Viral Video: ವರನಿಗೆ ಎಲ್ಲರ ಮುಂದೆಯೇ ಹೊಡೆದ ವಧು: ನಂತರ ಆತ ಮಾಡಿದ್ದೇನು ಗೊತ್ತಾ..?

ಮದುವೆ, ಹಬ್ಬ-ಹರಿದಿನಗಳ ಸಂದರ್ಭದಲ್ಲಿಯೂ ಗುಟ್ಕಾ ಮೇಲಿನ ಪ್ರೀತಿಯನ್ನು ಮರೆಮಾಚಲು ಸಾಧ್ಯವಾಗದ ಒಬ್ಬ ವ್ಯಕ್ತಿಗೆ ತಕ್ಕ ಪಾಠ ಸಿಕ್ಕಿದೆ ಎಂದರೆ ತಪ್ಪಾಗಲಾರದು. ಈ ವಿಡಿಯೋದಲ್ಲಿ ತಮ್ಮ ಮದುವೆ ನಡೆಯುವ ಸಂದರ್ಭದಲ್ಲಿಯೇ ನವ ವಧು ಎಲ್ಲರ ಮುಂದೆಯೇ ವರನಿಗೆ ಉತ್ತಮ ಪಾಠ ಕಲಿಸಿದ್ದಾರೆ.

ಮದುವೆ ಮಂಟಪದಲ್ಲೇ ವರನಿಗೆ ಬಾರಿಸಿದ ವಧು

ಮದುವೆ ಮಂಟಪದಲ್ಲೇ ವರನಿಗೆ ಬಾರಿಸಿದ ವಧು

  • Share this:
ಯಾವುದು ಆರೋಗ್ಯಕ್ಕೆ ಹಾನಿಕಾರಕ, ಸೇವಿಸಬೇಡಿ ಎಂದು ಹೇಳುತ್ತೇವೆಯೋ ಅಂತಹದನ್ನ ನಮ್ಮ ಜನರು ಹೆಚ್ಚಾಗಿ ಮಾಡುವುದುಂಟು. ಈ ಪಾನ್ ಮಸಾಲ ಮತ್ತು ಗುಟ್ಕಾ ಅಗಿಯುವುದು ಹಾಗೂ ಸಿಗರೇಟು, ಬೀಡಿ ಸೇದುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರು ಹೇಳುತ್ತಲೇ ಇರುತ್ತಾರೆ. ಆದರೂ ನಮ್ಮ ಜನರು ಕೇಳುವುದೇ ಇಲ್ಲ. ತಮ್ಮ ಮನಸ್ಸಿಗೆ ತೋಚಿದಂತೆ ಮಾಡಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ.  ಕೆಲವೊಬ್ಬರು ಈ ಅಭ್ಯಾಸಕ್ಕೆ ಎಷ್ಟರ ಮಟ್ಟಿಗೆ ತಮ್ಮನ್ನು ಸಮರ್ಪಿಸಿಕೊಂಡಿರುತ್ತಾರೆ ಎಂದರೆ ಮಲಗಿದ ಸಂದರ್ಭ ಬಿಟ್ಟು ದಿನದ ಎಲ್ಲ ಸಮಯದಲ್ಲೂ ಇವುಗಳನ್ನು ಅಗಿಯುತ್ತಲೇ ಇರುತ್ತಾರೆ. ಇದನ್ನು ಅಗಿಯದಿದ್ದರೆ ನಮ್ಮ ದೇಹದಲ್ಲಿ ಯಾವ ಕ್ರಿಯೆಯೂ ನಡೆಯುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಕಾರಣಗಳನ್ನು ಕೊಡುವುದನ್ನು ನಾವೆಲ್ಲ ಕೇಳಿರುತ್ತೇವೆ.

ಮದುವೆ ಮನೆಗಳಲ್ಲಿ ನಡೆಯುವ ಸಾಕಷ್ಟು ಫನ್ನಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿರುತ್ತೇವೆ. ಅಂತಹದ್ದೇ ಒಂದು ವಿಡಿಯೋ ಈಗ ಹರಿದಾಡುತ್ತಿದೆ. ಆದರೆ ಇಲ್ಲಿ ವಧು ವರನ ನಡುವೆ ಜಗಳ ಆಗಿದ್ದು ಗುಟ್ಕಾ ವಿಷಯಕ್ಕೆ.






ಹೌದು, ತಿಂದರೆ ತಿನ್ನಲಿ ಎಂದು ಬಿಟ್ಟರೆ ಮದುವೆಯಂತಹ ವಿಶೇಷ ಸಂದರ್ಭಗಳಲ್ಲಿಯೂ ಗುಟ್ಕಾ ಮೇಲಿನ ಪ್ರೀತಿ ಮರೆಮಾಚಲು ಸಾಧ್ಯವಾಗದ ಕೆಲವರು ಇದ್ದಾರೆ. ಮದುವೆ, ಹಬ್ಬ-ಹರಿದಿನಗಳ ಸಂದರ್ಭದಲ್ಲಿಯೂ ಗುಟ್ಕಾ ಮೇಲಿನ ಪ್ರೀತಿಯನ್ನು ಮರೆಮಾಚಲು ಸಾಧ್ಯವಾಗದ ಒಬ್ಬ ವ್ಯಕ್ತಿಗೆ ತಕ್ಕ ಪಾಠ ಸಿಕ್ಕಿದೆ ಎಂದರೆ ತಪ್ಪಾಗಲಾರದು. ಈ ವಿಡಿಯೋದಲ್ಲಿ ತಮ್ಮ ಮದುವೆ ನಡೆಯುವ ಸಂದರ್ಭದಲ್ಲಿಯೇ ನವ ವಧು ಎಲ್ಲರ ಮುಂದೆಯೇ ವರನಿಗೆ ಉತ್ತಮ ಪಾಠ ಕಲಿಸಿದ್ದಾರೆ.

ಈ ಘಟನೆಯ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಮದುವೆ ಮಂಟಪದಲ್ಲಿ ಕುಳಿತಾಗ ಗುಟ್ಕಾ ಅಗಿಯುತ್ತಿರುವ ವರನ ಮೇಲೆ ವಧು ತನ್ನ ಕೋಪ ಬಹಿರಂಗವಾಗಿ ವ್ಯಕ್ತಪಡಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: Santhosh Ananddram: ಐಷಾರಾಮಿ ಕಾರು ಖರೀದಿಸಿದ ಯುವರತ್ನ ನಿರ್ದೇಶಕ ಸಂತೋಷ್ ಆನಂದ್​ ರಾಮ್​

ವರನು ಗುಟ್ಕಾ ಅಗಿಯುತ್ತಿದ್ದಾನೆ ಎಂದು ತಿಳಿದ ವಧು ಕೆಂಡಾಮಂಡಲವಾಗಿ ತಕ್ಷಣವೇ ಬಾಯಲ್ಲಿರುವುದನ್ನು ಹೋಗಿ ಉಗಿದು ಬನ್ನಿ ಎಂದು ವರ ಮತ್ತು ಅವನ ಸ್ನೇಹಿತರಿಬ್ಬರ ಮೇಲೆ ತನ್ನ ಕೋಪ ವ್ಯಕ್ತಪಡಿಸುತ್ತಾರೆ.

ವಧು ಗುಟ್ಕಾ ಅಗಿಯುತ್ತಿರುವ ಇನ್ನೊಬ್ಬ ವ್ಯಕ್ತಿಯನ್ನು ಎಲ್ಲರ ಮುಂದೆಯೇ ಹೊಡೆಯುತ್ತಾಳೆ. ವಧು, ವರನನ್ನು ದೂರಕ್ಕೆ ತಳ್ಳಿ ನಂತರ ಅವನನ್ನು ಹೊಡೆಯುತ್ತಾಳೆ. ವಧುವಿನ ಈ ರೂಪ ನೋಡಿ ಹೆದರಿದ ವರ ತಕ್ಷಣವೇ ಅಲ್ಲಿಂದ ಎದ್ದು ಹೋಗಿ ತನ್ನ ಬಾಯಲ್ಲಿ ಅಗಿಯುತ್ತಿರುವಂತಹ ಗುಟ್ಕಾ ಉಗಿದು ಬರುತ್ತಾನೆ.

ಇದನ್ನೂ ಓದಿ: Happily Married: ಹ್ಯಾಪಿಲಿ ಮ್ಯಾರೀಡ್​ ಅಂತಿದ್ದಾರೆ ಮಾನ್ವಿತಾ ಕಾಮತ್​ -ಪೃಥ್ವಿ ಅಂಬರ್​

ಈ ವೈರಲ್ ವಿಡಿಯೋವನ್ನು ನಿರಂಜನ್ ಎಂಬುವವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದು, ಈ ವಿಡಿಯೋವನ್ನು ತುಂಬಾ ಜನರು ವೀಕ್ಷಿಸಿದ್ದಾರೆ. ಸುಮಾರು 9000ಕ್ಕೂ ಹೆಚ್ಚು ಜನರು ಇದಕ್ಕೆ ಲೈಕ್‌ ಮಾಡಿದ್ದಾರೆ. ಜತೆಗೆ ಸುಮಾರು 200ಕ್ಕೂ ಹೆಚ್ಚು ನೆಟ್ಟಿಗರು ಈ ವಿಡಿಯೋಗೆ ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಅನೇಕರು ವಧು ಮಾಡಿದ್ದು ಸರಿಯಾಗಿದೆ ಎಂದು ಹೊಗಳಿದ್ದಾರೆ.

ಇದನ್ನೂ ಓದಿ: ಸದಾ ಬಾಡಿ ಶೇಮಿಂಗ್​ ಬಗ್ಗೆ ಮಾತನಾಡುವ ವಿದ್ಯಾ ಬಾಲನ್​ರ ಈ ಫೋಟೋಶೂಟ್​ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದೆ..!

ಗುಟ್ಕಾ ತಿನ್ನುವುದರಿಂದ ಮದುವೆಯಲ್ಲಿ ನಡೆದ ಮೊದಲನೆಯ ಅವಾಂತರ ಇದಲ್ಲ. ಕೆಲವು ದಿನಗಳ ಹಿಂದೆಯೂ ಹೀಗೆ ವರನು ತನ್ನ ಮದುವೆ ಮನೆಗೆ ಕುಡಿದುಕೊಂಡು ಮತ್ತು ಗುಟ್ಕಾ ಅಗಿಯುತ್ತಾ ಬಂದ್ದಿದ್ದನ್ನು ನೋಡಿ ವಧು ಮದುವೆಯಾಗದೆ ಹೊರಟು ಹೋಗಿರುವಂತಹ ಘಟನೆ ಉತ್ತರ ಪ್ರದೇಶದ ಬಲಿಯಾದಲ್ಲಿ ನಡೆದಿತ್ತು.
Published by:Anitha E
First published: