ಕೆಲವರು ಕ್ಯಾಮೆರಾ ಕಂಡ ಕೂಡಲೆ ತಮ್ಮ ವರಸೆಯನ್ನೇ ಬದಲಿಸಿಬಿಡುತ್ತಾರೆ. ಅವರಿಗೆ ನಟನಾ ತರಬೇತಿಯೂ ಬೇಕಾಗಿಲ್ಲ. ನಿನ್ನೆಯಷ್ಟೇ ದೇಶಾದ್ಯಂತ ಗಾಂಧಿ ಜಯಂತಿ ಆಚರಿಸಲಾಗಿದೆ. ಈ ವೇಳೆ ಭಾಷಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ವಚ್ಛತಾ ಕಾರ್ಯಕ್ರಮಗಳೆಲ್ಲ ಸಾಮಾನ್ಯ. ಆದರೆ, ನಿನ್ನೆ ಸಮಾಜವಾದಿ ಪಕ್ಷದ ನಾಯಕ ಫಿರೋಜ್ ಖಾನ್ ಗಾಂಧೀಜಿಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಾತ್ಮ ಗಾಂಧೀಜಿಯ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲು ಎಸ್ಪಿ ನಾಯಕ ಫಿರೋಜ್ ಖಾನ್ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಗಾಂಧಿ ಪ್ರತಿಮೆ ಬಳಿ ನಿಂತ ಫಿರೋಜ್ ಖಾನ್ ನಮ್ಮ ಸಮಾಜದ ವಾಸ್ತವ ಸ್ಥಿತಿಯನ್ನು ಗಾಂಧೀಜಿಯ ಜೊತೆ ಹೇಳಿಕೊಂಡು ಗೊಳೋ ಎಂದು ಕಣ್ಣೀರು ಹಾಕಿದ್ದಾರೆ. ಫಿರೋಜ್ ಖಾನ್ ಕಣ್ಣೀರು ಹಾಕುತ್ತಿದ್ದಂತೆ ಅಲ್ಲಿದ್ದ ಅವರ ಬೆಂಬಲಿಗರು ಕೂಡ ಕರ್ಚೀಫ್ ಅನ್ನು ಕಣ್ಣಿಗೆ ಒತ್ತಿ ಹಿಡಿದು ಬಾರದ ಕಣ್ಣೀರನ್ನು ಬರಿಸಿಕೊಂಡು ಕಷ್ಟಪಟ್ಟು ಅಳುವ ಮೂಲಕ ತಮ್ಮ ನಾಯಕನಿಗೆ ಸಾಥ್ ನೀಡಿದ್ದಾರೆ. ಈ ವಿಡಿಯೋ ನೋಡಿದ ಟ್ವಿಟ್ಟಿಗರು ಫಿರೋಜ್ ಖಾನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಉತ್ತರಪ್ರದೇಶದ ಸಂಬಲ್ ನಗರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಫವಾರ ಚೌಕದಲ್ಲಿರುವ ಗಾಂಧೀಜಿ ಪ್ರತಿಮೆ ಬಳಿ ಬಂದ ಫಿರೋಜ್ ಖಾನ್ ಮತ್ತು ಇತರೆ ಎಸ್ಪಿ ನಾಯಕರು ಅಲ್ಲಿ ಕ್ಯಾಮೆರಾ ಕಾಣುತ್ತಿದ್ದಂತೆ ಗಾಂಧೀಜಿಯ ಅನುಪಸ್ಥಿತಿಯಲ್ಲಿ ಈ ದೇಶದಲ್ಲಿ ಏನೆಲ್ಲ ಅನಾಚಾರಗಳು ನಡೆಯುತ್ತಿವೆ. ಗಾಂಧಿಯನ್ನು ಅವರೆಲ್ಲ ಎಷ್ಟು ನೆನಪಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಹೇಳುತ್ತಾ ಭಾವುಕರಾಗಿ ಅಳತೊಡಗಿದ್ದಾರೆ.
Oscar Award Goes To SP Leader Firoz Khan In District Sambhal. 😭😂😭 pic.twitter.com/kUkXGWbBD4
— Aneeka (SANU) (@AsYouNtWish) October 2, 2019
Big Boss mein bhejo ISS RonduMal Ji ko.#BigBoss13 please give him a VIP entry in your show.
Super Drama karta Yeh Nautanki.
— Manish Mishra 🇮🇳 (@Manish23mishra) October 2, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ