Viral Video: ತಮಿಳುನಾಡಿನಲ್ಲಿ ಲಿಕ್ಕರ್ ಶಾಪ್ ಓಪನ್; ಬಾಟಲಿಗೆ ಆರತಿ ಮಾಡಿ, ಮುತ್ತಿಟ್ಟ ಮದ್ಯಪ್ರಿಯರು!

ತಮಿಳುನಾಡಿನಲ್ಲಿ ಮದ್ಯದಂಗಡಿಗಳನ್ನು ಓಪನ್ ಮಾಡಲು ಅನುಮತಿ ನೀಡಲಾಗಿದೆ. ಇದರಿಂದ ಮಧುರೈನ ವ್ಯಕ್ತಿಯೊಬ್ಬ ಆಲ್ಕೋಹಾಲ್ ಬಾಟಲಿಗೆ ಆರತಿ ಬೆಳಗಿ, ತನ್ನ ಸಂತೋಷವನ್ನು ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ.

ಮದ್ಯದ ಬಾಟಲಿಗೆ ಆರತಿ ಬೆಳಗಿದ ಕುಡುಕ

ಮದ್ಯದ ಬಾಟಲಿಗೆ ಆರತಿ ಬೆಳಗಿದ ಕುಡುಕ

  • Share this:
ಚೆನ್ನೈ (ಜೂನ್ 15): ತಮಿಳುನಾಡಿನಲ್ಲಿ ಕೊರೋನಾ ಕೇಸುಗಳು ಕಡಿಮೆಯಾಗದ ಹಿನ್ನೆಲೆಯಲ್ಲಿ ಜೂನ್ 21ರವರೆಗೆ ಮತ್ತೆ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ. ಆದರೆ, ಇನ್ನು ಒಂದು ವಾರಗಳ ಕಾಲ ಲಾಕ್​ಡೌನ್ ನಿಯಮಗಳಲ್ಲಿ ಕೊಂಚ ಸಡಿಲಿಕೆಯನ್ನೂ ಮಾಡಲಾಗಿದೆ. ಅದರಂತೆ, ತಿಂಗಳುಗಳ ಬಳಿಕ ತಮಿಳುನಾಡಿನಲ್ಲಿ ಬಾರ್, ಮದ್ಯದಂಗಡಿಗಳನ್ನು ಓಪನ್ ಮಾಡಲು ಅನುಮತಿ ನೀಡಲಾಗಿದೆ. ಇದರಿಂದ ಮದ್ಯಪ್ರಿಯರು ಬಹಳ ಖುಷಿಯಾಗಿದ್ದು, ಮಧುರೈನ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಆಲ್ಕೋಹಾಲ್ ಬಾಟಲಿಗೆ ಆರತಿ ಬೆಳಗಿ, ತನ್ನ ಸಂತೋಷವನ್ನು ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ.

ಸಿಎಂ ಎಂ.ಕೆ. ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ರಾಜ್ಯ ಸರ್ಕಾರದ ಅಡಿಯಲ್ಲಿರುವ ಲಿಕ್ಕರ್ ಶಾಪ್​ಗಳನ್ನು ತೆರೆಯಲು ಅವಕಾಶ ನೀಡಿದೆ. 27 ಜಿಲ್ಲೆಗಳಲ್ಲಿರುವ ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೋರೇಷನ್ ಅಧೀನದಲ್ಲಿರುವ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಇದಕ್ಕೆ ವಿರೋಧ ಪಕ್ಷದಿಂದ ಭಾರೀ ವಿರೋಧ ವ್ಯಕ್ತವಾಗಿದೆ.ಇದರ ನಡುವೆ, ಮಧುರೈನ ರಸ್ತೆಬದಿಯ ಮದ್ಯದಂಗಡಿ ತೆರೆದ ಕೂಡಲೇ ಎಣ್ಣೆ ಬಾಟಲಿ ಖರೀದಿಸಿದ ವ್ಯಕ್ತಿಯೊಬ್ಬ ಆ ಬಾಟಲಿಯನ್ನು ರಸ್ತೆ ಮೇಲಿಟ್ಟು ಆರತಿ ಬೆಳಗಿರುವ ವಿಡಿಯೋವೊಂದು ವೈರಲ್ ಆಗಿದೆ. ಅದಾದ ಬಳಿಕ ಇನ್ನೆರಡು ಆಲ್ಕೋಹಾಲ್ ಬಾಟಲಿ ಖರೀದಿಸಿದ ಆತ ಖುಷಿಯಿಂದ ಮನೆಯತ್ತ ಹೆಜ್ಜೆ ಹಾಕಿದ್ದಾನೆ!

ಇದನ್ನೂ ಓದಿ: Pori Moni: ಖ್ಯಾತ ನಟಿ ಮೇಲೆ ಅತ್ಯಾಚಾರ, ಕೊಲೆ ಯತ್ನ; ಪ್ರಧಾನಿ ಬಳಿ ಸಹಾಯ ಕೋರಿದ ಹೀರೋಯಿನ್!

ಲಿಕ್ಕರ್ ಬಾಟಲಿಗೆ ಪೂಜೆ ಮಾಡಿ, ಮತ್ತೆರಡು ಬಾಟಲಿಯನ್ನು ಖರೀದಿಸಿದ ವ್ಯಕ್ತಿ ಆ ಎರಡು ಹೊಸ ಬಾಟಲಿಗೆ ಮುತ್ತು ಕೊಟ್ಟು, ಖುಷಿಯಿಂದ ಕುಣಿದಾಡಿರುವ ವಿಡಿಯೋ ಇಂಟರ್ನೆಟ್​ನಲ್ಲಿ ಹರಿದಾಡುತ್ತಿದೆ.ಆ ವೇಳೆ ಆ ಮದ್ಯದಂಗಡಿಯಲ್ಲಿದ್ದ ಕೆಲವರು ಅದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.ಈ ಮೊದಲು ಕೂಡ ಮದ್ಯದಂಗಡಿಯನ್ನು ಓಪನ್ ಮಾಡಿದಾಗ ಮದ್ಯಪ್ರಿಯರು ಬಾರ್​ಗಳಿಗೆ ಪೂಜೆ ಮಾಡಿ, ಒಳಗೆ ಕಾಲಿರಿಸಿದ ಘಟನೆಗಳು ನಡೆದಿದ್ದವು. ಆಲ್ಕೋಹಾಲ್ ಕುಡಿದರೆ ಕೊರೋನಾ ವಾಸಿಯಾಗುತ್ತದೆ. ಕೇವಲ ಇಂಜೆಕ್ಷನ್​ನಿಂದ ಈ ರೋಗ ಗುಣವಾಗುವುದಿಲ್ಲ ಎಂದು ಮಹಿಳೆಯೊಬ್ಬಳು ಬಾರ್ ಮುಂದೆ ನಿಂತು ಹೇಳಿಕೆ ನೀಡಿದ್ದು ಕೂಡ ಈ ಹಿಂದೆ ವೈರಲ್ ಆಗಿತ್ತು.
Published by:Sushma Chakre
First published: