• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Amritsar Woman: ಡ್ರಗ್ಸ್ ನಶೆಯಲ್ಲಿ ತೇಲಾಟ, ಹೆಜ್ಜೆ ಇಡಲಾಗದೇ ಪರದಾಟ! ನಡು ರಸ್ತೆಯಲ್ಲಿ ಯುವತಿ ಹೈಡ್ರಾಮಾ

Amritsar Woman: ಡ್ರಗ್ಸ್ ನಶೆಯಲ್ಲಿ ತೇಲಾಟ, ಹೆಜ್ಜೆ ಇಡಲಾಗದೇ ಪರದಾಟ! ನಡು ರಸ್ತೆಯಲ್ಲಿ ಯುವತಿ ಹೈಡ್ರಾಮಾ

ಪಂಜಾಮ್ ಮಹಿಳೆ

ಪಂಜಾಮ್ ಮಹಿಳೆ

Viral video of Amritsar woman: ಮಾದಕ ವ್ಯಸನ ಮುಕ್ತ ದೇಶವನ್ನಾಗಿಸಬೇಕು ಎಂದು ಹಲವಾರು ಭಾಷಣಗಳನ್ನು, ಹೋರಾಟಗಳನ್ನು ಮಾಡಿದರೆ ಸಾಲದು. ಇದಕ್ಕೆ ಸಮನಾಗಿ ನಾಗರಿಕರೂ ನಡೆದುಕೊಳ್ಳಬೇಕು. ಒಂದು ಕಾಲದಲ್ಲಿ ಕೇವಲ ಪುರುಷರು ಮಾತ್ರ ವ್ಯಸನಕ್ಕೆ ಒಳಗಾಗುತ್ತಿದ್ದರೆ ಈಗಿನ ಕಾಲದಲ್ಲಿ ಸ್ರ್ತೀಯರು ಕೂಡ ಇದಕ್ಕೆ ದಾಸರಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಛತ್ತೀಸ್​ ಘಡದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.

ಮುಂದೆ ಓದಿ ...
  • Share this:
  • published by :

ಮಾದಕ (Drug) ವಸ್ತು ಮುಕ್ತ ಸಮಾಜವನ್ನಾಗಿಸಬೇಕು ಎಂಬುದು ಅದೆಷ್ಟೋ ಭಾಷಣಗಳು, ಹೋರಾಟಗಳು ದಿನೇ ದಿನೇ ನಡೆಯುತ್ತಿವೆ.  ಆದರೆ ಸಮಾಜದಲ್ಲಿ  ಏನಾಗುತ್ತಿದೆ ಎಂಬುದು  ಸಾರ್ವಜನಿಕರಿಗೆ ತಿಳಿದಿದೆ.  ಒಂದು ಕಾಲದಲ್ಲಿ ಕೇವಲ ಪುರುಷರು ಮಾತ್ರ ಈ ಮಾದಕ ಚಟಗಳಿಗೆ ಬಲಿಯಾಗುತ್ತಿದ್ದ ಕಾಲವಿತ್ತು ಮತ್ತು ಅದನ್ನು ತಪ್ಪಿಸಲು ಹಲವಾರು ತರಬೇತಿ ಕೇಂದ್ರಗಳು ಇತ್ತು. ಆದರೆ ಇಂದಿನ ಕಾಲ ಅತೀ ಕೆಟ್ಟು ಹೋಗಿದೆ. ಕೇವಲ ಪುರುಷರು ಮಾತ್ರವಲ್ಲದೇ ಮಹಿಳೆಯರು ಕೂಡ ಬಲಿಯಾಗುತ್ತಿದ್ದಾರೆ. ಇತ್ತೀಚೆಗಿನ ಸಮೀಕ್ಷೆಯ (Survey) ಪ್ರಕಾರ ಮಹಿಳೆಯರು ಶೇಕಡ 65 ರಷ್ಟು ಮದ್ಯಪಾನವನ್ನು ಸೇವನೆ ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಮದ್ಯಪಾನ ಒಂದು ರೀತಿಯ ಟ್ರೆಂಡ್, ಅಪ್​ಡೇಟೆಡ್​ ಜನರೇಶನ್, ಸ್ಟೈಲ್ ಎಂಬ ಅಭಿಪ್ರಾಯವನ್ನು ಮಹಿಳೆಯರೇ ವ್ಯಕ್ತಪಡಿಸುತ್ತಾರೆ. ಇದು ನಗರಗಳಲ್ಲಿ ಅಕ್ರಮವಲ್ಲ (Illegal)  ಎಂಬುದು ಸಾಬೀತಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಒಂದು ವಿಡಿಯೋ ವೈರಲ್ ಆಗಿದೆ. 


ಏನಿದು ವಿಷಯ?
ಪಂಜಾಬ್​ನ ಅಮೃತಸರದಲ್ಲಿ ಯುವತಿಯೊಬ್ಬಳು ಅಕ್ರಮ ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗಿರುವ ವಿಡಿಯೋ  ಒಂದು ವೈರಲ್ ಆಗಿದೆ. ಇದು ರಾಜ್ಯದಲ್ಲಿ ಮಾದಕ ದ್ರವ್ಯ ಸೇವನೆಯ ಸಮಸ್ಯೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ. ಆ ಮಹಿಳೆಯನ್ನು ಗುರುತಿಸಲಾಗಿದ್ದು, ವ್ಯಸನಮುಕ್ತ ಕೇಂದ್ರಕ್ಕೆ ದಾಖಲಿಸಲಾಗಿದೆ.




ಅಮೃತಸರದ ಪೂರ್ವ ಕ್ಷೇತ್ರದ ಮಕ್ಬೂಲ್​ಪುರ ಪ್ರದೇಶದದಲ್ಲಿ ಈ  ವಿಡಿಯೋವೊಂದನ್ನು ಸೆರೆಹಿಡಿಯಲಾಗಿದೆ. ಯುವತಿಯೊಬ್ಬಳು ರಸ್ತೆಯ ಮೇಲೆ ನಿಂತುಕೊಂಡು ಆಚೆ ಈಚೆ ಓಡಾಡಲು ಹೆಣಗಾಡುತ್ತಿದ್ದಳು. ಈ ಪ್ರದೇಶವು ಮಾದಕ ವ್ಯಸನ ಮತ್ತು ವ್ಯಸನಿಗಳ ಸಮಸ್ಯೆಗಳಿಗೆ ಕುಖ್ಯಾತವಾಗಿದೆ.


ಇದನ್ನೂ ಓದಿ: Viral Video: ಮಹಿಳೆ ಸ್ನಾನ ಮಾಡ್ವಾಗ ಬಾತ್‌ ರೂಂ ಒಳಗೇ ಬಂತು ಹೆಬ್ಬಾವು! ಮುಂದೇನಾಯ್ತು ಅಂತ ವಿಡಿಯೋ ನೋಡಿ


ಸಿಖ್ಖರ ಪವಿತ್ರ ನಗರದಲ್ಲಿ ನಡೆದ ಘಟನೆ
ಸಿಖ್ಖರ ಪವಿತ್ರ ನಗರದಲ್ಲಿರುವ ಮಕ್ಬೂಲ್ಪುರವು ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದ ಘಟನೆಗಳಿಗೆ ಆಗಾಗ ಸದ್ಧು ಮಾಡುತ್ತಲೇ ಇರುತ್ತದೆ. ಇದೊಂದು ಪವಿತ್ರ ಸ್ಥಳವಾಗಿದ್ದರೂ ಕೂಡ ಜನರು ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ. ಇದರ ಬಗ್ಗೆ ಆಗಾಗ ದೂರುಗಳು ದಾಖಲಾಗುತ್ತಿದ್ದರು ಜನರು ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ. ಅದರಲ್ಲಿ ಈ ಮಹಿಳೆಯ  ವಿಡಿಯೋ ಕೂಡ ಒಂದು ಎನ್ನಬಹುದಾಗಿದೆ.


ಪೊಲೀಸ್ ಸಿಬ್ಬಂದಿ
ಇಂತಹ ವಿಷಯಗಳ ಬಗ್ಗೆ ಪೊಲೀಸ್ ಸಿಬ್ಬಂದಿಗಳ ಅನೇಕ ಡಿ-ಅಡಿಕ್ಷನ್ ಡ್ರೈವ್​ಗಳು ಸರಿಯಾದ ಫಲಿತಾಂಶಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಯಾಕೆಂದರೆ ಪೊಲೀಸರಿಗೆ ಬರುವಂತಹ ಮೂಲಾಧಾರಗಳು ತಪ್ಪಾಗಿರುತ್ತದೆ. ಆದುದರಿಂದ ಪೊಲೀಸರು ಉತ್ತಮ ಫಲಿತಾಂಶಗಳನ್ನು ನೀಡುವಲ್ಲಿ ವಿಫಲರಾಗುತ್ತಿದ್ದಾರೆ.


ವಿಡಿಯೋ ವೈರಲ್ ಆದ ನಂತರ, ಮಕ್ಬೂಲ್​ಪುರ ಪೊಲೀಸರು ಭಾನುವಾರ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೇ, ಅನುಮಾನಸ್ಪದ ಚಟುವಟಿಕೆಗಳ ಕಾರಣ 12 ಮಂದಿಯನ್ನು ತನಿಖೆಗಾಗಿ  ಶಂಕಿತ 5 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಅಮೃತಸರ ಪೂರ್ವ ಕ್ಷೇತ್ರವನ್ನು ಪ್ರತಿನಿಧಿಸುವ ಎಎಪಿ ಶಾಸಕಿ ಜೀವನಜೋತ್ ಕೌರ್, ಮಹಿಳೆಯನ್ನು ಹಿಡಿದುಡಿ-ಅಡಿಕ್ಷನ್  ಸೆಂಟರ್​ಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಹಲವು ಸಂಸ್ಕೃತಿ ಸಂಪ್ರದಾಯಗಳನ್ನು ಆಧಾರವಾಗಿರಿಸಿಕೊಂಡಿರುವ ಭಾರತ ದೇಶದಲ್ಲಿ ಇಂತಹ ಸನ್ನಿವೇಶಗಳೂ ನಿಜಕ್ಕೂ ಬೇಸರವನ್ನು ತಂದೊಡ್ಡುತ್ತವೆ. ಅದೆಷ್ಟು ಮಾದಕ ದ್ರವ್ಯಗಳ ನಿರ್ಮೂಲನೆ ಕೇಂದ್ರಗಳು, ತರಬೇತಿಗಳು ಇದ್ದರೂ ಕೂಡ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಸಾಧ್ಯ.


ಇದನ್ನೂ ಓದಿ: Ice cream Pizza Video: ನಿಮಗೆ ಪಿಜ್ಜಾ ಗೊತ್ತು, ಐಸ್ ಕ್ರೀಮ್ ಗೊತ್ತು; ಆದ್ರೆ ಐಸ್‌ಕ್ರೀಮ್ ಪಿಜ್ಜಾ ಬಗ್ಗೆ ಗೊತ್ತಾ?


ಉದಾಹರಣೆಗೆ ಕೋವಿಡ್​ ಲಾಕ್​ಡೌನ್ ಸಮಯದಲ್ಲಿಯೇ ಕಂಡಿರಬಹುದು. 2 ತಿಂಗಳುಗಳ ಕಾಲ ಲಾಕ್​ಡೌನ್ ಮಾಡಿ, ತದನಂತರ ಬಾರ್​ಗಳನ್ನು ಓಪನ್​ ಮಾಡಿದಾಗ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ಬಾರ್​ಗಳ ಮುಂದೆ ಸಾಲುಗಟ್ಟಲೆ ನಿಂತಿದ್ದರು. ಇಂತಹ ಉದಾಹರಣೆಗಳೇ ಸಾಕು,  ಮದ್ಯಪಾನ ಮುಕ್ತ ದೇಶವನ್ನಾಗಿಸಲು ಬಲು ಕಷ್ಟ ಎಂದು.

First published: