ಕಳೆದ ಕೆಲವು ದಿನಗಳಿಂದ ತೌಕ್ಟೇ ಚಂಡಮಾರುತದ ಅಬ್ಬರ ತುಂಬಾ ಜೋರಾಗಿದೆ. ಇದರಿಂದ ಎಷ್ಟೋ ಮನೆಗಳು ನಾಶವಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಆಸ್ತಿಪಾಸ್ತಿ ನಷ್ಟ ಆಗಿದೆ. ಗುಜರಾತಿನಲ್ಲಿ ತೌಕ್ಟೇ ಚಂಡಮಾರುತದಿಂದ ಮೇ17ರಂದು ಭೂಕುಸಿತ ಸಂಭವಿಸಿದೆ. ಇಷ್ಟಲ್ಲದೇ ದೇಶದ ಮಹಾರಾಷ್ಟ್ರ, ಗೋವಾ, ಕೇರಳ ಸೇರಿದಂತೆ ಕೆಲವು ರಾಜ್ಯಗಳ ಜನರ ನಿದ್ದೆಗೆಡಿಸಿದೆ. ಈ ಚಂಡಮಾರುತದ ಅಬ್ಬರಕ್ಕೆ ಮಹಾರಾಷ್ಟ್ರದಲ್ಲಿ ಆರು ಮಂದಿ, ಗುಜರಾತಿನಲ್ಲಿ ನಾಲ್ಕು ಮಂದಿ, ಕೇರಳದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಸುಮಾರು ಜನರಿಗೆ ಗಾಯಗಳಾಗಿವೆ. ಕೇರಳದಲ್ಲಿ ಎರಡು ಅಂತಸ್ತಿನ ಮನೆ ಕುಸಿತ ಕಂಡಿತ್ತು. ಇದು ವೈರಲ್ ಆಗಿತ್ತು.
ಗಂಟೆಗೆ 180-190 ಕಿ.ಮೀ ವೇಗದಲ್ಲಿ ಅಪ್ಪಳಿಸುವ ಈ ಚಂಡಮಾರುತಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಜೊತೆಗೆ ಇಂಡಿಯಾ ಗೇಟ್ಗೂ ಈ ಚಂಡಮಾರುತಗಳು ಅಪ್ಪಳಿಸಿದ್ದು, ವಿಡಿಯೋ ವೈರಲ್ ಆಗಿದೆ.
ಈ ಹಿಂದೆ ಮುಂಬೈನ ತಾಜ್ ಹೋಟೆಲ್ಗೆ ಅಬ್ಬರಿಸಿದ ಅಲೆಗಳ ವಿಡಿಯೋ ವೈರಲ್ ಆಗಿತ್ತು. ಬ್ಯಾರಿಕೇಡ್ಗೆ ಅಪ್ಪಳಿಸುತ್ತಿದ್ದ ಆ ಅಲೆಗಳ ರಭಸ, ಶಬ್ದ ಪ್ರಾಕೃತಿಕ ವಿಕೋಪಕ್ಕೆ ಸಾಕ್ಷಿಯಾಗಿತ್ತು. ಇದೀಗ ತೌಕ್ಟೇ ಚಂಡಮಾರುತದಿಂದ ಅರಬ್ಬೀ ಸಮುದ್ರದಲ್ಲಿ ಉಂಟಾದ ಭಾರೀ ಅಲೆಗಳು ಇಂಡಿಯಾ ಗೇಟ್ ಸುತ್ತಮುತ್ತ ಅಪ್ಪಳಿಸುತ್ತಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಗೇಟ್ ವೇ ಆಫ್ ಇಂಡಿಯಾದ ಪಕ್ಕದಲ್ಲಿನ ತಾಜ್ಹೋಟೆಲ್ನಿಂದ ಸೆರೆಹಿಡಿಯಲಾಗಿದೆ. ನೆಟ್ಟಿಗರು ಇದನ್ನು ನೋಡಿ ಇಂತಹ ಭೀಕರತೆಯನ್ನು ಇದುವರೆಗೂ ಕಂಡಿಲ್ಲ, ಅಲೆಗಳ ಅಬ್ಬರ ಅದ್ಭುತ ಎಂದೆಲ್ಲಾ ಟ್ವೀಟ್ ಮಾಡುತ್ತಿದ್ದಾರೆ.
Maaaan .....nature's fury has no parallel !
Never ever seen Gateway of India like this in all these years 😱#CycloneTauktae pic.twitter.com/xOg52kBo0i
— Sameer (@BesuraTaansane) May 17, 2021
ಮುಂಬೈ ಇಂಡಿಯನ್ಸ್ ಎಂಬ ಖಾತೆಯು ತಾಜ್ ಹೋಟೆಲ್ ಸುತ್ತಮುತ್ತ ನೀರು ನಿಂತಿರುವುದನ್ನು ಮತ್ತು ಸೈಕ್ಲೋನ್ ಪರಿಣಾಮದ ವಿಡಿಯೋವನ್ನು ಶೇರ್ ಮಾಡಿದೆ. ಮುಂಬೈನ ಈ ಪ್ರವಾಹ ಉಸಿರು ಬಿಗಿದಂತಾಗಿದೆ. ಅದ್ಭುತವಾಗಿದೆ. ಭಾರತದ ಕರಾವಳಿಗೆ ಅಪ್ಪಳಿಸಿದ ಅತ್ಯಂತ ಶಕ್ತಿಯುತ ಸೈಕ್ಲೋನ್ ತೌಕ್ಟೇ ಎಂದು ಎರಿಕ್ ಹೌಲ್ತೋಸ್ ಟೀಟ್ ಮಾಡಿದ್ದಾರೆ. ಶಿವಾನಿ ಎಂಬುವವರು ಟ್ವೀಟ್ ಮಾಡಿ ಇದು ತುಂಬಾ ಭಯ ಉಂಟು ಮಾಡುವ ರೀತಿಯಲ್ಲಿದೆ ಎಂದಿದ್ದಾರೆ. ಬೀಸುವ ಗಾಳಿ ಮತ್ತು ಧಾರಾಕಾರ ಮಳೆ ನೋಡಿದರೆ ನರಕದಂತೆ ಭಯಾನಕವಾಗಿದೆ ಎಂದು ಎಂದು ವಾಸಂತಿ ಎಂಬುವವರು ಹೇಳಿದ್ದಾರೆ. ಇನ್ನೊಬ್ಬರು ಇದು ಪ್ರಕೃತಿ ಮಾತೆಯ ವಿಕೋಪಕ್ಕೆ ಸಾಕ್ಷಿ ಎಂದು ವಿಜಿ ಎಂಬ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ