HOME » NEWS » National-international » VIRAL VIDEO OF A CAR DRIVER JUST MISSING DEATH ON HIGHWAY FROM A TRUCK THAT WENT OUT OF CONTROL STG SKTV

Viral Video: ಟ್ರಕ್​ ರೂಪದಲ್ಲಿ ಯಮರಾಜನೇ ಬಂದಿದ್ದ, ಕಾರು ಚಾಲಕ Just Miss !

ಅಮೆರಿಕದ ಅಲಬಾಮಾದಲ್ಲಿ ಅಪಘಾತವೊಂದರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ತಲ್ಲಣಗೊಳಿಸಿದೆ. ಇದ್ದಕ್ಕಿದ್ದಂತೆ, ಅತೀ ವೇಗದಲ್ಲಿ ಹೋಗುವ ಕಾರಿನ ಮುಂದೆ ಟ್ರಕ್ ಉರುಳಿಬಿದ್ದಿದೆ. ಚಾಲಕ ಕಾರನ್ನು ನಿಲ್ಲಿಸಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

news18-kannada
Updated:May 14, 2021, 12:01 PM IST
Viral Video: ಟ್ರಕ್​ ರೂಪದಲ್ಲಿ ಯಮರಾಜನೇ ಬಂದಿದ್ದ, ಕಾರು ಚಾಲಕ Just Miss !
ಸಾಂದರ್ಭಿಕ ಚಿತ್ರ
  • Share this:
ಅಲಬಾಮಾ, ಅಮೇರಿಕಾ: ಜಗತ್ತಿನಾದ್ಯಂತ ದಿನನಿತ್ಯ ರಸ್ತೆ ಅಪಘಾತಗಳು ಸಾಮಾನ್ಯವಾಗಿ ಜರುಗುತ್ತವೆ. ಇದರಿಂದ ಹಲವಾರು ಸಾವು ನೋವುಗಳ ವರದಿಗಳು ಸುದ್ದಿ ಮಾಧ್ಯಮಗಳು ಬಿತ್ತರಿಸುತ್ತಲೇ ಇರುತ್ತವೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳಲ್ಲಿ ಅಪಘಾತಗಳ ವಿಡಿಯೋಗಳು ಬಹುಬೇಗನೇ ವೈರಲ್ ಆಗುತ್ತವೆ. ಸಾಮಾನ್ಯವಾಗಿ ರಸ್ತೆಗಳಲ್ಲಿ ಚಾಲಕರ ಅಜಾಗರೂಕತೆಯಿಂದ ಅಪಘಾತಗಳು ಸಂಭವಿಸುತ್ತವೆ. ಸಂಚಾರ ನಿಯಮಗಳನ್ನು ಗಾಳಿಗೆ ತೂರುವ ಚಾಲಕರು ದೊಡ್ಡ ಪ್ರಮಾಣದ ಅಪಘಾತಗಳಿಗೆ ಕಾರಣರಾಗುತ್ತಾರೆ. ಹೆದ್ದಾರಿಗಳಲ್ಲಿ ಸರಕುಗಳನ್ನು ತುಂಬಿದಂತಹ ಟ್ರಕ್‌ಗಳಂತಹ ಭಾರಿ ವಾಹನಗಳ ಸಂಚಾರವೇ ಹೆಚ್ಚಾಗಿರುತ್ತದೆ. ಇವುಗಳ ಮಧ್ಯೆ ಸಣ್ಣ ಗಾತ್ರದ ವಾಹನಗಳ ಸಂಚಾರಕ್ಕೆ ಹೆಚ್ಚು ತೊಂದರೆಯಾಗುತ್ತದೆ. 

ಇತ್ತೀಚೆಗೆ ಅಮೆರಿಕದ ಅಲಬಾಮಾದಲ್ಲಿ ಅಪಘಾತವೊಂದರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ತಲ್ಲಣಗೊಳಿಸಿದೆ. ಇದ್ದಕ್ಕಿದ್ದಂತೆ, ಅತೀ ವೇಗದಲ್ಲಿ ಹೋಗುವ ಕಾರಿನ ಮುಂದೆ ಟ್ರಕ್ ಉರುಳಿಬಿದ್ದಿದೆ. ಚಾಲಕ ಕಾರನ್ನು ನಿಲ್ಲಿಸಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ವರದಿಯ ಪ್ರಕಾರ, ಮೇ 10, 2021 ರಂದು ಈ ಅಪಘಾತ ನಡೆದಿದ್ದು, ಕಾರಿನಲ್ಲಿ ಅಳವಡಿಸಲಾಗಿದ್ದ ಡ್ಯಾಶ್‌ಕ್ಯಾಮ್ ನಲ್ಲಿ ಅಪಘಾತದ ವಿಡಿಯೋ ರೆಕಾರ್ಡ್ ಆಗಿದೆ.

ಕಾರಿನ ಮುಂದೆ ಟ್ರಕ್ ಕಾಣಿಸಿಕೊಂಡಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಟ್ರಕ್ ಚಾಲಕನು ರಸ್ತೆ ತಿರುವಿನಲ್ಲಿ ಅತೀ ವೇಗವಾಗಿ ಟ್ರಕ್ ಅನ್ನು ತಿರುವು ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕುತ್ತಾನೆ. ಆದರೆ, ಅವನ ವೇಗ ಎಷ್ಟಿತ್ತೆಂದರೆ ಟ್ರಕ್‌ನ ಹಿಂಬದಿಯ ಸಾಮಾನುಗಳನ್ನು ತುಂಬಿದ್ದ ಕಂಟೈನರ್‌ ರಸ್ತೆಯ ಮೇಲೆ ಉರುಳಿ ಬಿದ್ದಿದೆ. ಕಾರು ಟ್ರಕ್‌ನ ಹಿಂದೆಯೇ ಇತ್ತು. ತಕ್ಷಣ ತನ್ನ ಕಾರನ್ನು ನಿಲ್ಲಿಸಿದ ಚಾಲಕನು, ತನ್ನ ಕಾರನ್ನು ಹಿಂದಕ್ಕೆ ತಿರುಗಿಸುತ್ತಾನೆ. ಅವನು ಟ್ರಕ್‌ಗೆ ಡಿಕ್ಕಿ ಹೊಡೆದಿದ್ದರೆ, ದೊಡ್ಡ ಅಪಘಾತ ಸಂಭವಿಸುವ ಸಾಧ್ಯತೆಯಿತ್ತು. ಕಾರಿನ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅಪಘಾತ ತಪ್ಪಿದಂತಾಗಿದೆ.

Youtube Video


ಟ್ರಕ್ ಬೀಳುತ್ತಿದ್ದಂತೆಯೇ, ಎಚ್ಚೆತ್ತುಕೊಂಡ ಕಾರಿನ ಚಾಲಕನು ಉರುಳಿಬಿದ್ದ ಟ್ರಕ್ ಮತ್ತು ಬಿದ್ದ ಸ್ಕ್ರ್ಯಾಪ್ ಲೋಹಗಳ ಹಿಂದೆ ಕೆಲವು ಮೀಟರ್ ಹಿಂದೆ ಕಾರನ್ನು ನಿಲ್ಲಿಸುವಲ್ಲಿ ಯಶಸ್ವಿಯಾದನು. ಕಾರಿನ ಚಾಲಕನು ತನ್ನ ವಾಹನವನ್ನು ಹಿಂದಕ್ಕೆ ಓಡಿಸಿ, ಉರುಳಿಸಿದ ಟ್ರಕ್ ಮತ್ತು ಅವನ ಕಾರಿನ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಂಡಿರುವುದನ್ನು ವಿಡಿಯೋಯಲ್ಲಿ ಕಾಣಬಹುದಾಗಿದೆ.

"ನಾನು ಅದನ್ನು ತಪ್ಪಿಸಿಕೊಳ್ಳುವ ಸಮಯದಲ್ಲಿ ಕಾರನ್ನು ನಿಧಾನಗೊಳಿಸಲು ಪ್ರಾರಂಭಿಸಿದೆ ಮತ್ತು ರಸ್ತೆಯ ಉದ್ದಕ್ಕೂ ಸ್ಕ್ರ್ಯಾಪ್ ಲೋಹದ ಸಾಮಾನುಗಳು ಚೆಲ್ಲಿದವು. ನಾನು ಒಂದು ಸೆಕೆಂಡ್ ಮೊದಲೇ ಕಾರನ್ನು ಮುಂದೆ ತೆಗೆದುಕೊಂಡು ಹೋಗಿದ್ದರೆ, ಸ್ಕ್ರ್ಯಾಪ್ ಲೋಹದ ಸಾಮಾನುಗಳು ನನ್ನ ಮೇಲಿರುತ್ತಿದ್ದವು" ಎಂದು ಕಾರಿನ ಚಾಲಕನು ತನ್ನ ಕರಾಳ ಅನುಭವ ಹಂಚಿಕೊಂಡನು.
Youtube Video
ಮೇ 11 ರಂದು ಈ ಟ್ರಕ್ ಅಪಘಾತದ ವಿಡಿಯೋ ಅಪ್‌ಲೋಡ್ ಮಾಡಲಾಗಿದ್ದು, ಇದುವರೆಗೆ ಯೂಟ್ಯೂಬ್‌ನಲ್ಲಿ 6,200 ಕ್ಕೂ ಹೆಚ್ಚು ಬಾರಿ ವಿಡಿಯೋವನ್ನು ವೀಕ್ಷಿಸಲಾಗಿದೆ.
Published by: Soumya KN
First published: May 14, 2021, 12:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories