HOME » NEWS » National-international » VIRAL VIDEO DEAD BODY DUMPED INTO UTTAR PRADESH GARBAGE VAN POLICE SUSPENDED SCT

ಪೊಲೀಸರ ಎದುರಲ್ಲೇ ಕಸದ ವಾಹನದಲ್ಲಿ ಹೆಣ ಸಾಗಾಟ; ವಿಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶದ 7 ಜನರ ಅಮಾನತು

ಉತ್ತರ ಪ್ರದೇಶದಲ್ಲಿ ನಾಲ್ಕು ಜನ ನಗರಪಾಲಿಕೆ ಸಿಬ್ಬಂದಿ ಹೆಣವನ್ನು ಕಸ ತುಂಬಿದ ವ್ಯಾನ್​ನಲ್ಲಿ ಹಾಕಿಕೊಂಡು ಹೋಗುವಾಗ ಮೂವರು ಪೊಲೀಸರು ಸಮೀಪದಲ್ಲೇ ನಿಂತು ನೋಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

Sushma Chakre | news18-kannada
Updated:June 11, 2020, 6:52 PM IST
ಪೊಲೀಸರ ಎದುರಲ್ಲೇ ಕಸದ ವಾಹನದಲ್ಲಿ ಹೆಣ ಸಾಗಾಟ; ವಿಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶದ 7 ಜನರ ಅಮಾನತು
ಕಸದ ವಾಹನಕ್ಕೆ ಹೆಣವನ್ನು ಹಾಕುತ್ತಿರುವ ನಗರ ಪಾಲಿಕೆ ಸಿಬ್ಬಂದಿ
  • Share this:
ನವದೆಹಲಿ (ಜೂ. 11): ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಕಸದ ವ್ಯಾನ್​ನಲ್ಲಿ ಶವವನ್ನು ಸಾಗಿಸುತ್ತಿದ್ದ ಆಘಾತಕಾರಿ ಘಟನೆ ನಡೆದಿದೆ. ಪೊಲೀಸರ ಸಮ್ಮುಖದಲ್ಲೇ ಪಾಲಿಕೆ ಸಿಬ್ಬಂದಿ ಕಸದ ವ್ಯಾನ್​ನಲ್ಲಿ ಹೆಣವನ್ನು ಹಾಕಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನಾಲ್ವರು ಮುನ್ಸಿಪಾಲಿಟಿ ಸಿಬ್ಬಂದಿ ಮತ್ತು ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ನಾಲ್ಕು ಜನ ನಗರಪಾಲಿಕೆ ಸಿಬ್ಬಂದಿ ಹೆಣವನ್ನು ಕಸ ತುಂಬಿದ ವ್ಯಾನ್​ನಲ್ಲಿ ಹಾಕಿಕೊಂಡು ಹೋಗುವಾಗ ಮೂವರು ಪೊಲೀಸರು ಸಮೀಪದಲ್ಲೇ ನಿಂತು ನೋಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಈ ವಿಡಿಯೋ ನೋಡಿದವರು ಪೊಲೀಸರು ಮತ್ತು ಮುನ್ಸಿಪಾಲಿಟಿಯ ಅಮಾನುಷ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ವಿಡಿಯೋದಲ್ಲಿದ್ದ ಆ್ಯಂಬುಲೆನ್ಸ್​ನವರು ಕೊರೋನಾ ಭೀತಿಯಿಂದ ಹೆಣವನ್ನು ಕೊಂಡೊಯ್ಯಲು ನಿರಾಕರಿಸಿದ್ದರಿಂದ ಕಸದ ವಾಹನದಲ್ಲಿ ಹಾಕಿಕೊಂಡು ಹೋಗಿದ್ದಾಗಿ ಮುನ್ಸಿಪಾಲಿಟಿ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮಗಳು ಸಾವನ್ನಪ್ಪಿದ ಆಸ್ಪತ್ರೆಯ ಬಾತ್​ರೂಂನಲ್ಲಿ ಅಮ್ಮನ ಕೊಳೆತ ದೇಹ ಪತ್ತೆ; ಮುಂಬೈ ವೈದ್ಯರ ನಿರ್ಲಕ್ಷ್ಯಕ್ಕೆ ಆಕ್ರೋಶ

ಸಹಜೌರ ಗ್ರಾಮದ ಮೊಹದ್ ಅನ್ವರ್​ ಸಾವಿಗೀಡಾದ ವ್ಯಕ್ತಿ. ಸರ್ಕಾರಿ ಕಚೇರಿಯೆದುರು ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವನ್ನಪ್ಪಿದ ಆತನ ಹೆಣವನ್ನೇ ಕಸದ ವಾಹನದಲ್ಲಿ ಸಾಗಿಸಿದ್ದಾಗಿ ತಿಳಿದುಬಂದಿದೆ. ಅಮಾನವೀಯವಾಗಿ ನಡೆದುಕೊಂಡ ಒಬ್ಬರು ಸಬ್ ಇನ್​ಸ್ಪೆಕ್ಟರ್ ​ಹಾಗೂ ಇಬ್ಬರು ಕಾನ್ಸ್​ಟೇಬಲ್ ಸೇರಿಂದತೆ ಒಟ್ಟು 7 ಜನರನ್ನು ಸಸ್ಪೆಂಡ್ ಮಾಡಲಾಗಿದೆ.
First published: June 11, 2020, 6:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories