Trending| ಅಬ್ಬಾ.. ಈ ಕತ್ತೆ ಕಿರುಬ ಇಬ್ಬರ ಮೇಲೆ ಹೇಗೆ ದಾಳಿ ಮಾಡಿದೆ ನೀವೇ ನೋಡಿ..!

ಈ ಘಟನೆ ನಡೆದ ಒಂದು ವಾರದ ನಂತರ, ರಾಜ್ಯ ಅರಣ್ಯ ಇಲಾಖೆಯು ಈ ಮನುಷ್ಯ ಮತ್ತು ಪ್ರಾಣಿಯ ಸಂಘರ್ಷದ ಪ್ರಕರಣಗಳನ್ನು ತಪ್ಪಿಸಲು ಈ ಪ್ರದೇಶದಲ್ಲಿರುವ ಜನರಲ್ಲಿ ಜಾಗರೂಕತೆ ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

70 ವರ್ಷದ ವೃದ್ಧನ ಮೇಲೆ ದಾಳಿ ಮಾಡಿರುವ ಕತ್ತೆ ಕಿರುಬ.

70 ವರ್ಷದ ವೃದ್ಧನ ಮೇಲೆ ದಾಳಿ ಮಾಡಿರುವ ಕತ್ತೆ ಕಿರುಬ.

 • Share this:

  ಸಾಮಾನ್ಯವಾಗಿ ಕತ್ತೆ ಕಿರುಬ ಮನುಷ್ಯನನ್ನು ಕಂಡರೆ ಭಯಪಡುವ ಪ್ರಾಣಿ ಮತ್ತು ಅವನು ವಾಸಿಸುವ ಸ್ಥಳಗಳಿಂದ ದೂರವೇ ಇರಲು ಬಯಸುತ್ತದೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ಒಂದು ವಿಚಿತ್ರ ಘಟನೆಯಲ್ಲಿ ಮನುಷ್ಯ ಕಂಡರೆ ಭಯ ಪಡುವ ಕತ್ತೆ ಕಿರುಬ ಇಬ್ಬರ ಮೇಲೆ ದಾಳಿ ನಡೆಸಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಖೇಡ್ ತಾಲ್ಲೂಕಿನ ಖಾರ್ಪುಡಿ ಗ್ರಾಮದಲ್ಲಿ ನಡೆದಿದೆ.ಕಳೆದ ಭಾನುವಾರ ಕತ್ತೆ ಕಿರುಬವೊಂದು ಇಬ್ಬರ ಮೇಲೆ ಬೇರೆ ಬೇರೆ ಸಮಯದಲ್ಲಿ ದಾಳಿ ಮಾಡಿದ್ದು, ಗಾಯಗೊಂಡವರನ್ನು ಪಾಂಡುರಂಗ ಜಾಧವ್ (70) ಮತ್ತು ಬೈಕ್ ಸವಾರ ರಾಹುಲ್ ಮಧುಕರ್ ಗಡೆ (25) ಎಂದು ಗುರುತಿಸಲಾಗಿದೆ. ದಾಳಿ ಮಾಡಿದ ನಂತರ ಒಂದು ವಾಹನಕ್ಕೆ ಸಿಲುಕಿ ಕತ್ತೆ ಕಿರುಬ ಅದೇ ಸ್ಥಳದಲ್ಲಿ ಶವವಾಗಿ ಪತ್ತೆಯಾಯಿತು. ಜಾಧವ್ ಮೇಲಿನ ದಾಳಿಯನ್ನು ಚಿತ್ರಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.


  ಈ ಘಟನೆ ನಡೆದ ಒಂದು ವಾರದ ನಂತರ, ರಾಜ್ಯ ಅರಣ್ಯ ಇಲಾಖೆಯು ಈ ಮನುಷ್ಯ ಮತ್ತು ಪ್ರಾಣಿಯ ಸಂಘರ್ಷದ ಪ್ರಕರಣಗಳನ್ನು ತಪ್ಪಿಸಲು ಈ ಪ್ರದೇಶದಲ್ಲಿರುವ ಜನರಲ್ಲಿ ಜಾಗರೂಕತೆ ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.


  ಜುನ್ನಾರ್ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್. ಜಯರಾಮೇಗೌಡ ಸುದ್ದಿ ಮಾಧ್ಯಮದ ಜೊತೆ ಮಾತನಾಡುತ್ತಾ, "ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯನ್ನು ನಾವು ಪತ್ತೆ ಹಚ್ಚಿದ್ದೇವೆ. ಅವರು ಈ ಪ್ರದೇಶದಲ್ಲಿರುವಂತಹ ಒಂದು ದೇವಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರಲ್ಲಿ ಒಬ್ಬರಾಗಿದ್ದಾರೆ. ಇವರ ಗುಂಪು ದಾಳಿ ನಡೆಯುವ ಕೆಲವೇ ನಿಮಿಷಗಳ ಮೊದಲು ಕತ್ತೆ ಕಿರುಬವನ್ನು ನೋಡಿದ್ದರು ಮತ್ತು ಆ ದಿಕ್ಕಿನಲ್ಲಿ ಹೋಗದಂತೆ ದಾಳಿಗೊಳಗಾದ ವೃದ್ಧನಿಗೆ ಹೇಳಿದ್ದರು. ಕತ್ತೆ ಕಿರುಬವು ರಸ್ತೆಗೆ ಬಹಳ ಹತ್ತಿರದಲ್ಲಿದೆ ಮತ್ತು ಬಹುಶಃ ಅಸ್ಥಿರವಾಗಿದೆ ಎಂದು ವೃದ್ಧನಿಗೆ ಹೇಳಿದರು.


  ಆದರೆ ಈ ಪ್ರದೇಶದಲ್ಲಿ ಕತ್ತೆ ಕಿರುಬಗಳು ಸಾಮಾನ್ಯವಾಗಿವೆ ಎಂದು ಜಾಧವ್ ಅವರಿಗೆ ಹೇಳಿ ಅದೇ ದಿಕ್ಕಿನಲ್ಲಿ ಮುಂದೆ ಹೋದರು. ಏನಾದರೂ ಸಂಭವಿಸಬಹುದು ಎಂದು ನಿರೀಕ್ಷಿಸಿ ಆ ಭಕ್ತಾದಿಗಳ ಗುಂಪಿನಲ್ಲಿರುವ ಒಬ್ಬ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಿದನು" ಎಂದು ತಿಳಿಸಿದ್ದಾರೆ.


  ಗಾಯಗೊಂಡ ಇಬ್ಬರಿಗೂ ನಿಯಮಾನುಸಾರ ಪರಿಹಾರ ನೀಡುವ ಸಂಬಂಧ ಅರಣ್ಯ ಇಲಾಖೆ ಈಗಾಗಲೇ ಪ್ರಕ್ರಿಯೆ ಆರಂಭಿಸಿದೆ ಎಂದು ಜಯರಾಮೇಗೌಡ ಹೇಳಿದರು.


  "ಕತ್ತೆ ಕಿರುಬಗಳ ದಾಳಿಗಳು ಬಹಳ ಅಪರೂಪ. ಈ ಕತ್ತೆ ಕಿರುಬವು ಬಹುಶಃ ಹಸಿದಿತ್ತು ಮತ್ತು ನಿರ್ಜಲೀಕರಣಗೊಂಡಿತ್ತು ಹಾಗೂ ಕಿರಿಕಿರಿಗೊಂಡಿತ್ತು ಎಂದು ಅನ್ನಿಸುತ್ತದೆ. ಅದಕ್ಕಾಗಿ ಈ ದಾಳಿ ಮಾಡಿರಬಹುದು ಎಂದು ಹೇಳಿದ್ದಾರೆ.


  ಇದನ್ನೂ ಓದಿ: Trending| ಚಿನ್ನದ ಚೈನ್ ಕೊಕ್ಕೆಗಳನ್ನು ತಲೆಯ ಮೇಲೆ ಶಸ್ತ್ರ ಚಿಕಿತ್ಸೆಯಿಂದ ಅಳವಡಿಸಿಕೊಂಡ ಮೆಕ್ಸಿಕೋ ರ‍್ಯಾಪರ್

  ಈ ಪ್ರದೇಶದಲ್ಲಿ ಚಿರತೆಗಳೂ ಇದ್ದು, ಹತ್ತಿರದ ಶಾಲೆಗಳು ಮತ್ತು ಹಳ್ಳಿಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಎರಡು ದಾಳಿಗಳು ನಡೆದ ಸ್ಥಳಗಳು 500 ಮೀಟರ್ ಅಂತರದಲ್ಲಿವೆ. ಜಾಧವ್‌ ಎಡಗೈಗೆ ಮತ್ತು ಗಡೆ ಬಲಗೈಗೆ ಗಾಯವಾಗಿದೆ. ಇಬ್ಬರನ್ನೂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ರೇಬಿಸ್ ನಿರೋಧಕ ಲಸಿಕೆ ನೀಡಲಾಯಿತು.


  "ಜಾಧವ್‌ಗೆ ಆಗಿರುವ ಗಾಯ ಗಂಭೀರ ಸ್ವರೂಪದ್ದಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದೇವೆ' ಎಂದು ಜಯರಾಮೇಗೌಡ ಹೇಳಿದರು.

  Published by:MAshok Kumar
  First published: