HOME » NEWS » National-international » VIRAL VIDEO WOMAN SUSPECTING HUSBAND HAVING AN SEXUAL AFFAIR WIFE BLOCKS HIS CAR IN MUMBAI TRAFFIC JAM SCT

Viral Video: ಪ್ರೇಯಸಿ ಜೊತೆ ಹೋಗುತ್ತಿದ್ದ ಗಂಡನ ಕಾರನ್ನು ಅಡ್ಡಹಾಕಿ ನಡುರಸ್ತೆಯಲ್ಲೇ ಚಪ್ಪಲಿಯೇಟು ಕೊಟ್ಟ ಹೆಂಡತಿ!

Viral Video: ತನ್ನ ಗಂಡ ಆತನ ಪ್ರೇಯಸಿಯ ಜೊತೆ ಕಾರಿನಲ್ಲಿ ಹೋಗುತ್ತಿದ್ದುದನ್ನು ಗಂಡ ಮಹಿಳೆ ಆತನ ಕಾರನ್ನು ಹಿಂಬಾಲಿಸಿದಳು. ರೇಂಜ್ ರೋವರ್ ಕಾರನ್ನು ಹತ್ತಿ ಗ್ಲಾಸ್​ ಮೇಲಿಂದಲೇ ಗಂಡನ ಪ್ರೇಯಸಿಗೆ ಚಪ್ಪಲಿಯೇಟೂ ಕೊಟ್ಟಳು!

Sushma Chakre | news18-kannada
Updated:July 14, 2020, 10:10 PM IST
Viral Video: ಪ್ರೇಯಸಿ ಜೊತೆ ಹೋಗುತ್ತಿದ್ದ ಗಂಡನ ಕಾರನ್ನು ಅಡ್ಡಹಾಕಿ ನಡುರಸ್ತೆಯಲ್ಲೇ ಚಪ್ಪಲಿಯೇಟು ಕೊಟ್ಟ ಹೆಂಡತಿ!
ಮುಂಬೈ ಟ್ರಾಫಿಕ್​ನಲ್ಲಿ ಗಂಡನ ಕಾರು ಹತ್ತಿದ ಮಹಿಳೆಯ ವಿಡಿಯೋ ವೈರಲ್
  • Share this:
ಮುಂಬೈ (ಜು. 14): 'ಗಂಡ-ಹೆಂಡಿರ ಜಗಳ ಉಂಡು ಮಲಗೋವರೆಗೆ' ಎಂಬ ಗಾದೆಯೇ ಇದೆ. ಆದರೆ, ಮುಂಬೈನ ಹೆಂಡತಿಯೊಬ್ಬಳು ನಡುರಸ್ತೆಯಲ್ಲಿ ತನ್ನ ಗಂಡನ ಕಾರನ್ನು ಅಡ್ಡಹಾಕಿ, ಅದರಲ್ಲಿದ್ದ ಗಂಡನ ಪ್ರೇಯಸಿಯನ್ನು ಕೆಳಗೆ ಇಳಿಯುವಂತೆ ರಸ್ತೆಯಲ್ಲೇ ಅವಾಂತರ ಸೃಷ್ಟಿಸಿರುವ ವಿಡಿಯೋ ಈಗ ವೈರಲ್ ಆಗಿದೆ.

ಗೆಳತಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಪತಿಯನ್ನು ಪತ್ನಿ ಚೇಸ್ ಮಾಡಿ ಹಿಡಿದಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ. ಮಹಿಳೆಯ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಶನಿವಾರ ಸಂಜೆ ತನ್ನ ಗಂಡ ಆತನ ಪ್ರೇಯಸಿಯ ಜೊತೆ ಕಾರಿನಲ್ಲಿ ಹೋಗುತ್ತಿದ್ದುದನ್ನು ಗಂಡ ಮಹಿಳೆ ಆತನ ಕಾರನ್ನು ಹಿಂಬಾಲಿಸಿದಳು. ಗಂಡನ ಕಾರು ಸಿಗ್ನಲ್ ಬಳಿ ನಿಲ್ಲುತ್ತಿದ್ದಂತೆ ತನ್ನ ಕಾರನ್ನು ನಡುರಸ್ತೆಯಲ್ಲಿ ನಿಲ್ಲಿಸಿ, ಗಂಡನ ರೇಂಜ್ ರೋವರ್ ಕಾರಿನೆದುರು ಹೋಗಿ ನಿಂತ ಮಹಿಳೆ ಗಂಡನ ಪಕ್ಕದಲ್ಲಿ ಕುಳಿತಿದ್ದ ಯುವತಿಯನ್ನು ಕೆಳಗೆ ಇಳಿಯುವಂತೆ ಗದರಿದಳು. ಅಷ್ಟರಲ್ಲಾಗಲೇ ಅಲ್ಲಿಗೆ ಟ್ರಾಫಿಕ್ ಪೊಲೀಸ್​ನವರು ಬಂದು ಕಾರನ್ನು ರಸ್ತೆಯ ಪಕ್ಕಕ್ಕೆ ಹಾಕುವಂತೆ ಸೂಚಿಸಿದರು.

ಇದನ್ನೂ ಓದಿ: Assam Flood: ಅಸ್ಸಾಂ ಪ್ರವಾಹಕ್ಕೆ 76 ಬಲಿ; ಊರಿಗೆ ಊರೇ ಮುಳುಗಡೆ, 50ಕ್ಕೂ ಹೆಚ್ಚು ಕಾಡುಪ್ರಾಣಿಗಳು ಜಲಸಮಾಧಿ

ಆದರೆ, ಟ್ರಾಫಿಕ್​ನವರ ಮಾತನ್ನು ಕೇಳಿಸಿಕೊಳ್ಳದ ಪೊಲೀಸ್​ಗೆ ಫೋನ್ ಮಾಡಿ ತನ್ನ ಗಂಡನನ್ನು ಬಂಧಿಸಲು ಹೇಳುವಂತೆ ಕಿರುಚಾಡಿದಳು. ಅಲ್ಲದೆ, ರೇಂಜ್ ರೋವರ್ ಕಾರನ್ನು ಹತ್ತಿ ಗ್ಲಾಸ್​ ಮೇಲಿಂದಲೇ ಗಂಡನ ಪ್ರೇಯಸಿಗೆ ಚಪ್ಪಲಿಯೇಟೂ ಕೊಟ್ಟಳು! ಕಾರಿನ ಬಾನೆಟ್ ಮೇಲೆ ಹತ್ತಿ ಜಗಳವಾಡಿದ ಮಹಿಳೆಯ ವಿಡಿಯೋ ಈಗ ವೈರಲ್ ಆಗಿದೆ. ಹೆಂಡತಿಯ ಅವಾಂತರವನ್ನು ನೋಡಲಾಗದೆ ಗಂಡ ಕೆಳಗಿಳಿದು ಬಂದು ಆಕೆಯೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ ಕೋಪದಿಂದ ಆಕೆ ಗಂಡನನ್ನು ಕಾಲಿನಿಂದ ಒದ್ದ ಘಟನೆಯೂ ನಡೆಯಿತು.



ಗಂಡ-ಹೆಂಡತಿ ಇಬ್ಬರೂ ರಸ್ತೆಯಲ್ಲಿ ನಿಂತು ಜಗಳವಾಡುತ್ತಿರುವಾಗ ಕಾರಿನಲ್ಲಿದ್ದ ಆತನ ಪ್ರೇಯಸಿ ತಾನೇ ಡ್ರೈವಿಂಗ್ ಸೀಟಿನಲ್ಲಿ ಕುಳಿತು ಕಾರು ಓಡಿಸಿಕೊಂಡು ಹೋಗಿ ಎಸ್ಕೇಪ್ ಆಗಲು ಪ್ರಯತ್ನಿಸಿದ ಘಟನೆಯೂ ನಡೆಯಿತು. ತಕ್ಷಣ ಕಾರಿನ ಹಿಂದೆ ಓಡಿದ ಮಹಿಳೆ ಆಕೆಯನ್ನು ತಡೆದು, ಕಾರಿನ ಕಿಟಕಿಯಿಂದಲೇ ಆಕೆಯ ಮೇಲೆ ಹಲ್ಲೆ ನಡೆಸಿದಳು. ಇದರಿಂದ ತುಸು ಹೊತ್ತು ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ನಡುರಸ್ತೆಯಲ್ಲಿ ಅವಾಂತರ ಸೃಷ್ಟಿಸಿದ ಮಹಿಳೆಗೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.
Published by: Sushma Chakre
First published: July 14, 2020, 10:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories