HOME » NEWS » National-international » VIRAL VIDEO SHOWS WW II ERA AIRCRAFT CRASH LANDING IN FLORIDA OCEAN STG MAK

ಏರ್‌ ಶೋ ತಾಲೀಮಿನ ವೇಳೆ ಸಾಗರದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ 2ನೇ ಮಹಾಯುದ್ಧ ಕಾಲದ ವಿಮಾನ: ವಿಡಿಯೋ ವೈರಲ್

ಫೆಡರಲ್ ವಿಮಾನಯಾನ ಆಡಳಿತ ಮಂಡಳಿಯು ಈ ಘಟನೆಯ ತನಿಖೆ ಕೈಗೊಂಡಿದ್ದು, ಘಟನಾ ಸ್ಥಳದ ಪರಿಶೀಲನೆ ನಡೆಸಿದ ಬಳಿಕ ಘಟನೆಯ ಸಮರ್ಪಕ ಮಾಹಿತಿಯನ್ನು ತಿಳಿಸಲಾಗುವುದು ಎಂದು ಹೇಳಿದರು. 

news18-kannada
Updated:April 21, 2021, 7:05 AM IST
ಏರ್‌ ಶೋ ತಾಲೀಮಿನ ವೇಳೆ ಸಾಗರದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ 2ನೇ ಮಹಾಯುದ್ಧ ಕಾಲದ ವಿಮಾನ: ವಿಡಿಯೋ ವೈರಲ್
ವೈರಲ್​ ಚಿತ್ರ.
  • Share this:
ಎರಡನೇ ಮಹಾಯುದ್ಧದ ಕಾಲದ ವಿಮಾನವು ಶನಿವಾರ ಮಧ್ಯಾಹ್ನ ಅಮೆರಿಕದ ಫ್ಲೋರಿಡಾದ ಸಾಗರದಲ್ಲಿ ಎಂಜಿನ್ ವೈಫಲ್ಯ ಕಾರಣ ತುರ್ತು ಲ್ಯಾಂಡಿಂಗ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಮಾನವು ಕೋಕೋ ಏರ್‌ ಶೋದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಕೋಕೋ ಸಮುದ್ರದಲ್ಲಿ ಕೈಗೊಂಡ ತಾಲೀಮಿನ ವೇಳೆ ಈ ಘಟನೆ ಸಂಭವಿಸಿದೆ. ಈಗಾಗಲೇ ಸಮುದ್ರದಲ್ಲಿ ಲ್ಯಾಂಡ್‌ ಆಗಿರುವ ವಿಮಾನವನ್ನು ತೆಗೆಯುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಈ ವಿಮಾನವನ್ನು ಟಿಬಿಎಮ್ ಅವೆಂಜರ್ ಎಂದು ತಿಳಿದು ಬಂದಿದ್ದು, ನಿಧಾನವಾಗಿ ವಿಮಾನವನ್ನು ಇಳಿಸುವ ವೇಳೆ ಈ ಅವಘಡ ನಡೆದಿದೆ. ಇದರಲ್ಲಿ ಒಬ್ಬರೆ ಪೈಲಟ್ ಇದ್ದರು ಎಂದು ತಿಳಿದು ಬಂದಿದೆ. ಟಿಬಿಎಮ್ ಅವೆಂಜರ್‌ನಲ್ಲಿದ್ದ ಪೈಲಟ್‍ಗೆ ಯಾವುದೇ ತೊಂದರೆಯಾಗಿಲ್ಲ.

ವಿಮಾನ ಚಲಾಯಿಸುತ್ತಿದ್ದ ಪೈಲಟ್‍ಗೆ ಎಂಜಿನ್‍ನಲ್ಲಿ ತೊಂದರೆಯಿರುವುದನ್ನು ಅರಿತು ತಕ್ಷಣವೇ ಹತ್ತಿರದಲ್ಲೇ ಇದ್ದ ಪಾಟ್ರಿಕ್ ಸ್ಪೇಸ್ ಫೋರ್ಸ್ ಬೇಸ್ ಮೇಲೆ ಇಳಿಸಲು ಪ್ರಯತ್ನಿಸಿದ್ದಾನೆ. ನಂತರ ಇದು ಸಾಧ್ಯವಾಗದು ಎಂದು ಕಟ್ಟಡಗಳು, ಫ್ಲೋರಿಡಾ ಸ್ಟೇಟ್ ರೋಡ್ ಎ 1 ಮೇಲೆ ಇಳಿಸಲು ತಪ್ಪಿಸಲು ಹೋಗಿ ನೀರಿನ ಮೇಲೆ ಇಳಿಸುವಷ್ಟರಲ್ಲಿ ಈ ಅವಘಡ ನಡೆಯಿತು ಎಂದು ಕೋಕೋ ಏರ್‌ ಶೋ ವಕ್ತಾರ ಕ್ರಿಸ್ ದಿರಾಟೋ ಮಾಹಿತಿ ನೀಡಿದರು.  ಕೋಕೋ ಬೀಚ್ ಏರ್‌ ಶೋ ವೆಬ್‍ಸೈಟ್ ಮಾಹಿತಿ ಪ್ರಕಾರ, ಅಮೆರಿಕ ವಾಯುಯಾನವು 1945 ಟಿಬಿಎಮ್ ಅವೆಂಜರ್‌ ಅನ್ನು ಎರಡನೇ ಮಹಾಯುದ್ಧದ ವೇಳೆ ಬಳಸಿಕೊಂಡಿತ್ತು. ತದನಂತರ ಈ ವಿಮಾನವನ್ನು ಒಂದೆಡೆ ಪುನರ್‌ ಸ್ಥಾಪಿಸಲಾಗಿತ್ತು.

ಈ ಏರ್‌ ಶೋಗೆ  ಬಳಸುವ ಸಲುವಾಗಿ ವಿಮಾನವನ್ನು ತರಿಸಿಕೊಳ್ಳಲಾಯಿತು. ಇನ್ನು 1956 ಮತ್ತು 64 ರ ಸಂದರ್ಭದಲ್ಲಿ ಅಮೆರಿಕ ವಾಯುಯಾನದಿಂದ ನಿವೃತ್ತಿ ಹೊಂದಿದ ನಂತರ ಅಮೆರಿಕವು ಕ್ಯಾಲಿಫೋರ್ನಿಯಾದಲ್ಲಿ ಫಾರೆಸ್ಟರಿ ಸೇವೆಗೆ ಬಳಸಿಕೊಂಡಿತ್ತು. ಅಂದರೆ ಸುಮಾರು 1940 ರ ನಂತರ 18 ವರ್ಷಗಳ ಕಾಲ ಒಂದೆಡೆ ಇರಿಸಲಾಗಿತ್ತು. ಕಳೆದ ಜನವರಿಯಲ್ಲಿ ಅಷ್ಟೇ ಇದನ್ನು ಪುನಃ ಬಳಸಲು ಶುರುಮಾಡಿತ್ತು ಎಂದು ಹೇಳಿದೆ.

ಈ ಬಗ್ಗೆ ತಿಳಿಸಿದ ವೇಲಿಯಂಟ್ ಏರ್ ಕಮಾಂಡ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ಇಂಜಿನ್ ವೈಫಲ್ಯದಿಂದ ನೀರಿನ ಮೇಲೆ ವಿಮಾನವನ್ನು ಇಳಿಸಬೇಕಾಯಿತು. ಅದೃಷ್ಟಾವಶಾತ್ ಪೈಲಟ್‍ಗೆ ತೊಂದರೆಯಾಗಿಲ್ಲ. ಆದರೆ ವಿಷಾದಕರದ ಸುದ್ದಿ ಎಂದರೆ ಇನ್ನು ವಿಮಾನವನ್ನು ಪುನಃ ರೆಡಿ ಮಾಡಲು ಸುಮಾರು ವರ್ಷಗಳೇ ಬೇಕಾಗುತ್ತದೆ ಎಂದು ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: BS Yeddyurappa: ಕೋವಿಡ್​ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಜಮೀನು ಒದಗಿಸಿ; ಯಡಿಯೂರಪ್ಪ ಆದೇಶ!

ಫೆಡರಲ್ ವಿಮಾನಯಾನ ಆಡಳಿತ ಮಂಡಳಿಯು ಈ ಘಟನೆಯ ತನಿಖೆ ಕೈಗೊಂಡಿದ್ದು, ಘಟನಾ ಸ್ಥಳದ ಪರಿಶೀಲನೆ ನಡೆಸಿದ ಬಳಿಕ ಘಟನೆಯ ಸಮರ್ಪಕ ಮಾಹಿತಿಯನ್ನು ತಿಳಿಸಲಾಗುವುದು ಎಂದು ಹೇಳಿದರು.  ಈಗಾಗಲೇ ರಕ್ಷಣಾ ಸಮಿತಿಯು ನೀರಿನಲ್ಲಿ ಮುಳುಗಿರುವ ವಿಮಾನದ ಎರಡು ರೆಕ್ಕೆಗಳನ್ನು ಸಮುದ್ರದಿಂದ ಹೊರ ತೆಗೆದಿದೆ ಎಂದು  ಏರ್‌ ಶೋ ವಕ್ತಾರ ಕ್ರಿಸ್ ದಿರಾಟೋ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ 46 ಸೆಕೆಂಡ್‍ಗಳ ವಿಡಿಯೋ ವೈರಲ್‌ ಆಗಿದ್ದು, ನೆಟ್ಟಿಗರು ಪೈಲಟ್‍ನ ಸಮಯಪ್ರಜ್ಞೆ ಮೆಚ್ಚಿದ್ದಾರೆ. ಸಮುದ್ರದಲ್ಲಿದ್ದ ಜನರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿರುವುದಕ್ಕೆ ಕೊಂಡಾಡಿದ್ದಾರೆ.
Published by: MAshok Kumar
First published: April 21, 2021, 7:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories