Viral Video: ತನ್ನ ಗಂಡನ 'ಗೆಳತಿ' ಎಂದು ಶಂಕಿಸಿ ಆಕೆಯನ್ನು ಹೇಗೆ ಥಳಿಸಿದ್ದಾಳೆ ನೋಡಿ ಈ ಮಹಿಳೆ..!

Viral Video of Wife beating Husband's rumoured Girlfriend: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಂತಹ 2 ನಿಮಿಷ 15 ಸೆಕೆಂಡುಗಳ ವಿಡಿಯೋದಲ್ಲಿ ಬುರ್ಖಾ ಧರಿಸಿದ ಮಹಿಳೆ ಜಿಮ್‌ಗೆ ಬಂದು ಮೊದಲು ತನ್ನ ಗಂಡನೊಂದಿಗೆ ಹೆಣಗಾಡುತ್ತಿರುವುದನ್ನು ಮತ್ತು ನಂತರ ಅಲ್ಲೇ ಹತ್ತಿರದಲ್ಲಿ ನಿಂತಿರುವ ಇನ್ನೊಬ್ಬ ಮಹಿಳೆಯ ಮೇಲೆ ಹಲ್ಲೆ ಮಾಡುವುದನ್ನು ಕಾಣಬಹುದಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ತನ್ನ ಗಂಡ ಬೇರೆ ಹುಡುಗಿಯ ಜೊತೆ ಸ್ನೇಹ ಬೆಳೆಸಿದ್ದಾನೆ (Extramarital Affair) ಎಂದು ಗೊತ್ತಾದರೆ ಯಾವ ಹೆಂಡತಿ ಸುಮ್ಮನೆ ಇರುತ್ತಾಳೆ ನೀವೇ ಹೇಳಿ. ಆದರೆ ಇಲ್ಲಿ ನಡೆದ ಘಟನೆ ಸ್ವಲ್ಪ ವಿಭಿನ್ನವಾಗಿದೆ. ಏಕೆಂದರೆ ಇಲ್ಲಿ ಮಹಿಳೆಯೊಬ್ಬಳು ಆಕೆಯ ಪತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಇನ್ನೊಬ್ಬ ಮಹಿಳೆಯನ್ನು ಮನಬಂದಂತೆ ಥಳಿಸಿರುವ ಘಟನೆ ನಡೆದಿದ್ದು, ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral video of social media today) ಆಗಿದೆ. ಈ ರೀತಿಯ ವಿವಾಹೇತರ ಸಂಬಂಧದ ವಿಚಾರಕ್ಕೆ ಹೆಂಡತಿ ಗಂಡನಿಗೆ, ಗಂಡನ ಪ್ರೇಯಸಿಗೆ ಹೊಡೆದಿರುವ ಘಟನೆಗಳು ಸಾಕಷ್ಟಿವೆ. ಅದೇ ರೀತಿಯ ಒಂದು ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. 

    ಈ ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಭೋಪಾಲ್ (Bhopal, Madhya Pradesh) ಪೊಲೀಸರಿಗೆ ಗಂಡ ಹೆಂಡತಿಯ ಇಬ್ಬರು ಪರಸ್ಪರ ದೂರುಗಳನ್ನು ದಾಖಲಿಸಿದ್ದಾರೆ. ಭೋಪಾಲ್‌ನಲ್ಲಿರುವ ಕೊಹ್-ಎ-ಫಿಜಾ ಎಂಬ ಪ್ರದೇಶದಲ್ಲಿರುವ ಜಿಮ್‌ನಲ್ಲಿ ಈ ಘಟನೆಯು ಅಕ್ಟೋಬರ್ 15ರಂದು ನಡೆದಿದೆ ಮತ್ತು ವಿಡಿಯೋ ವೈರಲ್ ಆದ ನಂತರ ಭಾನುವಾರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

    30 ವರ್ಷದ ಮಹಿಳೆ ತನ್ನ ಸಹೋದರಿಯೊಂದಿಗೆ ತನ್ನ ಪತಿ ವ್ಯಾಯಾಮ ಮಾಡುತ್ತಿದ್ದ ಜಿಮ್‌ಗೆ ಬಂದಿದ್ದು, ಅಲ್ಲಿ ಆಕೆಯ ಗಂಡನ ಜತೆ ಅವನ ಶಂಕಿತ ಗೆಳತಿ ಮತ್ತು ಇತರರು ಇದ್ದರು ಎಂದು ಕೊಹ್-ಎ-ಫಿಜಾ ಪೊಲೀಸ್ ಠಾಣೆ ಉಸ್ತುವಾರಿ ಅಧಿಕಾರಿಯಾದ ಅನಿಲ್ ಬಾಜ್ಪೈ ಸೋಮವಾರ ತಿಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹೆಂಡತಿ, ಗಂಡನ ಶಂಕಿತ ಗರ್ಲ್​ಫ್ರೆಂಡ್​ಗೆ ಮನಬಂದಂತೆ ಥಳಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    "ಜಿಮ್‌ನಲ್ಲಿ ತನ್ನ ಪತಿ ಈ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಮಹಿಳೆ ಶಂಕಿಸಿದ್ದಳು. ಆಕೆ ಭಾನುವಾರದಂದು ಜಿಮ್‌ಗೆ ಬಂದಿದ್ದೇ ತಡ ತನ್ನ ಬೂಟುಗಳಿಂದ ಆ ಮಹಿಳೆಯನ್ನು ಹೊಡೆಯಲು ಪ್ರಾರಂಭಿಸಿದಳು, ಅಲ್ಲಿರುವ ಅನೇಕರು ಅವಳನ್ನು ತಡೆಯಲು ಪ್ರಯತ್ನಿಸಿದರು. ಆದರೆ ಆಕೆ ಮಾತ್ರ ಆ ಮಹಿಳೆಗೆ ಹೊಡೆಯುವುದನ್ನು ನಿಲ್ಲಿಸಲೇ ಇಲ್ಲ. ಸುಮಾರು 10 ನಿಮಿಷಗಳ ಕಾಲ ಈ ಗದ್ದಲ ನಡೆದಿದ್ದು, ಮಹಿಳೆ ಮತ್ತು ಅವಳ ಗಂಡ ಇಬ್ಬರು ಪರಸ್ಪರ ದೂರುಗಳನ್ನು ದಾಖಲಿಸಿದ್ದಾರೆ" ಎಂದು ಅವರು ಹೇಳಿದರು.

    ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಂತಹ 2 ನಿಮಿಷ 15 ಸೆಕೆಂಡುಗಳ ವಿಡಿಯೋದಲ್ಲಿ ಬುರ್ಖಾ ಧರಿಸಿದ ಮಹಿಳೆ ಜಿಮ್‌ಗೆ ಬಂದು ಮೊದಲು ತನ್ನ ಗಂಡನೊಂದಿಗೆ ಹೆಣಗಾಡುತ್ತಿರುವುದನ್ನು ಮತ್ತು ನಂತರ ಅಲ್ಲೇ ಹತ್ತಿರದಲ್ಲಿ ನಿಂತಿರುವ ಇನ್ನೊಬ್ಬ ಮಹಿಳೆಯ ಮೇಲೆ ಹಲ್ಲೆ ಮಾಡುವುದನ್ನು ಕಾಣಬಹುದಾಗಿದೆ.

    ಇಲ್ಲಿನ ನೂರ್ ಮಹಲ್ ರಸ್ತೆಯ ನಿವಾಸಿಯಾದ ಈ ವ್ಯಕ್ತಿಯು ತನ್ನ ಹೆಂಡತಿಯ ಆರೋಪಗಳನ್ನು ನಿರಾಕರಿಸಿದ್ದಾನೆ ಮತ್ತು ತನ್ನ ಗೆಳತಿ ಎಂದು ಹೇಳಲಾಗುತ್ತಿದ್ದ ಆ ಮಹಿಳೆಯ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾನೆ.

    ಇದನ್ನೂ ಓದಿ: New Rules: ಮಕ್ಕಳು ತಪ್ಪು ಮಾಡಿದ್ರೆ ಅಪ್ಪ-ಅಮ್ಮನಿಗೆ ಶಿಕ್ಷೆ, ಇನ್ಮೇಲೆ ಜೋಪಾನ!

    ಭಾರತೀಯ ದಂಡ ಸಂಹಿತೆ (Indian Penal Code) ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು - Harming someone with intension), 294 (ಅಶ್ಲೀಲ ಕೃತ್ಯ - Obscenity) ಮತ್ತು 506 (ಕ್ರಿಮಿನಲ್ ಬೆದರಿಕೆ - Threatening) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಬಾಜ್ಪೈ ಹೇಳಿದರು. ಈ ಹಿಂದೆ ಕೂಡ ಈ ಮಹಿಳೆ ತನ್ನ ಪತಿಯ ವಿರುದ್ಧ ಕಿರುಕುಳ ಮತ್ತು ವರದಕ್ಷಿಣೆ ವಿಷಯವಾಗಿ ದೂರನ್ನು ಇಲ್ಲಿನ ಶಹಜಹನಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು ಎಂದು ಅವರು ಹೇಳಿದರು.

    ಇದನ್ನೂ ಓದಿ: ಶೇ.50 ರಷ್ಟು ಮಹಿಳೆಯರು ಮದುವೆ ಆಗೋಲ್ವಾ ಅಂದ್ರೆ ಏನು ಉತ್ತರ ಕೊಡ್ತಾರೆ ಗೊತ್ತಾ?

    ಆ ದೂರು ದಾಖಲಿಸಿದಾಗಿನಿಂದಲೂ ಮಹಿಳೆ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ದಂಪತಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಬಾಜ್ಪೈ ಹೇಳಿದರು.
    Published by:Sharath Sharma Kalagaru
    First published: