• Home
  • »
  • News
  • »
  • national-international
  • »
  • Viral Video: ಮೈಕ್​ಗೆ ಕಾಂಡೋಮ್ ಸುತ್ತಿದ ವರದಿಗಾರ್ತಿ! ಬೇರೇನೂ ಸಿಕ್ಕಿಲ್ವಾ ಎಂದ ವೀಕ್ಷಕರು!

Viral Video: ಮೈಕ್​ಗೆ ಕಾಂಡೋಮ್ ಸುತ್ತಿದ ವರದಿಗಾರ್ತಿ! ಬೇರೇನೂ ಸಿಕ್ಕಿಲ್ವಾ ಎಂದ ವೀಕ್ಷಕರು!

ಮೈಕ್​ಗೆ ಕಾಂಡೋಮ್ ಸುತ್ತಿದ ವರದಿಗಾರ್ತಿ

ಮೈಕ್​ಗೆ ಕಾಂಡೋಮ್ ಸುತ್ತಿದ ವರದಿಗಾರ್ತಿ

ಮೈಕ್ರೊಫೋನ್​ಗೆ ಕಾಂಡೋಮ್ ಸುತ್ತಿರುವುದನ್ನು ಕಂಡು ವೀಕ್ಷಕರು ವಿಚಲಿತರಾಗಿದ್ದಾರೆ!

  • Share this:

ಫ್ಲೋರಿಡಾ: ಚಂಡಮಾರುತದ ವರದಿ ಮಾಡುತ್ತಿದ್ದ ಸುದ್ದಿವಾಹಿನಿಯೊಂದರ ವರದಿಗಾರ್ತಿಯೊಬ್ಬರು ಮೈಕ್​ನ್ನು ರಕ್ಷಿಸಲು ಕಾಂಡೋಮ್ (Mic With Condom) ಸುತ್ತಿದ್ದು ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಅಮೆರಿಕಾದ ಫ್ಲೋರಿಡಾದಲ್ಲಿ (Florida) ಖಾಸಗಿ ಸುದ್ದಿವಾಹಿನಿಯೊಂದರ ವರದಿಗಾರ್ತಿಯೇ ಚಂಡಮಾರುತದ ವರದಿ ಮಾಡುತ್ತಿದ್ದ ವೇಳೆ ಮೈಕ್​ಗೆ ಕಾಂಡೋಮ್ ಸುತ್ತಿಟ್ಟಿದ್ದು. ಲೈವ್ ಪ್ರಸಾರದ ವೇಳೆ ಮೈಕ್ರೊಫೋನ್‌ ಮೇಲೆ ಕಾಂಡೋಮ್ ಕಾಣಿಸಿದ್ದು ವೀಕ್ಷಕರ ಗಮನವನ್ನು ಸೆಳೆದಿದೆ. ಕೈಲಾ ಗೇಲರ್ ಎಂಬ ಖಾಸಗಿ ಸುದ್ದಿ ವಾಹಿನಿ ವರದಿಗಾರ್ತಿ ಫ್ಲೋರಿಡಾದ ಫೋರ್ಟ್ ಮೈಯರ್ಸ್‌ನಲ್ಲಿರುವ ಪಾರ್ಕಿಂಗ್ ಸ್ಥಳದಿಂದ ಚಂಡಮಾರುತ ಇಯಾನ್‌ನ ಭೂಕುಸಿತದ ಬಗ್ಗೆ ವರದಿ ಮಾಡುತ್ತಿದ್ದರು. ಆಕೆಯ ಮೈಕ್ರೊಫೋನ್​ಗೆ ಕಾಂಡೋಮ್ ಸುತ್ತಿರುವುದನ್ನು ಕಂಡು ವೀಕ್ಷಕರು ವಿಚಲಿತರಾಗಿದ್ದಾರೆ.ಇದನ್ನೂ ಓದಿ: Dadasaheb Phalke Award: ಕನ್ನಡದ ಕಲಾವಿದರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಗದ ಅಸಲಿ ಸತ್ಯವಿದು!

ಇಯಾನ್ ಚಂಡಮಾರುತದ ಸಮಯದಲ್ಲಿ ಖಾಸಗಿ ಸುದ್ದಿ ವಾಹಿನಿಯ ವರದಿಗಾರ್ತಿ ಮೈಕ್ರೊಫೋನ್​ಅನ್ನು ಸುರಕ್ಷಿತವಾಗಿ ಇರಿಸಿಕೊಂಡು ವರದಿ ಮಾಡುವಿಕೆಯನ್ನು ಅಭ್ಯಾಸ ಮಾಡುತ್ತಿದೆ ಎಂದು ವೀಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.


ಇಯಾನ್ ಚಂಡಮಾರುತಕ್ಕೆ ಸಿಲುಕಿ ಅಮೆರಿಕ ತತ್ತರ
ಇಯಾನ್ ಚಂಡಮಾರುತವು ನೈಋತ್ಯ ಫ್ಲೋರಿಡಾದಲ್ಲಿ ಭೂಕುಸಿತವನ್ನು ಮಾಡಿದೆ. ಇದು ಅಮೆರಿಕಾದಲ್ಲಿ ದಾಖಲಾದ ಅತ್ಯಂತ ಶಕ್ತಿಶಾಲಿ ಚಂಡಮಾರುತಗಳಲ್ಲಿ ಒಂದಾಗಿದೆ.


ಸಹಾಯಕ್ಕಾಗಿ ಕರೆಗಳ ಮಹಾಪೂರ
ಇಯಾನ್ ಚಂಡಮಾರುತದಿಂದ ಅಮೆರಿಕದ ನಗರಗಳ ಬೀದಿಗಳು ನೀರಿನಿಂದ ತುಂಬಿ ತುಳುಕುತ್ತಿವೆ. ಈ ಚಂಡಮಾರುತ ಅಮೆರಿಕದ ಕರಾವಳಿಯುದ್ದಕ್ಕೂ ಮರಗಳನ್ನು ಕಿತ್ತುಹಾಕಿದೆ. ಬೃಹತ್ ಚಂಡಮಾರುತವು ಬುಧವಾರ ತೀರಕ್ಕೆ ಅಪ್ಪಳಿಸಿದ ಕೇವಲ ಒಂದು ಗಂಟೆಯ ನಂತರ ಸ್ಥಳೀಯ ಜಿಲ್ಲಾಡಳಿತದ ಕಚೇರಿಗೆ ಸಹಾಯಕ್ಕಾಗಿ ಕರೆಗಳ ಮಹಾಪೂರವೇ ಬರುತ್ತಿದೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ. 


ಅಮೆರಿಕವನ್ನು ತತ್ತರಿಸುವಂತೆ ಮಾಡಿದ ಇಯಾನ್ ಚಂಡಮಾರುತದ ಕೇಂದ್ರವು ಕಾಯೋ ಕೋಸ್ಟಾ ಎಂದು ಗುರುತಿಸಲಾಗಿದೆ. ಇದು ಹೆಚ್ಚು ಜನಸಂಖ್ಯೆ ಹೊಂದಿರುವ ಫೋರ್ಟ್ ಮೈಯರ್ಸ್‌ನ ಪಶ್ಚಿಮಕ್ಕೆ ಸಂರಕ್ಷಿತ ದ್ವೀಪವಾಗಿದೆ.


ಸರ್ಕಾರ ಫ್ರೀ ಆಗಿ ಕಾಂಡೋಮ್​ಗಳನ್ನೂ ಕೊಡ್ಬೇಕಾ? ವಿದ್ಯಾರ್ಥಿನಿಗೆ ಅಧಿಕಾರಿಯ ಪ್ರಶ್ನೆ
ಸರ್ಕಾರವು ₹ 20-30 ಕ್ಕೆ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಬಹುದೇ? ಎಂದು ಕೇಳಿದ್ದಕ್ಕೆ ಅಧಿಕಾರಿಯೊಬ್ಬರು ಸರ್ಕಾರ ಕಾಂಡೋಮ್​ಗಳನ್ನು ಸಹ ಉಚಿತವಾಗಿ (Want Condoms Too) ನೀಡಬೇಕೆಂದು ನಿರೀಕ್ಷಿಸುತ್ತೀರಾ? ಎಂದು ಆಘಾತಕಾರಿ ಉತ್ತರ ನೀಡಿರುವ ಘಟನೆ ನಡೆದಿದೆ. ಸ್ಯಾನಿಟರಿ ಪ್ಯಾಡ್​ಗಳನ್ನು (Sanitary Pad) ಕಡಿಮೆ ಹಣಕ್ಕೆ ಸರ್ಕಾರ ನೀಡುತ್ತಾ? ಎಂದು ವಿದ್ಯಾರ್ಥಿ ಕೇಳಿದ್ದಕ್ಕೆ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ಖಾರವಾಗಿ ಉತ್ತರಿಸಿದ್ದಾರೆ. ನಾಳೆ ಸರ್ಕಾರವೇ ಜೀನ್ಸ್ ಬಟ್ಟೆಯನ್ನು ನೀಡಬೇಕೆಂದು ಬಯಸುವಿರಿ. ಆಮೇಲೆ ಸುಂದರ ಬೂಟುಗಳನ್ನು ಕೊಡಬೇಕೆಂದು ಬಯಸುವಿರಿ. ನಂತರ ಸರ್ಕಾರ ಕಾಂಡೋಮ್​ಗಳನ್ನು ಸಹ ನೀಡಬೇಕು ಎಂದು ಬಯಸುತ್ತೀರಾ? ಎಂದು ಅವರು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ (Viral Video) ಆಗುತ್ತಿದ್ದು ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.


ಇದನ್ನೂ ಓದಿ: Breaking News: ಬಲವಂತದ ಗರ್ಭಧಾರಣೆ ಅತ್ಯಾಚಾರ ಎಂದ ಸುಪ್ರೀಂಕೋರ್ಟ್


ಅಧಿಕಾರಿಯ ಈ ಉತ್ತರಕ್ಕೆ ಪ್ರತಿಯಾಗಿ ಜನರ ಮತಗಳು ಸರ್ಕಾರವನ್ನು ರಚಿಸುತ್ತವೆ ಎಂದು ವಿದ್ಯಾರ್ಥಿನಿ ನೆನಪಿಸಿದಾಗ, ಅಧಿಕಾರಿ ಸಿಡಿಮಿಡಿಗೊಂಡಿದ್ದಾರೆ. ಇದು ಮೂರ್ಖತನದ ಪರಮಾವಧಿ. ಹಾಗಾದರೆ ಮತ ಹಾಕಬೇಡಿ. ನೀವು ಹಣ ಮತ್ತು ಸೇವೆಗಳಿಗಾಗಿ ಮತ ಹಾಕುತ್ತೀರಾ? ಎಂದು ಅವರು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

Published by:ಗುರುಗಣೇಶ ಡಬ್ಗುಳಿ
First published: