HOME » NEWS » National-international » VIRAL VIDEO BRITISH TEACHER GETS HIS PENIS CUT OFF IN A VIRAL YOUTUBE VIDEO FOR SOCIAL MEDIA CHALLENGE SCT

ಸೋಷಿಯಲ್ ಮೀಡಿಯಾ ಚಾಲೆಂಜ್​ಗಾಗಿ ಶಿಶ್ನವನ್ನೇ ಕತ್ತರಿಸಿಕೊಂಡ ಶಿಕ್ಷಕ; ವೈರಲ್ ಆಯ್ತು ವಿಡಿಯೋ!

Shocking Video | ಗುಪ್ತಾಂಗ ಕಟ್ ಮಾಡಿಕೊಂಡ ವಿಡಿಯೋ ಹಾಕಿದರೆ ಯೂಟ್ಯೂಬ್​ನಲ್ಲಿ ಉತ್ತಮ ಹಿಟ್ಸ್​ ಬರುತ್ತದೆ ಎಂಬುದು ಅವನ ಲೆಕ್ಕಾಚಾರವಾಗಿತ್ತು! ಆದರೆ ಆ ಲೆಕ್ಕಾಚಾರ ಉಲ್ಟಾ ಹೊಡೆದು ಆತನ ಪ್ರಾಣಕ್ಕೇ ಸಂಚಕಾರ ತರುವ ಮಟ್ಟಕ್ಕೆ ಹೋಗಿತ್ತು.

news18
Updated:March 5, 2021, 4:36 PM IST
ಸೋಷಿಯಲ್ ಮೀಡಿಯಾ ಚಾಲೆಂಜ್​ಗಾಗಿ ಶಿಶ್ನವನ್ನೇ ಕತ್ತರಿಸಿಕೊಂಡ ಶಿಕ್ಷಕ; ವೈರಲ್ ಆಯ್ತು ವಿಡಿಯೋ!
ಸಾಂದರ್ಭಿಕ ಚಿತ್ರ
  • News18
  • Last Updated: March 5, 2021, 4:36 PM IST
  • Share this:
ಆನ್​ಲೈನ್​ನಲ್ಲಿ ನಾನಾ ರೀತಿಯ ಗೇಮ್​ಗಳು, ಚಾಲೆಂಜ್​ಗಳು ಹೆಚ್ಚಾಗುತ್ತಿದ್ದು, ಅದರ ಆಕರ್ಷಣೆಗೆ ಒಳಗಾಗಿ ಪ್ರಾಣವನ್ನೇ ಕಳೆದುಕೊಂಡವರ ಸಂಖ್ಯೆಯೂ ಕಡಿಮೆಯೇನಿಲ್ಲ. ಪಬ್​ಜಿಯಂತಹ ಗೇಮ್​ನಿಂದ ಪ್ರಾಣಕ್ಕೇ ಕುತ್ತು ತಂದುಕೊಂಡ ಪ್ರಕರಣಗಳು ಸಾಕಷ್ಟಿವೆ. ಇದೇ ರೀತಿ ಇಂಟರ್ನೆಟ್ ಚಾಲೆಂಜ್ ಸ್ವೀಕರಿಸಿದ ಶಿಕ್ಷಕನೊಬ್ಬ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ತನ್ನ ಗುಪ್ತಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.

ಈ ರೀತಿ ಗುಪ್ತಾಂಗ ಕಟ್ ಮಾಡಿಕೊಂಡ ವಿಡಿಯೋ ಹಾಕಿದರೆ ಯೂಟ್ಯೂಬ್​ನಲ್ಲಿ ಉತ್ತಮ ಹಿಟ್ಸ್​ ಬರುತ್ತದೆ ಎಂಬುದು ಅವನ ಲೆಕ್ಕಾಚಾರವಾಗಿತ್ತು! ಆದರೆ ಆ ಲೆಕ್ಕಾಚಾರ ಉಲ್ಟಾ ಹೊಡೆದು ಆತನ ಪ್ರಾಣಕ್ಕೇ ಸಂಚಕಾರ ತರುವ ಮಟ್ಟಕ್ಕೆ ಹೋಗಿತ್ತು. ಅದೃಷ್ಟವಶಾತ್ ಆತ ಬದುಕುಳಿದಿದ್ದು, ಆಪರೇಷನ್ ಮಾಡಿ ಗುಪ್ತಾಂಗವನ್ನು ಪುನಃ ಜೋಡಿಸಲಾಗಿದೆ.

ಗುಪ್ತಾಂಗವನ್ನು ಕಟ್ ಮಾಡಿಕೊಳ್ಳಲು ತನ್ನ ರೂಂ ಮೇಟ್ ಸಹಾಯ ಪಡೆದ ಶಿಕ್ಷಕ ಚಾಕುವಿನಿಂದ ಗುಪ್ತಾಂಗ ಕಟ್ ಮಾಡಿಕೊಂಡಿದ್ದಾನೆ. ರ್ಯಾಪರ್ ಬೆಲ್ಟ್ರಾನ್​ನ ಪ್ರಭಾವದಿಂದ ಈ ​ಕೃತ್ಯ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಯೂಟ್ಯೂಬ್ ವೀಡಿಯೋ ನೋಡಿ ಆ ಶಿಕ್ಷಕ ಈ ರೀತಿ ಮಾಡಿದ್ದು, ತಾನು ಕೂಡ ಅದೇ ರೀತಿಯ ವಿಡಿಯೋ ಶೂಟ್ ಮಾಡಿದರೆ ಯೂಟ್ಯೂಬ್​ನಲ್ಲಿ ಹಣ ಗಳಿಸಬಹುದು ಎಂದು ಹೀಗೆ ಮಾಡಿದ್ದಾಗಿ ಆತ ಪೊಲೀಸರ ಮುಂದೆ ಹೇಳಿದ್ದಾನೆ.

ಅಂದಹಾಗೆ, ಗುಪ್ತಾಂಗ ಕಟ್ ಮಾಡಿಕೊಂಡಿರುವ ವ್ಯಕ್ತಿ ಯಾವುದೋ ಅಶಿಕ್ಷಿತನಲ್ಲ. ಆತ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಪಡೆದು ಶಿಕ್ಷಕನಾಗಿರುವ ವ್ಯಕ್ತಿಯಾಗಿದ್ದಾನೆ. ಆತನ ಹೆಸರು ಆಂಡ್ರ್ಯೂ ಬ್ರೀಚ್. ಈತ ತನ್ನ ಗುಪ್ತಾಂಗ ಕತ್ತರಿಸಿಕೊಂಡಿರುವ ವೀಡಿಯೋವನ್ನು ರೆಕಾರ್ಡ್ ಮಾಡಿ, ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಿದ್ದಾನೆ.
Youtube Video

ರಕ್ತಸ್ರಾವದಿಂದ ನರಳುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೇರ್ಪಟ್ಟಿದ್ದ ಗುಪ್ತಾಂಗವನ್ನು ಆಪರೇಷನ್ ಮಾಡಿ ಜೋಡಿಸಲಾಗಿದೆ.
Published by: Sushma Chakre
First published: March 5, 2021, 4:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories