• Home
  • »
  • News
  • »
  • national-international
  • »
  • ನಾಗಾಲ್ಯಾಂಡ್​ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ವಿಡಿಯೋ ವೈರಲ್​; ಏನಿದು ಘಟನೆ?

ನಾಗಾಲ್ಯಾಂಡ್​ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ವಿಡಿಯೋ ವೈರಲ್​; ಏನಿದು ಘಟನೆ?

ಗ್ಯಾಂಗ್ ರೇಪ್​ನ ಮೊದಲು ವೈರಲ್​ ಆಗಿದ್ದ ವಿಡಿಯೋದ ದೃಶ್ಯ

ಗ್ಯಾಂಗ್ ರೇಪ್​ನ ಮೊದಲು ವೈರಲ್​ ಆಗಿದ್ದ ವಿಡಿಯೋದ ದೃಶ್ಯ

ಈ ವಿಡಿಯೋದಲ್ಲಿರುವ ಕಾಮುಕರ ಫೋಟೋವನ್ನು ಅಸ್ಸಾಂ ಪೊಲೀಸರು ಬಿಡುಗಡೆ ಮಾಡಿದ್ದು, ಆರೋಪಿಗಳ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

  • Share this:

    ಮಹಿಳೆಯೊಬ್ಬರ ಮೇಲೆ ಕಾಮುಕರು ಎರಗಿ ಅತ್ಯಾಚಾರ ನಡೆಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಜೋಧಪುರದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಮಹಿಳೆ ನಾಗಲ್ಯಾಂಡ್​ ಮೂಲದವರು ಎಂಬುದು ಕಂಡು ಬಂದಿದೆ . ಇನ್ನು ಆ ಮಹಿಳೆಗೆ ಕಿರುಕುಳ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದು, ಈ ವಿಡಿಯೋದಲ್ಲಿರುವವರುನ್ನು ಹುಡುಕಿಕೊಟ್ಟರೆ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ಮಹಿಳೆಯ ಮೇಲೆ ದೌರ್ಜನ್ಯವೆಸಗಿದ ಆರೋಪಿಗಳ ಪತ್ತೆಗೆ ಮುಂದಾಗಿರುವ ಪೊಲೀಸರು ಈ ವ್ಯಕ್ತಿಗಳ ಸುಳಿವು ನೀಡಿದರೆ ಬಹುಮಾನ ಘೋಷಿಸುವುದಾಗಿ ತಿಳಿಸಿದ್ದಾರೆ.


    ಏನಿದು ಘಟನೆ?


    ಮೇ 26ರಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದ್ದು, ಈ ವಿಡಿಯೋದಲ್ಲಿ ಮಹಿಳೆ ಮೇಲೆ ನಾಲ್ವರು ಕಾಮುಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದಾದ ತಕ್ಷಣಕ್ಕೆ ನಾಗಾಲ್ಯಾಂಡ್​ ಮೂಲಕ ಲೋವಿಕಲಿ ಸುಮಿ ಎಂಬ ಮಹಿಳೆ ಜೋದ್ಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.


    ವಿಡಿಯೋದಲ್ಲಿ ಮಹಿಳೆ ಗೆ ನಾಲ್ಕು ಜನರು ಹೊಡೆದು, ಆಕೆ ಮುಖವನ್ನು ಕಾಲಿನಿಂದ ಹೊಸಕುತ್ತಿರುವುದು ಕೂಡ ಬಂದಿದೆ. ದುರಾದೃಷ್ಟ ಎಂದರೇ ಮಹಿಳೆಯೊಬ್ಬಳು ಕೂಡ ಈ ಗ್ಯಾಂಗ್​ನಲ್ಲಿ ಸಂತ್ರಸ್ತೆ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಸಂತ್ರಸ್ತೆಯನ್ನು ಬೆತ್ತಲಾಗಿ ಭೀಕರವಾಗಿ ಹಿಂಸಿಸಲಾಗಿದೆ.


    ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಈ ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದರು. ಈ ಬಗ್ಗೆ ಎಚ್ಚೆತ್ತ ಪೊಲೀಸರು, ವಿಡಿಯೋದಲ್ಲಿರುವ ಆರೋಪಿಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜೋಧ್ಪುರ ಪೊಲೀಸರು,  ಜೋದ್ಪುರದಲ್ಲಿ  ನಾಗಲ್ಯಾಂಡ್​  ಮೂಲದಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕೆ ಮರಣೋತ್ತರ ಪರೀಕ್ಷೆ ನಡೆಸಿ ಜೋದ್ಪುರದಲ್ಲಿದ್ದ ಆಕೆಯ ಸಂಬಂಧಿಗಳಿಗೆ ಶವ ಹಸ್ತಾಂತರಿಸಲಾಗಿದೆ ಎಂದಿದ್ದಾರೆ. ಈಕೆಯ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ. ಅಲ್ಲದೇ, ಆಕೆ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ಕೂಡ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಮತ್ತು ಸಂತ್ರಸ್ತೆ ಬೇರೆ ಎಂದಿದ್ದಾರೆ


    ಇದನ್ನು ಓದಿ: ಮಗುವಿನ ದುಬಾರಿ ಔಷಧಕ್ಕಾಗಿ 16 ಕೋಟಿ ನಿಧಿ ಸಂಗ್ರಹಿಸಿದ ಅನುಷ್ಕಾ ಶರ್ಮಾ - ವಿರಾಟ್​ ಕೊಹ್ಲಿ


    ಘಟನೆ ಕುರಿತು ಟ್ವೀಟ್​ ಮಾಡಿರುವ ಸಚಿವ ಕಿರಣ್​ ರಿಜಿಜು ಕೂಡ ವಿಡಿಯೋದಲ್ಲಿರುವ ಮಹಿಳೆ, ಆತ್ಮಹತ್ಯೆ ಮಾಡಿಕೊಂಡಿರುವವರು ಒಬ್ಬರೇ ಅಲ್ಲ ಎಂದ್ದಿದ್ದಾರೆ. ಅಲ್ಲದೇ ಈ  ಘಟನೆ ಕುರಿತು ಪೊಲೀಸರೊಂದಿಗೆ ಚರ್ಚೆ ನಡೆಸುತ್ತೇನೆ. ವಿಡಿಯೋದಲ್ಲಿ ಮಹಿಳೆಯ ವಿರುದ್ಧ ದೌರ್ಜನ್ಯ ಎಸಗಿದ  ಆರೋಪಿಗಳನ್ನು ಹುಡುಕಿ ಬಂಧಿಸಲು ಪೊಲೀಸರು ಎಲ್ಲಾ ಪ್ರಯತ್ನ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.



    ಈ ವಿಡಿಯೋ ವೈರಲ್​ ಆದ ಬೆನಲ್ಲೇ ಕಾಮುಕರ ಫೋಟೋವನ್ನು ಅಸ್ಸಾಂ ಪೊಲೀಸರು ಬಿಡುಗಡೆ ಮಾಡಿದ್ದು, ಆರೋಪಿಗಳ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.


    ಆತ್ಮಹತ್ಯೆ ಯಾದ ಯುವತಿ, ಸಂತ್ರಸ್ತೆ ಬೇರೆ 


    2021ರ ಜನವರಿಯಲ್ಲಿ ನಡೆದ ಘಟನೆ ಇದಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ವಿಡಿಯೋದಲ್ಲಿರುವ ಯುವತಿ ಜೋಧಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಲೋವಿಕವಿ ಸುಮಿ ಅಲ್ಲ ಎಂದು ಐಪಿಎಸ್​ ಅಧಿಕಾರಿ ತಮ್ಮ ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ, ಈ ವಿಡಿಯೋವನ್ನು ಮೃತ ಲೋವಿಕವಿ ಕುಟುಂಬಕ್ಕೂ ತೋರಿಸಲಾಗಿದ್ದು, ಅವರು ಕೂಡ ವಿಡಿಯೋದಲ್ಲಿರುವುದ ಲೋವಿಕವಿ ಸುಮಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೇರೆ ಈಶಾನ್ಯ ಭಾಗದ ಬೇರೆ ಯುವತಿ ವಿಡಿಯೋದಲ್ಲಿರುವುದ ದೃಢಪಟ್ಟಿದೆ.

    Published by:Seema R
    First published: