ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ ಅಪಘಾತಕ್ಕಿಡಾಗುತ್ತಿದ್ದ ಚಾಲಕನನ್ನು ರಕ್ಷಿಸಿದ ಟೆಸ್ಲಾದ ಆಟೋ ಪೈಲಟ್ ವ್ಯವಸ್ಥೆ

ಕಳೆದ ಕೆಲವು ತಿಂಗಳುಗಳಲ್ಲಿ ಟೆಸ್ಲಾ ಕಾರುಗಳ ಆಟೋ ಪೈಲಟ್ ಫೀಚರ್ ನಿಜಕ್ಕೂ ಜೀವ ಉಳಿಸುತ್ತವೆ ಎಂದು ಕೆಲವೊಂದು ವಿಡಿಯೋಗಳಿಂದ ಕಂಡುಬಂದಿದೆ.

ಟೆಸ್ಲಾ ಕಾರು

ಟೆಸ್ಲಾ ಕಾರು

  • Share this:
ಟೆಸ್ಲಾ ಕಾರುಗಳು ಸ್ವಯಂಚಾಲಿತವಾಗಿ ಓಡಬಲ್ಲವು. ಆದರೆ ಆ ಕ್ರಿಯೆಗೆ ಚಾಲನೆ ನೀಡಲು ಚಾಲಕರ ಸೀಟಿನಲ್ಲಿ ಒಬ್ಬರ ಅಗತ್ಯವಿರುತ್ತದೆ. ಏಕೆಂದರೆ ಆಟೋಪೈಲಟ್ ವ್ಯವಸ್ಥೆ ಅಸಮರ್ಪಕವಾದಾಗ ಚಾಲಕ ಕಾರು ಚಲಾಯಿಸಬಹುದು. ಟೆಸ್ಲಾ ಕಂಪೆನಿಯ ಕಾರುಗಳ ಆಟೋ ಪೈಲೆಟ್ ವ್ಯವಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಟ್ರೆಂಡ್ ಆಗುತ್ತಿದೆ. ಚಲಿಸುತ್ತಿರುವ ಟೆಸ್ಲಾ ಕಾರುಗಳಲ್ಲಿ ಚಾಲಕ ಹಿಂದಿನ ಸೀಟ್ ಅಥವಾ ಪ್ರಯಾಣಿಕರ ಸೀಟ್‍ನಲ್ಲಿ ಕುಳಿತಿರುವ ವಿಡಿಯೋ ಅಥವಾ ಪೋಟೋಗಳನ್ನು ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ, ಚಾಲಕರ ಸೀಟಿನಲ್ಲಿ ಯಾರಾದರು ಕುಳಿತಿದ್ದಾಗ ಮಾತ್ರ ಟೆಸ್ಲಾ ಕಾರುಗಳಲ್ಲಿ ಆಟೋ ಪೈಲೆಟ್ ಮೋಡ್ ಬಳಸಬಹುದು ಎಂದು ಶಿಫಾರಸ್ಸು ಮಾಡಲಾಗುತ್ತದೆ. ಕಂಪೆನಿಯ ವೆಬ್‍ಸೈಟ್‍ನಲ್ಲಿ ‘ಪ್ರಸ್ತುತ ಆಟೋಪೈಲಟ್ ಫೀಚರ್‌ಗೆ ಚಾಲಕನ ಮೇಲ್ವಿಚಾರಣೆಯ ಅಗತ್ಯ ಇರುತ್ತದೆ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಚಾಲಕರಿಲ್ಲದ ಟೆಸ್ಲಾ ಕಾರುಗಳ ಕೆಲವು ಫೋಟೋ ಮತ್ತು ವಿಡಿಯೋಗಳು ಕಾರಿನ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿಸಿವೆ. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಟೆಸ್ಲಾ ಕಾರುಗಳ ಆಟೋ ಪೈಲಟ್ ಫೀಚರ್ ನಿಜಕ್ಕೂ ಜೀವ ಉಳಿಸುತ್ತವೆ ಎಂದು ಕೆಲವೊಂದು ವಿಡಿಯೋಗಳಿಂದ ಕಂಡುಬಂದಿದೆ.ಇತ್ತೀಚೆಗೆ ಟೆಸ್ಲಾ ಕಾರಿನ ಆಧುನಿಕ ತಂತ್ರಜ್ಞಾನ, ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಾ ನಿಸ್ತೇಜನಾಗಿದ್ದ ಚಾಲಕನೊಬ್ಬನ ಜೀವ ಉಳಿಸಿದೆ.

ಇದನ್ನೂ ಓದಿ: Bigg Boss Winner: ಬಿಗ್​ ಬಾಸ್ ಕನ್ನಡ ಸೀಸನ್​ 8ರ ವಿನ್ನರ್ ಇವರೇ ನೋಡಿ..!

24 ವರ್ಷದ ನಾರ್ವೆಯ ವ್ಯಕ್ತಿಯೊಬ್ಬ ಅಮಲೇರಿದ ಸ್ಥಿತಿಯಲ್ಲಿ ಟೆಸ್ಲಾ ಕಾರು ಚಾಲನೆ ಮಾಡುತ್ತಿದ್ದ. ಅವನು ಪ್ರಜ್ಞಾಹೀನನಾದ ಬಳಿಕ, ಕಾರಿನ ಆಟೋ ಪೈಲೆಟ್ ವ್ಯವಸ್ಥೆ ಮಾರಣಾಂತಿಕ ಅಪಘಾತದಿಂದ ರಕ್ಷಿಸಿದೆ. ಮಾಡೆಲ್ ಎಸ್ ಎಂದು ಗುರುತಿಸಲಾಗಿರುವ ಆ ಕಾರು, ಲೇನ್‍ನಲ್ಲಿಯೇ ಉಳಿದುಕೊಂಡಿದೆ ಮತ್ತು ಬೇರೆ ಕಾರುಗಳಿಗೆ ಢಿಕ್ಕಿ ಹೊಡೆದಿಲ್ಲ ಎಂದು ವರದಿಗಳು ತಿಳಿಸಿವೆ.

ಚಾಲಕ ಸ್ಪಂದಿಸದಿರುವುದನ್ನು ಕಂಡುಕೊಂಡ ಕಾರ್ ಸಂಪೂರ್ಣವಾಗಿ ಸ್ಥಬ್ಧಗೊಂಡಿತು. ಸ್ವಯಂ ಆಗಿ ಅಪಾಯದ ದೀಪಗಳನ್ನು ಹೊತ್ತಿಸಿ, ತುರ್ತು ಸೇವೆಯನ್ನು ಎಚ್ಚರಿಸಿತು. ಅದೇ ದಾರಿಯಲ್ಲಿ ಸಾಗುತ್ತಿದ್ದ ಕಾರಿನ ಇನ್ನೊಬ್ಬ ಚಾಲಕ ಈ ದೃಶ್ಯವನ್ನು ಚಿತ್ರೀಕರಿಸಿದ್ದು, ಅದು ಚಾಲಕ ಡ್ರೈವಿಂಗ್ ಸೀಟಿನಲ್ಲಿ ನಿದ್ರಿಸುತ್ತಿರುವದನ್ನು ತೋರಿಸುತ್ತದೆ.

“05.40ಕ್ಕೆ ಕಾರು ಸುರಂಗದ ಬಳಿ ನಿಂತಿತು. 24 ವರ್ಷದ ಚಾಲಕ ಡ್ರೈವಿಂಗ್ ಸೀಟಿನಲ್ಲಿ ನಿದ್ರಿಸಿದ್ದ. ಅವನು ಕುಡಿದಿದ್ದ, ಆದರೂ ಕಾರು ಓಡಿಸುತ್ತಿದ್ದುದ್ದನ್ನು ಒಪ್ಪಿಕೊಳ್ಳಲು ಮೊಂಡುತನ ತೋರಿಸುತ್ತಿದ್ದಾನೆ. ಅವನ ಕಾರಿನ ವಿಡಿಯೋ ಇದ್ದರೂ, ಅಗತ್ಯ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಶುಕ್ರವಾರ ಅಲ್ಲಿನ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಪೇಜ್‍ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Shwetha Srivatsav: ಫೋಟೋಶೂಟ್​ನಲ್ಲಿ ಮಗಳ ಜೊತೆ ಮಿಂಚಿದ ಶ್ವೇತಾ ಶ್ರೀವಾತ್ಸವ

2016ರಲ್ಲಿ , ಒಂದು ಟೆಸ್ಲಾ ಕಾರು, ತನ್ನ ಆಟೋ ಪೈಲೆಟ್ ವ್ಯವಸ್ಥೆಯ ಸಹಾಯದಿಂದ ನಿಖರವಾಗಿ ರಸ್ತೆ ಅಪಘಾತವನ್ನು ಊಹಿಸಿತ್ತು. ಆ ಪ್ರಕರಣದ ವಿಡಿಯೋ ವೈರಲ್ ಆಗಿತ್ತು. ಕೆಲವೇ ಮೀಟರ್ ದೂರದಲ್ಲಿ ನಡೆದ ಘರ್ಷಣೆಯಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ, ಕಾರು ಸ್ವಯಂ ಚಾಲಿತವಾಗಿ ರಸ್ತೆಯ ಮಧ್ಯದಲ್ಲೇ ನಿಂತಿದ್ದು ಅದರಲ್ಲಿ ಕಂಡು ಬಂದಿತ್ತು.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: