ಭುವನೇಶ್ವರ: ಎಣ್ಣೆಗಾಗಿ ಏನೆಲ್ಲ ಮಾಡಿರೋ ಸುದ್ದಿಯನ್ನ ಕೇಳಿರ್ತೀರಿ, ಆದ್ರೆ ಇಲ್ಲೊಂದು ಸುದ್ದಿಯಿದೆ. ಹೀಗೂ ಮದ್ಯ ಸೇವನೆ ಮಾಡಿದ್ದಾರೆ ಅಂದ್ರೆ ನಂಬಲೂ ಸಾಧ್ಯವಿಲ್ಲದಂತಹ ಸುದ್ದಿಯೊಂದು ವರದಿಯಾಗಿದೆ. ಹೌದು, ಆ್ಯಂಬುಲೆನ್ಸ್ ಡ್ರೈವರ್ (Ambulance Driver) ಒಬ್ಬ ಪೇಷೆಂಟ್ನ್ನೂ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆಯೇ ಮದ್ಯ ಸೇವನೆ ಮಾಡಿದ್ದಾರೆ. ಅಷ್ಟೇ ಅಲ್ಲ, ತನ್ನ ಜೊತೆ ಆ್ಯಂಬುಲೆನ್ಸ್ನಲ್ಲಿ ಇದ್ದ ರೋಗಿಗೂ ಸಹ ಒಂದ್ ಪೆಗ್ ನೀಡಿದ್ದಾರೆ! ಸದ್ಯ ಆ್ಯಂಬುಲೆನ್ಸ್ ಡ್ರೈವರ್ ಮತ್ತು ರೋಗಿ ಮದ್ಯ ಸೇವನೆ ಮಾಡುವ ವಿಡಿಯೋ ಸಖತ್ ವೈರಲ್ (Video Viral) ಆಗುತ್ತಿದೆ.
ರೋಗಿಯನ್ನು ಆ್ಯಂಬುಲೆನ್ಸ್ನಲ್ಲಿ ಕರೆದೊಯ್ಯುವಾಗ ಆ್ಯಂಬುಲೆನ್ಸ್ ಡ್ರೈವರ್ ರಸ್ತೆ ಪಕ್ಕದಲ್ಲೇ ವಾಹನವನ್ನು ನಿಲ್ಲಿಸಿದ್ದಾರೆ. ಅಲ್ಲೇ ಮದ್ಯ ಸೇವನೆ ಮಾಡಿದ್ದಾರೆ. ಜೊತೆಗೆ ರೋಗಿಗೂ ಮದ್ಯ ನೀಡಿದ್ದಾರೆ.
In a shocking incident that took place in #Odisha #india ,a video of an ambulance driver drinking with a patient while on their way to hospital. In the video, the ambulance driver can be seen drinking and even sharing the drink with a patient. pic.twitter.com/gNJ07tECV6
— S a m (@cheguwera) December 20, 2022
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಚಿತ್ರ-ವಿಚಿತ್ರ ಪ್ರತಿಕ್ರಿಯೆ ಹರಿದುಬರುತ್ತಿದೆ.
Original Medicine 😄😄
— Shyamalroy (@Shyamal79809987) December 21, 2022
ಆ್ಯಂಬುಲೆನ್ಸ್ ಡ್ರೈವರ್ ಕುರಿತು ಸ್ಥಳೀಯರ ಆಕ್ರೋಶ
ವಿಡಿಯೋ ವೈರಲ್ ಅಗುತ್ತಿದ್ದಂತೆ ಆ್ಯಂಬುಲೆನ್ಸ್ ಡ್ರೈವರ್ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ್ಯಂಬುಲೆನ್ಸ್ ಡ್ರೈವರ್ ಜೊತೆ ರೋಗಿ ಮದ್ಯ ಸೇವನೆ ಮಾಡಿದ ಪ್ರಕರಣದ ಕುರಿತು ತನಿಖೆ ನಡೆಸಬೇಕು. ಆ್ಯಂಬುಲೆನ್ಸ್ ಡ್ರೈವರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.
ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ
ಸದ್ಯ ಈ ಪ್ರಕರಣದ ಕುರಿತು ಆ್ಯಂಬುಲೆನ್ಸ್ ಡ್ರೈವರ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಖಾಸಗಿ ಆ್ಯಂಬುಲೆನ್ಸ್ ಆಗಿರುವ ಕಾರಣ ಆರ್ಟಿಒ ಈ ಘಟನೆಯ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: PVC Pipe Gun: ಮಂಗನನ್ನು ಓಡಿಸೋಕೆ ಪೈಪ್ ಗನ್! ಕೃಷಿಕರೇ, ವಿಡಿಯೋ ನೋಡಿ
Viral Kidnap Case: ಅಪ್ಪನ ಎದುರೇ ಮಗಳ ಕಿಡ್ಯ್ನಾಪ್, ಅವನೇ ನನ್ನ ಗಂಡ ಎಂದ ಯುವತಿ!
ದೇವಸ್ಥಾನಕ್ಕೆ ಹೋಗಿ ವಾಪಸ್ ಆಗುತ್ತಿದ್ದಾಗ ತಂದೆಯ ಎದುರೇ 18 ವರ್ಷದ ಮಗಳನ್ನು ಗ್ಯಾಂಗ್ ಒಂದು ಕಿಡ್ನ್ಯಾಪ್ ಮಾಡಿದ ಘಟನೆಯೊಂದು ನಡೆದಿದೆ. ಆದರೆ ಪಾಪದ ತಂದೆ, ಇದು ಕಿಡ್ನ್ಯಾಪ್ ಎಂದು ಕಣ್ಣೀರು ಹಾಕುತ್ತಿದ್ದಾಗ ಕಿಡ್ನ್ಯಾಪ್ ಆದ ಮಗಳು ವಿಡಿಯೋ (Viral Video) ಬಿಡುಗಡೆ ಮಾಡಿದ್ದಾಳೆ.ನನ್ನನ್ನು ಕಿಡ್ನ್ಯಾಪ್ ಮಾಡಿದ ವ್ಯಕ್ತಿಯ ಜೊತೆ ನನಗೆ ಒಂದು ವರ್ಷದ ಹಿಂದೆಯೇ ಮದುವೆಯಾಗಿದೆ. ನಾನು ಮದುವೆಯಾದ ವ್ಯಕ್ತಿ ದಲಿತ ಎಂದು ನನ್ನ ಅಪ್ಪ ಮದುವೆಯನ್ನು ಒಪ್ಪಿಕೊಂಡಿರಲಿಲ್ಲ. ನನ್ನ ಗಂಡನ ವಿರುದ್ಧ ಪೊಲೀಸ್ ಕಂಪ್ಲೇಟ್ (Police Complaint) ಕೊಟ್ಟಿದ್ದರು ಎಂದು ಯುವತಿ ವಿಡಿಯೊದಲ್ಲಿ ಹೇಳಿದ್ದಾಳೆ.
ಇದನ್ನೂ ಓದಿ: Uttara Kannada: ಕಡಿಮೆ ಖರ್ಚು, ಹೆಚ್ಚು ಲಾಭ! ಕೃಷಿಕರೇ ಈ ಪಂಪ್ ಬಳಸಿ ನೋಡಿ
ಅಪಹರಣಕಾರರ ಗುಂಪು ಯುವತಿಯನ್ನು ಕಿಡ್ನ್ಯಾಪ್ ಮಾಡುವ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಬಾಲಕಿ ತನ್ನ ತಂದೆಯೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಸಂಬಂಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲೇ ಈ ವಿಚಿತ್ರ ಘಟನೆ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ