ವಧು ಪಕ್ಕದಲ್ಲೇ ಕುಳಿತು ಕುಂಭಕರ್ಣನಾದ ವರ: ಎದ್ದೇಳಯ್ಯ... ಬೇರೆ ಯಾರಾದ್ರೂ ನಿನ್ನ ಹುಡುಗಿನಾ ಮದುವೆಯಾಗಿ ಹೋದಾರು ಎಂದ ನೆಟ್ಟಿಗರು..!

ಈ ಮದುವೆಯ ವಿಡಿಯೋದಲ್ಲಿ, ಸರ್ವಾಲಂಕೃತಳಾಗಿ ಕುಳಿತಿರುವ ವಧುವಿನ ಮುಖದಲ್ಲಿ ನಸು ನಾಚಿಕೆಯೊಂದಿಗೆ ಲವಲವಿಕೆಯೂ ಇದೆ. ಆದರೆ ವರನದ್ದು ಅದಕ್ಕೆ ವಿರುದ್ಧವಾದ ಕಥೆ. ನವವಧು ಪಕ್ಕದಲ್ಲಿದ್ದರೂ ನಿದ್ರೆ ತಡೆದುಕೊಳ್ಳಲಾಗದ ವ್ಯಥೆ!

ವೇದಿಕೆಯಲ್ಲಿ ಮಲಗಿದ ವರ

ವೇದಿಕೆಯಲ್ಲಿ ಮಲಗಿದ ವರ

  • Share this:
ಕಳೆದ ಕೆಲವು ವಾರಗಳಿಂದ ಮದುವೆ ಮನೆಯ ವಿಲಕ್ಷಣ ಸನ್ನಿವೇಶಗಳ ವಿಡಿಯೋಗಳ ಸರಮಾಲೆಯೇ ಸಾಮಾಜಿಕ ಮಾಧ್ಯಮದಲ್ಲಿ ಕಾಣಸಿಗುತ್ತಿದ್ದು, ಅವುಗಳು ವಿಭಿನ್ನ ಕಾರಣಗಳಿಂದಾಗಿ ವೈರಲ್ ಆಗುತ್ತಿವೆ ಕೂಡ. ಇದೀಗ ಆ ಸಾಲಿಗೆ ಮತ್ತೊಂದು ವಿಡಿಯೋ ಸೇರ್ಪಡೆ ಆಗಿದೆ. ಪಕ್ಕದಲ್ಲಿ ಕುಳಿತ ವಧುವನ್ನು ಮರೆತು ನಿದ್ರಾದೇವಿಗೆ ಶರಣಾದ ವರನೊಬ್ಬನ ವಿಡಿಯೋ ಅದು. ನಿರಂಜನ ಮಹಾಪಾತ್ರ ಎಂಬವರು ಈ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಇಂತಹ ವಿಡಿಯೋ ಪೋಸ್ಟ್ ಮಾಡುತ್ತಿರುವುದು ಇದೇ ಮೋದಲೇನಲ್ಲ. ಈ ಹಿಂದೆ ಅವರು ಪೋಸ್ಟ್ ಮಾಡಿದ ಹಲವಾರು ವಿಡಿಯೋಗಳು ವೈರಲ್ ಆಗಿವೆ.

ಈ ಮದುವೆಯ ವಿಡಿಯೋದಲ್ಲಿ, ಸರ್ವಾಲಂಕೃತಳಾಗಿ ಕುಳಿತಿರುವ ವಧುವಿನ ಮುಖದಲ್ಲಿ ನಸು ನಾಚಿಕೆಯೊಂದಿಗೆ ಲವಲವಿಕೆಯೂ ಇದೆ. ಆದರೆ ವರನದ್ದು ಅದಕ್ಕೆ ವಿರುದ್ಧವಾದ ಕಥೆ. ನವವಧು ಪಕ್ಕದಲ್ಲಿದ್ದರೂ ನಿದ್ರೆ ತಡೆದುಕೊಳ್ಳಲಾಗದ ವ್ಯಥೆ!
ಹೌದು, ವೇದಿಕೆಯಲ್ಲಿ ವರ ಮತ್ತು ವಧು ಜೊತೆಗೆ ಕೂತಿದ್ದಾರೆ, ಆದರೆ ವರನಿಗೋ ಕಣ್ಣು ತೆಗೆಯಲು ಸಾಧ್ಯವಾಗದಷ್ಟು ಭಯಂಕರ ನಿದ್ದೆ. ಸಂಪೂರ್ಣವಾಗಿ ನಿದ್ದೆಗೆ ಶರಣಾಗಿರುವ ವರ, ತನ್ನ ಮೇಲೆ ತನಗೇ ಸ್ವಾಧೀನವಿಲ್ಲದೆ ವಧುವಿನ ಕಡೆಗೆ ವಾಲುತ್ತಾನೆ. ಪಕ್ಕದಲ್ಲಿರುವ ಯಾರೋ ಸ್ನೇಹಿತರು ವಾಲುತ್ತಿರುವ ಆತನ ಕತ್ತನ್ನು ನೇರವಾಗಿ ನಿಲ್ಲಿಸಲು ಪ್ರಯತ್ನಿಸುತ್ತಾರೆ.

ಇದನ್ನೂ ಓದಿ: Bigg Boss Kannada Season 8: ತಾಳ್ಮೆ ಕಳೆದುಕೊಂಡು ಏರು ದನಿಯಲ್ಲಿ ಚಕ್ರವರ್ತಿ ಚಂದ್ರಚೂಡಗೆ ಖಡಕ್​ ವಾರ್ನಿಂಗ್​ ಕೊಟ್ಟ ಶಮಂತ್ ಗೌಡ

ನಿದ್ರಾದೇವಿ ವರನಿಗೆ ಕಣ್ತರೆಯಲು ಅದಕ್ಕೆ ಅವಕಾಶ ಕೊಟ್ಟರೆ ತಾನೆ. ಅವರೆಲ್ಲ ಶತಾಯಗತಾಯ ಪ್ರಯತ್ನಿಸಿದರೂ ವರನಿಗೆ ಎಚ್ಚರವಾಗುವುದಿಲ್ಲ. ಅಸಲಿಗೆ, ವರನಿಗೆ ತಾನು ಕುಳಿತಿರುವುದು ಮದುವೆ ಮಂಟಪದಲ್ಲಿ, ನಡೆಯುತ್ತಿರುವುದು ತನ್ನದೇ ಮದುವೆ ಎಂಬ ಪ್ರಜ್ಞೆ ಸ್ವಲ್ಪವೂ ಇದ್ದಂತೆ ಕಾಣಿಸುವುದಿಲ್ಲ. ಹಾಸಿಗೆಯಲ್ಲಿ ನಿದ್ರಿಸುತ್ತಿದ್ದವನನ್ನು ಬಟ್ಟೆ ಹಾಕಿಸಿ ಕರೆದುಕೊಂಡು ಬಂದು ವಧುವಿನ ಪಕ್ಕ ಕೂರಿಸಿದ್ದಾರೇನೋ ಎಂದು ನೋಡುಗರು ಭಾವಿಸಿದರೆ ಅತಿಶಯೋಕ್ತಿ ಅನಿಸಲಾರದು ಬಿಡಿ.

ಈ ವಿಡಿಯೋಗೆ ನಗುವಿನ ಇಮೋಜಿಗಳ ಜೊತೆ , 'ಅಬ್ ಯಹ್ ಕ್ಯಾ ಹೋ ರಹಾ ಹೈ ಭಾಯ್ (ಈಗ ಇದೇನಾಗುತ್ತಿದೆ)' ಎಂಬ ಶೀರ್ಷಿಕೆ ಕೂಡ ಇದೆ.

ಇದನ್ನೂ ಓದಿ: Kichcha Sudeep: ಕಿಚ್ಚನ ಜೊತೆ ಈ ಕ್ಯೂಟ್ ಹುಡುಗಿ: ಫೋಟೋ ಹಿಂದಿರುವ ಕಥೆ ಗೊತ್ತಾ..?

ವಿಡಿಯೋದಲ್ಲಿ ಆತ ಮಲಗಿರುವುದಾಗಿ ಹೇಳಲಾಗಿದ್ದರೂ, ಬಹಳಷ್ಟು ಮಂದಿಗೆ ಆ ವಿಷಯದಲ್ಲಿ ಸಂದೇಹ ಇದೆ. ಅವನು ಕುರ್ಚಿಯಲ್ಲಿ ವಾಲುತ್ತಿರುವುದನ್ನು ನೋಡಿದರೆ, ಈತ ಪ್ರಜ್ಞೆಗೆ ಬಾರದೇ ಇರುವಷ್ಟರ ಮಟ್ಟಿಗೆ ಮದ್ಯಪಾನ ಮಾಡಿರಬೇಕು ಎನ್ನುವುದು ಬಹಳಷ್ಟು ನೆಟ್ಟಿಗರ ಅನುಮಾನ. ನಿದ್ರೆ ಮಾಡಿದ್ದನೋ, ಕುಡಿದಿದ್ದನೋ ಅಥವಾ ಇನ್ನೇನೋ ಎಂಬುವುದು ಸಾಬೀತಾಗುವ ಮೊದಲೇ ಈ ವಿಡಿಯೋ ಇನ್‍ಸ್ಟಾಗ್ರಾಂ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Bigg Boss Kannada Season 8: ಟಾಸ್ಕ್​ನಲ್ಲಿ ಗೆದ್ದು 2ನೇ ಮಹಿಳಾ ಕ್ಯಾಪ್ಟನ್​ ಆದ ದಿವ್ಯಾ ಸುರೇಶ್: ಅಮ್ಮುಗೆ ಸಿಕ್ತು ಭರ್ಜರಿ ಉಡುಗೊರೆ ​..!

ಇನ್ನು ಈ ವಿಡಿಯೋಗೆ ಹರಿದು ಬರುತ್ತಿರುವ ಪ್ರತಿಕ್ರಿಯೆಗಳಿಗಂತೂ ಲೆಕ್ಕವಿಲ್ಲ. ಎದ್ದೇಳು ಮಾರಾಯ, ಇಲ್ಲದಿದ್ದರೇ ಬೇರೆ ಯಾರಾದರೂ ಮದುವೆ ಮಾಡಿಕೊಂಡು ಹೋದಾರು ಎಂದು ಒಬ್ಬರು ಬರೆದಿದ್ದಾರೆ. ಇನ್ನು ಹಲವಾರು ಮಂದಿ ಅವನಿಗೆ ಎದ್ದೇಳು ಎಂಬ ಸಂದೇಶಗಳನ್ನು ನೀಡಿದ್ದಾರೆ. ಮತ್ತೆ ಕೆಲವರಿಗೆ ಅವನ ಆರಾಮವಾಗಿ ಇದ್ದಾನೆಯೇ ಎಂಬ ಕಳವಳ.ಆ ವಿಡಿಯೋದಲ್ಲಿರುವ ದೃಶ್ಯದಲ್ಲಿ ಅವನ ಸ್ಥಿತಿಗೆ ಕಾರಣ ಏನೇ ಇರಲಿ, ಅವನು ಕ್ಷೇಮದಿಂದಿದ್ದರೆ ಸಾಕು ಎಂಬುವುದು ಎಲ್ಲರ ಆಶಯ.
Published by:Anitha E
First published: