HOME » NEWS » National-international » VIRAL VIDEO WHY CHACHA THE CHAAT VENDOR FROM BAGHPAT BECAME NEW MEME STAR AFTER VIRAL VIDEO LEAK SCT

Viral Video: ಗ್ರಾಹಕರಿಗಾಗಿ ಸಿನಿಮಾ ಸ್ಟೈಲಲ್ಲಿ ಫೈಟಿಂಗ್; ಚಾಟ್ ಅಂಗಡಿಯ ಚಾಚಾ ವಿಡಿಯೋ ಟ್ರೋಲ್ ಆಗಿದ್ದೇಕೆ?

ಈ ವಿಡಿಯೋ ನೋಡಿದ ಹಲವರು ಇದು 90ರ ದಶಕದ ಸಿನಿಮಾಗಳ ಸೀನ್ ಅನ್ನು ನೆನಪಿಸುತ್ತಿದೆ ಎಂದು ಮೇಮ್ ಮಾಡಿದ್ದಾರೆ.

Sushma Chakre | news18-kannada
Updated:February 24, 2021, 4:05 PM IST
Viral Video: ಗ್ರಾಹಕರಿಗಾಗಿ ಸಿನಿಮಾ ಸ್ಟೈಲಲ್ಲಿ ಫೈಟಿಂಗ್; ಚಾಟ್ ಅಂಗಡಿಯ ಚಾಚಾ ವಿಡಿಯೋ ಟ್ರೋಲ್ ಆಗಿದ್ದೇಕೆ?
ಹೊಡೆದಾಟದ ವಿಡಿಯೋ ವೈರಲ್
  • Share this:
ಉತ್ತರ ಪ್ರದೇಶದಲ್ಲಿ ತಮ್ಮ ಚಾಟ್ ಅಂಗಡಿಗೆ ಬಂದ ಗ್ರಾಹಕರಿಗಾಗಿ ಎರಡು ಅಂಗಡಿಗಳ ಗುಂಪಿನ ನಡುವೆ ನಡೆದ ಗಲಾಟೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಉತ್ತರ ಪ್ರದೇಶದ ಬಾಗ್​ಪಟ್​ನಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋಗೆ ಹಿನ್ನೆಲೆ ಸಂಗೀತ ಹಾಕಿ ಟ್ವಿಟ್ಟರ್​ನಲ್ಲಿ ಟ್ರೋಲ್ ಮಾಡಲಾಗುತ್ತಿದೆ. 

ಹರೇಂದ್ರ ಎಂಬ ವ್ಯಕ್ತಿಯ ಕೆಂಚು ಕೂದಲು ಸೋಷಿಯಲ್ ಮೀಡಿಯಾದ ಗಮನ ಸೆಳೆದಿದ್ದು, ಅವರನ್ನು ಚಾಚಾ ಎಂದು ಕರೆದು, ಹಲವರು ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹಲವು ಜನರು ಕೋಲು ಮತ್ತು ಕಬ್ಬಿಣದ ರಾಡುಗಳನ್ನು ಹಿಡಿದುಕೊಂಡು ಹೊಡೆದಾಡುತ್ತಿದ್ದಾರೆ. ಆ ರಸ್ತೆಯಲ್ಲಿ ಓಡಾಡುವವರು ಅಚ್ಚರಿಯಿಂದ ಅದನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಈ ವಿಡಿಯೋ ನೋಡಿದ ಹಲವರು ಇದು 90ರ ದಶಕದ ಸಿನಿಮಾಗಳ ಸೀನ್ ಅನ್ನು ನೆನಪಿಸುತ್ತಿದೆ ಎಂದು ಮೇಮ್ ಮಾಡಿದ್ದಾರೆ.






ಈ ವಿಡಿಯೋದಲ್ಲಿ ಹೊಡೆದಾಡುತ್ತಿರುವ ಕೆಂಚು ಕೂದಲಿನ ವ್ಯಕ್ತಿ ಚಾಚಾ ಸೋಷಿಯಲ್ ಮೀಡಿಯಾದಲ್ಲಿ ಬಹಳ ಟ್ರೋಲ್ ಆಗುತ್ತಿದ್ದು, ಮ್ಯೂಸಿಕ್ ಅಳವಡಿಸಿ ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ. ಈ ಹೊಡೆದಾಟದ ವಿಡಿಯೋ ವೈರಲ್ ಆಗುತ್ತಿದ್ದಂತೆ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ.



ಅಷ್ಟಕ್ಕೂ ಆಗಿದ್ದೇನು?:
ಎರಡು ಚಾಟ್ ಶಾಪ್​ಗಳ ನಡುವೆ ಗಲಾಟೆ ನಡೆದಿದ್ದು, ಹರೇಂದ್ರ ಬಾಗ್​ಪಟ್​ನಲ್ಲಿ 40 ವರ್ಷಗಳಿಂದಲೂ ಚಾಟ್ ಅಂಗಡಿ ನಡೆಸುತ್ತಿದ್ದಾರೆ. ತನ್ನ ಅಂಗಡಿಗೆ ಬಂದ ಗ್ರಾಹಕರನ್ನು ಪಕ್ಕದ ಅಂಗಡಿಯವನು ತನ್ನತ್ತ ಸೆಳೆಯುತ್ತಿದ್ದಾನೆ ಎಂದು ಕೋಪದಿಂದ ಎರಡೂ ಅಂಗಡಿಯವರ ನಡುವೆ ಹೊಡೆದಾಟ ಶುರುವಾಗಿದೆ. ತನ್ನ ಅಂಗಡಿಯ ಚಾಟ್​ ಮಾರಾಟವಾಗುವುದಿಲ್ಲ ಎಂಬ ಕೋಪದಿಂದ ಚಾಚಾ ಹರೇಂದ್ರ ಕಬ್ಬಿಣದ ರಾಡಿನಿಂದ ಪಕ್ಕದ ಅಂಗಡಿಯವನಿಗೆ ಹೊಡೆದಿದ್ದಾನೆ.





ಈ ಹೊಡೆದಾಟದ ವಿಡಿಯೋ ಲಕ್ಷಾಂತರ ಜನರಿಂದ ವೀಕ್ಷಿಸಲ್ಪಟ್ಟಿದೆ. ಈ ಹೊಡೆದಾಟ ನೋಡಿದ ಆ ಚಾಟ್​ ಅಂಗಡಿಗಳ ಗ್ರಾಹಕರು ಕಂಗಾಲಾಗಿದ್ದಾರೆ. ಚಾಟ್​ ಮತ್ತು ಚಾಚಾ ಎಂಬ ಟ್ಯಾಗ್​ನಡಿ ಹಲವರು ಟ್ವಿಟ್ಟಿಗರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
Published by: Sushma Chakre
First published: February 24, 2021, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories