ಚೆನ್ನೈ (ಆ. 13): ಒಂಟಿ ಮನೆಗಳಿಗೆ, ವೃದ್ಧರು ಮಾತ್ರ ಇರುವ ಮನೆಗಳಿಗೆ ಮುತ್ತಿಗೆ ಹಾಕಿ ಹಣ, ಒಡವೆಗಳನ್ನು ದೋಚಿಕೊಂಡು ಹೋಗುವ ಕಳ್ಳರ ಕಾಟ ಎಲ್ಲೆಡೆಯೂ ಇದೆ. ಕೇವಲ ಕಳ್ಳತನ ಮಾತ್ರ ಮಾಡದೆ ಮನೆಯಲ್ಲಿದ್ದವರ ಜೀವವನ್ನೂ ತೆಗೆಯುವ ವಿಕೃತ ಮನಸಿನವರು ವೃದ್ಧರು ಮತ್ತು ಒಂಟಿಯಾಗಿ ಇರುವವರ ಮನೆಗಳನ್ನೇ ಹುಡುಕುತ್ತಿರುತ್ತಾರೆ.
ಈ ರೀತಿ ಒಂಡಿ ಮನೆಯನ್ನು ಹುಡುಕುತ್ತಾ ಹೊರಟ ತಮಿಳುನಾಡಿನ ಕಳ್ಳರಿಗೆ ಕೊನೆಗೂ ಒಂದು ಮನೆ ಕಣ್ಣಿಗೆ ಬಿದ್ದಿತ್ತು. ಆ ಮನೆಯಲ್ಲಿದ್ದವರು ವಯಸ್ಸಾದ ಗಂಡ-ಹೆಂಡತಿ ಮಾತ್ರ. ಹೀಗಾಗಿ, ತಮ್ಮ ಕೆಲಸ ಇನ್ನೂ ಸುಲಭವಾಯಿತು ಎಂದು ಲೆಕ್ಕಾಚಾರ ಹಾಕಿದ ಕಳ್ಳರು ರಾತ್ರಿಯಾಗುತ್ತಿದ್ದಂತೆ ಕಾಂಪೌಂಡ್ ಹಾರಿ ಮನೆಯ ಆವರಣ ಪ್ರವೇಶಿಸಿದ್ದಾರೆ. ಆ ವೇಳೆಗೆ ಮನೆಯ ಹೊರಗೆ ಅಂಗಳದಲ್ಲಿ ಕುರ್ಚಿಯಲ್ಲಿ ಕುಳಿತು ಅಜ್ಜ ಮೊಬೈಲ್ ನೋಡುತ್ತಿದ್ದರೆ, ಅಜ್ಜಿ ಅಡುಗೆಮನೆಯಲ್ಲಿದ್ದರು.
Flood Viral Video: ಗುಜರಾತ್ ಪ್ರವಾಹದಲ್ಲಿ ಇಬ್ಬರು ಮಕ್ಕಳನ್ನು ಹೆಗಲ ಮೇಲೆ ಹೊತ್ತು ಸಾಗಿದ ಪೊಲೀಸ್ ಕಾನ್ಸ್ಟೆಬಲ್!
ಅಜ್ಜನ ಹಿಂದಿನಿಂದ ಬಂದ ಕಳ್ಳ ಟವೆಲ್ನಿಂದ ಅವರ ಕುತ್ತಿಗೆಯನ್ನು ಕಟ್ಟಿ ಸಾಯಿಸಲು ನೋಡಿದ್ದಾನೆ. ಅಷ್ಟರಲ್ಲಿ ಎಚ್ಚೆತ್ತುಕೊಂಡ ಅಜ್ಜ ಜೋರಾಗಿ ಕಿರುಚಿ ತನ್ನ ಹೆಂಡತಿಯನ್ನು ಕರೆದಿದ್ದಾರೆ. ಕೈಯಲ್ಲಿ ಮಚ್ಚು ಹಿಡಿದುಕೊಂಡು ಮನೆಯ ಹಿಂದಿನಿಂದ ಓಡಿಬಂದ ಇನ್ನೊಬ್ಬ ಕಳ್ಳನೂ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಆದರೆ, ಆ ವೇಳೆಗೆ ಮನೆಯ ಹೊರಗೆ ಓಡಿಬಂದ ಅಜ್ಜಿ ಅಲ್ಲೇ ಇದ್ದ ಚಪ್ಪಲಿಗಳನ್ನು ಎತ್ತಿ ಕಳ್ಳರತ್ತ ಬಿಸಾಡಲಾರಂಭಿಸಿದ್ದಾರೆ. ಅಂಗಳದಲ್ಲಿದ್ದ ಕುರ್ಚಿಗಳನ್ನು ಎತ್ತಿ ಹಿಡಿದು ಕಳ್ಳರಿಗೆ ಬಾರಿಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಕಳ್ಳರು ಕತ್ತಿ ಬೀಸಿದ್ದಾರೆ. ಆದರೂ ಜಗ್ಗದ ಅಜ್ಜಿ ಕುರ್ಚಿಯಿಂದಲೇ ಅವರನ್ನು ಹೊಡೆದು ಓಡಿಸಿದ್ದಾರೆ. ಅಷ್ಟರಲ್ಲಿ ಸುಧಾರಿಸಿಕೊಂಡ ಕೆಳಗೆ ಬಿದ್ದ ಅಜ್ಜ ಕೂಡ ಮೇಲೆದ್ದು ಕುರ್ಚಿ ಹಿಡಿದು ಕಳ್ಳರ ಹಿಂದೆ ಓಡಿಹೋಗಿದ್ದಾರೆ.
#TamilNadu - What a display of courage by an elderly couple! An old couple was attacked by two burglars, who had sickles/machetes with them. Despite that- the couple fought back and drove the thieves away! 👏🏻👏🏻👌🏻Incident fromTirunelveli. FIR registered. VC- @nimumurali pic.twitter.com/C3XWu708YV
— Rishika Sadam (@RishikaSadam) August 12, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ