Viral Video: ರಾಣಿ ಜೇನುನೊಣ ಮೊಟ್ಟೆ ಇಡುವ ಪ್ರಕ್ರಿಯೆಯನ್ನು ನೀವು ನೋಡಿದ್ದೀರಾ?

ಇತ್ತೀಚೆಗೆ ಆಕರ್ಷಕವಾಗಿ ಸೆರೆಹಿಡಿದ ವಿಡಿಯೋದಲ್ಲಿ ರಾಣಿ ಜೇನುನೊಣ ಮೊಟ್ಟೆ ಇಡುವ ಪ್ರಕ್ರಿಯೆ ನೋಡಬಹುದಾಗಿದ್ದು, ಇತರೆ ಜೇನುನೊಣಗಳು ಅವಳನ್ನು ಸುತ್ತುವರೆದಿರುವಂತಹ ದೃಶ್ಯ ವಿಡಿಯೋದಲ್ಲಿ ಕಾಣಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾವು ಎಷ್ಟೇ ತಂತ್ರಜ್ಞಾನದಲ್ಲಿ ಮುಂದುವರೆದಿದ್ದರೂ ನಮ್ಮ ಸುತ್ತ ಮುತ್ತಲಿನಲ್ಲಿರುವಂತಹ ಎಷ್ಟೋ ಚಿಕ್ಕ ಪುಟ್ಟ ವಿಷಯಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ.ಉದಾಹರಣೆಗೆ ನಮ್ಮ ಜೊತೆಯಲ್ಲಿಯೇ ಪರಿಸರದಲ್ಲಿ ಬದುಕುತ್ತಿರುವಂತಹ ಸಣ್ಣ ಸಣ್ಣ ಜೀವಿಗಳಾದಂತಹ ಚಿಟ್ಟೆಗಳು, ಪಕ್ಷಿಗಳು ಮತ್ತು ಇನ್ನಿತರೆ ಪ್ರಾಣಿಗಳು ಹೇಗೆ ಮರಿಯನ್ನು ಹಾಕುತ್ತವೆ, ಹೇಗೆ ಮೊಟ್ಟೆಗಳನ್ನು ಇಡುತ್ತವೆ ಮತ್ತು ಅವುಗಳು ತಮ್ಮ ಆಹಾರವನ್ನು ಹೇಗೆ ಹುಡುಕುತ್ತವೆ ಎನ್ನುವುದರ ಬಗ್ಗೆ ಅನೇಕ ಮಾಹಿತಿಯ ಅರಿವು ನಮಗಿರುವುದಿಲ್ಲ.ಆದರೆ ಇವುಗಳ ಜೀವನ ಪ್ರಕ್ರಿಯೆಗಳ ವಿಡಿಯೋ ತುಣುಕುಗಳನ್ನು ಯಾರಾದರೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರೆ ಅವುಗಳನ್ನು ನಾವು ತುಂಬಾ ಆಸಕ್ತಿಯಿಂದ ಮತ್ತು ಕುತೂಹಲದಿಂದ ನೋಡುತ್ತೇವೆ. ಇಲ್ಲಿಯೂ ಒಂದು ವಿಡಿಯೋದಲ್ಲಿ ಹೆಣ್ಣು ಜೇನುನೊಣ ಹೇಗೆ ಮೊಟ್ಟೆ ಇಡುತ್ತದೆ ಎನ್ನುವುದರ ಬಗ್ಗೆ ತೋರಿಸಲಾಗಿದ್ದು, ವಿಡಿಯೋ ನೋಡುಗರನ್ನು ತನ್ನೆಡೆಗೆ ಸೆಳೆದುಕೊಂಡು ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಜುಲೈ 29ರಂದು ಇನ್‌ಸ್ಟಾಗ್ರಾಂ ಖಾತೆಯ 'ಟೆಕ್ಸಾಸ್‌ಬೀವರ್ಕ್ಸ್' ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಜೇನುಸಾಕಣೆದಾರ ಎರಿಕಾ ಥಾಂಪ್ಸನ್ ಈಪೇಜ್‌ ನೋಡಿಕೊಳ್ಳುತ್ತಿದ್ದು, ಅವರು ಜೇನುನೊಣಗಳ ವಿಶಿಷ್ಟವಾದ ಚಿತ್ರಗಳು, ವಿಡಿಯೋಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಾರೆ.




ಜೇನುನೊಣಗಳ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನು ಸಹ ಅವರು ತಮ್ಮ ಪೇಜ್‌ನಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಆಕರ್ಷಕವಾಗಿ ಸೆರೆಹಿಡಿದ ವಿಡಿಯೋದಲ್ಲಿ ರಾಣಿ ಜೇನುನೊಣ ಮೊಟ್ಟೆ ಇಡುವ ಪ್ರಕ್ರಿಯೆ ನೋಡಬಹುದಾಗಿದ್ದು, ಇತರೆ ಜೇನುನೊಣಗಳು ಅವಳನ್ನು ಸುತ್ತುವರೆದಿರುವಂತಹ ದೃಶ್ಯ ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: Bigg Boss Kannada 8: ಕೊನೆಗೂ ಮನದ ಮಾತು ಹೇಳಿಕೊಂಡ ದಿವ್ಯಾ ಸುರೇಶ್: ಮೂಕವಿಸ್ಮಿತರಾದ ಮಂಜು ಪಾವಗಡ..!

ವಿಡಿಯೋ ತುಣುಕಿನ ಉದ್ದಕ್ಕೂ ಹಂಚಿಕೊಂಡಿರುವ ಶೀರ್ಷಿಕೆಯು ಈ ಜೀವಿಗಳ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ನೀಡಿದೆ ಮತ್ತು ಹೇಗೆ ರಾಣಿ ಜೇನುನೊಣ ಗೂಡಿನ ಅಗತ್ಯತೆ ಮತ್ತು ಆರೋಗ್ಯವನ್ನು ನೋಡಿಕೊಂಡು ಪ್ರತಿ ದಿನ ಇಡುವಂತಹ ಮೊಟ್ಟೆಗಳ ಸಂಖ್ಯೆ ಬದಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ನೀವು ಎಂದಾದರೂ ರಾಣಿ ಜೇನುನೊಣವನ್ನು ಬೇರೆ ಜೇನುನೊಣಗಳ ಪಕ್ಕದಲ್ಲಿ ನೋಡಲು ಬಯಸಿದ್ದಲ್ಲಿ, ಪ್ರತಿಯೊಂದು ವಿಧದ ಜೇನುನೊಣಗಳನ್ನು ಒಂದಕ್ಕೊಂದು ಹೋಲಿಸಲು ನಿಮಗೆ ಉತ್ತಮವಾದ ಅವಕಾಶವಾಗಿದೆ. ಇದರಲ್ಲಿ ಕೇವಲ ಒಂದು ಗಂಡು ಜೇನುನೊಣವಿದೆ, ರಾಣಿ ಜೇನುನೊಣ ಮೊಟ್ಟೆಯಿಡುವಾಗ ಇತರೆ ಎಲ್ಲ ಜೇನುನೊಣಗಳು ಸುತ್ತುವರೆದಿರುತ್ತವೆ ಎಂದು ವಿಡಿಯೋ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: Happy Birthday Ashika Ranganth: ಸಿಂಪಲ್ಲಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಆಶಿಕಾ ರಂಗನಾಥ್​

ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಾಗಿನಿಂದಲೂ ಇದುವರೆಗೆ ಸುಮಾರು 1.70 ಲಕ್ಷ ಜನರು ವೀಕ್ಷಿಸಿದ್ದಾರೆ ಮತ್ತು ಬಳಕೆದಾರರಿಂದ ಹಲವಾರು ಪ್ರತಿಕ್ರಿಯೆಗಳು ಸಹ ಬಂದಿವೆ. ಜೇನುನೊಣಗಳ ಬಗ್ಗೆ ಈ ಆಕರ್ಷಕ ವಿಡಿಯೋ ಮತ್ತು ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಜನರು ಟೆಕ್ಸಾಸ್‌ಬೀವರ್ಕ್ಸ್ ಪುಟಕ್ಕೆ ಧನ್ಯವಾದವನ್ನು ಹೇಳಿದ್ದಾರೆ.


"ವಾಹ್ ಈ ವಿಡಿಯೋ ತುಂಬಾ ಅದ್ಭುತವಾಗಿದೆ, ನಮಗೆ ಜೇನುನೊಣಗಳ ಬಗ್ಗೆ ತುಂಬಾ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ಬಳಕೆದಾರರು ತಮ್ಮ ಪ್ರತಿಕ್ರಿಯೆಯಲ್ಲಿ ಬರೆದಿದ್ದಾರೆ. ಇದರ ಮಧ್ಯೆ ಕೆಲವು ಬಳಕೆದಾರರು ರಾಣಿ ಜೇನುನೊಣವು ಮೊಟ್ಟೆ ಇಡುವ ಪ್ರಕ್ರಿಯೆ ನೋಡಿ ರಾಣಿ ಜೇನುನೊಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
First published: