ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಮಿಲಕ್ ಕೊಟ್ವಾಲಿಯ ವ್ಯಾಪ್ತಿಯ ರೌರಾ ಕಲಾನ್ ಹೆದ್ದಾರಿ ಬಳಿ ನಡೆದ ವಿವಾಹ ಸಮಾರಂಭದಲ್ಲಿ ಮಹಿಳೆಯೊಬ್ಬರು ತನ್ನ ಮಗಳ ಮದುವೆ ಸಂರ್ದಭದಲ್ಲಿ ಉಡುಗೊರೆಯಾಗಿ ನೀಡಿದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗುವಾಗ ಅಳಿಯನ ಮನೆಯವರು ಮಹಿಳೆಯನ್ನು ಸಾರ್ವಜನಿಕವಾಗಿ ನಿರ್ದಯವಾಗಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಂಪುರ ಜಿಲ್ಲೆಯ ಮಹಿಳೆಯೊಬ್ಬರು ಮೂರು ವರ್ಷಗಳ ಹಿಂದೆ ತನ್ನ ಮಗಳಿಗೆ ವಿವಾಹ ಮಾಡಿದ್ದರು. ಆದರೆ ವರ್ಷಗಳ ನಂತರ ಆಕೆಯ ಅಳಿಯ ಕ್ಯಾನ್ಸರ್ನಿಂದಾಗಿ ನಿಧನರಾದರು. ನಂತರ ತನ್ನ ಮಗಳ ಒಂಟಿತನವನ್ನು ನೋಡಲಾಗದೆ ಆಕೆ ತನ್ನ ಮಗಳಿಗೆ ಮರುವಿವಾಹ ಮಾಡಲು ಮುಂದಾದರು. ಈ ಹಿನ್ನೆಲೆ ತನ್ನ ಮಗಳ ಮದುವೆ ಸಂದರ್ಭದಲ್ಲಿ ನೀಡಿದ ಉಡುಗೊರೆಗಳನ್ನು ಮರುಪಡೆಯಲು ಹೋದಾಗ ಆಕೆಯ ಅಳಿಯನ ಮನೆಯವರು ಹೆದ್ದಾರಿ ಬಳಿ ಕರುಣಿಯಿಲ್ಲದೆ ಸಾರ್ವಜನಿಕವಾಗಿ ನಿರ್ದಯವಾಗಿ ಆಕೆಯನ್ನು ಥಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿ ಮಾಡುತ್ತಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ತನ್ನ ದುಃಖವನ್ನು ಹಂಚಿಕೊಂಡ ಮಹಿಳೆ, ಸುಮಾರು ಹತ್ತು ಜನರು ಸೇರಿಕೊಂಡು ನನ್ನನ್ನು ಹಾಗೂ ನನ್ನ ಕುಟುಂಬದ ಮೂವರು ಸದಸ್ಯರ ಮೇಲೆ ಹಲ್ಲೆ ಮಾಡಿದರು. ನನ್ನ ಮಗಳಿಗೆ ಮರು ವಿವಾಹ ಮಾಡುವ ಸಲುವಾಗಿ ನಾನು ಕೇವಲ ಉಡುಗೊರೆಯನ್ನು ಕೇಳಲು ಹೋದೆ. ಏಕೆಂದರೆ ನನ್ನ ಅಳಿಯನ ಮನೆಯವರು ಅಳಿಯನ ನಿಧನದ ನಂತರ ವಿವಾಹದ ವೇಳೆ ನೀಡಿದ ಉಡುಗೊರೆಯನ್ನು ತಮ್ಮ ಖರ್ಚಿಗೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಅವುಗಳನ್ನು ನನ್ನ ಮಗಳಿಗಾಗಿ ವಾಪಾಸ್ ತರಲು ಹೋಗಿದ್ದೆ ಎಂದಿದ್ದಾರೆ.
ನನ್ನ ಮಗಳ ಮಕ್ಕಳನ್ನು ಕೂಡ ಆಕೆಯ ಗಂಡನ ಮನೆಯವರು ನೋಡಿಕೊಳ್ಳುತ್ತಿಲ್ಲ. ಹಾಗೇ ನನ್ನ ಮಗಳ ಖರ್ಚನ್ನು ನೋಡಿಕೊಳ್ಳುವುದಿಲ್ಲ ಮತ್ತು ನನ್ನ ಮಗಳಿಗ ತುಂಬ ಹಿಂಸೆ ಕೊಡುತ್ತಾರೆ. ಊಟ, ತಿಂಡಿ ಸರಿಯಾಗಿ ನೀಡುವುದಿಲ್ಲ. ನಾನು ಕೇಳಲು ಹೋದರೆ ನನ್ನನ್ನು ಕೂಡ ನಡು ರಸ್ತೆಯಲ್ಲಿ ಹೊಡೆದರು” ಎಂದು ಮಹಿಳೆ ಆರೋಪಿಸಿದ್ದಾರೆ.
ಪೊಲೀಸರು ಈ ಪ್ರಕರಣದ ಬಗ್ಗೆ ಗಂಭೀರವಾಗಿ ಕ್ರಮವನ್ನ ಕೈಗೊಳ್ಳಬೇಕು ಮತ್ತು ಸರಿಯಾದ ತೀರ್ಪು ನೀಡಲು ಪ್ರಯತ್ನಿಸಬೇಕು ಎಂದು ವಿಡಿಯೋವನ್ನು ನೋಡಿದ ಜನರು ಹೇಳುತ್ತಿದ್ದಾರೆ. ರಸ್ತೆಯ ಮಧ್ಯದಲ್ಲಿ ಮಹಿಳೆಯನ್ನು ಹೊಡೆಯುವುದು ಸರಿಯಲ್ಲ. ಸೋಷಿಯಲ್ ಮೀಡಿಯಾದಲ್ಲಿ ಜನರಿಗೆ ಮಹಿಳೆಗೆ ಬೆಂಬಲವನ್ನು ನೀಡುತ್ತಿದ್ದಾರೆ.
ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ. ಎರಡೂ ಕುಟುಂಬದ ಸದಸ್ಯರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ಮಾಡುತ್ತಿದ್ದಾರೆ. ಈ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಮಿಲಕ್ ಕೊಟ್ವಾಲಿ ಪೊಲೀಸರು ತಿಳಿಸಿದ್ದಾರೆ. ಆದರೆ ಈವರೆಗೆ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆಯ ಮಧ್ಯದಲ್ಲಿ ಮಹಿಳೆಯರನ್ನು ಹೊಡೆಯುವುದು ಒಳ್ಳೆಯದಲ್ಲ ಮತ್ತು ಅದು ನಮ್ಮ ಸಂಸ್ಕೃತಿಯಲ್ಲ .ನಾವು ಮಹಿಳೆಯರನ್ನು ಗೌರವಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ