• Home
  • »
  • News
  • »
  • national-international
  • »
  • Ukraine Crisis: ಕಾರಿಗೆ​ ಡಿಕ್ಕಿ ಹೊಡೆಯಲಿದ್ದ ಹೆಲಿಕಾಪ್ಟರ್, ಕೂದಲೆಳೆ ಅಂತರದಲ್ಲಿ ತಪ್ಪಿತು ಭಾರೀ ಅನಾಹುತ!

Ukraine Crisis: ಕಾರಿಗೆ​ ಡಿಕ್ಕಿ ಹೊಡೆಯಲಿದ್ದ ಹೆಲಿಕಾಪ್ಟರ್, ಕೂದಲೆಳೆ ಅಂತರದಲ್ಲಿ ತಪ್ಪಿತು ಭಾರೀ ಅನಾಹುತ!

ಕೂದಲೆಳೆ ಅಂತರದಲ್ಲಿ ತಪ್ಪಿತು ಭಾರೀ ಅನಾಹುತ

ಕೂದಲೆಳೆ ಅಂತರದಲ್ಲಿ ತಪ್ಪಿತು ಭಾರೀ ಅನಾಹುತ

ಈ ವಿಡಿಯೋವನ್ನು ಉಕ್ರೇನ್ ರಕ್ಷಣಾ ಸಚಿವಾಲಯ ಹಂಚಿಕೊಂಡಿದೆ. ಈ 8 ಸೆಕೆಂಡುಗಳ ವಿಡಿಯೋವನ್ನು ನೋಡಿದರೆ ಮೈನವಿರೇಳುವುದರಲ್ಲಿ ಅನುಮಾನವಿಲ್ಲ. ಕೂದಲೆಳೆ ಅಂತರದಲ್ಲಿ ಕಾರು​ ಹಾಗೂ ಹೆಲಿಕಾಪ್ಟರ್ ನಡುವೆ ನಡೆಯಲಿದ್ದ ಅಪಘಾತ ತಪ್ಪಿದೆ.

  • Share this:

ಟೋಕಿಯೋ(ಅ.24): ಕ್ಷಿಪಣಿ ದಾಳಿ (Missile Attack), ಬಾಂಬಿಂಗ್, ಆಕಾಶದಲ್ಲಿ ಹಾರಾಟ ನಡೆಸುವ ಹೆಲಿಕಾಪ್ಟರ್‌ಗಳು. ಇತ್ತೀಚಿನ ದಿನಗಳಲ್ಲಿ ಉಕ್ರೇನ್‌ನಲ್ಲಿ (Ukraine) ಎಲ್ಲೆಡೆ ಭಯಾನಕ ದೃಶ್ಯಗಳು ಗೋಚರಿಸುತ್ತಿವೆ. ಕಳೆದ ಎರಡು ವಾರಗಳಲ್ಲಿ ರಷ್ಯಾ ದಾಳಿಯನ್ನು ತೀವ್ರಗೊಳಿಸಿದೆ. ಆದ್ದರಿಂದ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಯುದ್ಧಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನೋಡಬಹುದು. ಸದ್ಯ ಇಂತಹದೊಂದು ಆಘಾತಕಾರಿ ವಿಡಿಯೋ ವೈರಲ್ ಆಗುತ್ತಿದ್ದು, ಪೈಲಟ್‌ನ (Pilot) ಸಮಯಪ್ರಜ್ಞೆ ಭಾರೀ ಅನಾಹುತ ತಪ್ಪಿದೆ.


ಈ ವಿಡಿಯೋವನ್ನು ಉಕ್ರೇನ್ ರಕ್ಷಣಾ ಸಚಿವಾಲಯ ಹಂಚಿಕೊಂಡಿದೆ. ಈ 8 ಸೆಕೆಂಡುಗಳ ವಿಡಿಯೋವನ್ನು ನೋಡಿದರೆ ಮೈನವಿರೇಳುವುದರಲ್ಲಿ ಅನುಮಾನವಿಲ್ಲ. ಕೂದಲೆಳೆ ಅಂತರದಲ್ಲಿ ಕಾರು​ ಹಾಗೂ ಹೆಲಿಕಾಪ್ಟರ್ ನಡುವೆ ನಡೆಯಲಿದ್ದ ಅಪಘಾತ ತಪ್ಪಿದೆ. ಉಕ್ರೇನ್‌ಗೆ ಸ್ವಾಗತ ಎಂಬ ಶೀರ್ಷಿಕೆಯಡಿ ಶೇರ್ ಮಾಡಲಾದ ಈ ವಿಡಿಯೋವನ್ನು ಕಾರಿನೊಳಗಿಂದ ಯಾರೋ ರೆಕಾರ್ಡ್ ಮಾಡಿದ್ದಾರೆ.


ಇದನ್ನೂ ಓದಿ:  Explained: ವಾಯುಪಡೆಗೆ ಲಘು ಯುದ್ಧ ವಿಮಾನ ಸೇರ್ಪಡೆ: 'ಪ್ರಚಂಡ್' ವಿಶೇಷತೆ ಏನು? ಸೇನೆಗೆ ಆಗೋ ಲಾಭವೇನು?


ತಪ್ಪಿದ ದುರಂತ


ಕ್ಷಣಾರ್ಧದಲ್ಲಿ ಬಸ್ ಮತ್ತು ಹೆಲಿಕಾಪ್ಟರ್ ನಡುವಿನ ಅಂತರ ಬಹಳ ಕಡಿಮೆಯಾಗಿದೆ. ಯಾವುದೇ ಕ್ಷಣದಲ್ಲಾದರೂ ಅಪಘಾತ ಸಂಭವಿಸಬಹುದಿತ್ತು, ಆದರೆ ಪೈಲಟ್‌ನ ಜಾಣ್ಮೆಯಿಂದ ದೊಡ್ಡ ಅಪಘಾತ ತಪ್ಪಿದೆ. ಇತ್ತೀಚೆಗೆ ಉಕ್ರೇನ್​ನಲ್ಲಿ ಹೆಲಿಕಾಪ್ಟರ್‌ಗಳು ಯುದ್ಧದ ಕಾರಣ ಕಡಿಮೆ ಎತ್ತರದಲ್ಲಿ ಹಾರುವುದನ್ನು ಕಾಣಬಹುದು. ವಾಸ್ತವವಾಗಿ ಶತ್ರು ರಾಡಾರ್​ನಿಂದ ತಪ್ಪಿಸಿಕೊಳ್ಳಲು ಇಂತಹುದ್ದೊಂದು ನಡೆ ಅನುಸರಿಸಲಾಗುತ್ತಿದೆ.


ಎಲ್ಲಾ ಕಡೆ ಬಾಂಬ್ ದಾಳಿ


ಉಕ್ರೇನ್‌ನ ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ, ಗುಂಡಿನ ಶಬ್ದಗಳು ಸಾರ್ವಜನಿಕರ ಕಿವಿಗಪ್ಪಳಿಸುತ್ತದೆ ಎಂಬುವುದು ಉಲ್ಲೇಖನೀಯ. ವಾಸ್ತವವಾಗಿ, ಉಕ್ರೇನಿನ ವಾಯುಪಡೆಯು ರಷ್ಯಾದಿಂದ ಹಾರಿಸಿದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಲು ಪ್ರಯತ್ನಿಸಿದೆ. ಉಕ್ರೇನ್ ಮೇಲಿನ ರಷ್ಯಾದ ದಾಳಿ ಆರಂಭವಾಗಿ ಸರಿ ಸುಮಾರು ಎಂಟು ತಿಂಗಳು ಕಳೆದಿದೆ. ಹೀಗಿರುವಾಗ ರಷ್ಯಾ ಉಕ್ರೇನ್‌ನಾದ್ಯಂತ ವಿದ್ಯುತ್ ಕೇಂದ್ರಗಳು, ನೀರು ಸರಬರಾಜು ವ್ಯವಸ್ಥೆಗಳು ಮತ್ತು ಇತರ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಇದೇ ವೇಳೆ ತಾವು ರಷ್ಯಾ 33 ಕ್ಷಿಪಣಿಗಳಲ್ಲಿ 18 ನ್ನು ನಾಶ ಮಾಡುವಲ್ಲಿ ಸಫಲರಾಗಿದ್ದೇವೆಂದು ಉಕ್ರೇನ್ ವಾಯುಪಡೆ ತಿಳಿಸಿದೆ.


Why are Russian forces retreating in the Ukraine Russia war stg asp
ಸಾಂಕೇತಿಕ ಚಿತ್ರ


ರಷ್ಯಾದ ವಾಯುಪಡೆ ಎಡವಿದ್ದೆಲ್ಲಿ?


ರಷ್ಯಾದ ವಾಯುಪಡೆಯು – VKS ಅನ್ನು 2015 ರಲ್ಲಿ ವಾಯು ಮತ್ತು ಬಾಹ್ಯಾಕಾಶ ಪಡೆಗಳು ಎಂದು ಮರುನಾಮಕರಣ ಮಾಡಲಾಯಿತು. ರಷ್ಯಾ ಉಕ್ರೇನ್ ಯುದ್ಧದಲ್ಲಿ ಪ್ರಮುಖ ಮುಂಚೂಣಿಯಾಗಿ ಯುದ್ಧದ ಅಭಿಯಾನವನ್ನು ಮುನ್ನಡೆಸಲು ಉದ್ದೇಶಿಸಲಾಗಿತ್ತು. ಏಕೆಂದರೆ ರಷ್ಯಾ ಅಗಾಧವಾಗಿ ತಯಾರಿಸಿದ ಶಸ್ತ್ರಾಸ್ತ್ರಗಳ ಮೇಲ್ವಿಚಾರಣೆಯನ್ನು ವಾಯುಪಡೆ ನಿರ್ವಹಿಸುತ್ತದೆ.


ಇದನ್ನೂ ಓದಿ: Explained: ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದ್ಯಾ ತೈವಾನ್‌ ಮೇಲಿನ ಚೀನಾದ ಆಕ್ರಮಣ

 ಫೆಬ್ರವರಿಯಲ್ಲಿ ಅಂಕಿಅಂಶಗಳನ್ನು ನೋಡಿದಾಗ ಉಕ್ರೇನಿಯನ್ ವಾಯುಪಡೆಯನ್ನು ಅಥವಾ ಪೊವಿಟ್ರಿಯಾನಿ ಸೈಲಿ ಉಕ್ರೈನಿ (ಪಿಎಸ್‌ಯು) ಅನ್ನು ನೆಲದಲ್ಲಿ ನಾಶಮಾಡಲು ಮತ್ತು ಅದರ ವಾಯು ರಕ್ಷಣಾ ಮತ್ತು ಕಮಾಂಡ್ ಸೆಂಟರ್‌ಗಳನ್ನು ನಾಶಮಾಡಲು ರಷ್ಯಾ ಉತ್ತಮ ಕಾರ್ಯತಂತ್ರವನ್ನೇ ಹೊಂದಿತ್ತು. ರಷ್ಯಾದ VKS 722 ಫೈಟರ್ ಜೆಟ್‌ಗಳನ್ನು ಹೊಂದಿದ್ದರೆ ಉಕ್ರೇನ್‌ನ PSU 69 ಫೈಟರ್ ಜೆಟ್‌ಗಳನ್ನು ಮಾತ್ರವೇ ಹೊಂದಿತ್ತು.

Published by:Precilla Olivia Dias
First published: