Viral Video| 9 ತಿಂಗಳ ಬಳಿಕ ಕೊರೋನಾ ಗೆದ್ದ 4ರ ಬಾಲಕಿಗೆ ಆಸ್ಪತ್ರೆ ಸಿಬ್ಬಂದಿಯಿಂದ ಹೃದಯಸ್ಪರ್ಶಿ ವಿದಾಯ!

ಆಸ್ಪತ್ರೆಯಲ್ಲಿ ಮಾರ್ಟಿನ್ ಹೋಗುತ್ತಿರುವ ವೇಳೆ ಆಕೆ ಎಡ ಮತ್ತು ಬಲ ಭಾಗದ ಸುತ್ತಲೂ ಇತರೆ ಸಿಬ್ಬಂದಿ ಸಾಲುಗಳಲ್ಲಿ ನಿಂತು ಚಪ್ಪಾಳೆ ತಟ್ಟಿ ಹೃದಯಸ್ಪರ್ಶಿ ವಿದಾಯ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದು, ವೈದ್ಯರು ಮತ್ತು ಅಲ್ಲಿನ ಆಸ್ಪತ್ರೆಯ ಸಿಬ್ಬಂದಿಗಳ ಕಾರ್ಯಕ್ಕೆ ಹೊಗಳಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

ಬಾಲಕಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡುತ್ತಿರುವುದು.

ಬಾಲಕಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡುತ್ತಿರುವುದು.

 • Share this:
  ಕೊರೋನಾ ಸೋಂಕು ಸಾಮಾನ್ಯ ಜನರನ್ನು ಬೆಚ್ಚಿ ಬೀಳಿಸುವ ಜೊತೆಗೆ ವೈದ್ಯ ಲೋಕವನ್ನು ಕೂಡ ಆತಂಕಕ್ಕೆ ದೂಡಿತ್ತು. ಕೊರೋನಾ ಸೋಂಕು ಎದುರಿಸಲು ವೈದ್ಯರು, ಆರೋಗ್ಯ ಸಿಬ್ಬಂದಿಗಳು ಕೂಡ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಮಹಾಮಾರಿ ಸೋಂಕಿನ ವಿರುದ್ಧ ನಾಲ್ಕು ವರ್ಷದ ಪುಟ್ಟ ಬಾಲಕಿ ಸತತ 9 ತಿಂಗಳು ಕೊರೋನಾ ವಿರುದ್ಧ ಹೋರಾಡಿ ಗೆದ್ದಿದ್ದಾಳೆ.

  ನ್ಯೂ ಮೆಕ್ಸಿಕೊ ಆರೋಗ್ಯ ವಿಜ್ಞಾನ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಬಾಲಕಿ ಸ್ಟೆಲ್ಲಾ ಮಾರ್ಟಿನ್ 9 ತಿಂಗಳು ಚಿಕಿತ್ಸೆ ಪಡೆದಿದ್ದಳು. ಆಕೆ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಹೋಗುತ್ತಿರುವ ವೇಳೆ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಚಪ್ಪಾಳೆ ಹೊಡೆಯುವ ಮೂಲಕ ವಿದಾಯ ಹೇಳಿದ್ದಾರೆ. ಬಾಲಕಿಗೆ ವಿದಾಯ ಹೇಳುವ 24 ಸೆಕೆಂಡ್ಸ್ ವಿಡಿಯೋ ನೋಡುವವರ ಹೃದಯ ತುಂಬಿಬರುತ್ತದೆ.

  ಬಾಲಕಿ ಮಾರ್ಟಿನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವ ವಿಡಿಯೋವನ್ನು ‘ದಿ ಗುಡ್ ನ್ಯೂಸ್’ ಎಂಬುವ ಖಾತೆಯಿಂದ ಟ್ವಿಟ್ಟರ್​ನಲ್ಲಿ ಜ.27ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಇನ್ನು, ಏಪ್ರಿಲ್ ತಿಂಗಳಿನಲ್ಲಿ ಸ್ಟೆಲ್ಲಾ ಮಾರ್ಟಿನ್ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದಳು. ಆಸ್ಪತ್ರೆಗೆ ದಾಖಲಾದ ಆರಂಭದಲ್ಲಿ 5 ತಿಂಗಳು ಈಕೆ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದಳು.  ಇದನ್ನು ಓದಿ: ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಬೀಳ್ಕೊಡುಗೆ ವೇಳೆ ಭಾವುಕಗೊಂಡು ಕಣ್ಣೀರಿಟ್ಟ ಪ್ರಧಾನಿ ಮೋದಿ

  ವಿಡಿಯೋದಲ್ಲಿ ಏನಿದೆ?

  ವಿಡಿಯೋ ಆರಂಭ ಆಗುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿಗಳು ಬಾಲಕಿ ಸ್ಟೆಲ್ಲಾ ಮಾರ್ಟಿನ್ ಹಿಂಬದಿ ಬೆಂಗಾವಲಾಗಿ ಕರೆದೊಯ್ಯುವ ದೃಶ್ಯವಿದೆ. ಆಸ್ಪತ್ರೆಯಲ್ಲಿ ಮಾರ್ಟಿನ್ ಹೋಗುತ್ತಿರುವ ವೇಳೆ ಆಕೆ ಎಡ ಮತ್ತು ಬಲ ಭಾಗದ ಸುತ್ತಲೂ ಇತರೆ ಸಿಬ್ಬಂದಿ ಸಾಲುಗಳಲ್ಲಿ ನಿಂತು ಚಪ್ಪಾಳೆ ತಟ್ಟಿ ಹೃದಯಸ್ಪರ್ಶಿ ವಿದಾಯ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದು, ವೈದ್ಯರು ಮತ್ತು ಅಲ್ಲಿನ ಆಸ್ಪತ್ರೆಯ ಸಿಬ್ಬಂದಿಗಳ ಕಾರ್ಯಕ್ಕೆ ಹೊಗಳಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

  ವೈದ್ಯರು ಮತ್ತು ಸಿಬ್ಬಂದಿಗಳ ಆರೋಗ್ಯ ಕಾಳಜಿಯನ್ನು ಮೆಚ್ಚಿ ನೆಟ್ಟಿಗರು ಉತ್ತಮ ಕೆಲಸ ಎಂದು ಶ್ಲಾಘಿಸಿದ್ದಾರೆ. ಆಸ್ಪತ್ರೆಯ ಆರೋಗ್ಯ ಸೇವೆಯನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಕೊಂಡಾಡುತ್ತಿದ್ದಾರೆ.
  Published by:HR Ramesh
  First published: