HOME » NEWS » National-international » VIRAL VIDEO CHHATTISGARH PRIESTS WALK OVER HINDU WOMEN LYING ON GROUND TO BLESS THEM WITH CHILD SCT

Viral Video: ಮಕ್ಕಳಾಗದ ಮಹಿಳೆಯರ ಬೆನ್ನಿನ ಮೇಲೆ ನಡೆಯುವ ಅರ್ಚಕರು; ವಿಚಿತ್ರ ಪದ್ಧತಿಯ ವಿಡಿಯೋ ವೈರಲ್

ಛತ್ತೀಸ್​ಗಢದ ಧಮಂತರಿ ಜಿಲ್ಲೆಯ ದೇವಸ್ಥಾನದಲ್ಲಿ ಅರ್ಚಕ ಮಹಿಳೆಯರ ಮೈಮೇಲೆ ನಡೆದರೆ ಅವರಿಗೆ ಮಕ್ಕಳಾಗುತ್ತದೆ ಎಂಬ ನಂಬಿಕೆಯಿದೆ.

news18-kannada
Updated:November 24, 2020, 12:51 PM IST
Viral Video: ಮಕ್ಕಳಾಗದ ಮಹಿಳೆಯರ ಬೆನ್ನಿನ ಮೇಲೆ ನಡೆಯುವ ಅರ್ಚಕರು; ವಿಚಿತ್ರ ಪದ್ಧತಿಯ ವಿಡಿಯೋ ವೈರಲ್
ಛತ್ತೀಸ್​ಗಢದಲ್ಲಿ ಮಹಿಳೆಯರ ಬೆನ್ನಿನ ಮೇಲೆ ನಡೆಯುತ್ತಿರುವ ಅರ್ಚಕರು
  • Share this:
ನವದೆಹಲಿ (ನ. 24): ದೇಶದಲ್ಲಿ ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರೆದಿದ್ದರೂ ಮೂಢನಂಬಿಕೆಗಳು ಮಾತ್ರ ಕಡಿಮೆಯಾಗಿಲ್ಲ. ಮಕ್ಕಳಾಗದವರು ತಮಗೆ ಮಕ್ಕಳಾಗಲಿ ಎಂದು ಇನ್ನಿಲ್ಲದ ವ್ರತ, ಪೂಜೆಗಳನ್ನು ಮಾಡಿ, ಹರಕೆ ಕಟ್ಟಿಕೊಳ್ಳುವುದು ಇಂದಿಗೂ ನಿಂತಿಲ್ಲ. ಛತ್ತೀಸ್​ಗಢದಲ್ಲಿ ಅದೇ ರೀತಿ ಮಕ್ಕಳಾಗದವರು ಬಂದು ವಿಚಿತ್ರವಾದ ಹರಕೆಯೊಂದನ್ನು ಕಟ್ಟಿಕೊಳ್ಳುತ್ತಾರೆ. ಅಷ್ಟಕ್ಕೂ ಏನದು ಹರಕೆ ಅಂತೀರಾ? ಇಲ್ಲಿದೆ ಮಾಹಿತಿ...

ಛತ್ತೀಸ್​ಗಢದ ಧಮಂತರಿ ಜಿಲ್ಲೆಯ ದೇವಸ್ಥಾನದಲ್ಲಿ ಒಂದು ವಿಚಿತ್ರವಾದ ನಂಬಿಕೆಯಿದೆ. ಇಲ್ಲಿನ ಅರ್ಚಕ ಮಹಿಳೆಯರ ಮೈಮೇಲೆ ನಡೆದರೆ ಅವರಿಗೆ ಮಕ್ಕಳಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ, ಇಲ್ಲಿಗೆ ಮಕ್ಕಳಾಗದ ಸಾವಿರಾರು ಮಹಿಳೆಯರು ಬಂದು ಅಂಗಳದಲ್ಲಿ ಮಲಗುತ್ತಾರೆ. ಅವರ ಬೆನ್ನಿನ ಮೇಲೆ ಅರ್ಚಕ ನಡೆಯುತ್ತಾರೆ. ಮಹಿಳೆಯರ ಮೇಲೆ ಅರ್ಚಕ ನಡೆಯುತ್ತಿರುವ ಆ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇಲ್ಲಿ ನಡೆಯುವ ಮಧಾಯ್ ಮೇಳ ಎಂಬ ಉತ್ಸವದಲ್ಲಿ ಪ್ರತಿವರ್ಷ ಮಕ್ಕಳಾಗದ ಮಹಿಳೆಯರು ಬಂದು ಈ ಹರಕೆ ತೀರಿಸುತ್ತಾರೆ. ದೀಪಾವಳಿ ಮುಗಿದ ಬಳಿಕ ಮೊದಲ ಶುಕ್ರವಾರ ನಡೆಯುವ ಈ ಉತ್ಸವದಲ್ಲಿ ಅಂಗಾರಮೂರ್ತಿ ದೇವಿಯ ದರ್ಶನಕ್ಕೆ ಬರುವ ಮಹಿಳೆಯರು ಮಕ್ಕಳಾಗಲು ಅರ್ಚಕರ ಕಾಲ್ತುಳಿತಕ್ಕೆ ಒಳಗಾಗುತ್ತಾರೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಸುಮಾರು 500 ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬರುತ್ತಿದೆ. ಆಗಿನಿಂದಲೂ ಮಕ್ಕಳಾಗದವರು ಇಲ್ಲಿಗೆ ಬಂದು ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ಈ ಪದ್ಧತಿಯಿಂದ ತಮಗೆ ಮಕ್ಕಳಾಗುತ್ತದೆ ಎಂದು ಸ್ಥಳೀಯರು ಬಲವಾಗಿ ನಂಬಿದ್ದಾರೆ. ಈ ಉತ್ಸವದ ಬಳಿಕ ಅನೇಕ ಮಹಿಳೆಯರು ಗರ್ಭ ಧರಿಸಿದ ಉದಾಹರಣೆಗಳೂ ಇವೆ ಎನ್ನುತ್ತಾರೆ ಸ್ಥಳೀಯರು.ವೈರಲ್ ಆಗಿರುವ ವಿಡಿಯೋದಲ್ಲಿ ಸುಮಾರು 200ಕ್ಕೂ ಅಧಿಕ ಮಹಿಳೆಯರು ಮೈದಾನದಲ್ಲಿ ಮಲಗಿಕೊಂಡಿದ್ದಾರೆ. ಸಾಲಾಗಿ ಮಲಗಿರುವ ಅವರ ಬೆನ್ನಿನ ಮೇಲೆ ಅರ್ಚಕರು ಮಂತ್ರ ಪಠಿಸುತ್ತಾ, ನಡೆಯುತ್ತಿದ್ದಾರೆ. ಸುತ್ತಲೂ ನಿಂತ ಅವರ ಕುಟುಂಬಸ್ಥರು ದೇವರನ್ನು ಬೇಡಿಕೊಳ್ಳುತ್ತಿದ್ದಾರೆ. ಈ ವಿಡಿಯೋಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
Published by: Sushma Chakre
First published: November 24, 2020, 12:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading