ ಮೊದಲ ವಾಣಿಜ್ಯ ಬಾಹ್ಯಾಕಾಶ ವಿಮಾನಗಳಲ್ಲಿ ಒಂದಕ್ಕೆ ಎರಡು ಉಚಿತ ಟಿಕೆಟ್‌ಗಳನ್ನು ನೀಡುತ್ತದೆ, ಆದರೆ ಆ ಹಾರಾಟ 2022 ರಲ್ಲಿ ನಡೆಯುತ್ತದೆ.  ಇದರ ನೋಂದಣಿ ಸೆಪ್ಟೆಂಬರ್ 1 ರವರೆಗೆ ತೆರೆದಿರುತ್ತದೆ ಮತ್ತು ಸೆಪ್ಟೆಂಬರ್ 29 ರ ವೇಳೆಗೆ ವಿಜೇತರನ್ನು ಘೋಷಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.  ಎರಡೂ ಟಿಕೆಟ್‌ಗಳನ್ನು ಒಬ್ಬ ವಿಜೇತರಿಗೆ ನೀಡಲಾಗುವುದು ಮತ್ತು ಯಾರು ಗೆದ್ದರೂ ಅವರ  ಜೊತೆ ಸ್ನೇಹಿತ, ಸಂಗಾತಿ ಅಥವಾ ಯಾರನ್ನಾದರೂ ಜೊತೆಯಲ್ಲಿ  ಕರೆದುಕೊಂಡು ಬರಬಹುದು. ಇದಲ್ಲದೆ, ನೀವು ಭಾರತೀಯರಾಗಿದ್ದರೆ, ನೀವು ಕೂಡ ನೋಂದಾಯಿಸಬಹುದು.

ಕಂಪನಿಯು  ನೋಂದಾಯಿಸಲು ಅಗತ್ಯವಾದ ಕನಿಷ್ಠ ಮಾನದಂಡಗಳನ್ನು ನಿರ್ಧರಿಸಿದೆ ಮತ್ತು ಅವುಗಳನ್ನು ಪೂರೈಸಲು ವಿಫಲವಾದ ಜನರು ಈ ಪ್ರಕ್ರಿಯೆಗೆ ನೋಂದಾಯಿಸಲು ಅವಕಾಶವಿಲ್ಲ.  ಭಾಗವಹಿಸಲು ಕನಿಷ್ಠ 18 ವರ್ಷ ವಯಸ್ಸು ಕಡ್ಡಾಯವಾಗಿರಬೇಕು. ಓಮಾಜೆ ಕಂಪನಿಯೊಂದಿಗೆ  ಯಾವುದೇ ರೀತಿಯ ಸಂಬಂಧವಿರಬಾರದು. ಯುನೈಟೆಡ್ ನೇಷನ್‌ನ ನಿರ್ಬಂಧಿತ ದೇಶಗಳ ಪಟ್ಟಿಯಲ್ಲಿರುವ ದೇಶಗಳಲ್ಲಿ ವಾಸಿಸುವ ಜನರಿಗೆ ಅವಕಾಶವಿಲ್ಲ ಎಂದು ಕಂಪನಿ ಹೇಳಿದೆ.
Published by:Sandhya M
First published: