ಇತ್ತೀಚೆಗೆ ವಿಡಿಯೋ ವೈರಲ್ ಮಾಡಲೆಂದು ನೆಟ್ಟಿಗರು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ನಾವೂ ವೈರಲ್ ಆಗೋಣ, ಹೆಚ್ಚು ಫಾಲೋವರ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಂಪಾದನೆ ಪಡೆದುಕೊಳ್ಳೋಣ ಎಂಬುದೇ ಅವರ ಉದ್ದೇಶವಾಗಿರುತ್ತದೆ. ಇದೇ ರೀತಿ, ರಾಜಸ್ಥಾನದ ಆಳ್ವಾರ್ನ ಸರ್ಕಾರಿ ಆಸ್ಪತ್ರೆಯ ಸರ್ಜಿಕಲ್ ಐಸಿಯುನಲ್ಲಿ ನರ್ಸಿಂಗ್ ಸಿಬ್ಬಂದಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ, ಈ ಸಂಬಂಧ ಆಸ್ಪತ್ರೆ ಸಿಬ್ಬಂದಿ ವಿರುದ್ದ ತನಿಖೆಗೆ ಆದೇಶ ನೀಡಿದೆ.
ರಾಜಸ್ಥಾನದ ಆಳ್ವಾರ್ನ ಸರ್ಕಾರಿ ಆಸ್ಪತ್ರೆಯಾದ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮೂವರು ನರ್ಸ್ಗಳು ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯ ಮೇಲಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ಈ ವೈರಲ್ ವಿಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಾ ಕಾಣಿಸಿಕೊಂಡಿರುವ ಸಿಬ್ಬಂದಿ ವಿರುದ್ಧ ಆಸ್ಪತ್ರೆ ಕ್ರಮ ಕೈಗೊಂಡಿದೆ. ಡ್ಯಾನ್ಸ್ ಮಾಡಿರುವ ಮೂವರು ಸಿಬ್ಬಂದಿ ಪೈಕಿ ಒಬ್ಬ ಕಾಂಟ್ರ್ಯಾಕ್ಟ್ ಸಿಬ್ಬಂದಿಯಾಗಿದ್ದು, ಅವರನ್ನು ಕೆಲಸದಿಂದಲೇ ತೆಗೆದುಹಾಕಲಾಗಿದೆ. ಇನ್ನು ಉಳಿದ ಇಬ್ಬರು ಆಸ್ಪತ್ರೆ ಸಿಬ್ಬಂದಿಯನ್ನು ಸರ್ಜಿಕಲ್ ಐಸಿಯುವಿನಿಂದ ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: Viral Photo | ಫಸ್ ನೈಟ್ಗೆ ಕಾಯುತ್ತಿರುವ ವಧು, ಕಂಪ್ಯೂಟರ್ ಮುಂದೆ ಬ್ಯುಸಿಯಾದ ವರ; ಟ್ವಿಟ್ಟರ್ನಲ್ಲಿ ಫೋಟೋ ವೈರಲ್
ವಿಡಿಯೋದಲ್ಲಿ ಮೂವರು ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ತಮಗೆ ಇಷ್ಟಬಂದಂತೆ ಡ್ಯಾನ್ಸ್ ಮಾಡುತ್ತಿದ್ದಾರೆ. ಮ್ಯೂಸಿಕ್ ಅನ್ನು ಜೋರಾಗಿ ಸೌಂಡ್ ಕೊಟ್ಟುಕೊಂಡು ಈ ಡ್ಯಾನ್ಸ್ ಮಾಡಿದ್ದಾರೆ. ಸರ್ಜಿಕಲ್ ಐಸಿಯುನಲ್ಲೇ ಈ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ತೆಗೆಯುತ್ತಿರುವ ವೇಳೆ ಸ್ಥಳದಲ್ಲಿ ಯಾವುದೇ ರೋಗಿ ಇರಲಿಲ್ಲ ಎಂದು ತಿಳಿದುಬಂದಿದೆ.
ಸೋಮವಾರ ರಾತ್ರಿಯಿಂದ ಮಂಗಳವಾರದ ನಡುವೆ ಈ ವಿಡಿಯೋ ಶೂಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ರಾಜೀವ್ ಗಾಂಧಿ ಆಸ್ಪತ್ರೆಯ ಪ್ರಧಾನ ಮೆಡಿಕಲ್ ಅಧಿಕಾರಿ ಡಾ. ಸುನೀಲ್ ಚೌಹಾನ್, ''ಕಾಂಟ್ರ್ಯಾಕ್ಟ್ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಉಳಿದ ಇಬ್ಬರು ನರ್ಸಿಂಗ್ ಸಿಬ್ಬಂದಿಯನ್ನು ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಘಟನೆ ಸಂಬಂಧ ತನಿಖೆಗೆ ಆದೇಶ ನೀಡಲಾಗಿದೆ'' ಎಂದೂ ಹೇಳಿದ್ದಾರೆ.
#WATCH राजस्थान: अलवर के राजीव गांधी जनरल अस्पताल के नर्सिंग कर्मी एक वायरल वीडियो में कोविड ICU में ड्यूटी के दौरान डांस करते नज़र आए। (8.02.21) pic.twitter.com/hFt9LKnTBO
— ANI_HindiNews (@AHindinews) February 10, 2021
ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ರೆಕಾರ್ಡ್ ಮಾಡಿ ಅದನ್ನು ನರ್ಸ್ಗಳಿರುವ ಸಾಮಾಜಿಕ ಜಾಲತಾಣ ಗ್ರೂಪ್ಗೆ ಶೇರ್ ಮಾಡಲಾಗಿತ್ತು. ವಿಡಿಯೋ ನೋಡಿದ ಹಲವು ನರ್ಸ್ಗಳು ವಿರೋಧಿಸಿದ್ದರು. ನಂತರ ಡ್ಯಾನ್ಸ್ ಮಾಡಿದ ನರ್ಸ್ಗಳು ಕ್ಷಮೆ ಕೋರಿದ್ದಾರೆಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ