HOME » NEWS » National-international » VIRAL VIDEO KID DIES OF HEAD INJURIES IN LIFT ACCIDENT IN MUMBAIS DHARAVI HG

ಲಿಫ್ಟ್​ ಬಾಗಿಲ ಮಧ್ಯೆ ಸಿಲುಕಿ ಬಾಲಕ ಸಾವು; ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಧಾರಾವಿ ಘೋಶಿ ಶೆಲ್ಟರ್​ ಬಿಲ್ಡಿಂಗ್​ನಲ್ಲಿ ಈ ಘಟನೆ ನಡೆದಿದೆ. ಮೂವರು ಮಕ್ಕಳು ಆಟವಾಡುತ್ತ ಲಿಫ್ಟ್​ ಒಳಕ್ಕೆ ಬಂದಿದ್ದಾರೆ.

news18-kannada
Updated:November 30, 2020, 8:13 AM IST
ಲಿಫ್ಟ್​ ಬಾಗಿಲ ಮಧ್ಯೆ ಸಿಲುಕಿ ಬಾಲಕ ಸಾವು; ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಹಝೀಪ ಶೇಖ್
  • Share this:
ಲಿಫ್ಟ್​ ಬಾಗಿಲ ಮಧ್ಯೆ ಸಿಲುಕಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಮುಂಬೈನ ಧಾರಾವಿಯಲ್ಲಿ ನಡೆದಿದೆ. ಬಾಲಕ ಸಿಲುಕಿಕೊಳ್ಳುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಧಾರಾವಿ ಘೋಶಿ ಶೆಲ್ಟರ್​ ಬಿಲ್ಡಿಂಗ್​ನಲ್ಲಿ ಈ ಘಟನೆ ನಡೆದಿದೆ. ಮೂವರು ಮಕ್ಕಳು ಆಟವಾಡುತ್ತ ಲಿಫ್ಟ್​ ಒಳಕ್ಕೆ ಬಂದಿದ್ದಾರೆ. ಗ್ರೌಂಡ್​ ಫ್ಲೋರ್​ನಿಂದ 4ನೇ ಫ್ಲೋರ್​ಗೆ ಬಂದಿದ್ದಾರೆ. ಈ ವೇಳೆ ಮಕ್ಕಳು ಒಬ್ಬೊಬ್ಬರಾಗಿ ಲಿಫ್ಟ್​ನಿಂದ ಹೊರ ನಡೆಯುತ್ತಾರೆ.ಅದರೆ ಇಬ್ಬರು ಮಕ್ಳಳು ಲಿಫ್ಟ್​ ಬಾಗಿಲು ತೆರೆದು ಹೊರ ನಡೆದರೆ, ಮತ್ತೊಬ್ಬ ನಿಧಾನವಾಗಿ ಲಿಫ್ಟ್​ ಬಾಗಿಲು ಹಾಕಿ ಹೊರ ಬರುತ್ತಾನೆ. ಆದರೆ ಈ ವೇಳೆ ಕಬ್ಬಿಣದ ಬಾಗಿಲು ಮತ್ತು ಮರದ ಬಾಗಿಲು ಎರಡು ಮುಚ್ಚಿದೆ. ಇದರ ಮಧ್ಯೆ ಬಾಲಕ ಸಿಲುಕಿಕೊಳ್ಳುತ್ತಾನೆ. ಆ ವೇಳೆ ಲಿಫ್ಟ್​ ಚಾಲನೆಯಾಗಿದೆ. ಲಿಫ್ಟ್​ ಚಾಲನೆಯ ವೇಳೆ ಬಾಗಿಲ ಮಧ್ಯೆ ಸಿಲುಕಿದ್ದ ಬಾಲಕ ಸಾವನ್ನಪ್ಪಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾವನ್ನಪ್ಪಿರುವ ಬಾಲಕ ಹಝೀಪ ಶೇಖ್​ ಎಂದು ತಿಳಿದುಬಂದಿದೆ.
Published by: Harshith AS
First published: November 29, 2020, 10:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading