Viral Video: ಪಾರ್ಕ್‌ನಲ್ಲಿ ಪ್ರೇಮಿಗಳ ಹೊಡೆದಾಟ! ತಪ್ಪಿಸೋಕೆ ಬಂದ ಈ ಮಹಾನುಭಾವ ಏನು ಮಾಡಿದ ನೋಡಿ...

ಪಾರ್ಕ್‌ನಲ್ಲಿ ಪ್ರೇಮಿಗಳು ಕಿತ್ತಾಡ್ತಾ ಇದ್ರು. ಅಷ್ಟರಲ್ಲಿ ಫುಡ್ ಡೆಲಿವರಿ ಬಾಯ್ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾನೆ. ಪ್ರೇಮಿಗಳ ಜಗಳ ನೋಡಿ ಏನನ್ನಿಸಿತೋ ಏನೋ, "ಏನ್ರಪ್ಪಾ ನಿಮ್ಮ ಸಮಸ್ಯೆ" ಅಂತ ಕೇಳಿದ್ದಾನೆ. ಆಗ ಅಲ್ಲಿ ನಡೆದಿದ್ದೇ ಬೇರೆ.

ಪಾರ್ಕ್‌ನಲ್ಲಿ ಫೈಟ್

ಪಾರ್ಕ್‌ನಲ್ಲಿ ಫೈಟ್

  • Share this:
ಒಡಿಶಾ: ಅವರಿಬ್ಬರು ಪ್ರೇಮಿಗಳು (Lovers). ಒಬ್ಬರ ಜೊತೆ ಒಬ್ಬರು ಕುಳಿತು, ಕಷ್ಟ ಸುಖ ಮಾತನಾಡಿ ಮನಸ್ಸು ಹಗುರ ಮಾಡಿಕೊಳ್ಳೋಣ ಅಂತ ಪಾರ್ಕ್‌ಗೆ (Park) ಹೋಗಿದ್ರು. ಆದ್ರೆ ಅಲ್ಲಿ ಅದೇನಾಯ್ತೋ ಏನೋ, ಇಬ್ಬರು ಶರಂಪರ ಕಿತ್ತಾಡಿಕೊಂಡಿದ್ದಾರೆ. ಇದು ಪಾರ್ಕ್, ಇಲ್ಲಿ ಜನರಿದ್ದಾರೆ ಎಂಬುದನ್ನೂ ಮರೆತು ಪರಸ್ಪರ ಹೊಡೆದಾಟಕ್ಕೆ ನಿಂತಿದ್ದಾರೆ. ಅಷ್ಟರಲ್ಲಿ ಫುಡ್ ಡೆಲಿವರಿ ಬಾಯ್ (Food Delivery Boy) ಒಬ್ಬ ಆ ಪಾರ್ಕ್‌ಗೆ ಎಂಟ್ರಿ ಕೊಟ್ಟಿದ್ದಾನೆ. ಕೆಲ್ಸ ಮಾಡಿ (Work) ಸುಸ್ತಾಗಿದ್ದ ಆತ, ಕೊಂಚ ಹೊತ್ತು ಕುಳಿತು ರಿಲ್ಯಾಕ್ಸ್ (Relax) ಆಗೋಣ ಅಂತ ಅಲ್ಲಿ ಬಂದಿದ್ದ. ಪ್ರೇಮಿಗಳ ಜಗಳ ನೋಡಿ ಏನನ್ನಿಸಿತೋ ಏನೋ, ಏನ್ರಪ್ಪಾ ನಿಮ್ಮ ಸಮಸ್ಯೆ ಅಂತ ಕೇಳಿದ್ದಾನೆ. ಆಗ ಅಲ್ಲಿ ನಡೆದಿದ್ದೇ ಬೇರೆ. ಇದೀಗ ಈ ಘಟನೆಯ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ (Social Media)  ವೈರಲ್ (Viral) ಆಗಿದ್ದು, ಕೆಲವರು ತಮಾಷೆ ಅಂತ ಕಾಮೆಂಟ್ (Comment) ಮಾಡಿದ್ರೆ, ಮತ್ತೆ ಕೆಲವರು ಆ ಪ್ರೇಮಿಗಳು ಹಾಗೂ ಫುಡ್ ಡಿಲಿವರಿ ಹುಡುಗನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಭುವನೇಶ್ವರದ ಪಾರ್ಕ್‌ನಲ್ಲಿ ಪ್ರೇಮಿಗಳ ಕಿತ್ತಾಟ

ಒಡಿಶಾ ರಾಜಧಾನಿ ಭುವನೇಶ್ವರದ ಪಾರ್ಕ್ ಒಂದರಲ್ಲಿ ಈ ಘಟನೆ ನಡೆದಿದೆ. ಇಂದಿರಾ ಪಾರ್ಕ್‌ಗೆ ಆಗಮಿಸಿದ್ದ ಪ್ರೇಮಿಗಳು, ಮಾತನಾಡುತ್ತಾ ಇರುತ್ತಾರೆ. ಅದೆನಾಯಿತೋ ಏನೋ ಕೆಲವೇ ಕ್ಷಣಗಳಲ್ಲಿ ಈ ಜೋಡಿ ಜಗಳಕ್ಕೆ ನಿಂತಿದ್ದಾರೆ. ಈ ವೇಳೆ ಯುವತಿ ಜಾಸ್ತಿ ಕೋಪಗೊಂಡಿದ್ದಾಳೆ. ಆಗ ಯುವತಿ ಯುವಕನ ಮೇಲೆ ಕಲ್ಲು ಎಸೆಯುತ್ತಾಳೆ. ಸಾಲದ್ದಕ್ಕೆ ಆತನಿಗೆ ಹಿಗ್ಗಾಮುಗ್ಗ ಥಳಿಸುತ್ತಾಳೆ.

ಕೋಪದಿಂದ ಭುಸುಗುಟ್ಟಿದ ಯುವತಿ

ಭುವನೇಶ್ವರದ ಇವರಿಬ್ಬರ ಡಿಶುಂ ಡಿಶುಂ ಕಂಡು ಜನ ದೌಡಾಯಿಸುತ್ತಾರೆ. ಎಲ್ಲಾ ಮೊಬೈಲ್ ಕ್ಯಾಮರಾಗಳೂ ಈ ಜಗಳ ರೆಕಾರ್ಡ್ ಮಾಡಿಕೊಳ್ಳಲು ಮುಂದಾಗುತ್ತವೆ. ಇದರಿಂದ ಯುವತಿ ಮತ್ತಷ್ಟು ಕೆರಳಿ ಅವರಿಂದ ಫೋನ್ ಕಸಿದುಕೊಳ್ಳಲು ಪ್ರಯತ್ನಿಸುತ್ತಾಳೆ.

ಇದನ್ನೂ ಓದಿ: ಗೆಳತಿಗಾಗಿ ದೂರವಾದ ಪತಿ, ಮನೆಯಲ್ಲಿ ಅಳುತ್ತಾ ಕೂರದೇ FB Live ಬಂದ ಮಹಿಳೆ ಮಾಡಿದ ಕೆಲಸ ಕಂಡು ನೆಟ್ಟಿಗರು ಶಾಕ್

ಜಗಳ ಬಿಡಿಸಲು ಬಂದ ಫುಡ್ ಡೆಲಿವರಿ ಬಾಯ್

ಅಷ್ಟರಲ್ಲಿ ಫುಡ್ ಡೆಲಿವರಿ ಬಾಯ್ (Food Delivery Boy) ಒಬ್ಬ ಆ ಪಾರ್ಕ್‌ಗೆ ಎಂಟ್ರಿ ಕೊಟ್ಟಿದ್ದಾನೆ. ಕೆಲ್ಸ ಮಾಡಿ (Work) ಸುಸ್ತಾಗಿದ್ದ ಆತ, ಕೊಂಚ ಹೊತ್ತು ಕುಳಿತು ರಿಲ್ಯಾಕ್ಸ್ (Relax) ಆಗೋಣ ಅಂತ ಅಲ್ಲಿ ಬಂದಿದ್ದ. ಪ್ರೇಮಿಗಳ ಜಗಳ ನೋಡಿ ಏನನ್ನಿಸಿತೋ ಏನೋ, ಏನ್ರಪ್ಪಾ ನಿಮ್ಮ ಸಮಸ್ಯೆ ಅಂತ ಕೇಳಿದ್ದಾನೆ. ಆಗ ಮೂವರ ಮಧ್ಯೆಯೂ ಜಗಳ ನಡೆದಿದೆ.

ಯುವತಿಗೆ ಚೆನ್ನಾಗಿ ಥಳಿಸಿದ ಫುಡ್ ಡೆಲಿವರಿ ಬಾಯ್

ಈ ಹುಡುಗಿ ಫುಡ್‌ ಡೆಲಿವರಿ ಬಾಯ್ ವಿರುದ್ಧ ಗರಂ ಆಗಿದ್ದಾಳೆ. ನಮ್ಮ ಪ್ರಶ್ನಿಸೋಕೆ ನೀನ್ಯಾರು ಅಂತ ಕೇಳಿದ್ದಲ್ಲದ್ದೇ ಕೆಟ್ಟದ್ದಾಗಿ ಬೈಯ್ದಿದ್ದಾಳೆ ಎನ್ನಲಾಗಿದೆ. ಆಗ ಪ್ರೇಮಿಗಳ ಜಗಳಬಿಡಿಸಲು ಹೋದ ಫುಡ್ ಡೆಲಿವರಿ ಬಾಯ್ ಖುದ್ದು ತಾನೇ ಜಗಳಕ್ಕೆ ನಿಂತಿದ್ದಾನೆ.



ಸಾಮಾಜಿಕ ಜಾಲತಾಣಗಳಲ್ಲಿ ಫೈಟಿಂಗ್ ವಿಡಿಯೋ ವೈರಲ್

ಮಧ್ಯಸ್ಥಿಕೆ ವಹಿಸಲು ಫುಡ್‌ ಡೆಲಿವರಿ ಬಾಯ್‌ನನ್ನೂ ಯುವತಿ ತರಾಟೆಗೆತ್ತಿಕೊಂಡು ತಾಳ್ಮೆ ತಪ್ಪಿ  ಅವಾಚ್ಯ ಶಬ್ದ ಬಳಸುತ್ತಾಳೆ. ಹೀಗಾಗಿ ಫುಡ್ ಡೆಲಿವರಿ ಬಾಯ್ ತಾಳ್ಮೆ ಕಳೆದುಕೊಂಡು ಯುವತಿಗೆ ಥಳಿಸುತ್ತಾನೆ. ಆಗ ಸಾರ್ವಜನಿಕರು ಮೂವರ ನಡುವಿನ ಜಗಳ ಬಿಡಿಸಲು ಮುಂದಾಗುತ್ತಾರೆ.

ಇದನ್ನೂ ಓದಿ: Viral Video: ಈಜುವಾಗ ಮಹಿಳೆಯ ಕಿವಿ ಹೊಕ್ಕಿದ ಏಡಿ: ಮುಂದೇನಾಯ್ತು ನೀವೇ ನೋಡಿ

ಈ ಬಗ್ಗೆ ಯಾರೂ ದೂರು ನೀಡಿಲ್ಲವಾದರೂ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಕೇಸ್ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಭುವನೇಶ್ವರ ಡಿಸಿಪಿ ಉಮಾ ಶಂಕರ್ ತಿಳಿಸಿದ್ದಾರೆ.
Published by:Annappa Achari
First published: