ಆನ್ಲೈನ್ ರಮ್ಮಿ ಗೇಮ್ ರಾಯಭಾರಿಯಾಗಿರುವ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ, ದಕ್ಷಿಣ ಭಾರತದ ಪ್ರಸಿದ್ಧ ನಟಿ ತಮನ್ನಾ ಭಾಟಿಯಾ ಹಾಗೂ ಮಲೆಯಾಳಂ ನಟ ಅಜು ವರ್ಗೆಶ್ ಅವರಿಗೆ ಈಗ ಕಾನೂನು ಕಂಟಕವಾಗಿ ಪರಿಣಮಿಸಿದೆ. ಕೇರಳ ಹೈಕೋರ್ಟ್ನಿಂದ ಈ ಮೂವರಿಗೆ ಲೀಗಲ್ ನೋಟಿಸ್ ನೀಡಲಾಗಿದೆ. ತ್ರಿಶೂರ್ ಮೂಲದವರೊಬ್ಬರು ದೂರು ದಾಖಲಿಸಿದ ಬಳಿಕವೂ ಆನ್ಲೈನ್ ರಮ್ಮಿ ಆಟವನ್ನು ಪ್ರಮೋಟ್ ಮಾಡಿದ ಕಾರಣಕ್ಕೆ ಈ ಮೂವರಿಗೆ ಹೈಕೋರ್ಟ್ನಿಂದ ನೋಟಿಸ್ ನೀಡಲಾಗಿದೆ.
ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಹಾಗೂ ನ್ಯಾ.ಅನಿಲ್ ಕೆ. ನರೇಂದ್ರ ನೇತೃತ್ವದ ದ್ವಿಸದಸ್ಯ ಪೀಠ ಬುಧವಾರ ಆನ್ಲೈನ್ ರಮ್ಮಿ ಗೇಮ್ ಆಟ ನಿಲ್ಲಿಸಿ ಎಂಬ ಅರ್ಜಿದಾರರ ವಾದ ಆಲಿಸಿ ನೋಟಿಸ್ ಜಾರಿ ಮಾಡಿದೆ. ಈ ಸಂಬಂಧ ಉತ್ತರ ನೀಡುವಂತೆಯೂ ಕೇರಳ ಸರ್ಕಾರಕ್ಕೆ ಸೂಚನೆ ನೀಡಿದೆ. ಸರ್ಕಾರದಿಂದ ವರದಿ ಬಂದ ಕೂಡಲೇ ಈ ಬಗ್ಗೆ ತನಿಖೆ ನಡೆಸುವುದಾಗಿ ಸರ್ಕಾರ ಹೇಳಿದೆ.
ಇದನ್ನು ಓದಿ: ಸಿಎಂ ಬಿಎಸ್ವೈ, ನಿರಾಣಿ ವಿರುದ್ಧದ ಡಿನೋಟಿಫೈ ಪ್ರಕರಣ ತನಿಖೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್
ತ್ರಿಶೂರ್ ಮೂಲದ ಪೌಲಿ ವಡಕ್ಕನ್ ಎಂಬುವವರು ಆನ್ಲೈನ್ನಲ್ಲಿ ಹೆಚ್ಚು ಹೆಚ್ಚು ಖ್ಯಾತಿ ಪಡೆಯುತ್ತಿದ್ದು, ಈ ಆಟವನ್ನು ನಿಲ್ಲಿಸುವಂತೆ ಅರ್ಜಿ ಸಲ್ಲಿಸಿದ್ದರು. ಗೇಮಿಂಗ್ ಆಕ್ಟ್ 1960ರ ಪ್ರಕಾರ ರಮ್ಮಿ ಆಟ ಆಡುವುದು ಅಪರಾಧ ಎಂದು ಕೇರಳ ರಾಜ್ಯ ಸರ್ಕಾರ ಕಾನೂನು ಜಾರಿ ಮಾಡಿತು. ಸರ್ಕಾರ ಕಾನೂನೇನೊ ಮಾಡಿತು ಆದರೆ ಅದನ್ನು ಜಾರಿಗೊಳಿಸುವಲ್ಲಿ ವಿಫಲವಾಯಿತು ಎಂದು ಅವರು ದೂರಿದ್ದರು.
ಆದಾಗ್ಯೂ, ಆನ್ಲೈನ್ ರಮ್ಮಿ ಗೇಮ್ ಈ ಕಾನೂನು ವ್ಯಾಪ್ತಿಗೆ ಒಳಪಡುವುದಿಲ್ಲ. ಅರ್ಜಿದಾರ ಪೌಲಿ ವಡಕ್ಕನ್ ಅವರು ಈ ಸಂಬಂಧ ತುರ್ತು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಈ ಆನ್ಲೈನ್ ರಮ್ಮಿ ಗೇಮ್ ಇಷ್ಟು ಪ್ರಖ್ಯಾತಿ ಪಡೆಯಲು ಮೂವರು ಸೆಲೆಬ್ರೆಟಿಗಳು ಅದಕ್ಕೆ ರಾಯಭಾರಿಗಳಾಗಿರುವುದೇ ಕಾರಣ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ